Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮಧುಮೇಹವಿದ್ದರೆ ಮಾವಿನ ಹಣ್ಣು ಈ ರೀತಿ ತಿಂದರೆ ಸಕ್ಕರೆಯಂಶ ಹೆಚ್ಚಾಗಲ್ಲ!
ಮಾವಿನ ಹಣ್ಣಿನ ಸೀಸನ್‌ನಲ್ಲಿ ಮಧುಮೇಹಗಳ ಸಂಕಟ ಅವರಿಗಷ್ಟೇ ಗೊತ್ತು. ಮಾವಿನ ಹಣ್ಣು, ಅವುಗಳ ಘಮ್ ಎನ್ನುವ ಸುವಾಸನೆ ನೋಡುವಾಗ ಯಾರಿಗೆ ತಾನೆ ತಿನ್ನಬೇಕೆಂದು ಅನಿಸಲ್ಲ?
ಅಷ್ಟೊಂದು ರುಚಿಯ ಮಾವಿನ ಹಣ್ಣು ತಿನ್ನಲು ಸಾಧ್ಯವಾಗುತ್ತಿಲ್ಲ ಎಂದು ಬೇಸರವಾಗುತ್ತದೆ. ಆದರೆ ಬೇಸರ ಪಡಬೇಡಿ, ಮಾವಿನ ಹಣ್ಣನ್ನು ಈ ರೀತಿ ತಿಂದರೆ ರಕ್ತದಲ್ಲಿ ಸಕ್ಕೆಯಂಶ ಹೆಚ್ಚಾಗಲ್ಲ ನೋಡಿ:

ಒಂದು ಮಾವಿನ ಹಣ್ಣನ್ನು ಸಂಪೂರ್ಣ ತಿನ್ನಿ
ಮಾವಿನ ಹಣ್ಣನ್ನು ಸಿಪ್ಪೆ ಸುಲಿದು ತಿಂತಾರೆ, ಆದರೆ ನೀವು ಮಧುಮೇಹಿಗಳಾಗಿದ್ದರೆ ಹಾಗೆ ತಿನ್ನಬೇಡಿ, ಸಿಪ್ಪೆ ಸಹಿತ ತಿನ್ನಿ. ಸಿಪ್ಪೆ ಸಹಿತ ತಿಂದಾಗ ಅಧಿಕ ನಾರಿನಂಶ ದೇಹವನ್ನು ಸೇರುವುದು , ಇದರಿಂದಾಗಿ ರಕ್ತದಲ್ಲಿ ಸಕ್ಕರೆಯಂಶ ತಕ್ಷಣ ಹೆಚ್ಚಾಗುವುದಿಲ್ಲ.
ಮಾವಿನ ಹಣ್ಣಿನ ಜ್ಯೂಸ್ ಕುಡಿಯಬೇಡಿ
ನೀವು ಮಧುಮೇಹಿಗಳಾಗಿದ್ದರೆ ಮಾವಿನ ಹಣ್ಣಿನ ಜ್ಯೂಸ್ ಕುಡಿಯಬೇಡಿ, ಇದರಿಂದ ಸಕ್ಕರೆಯಂಶ ಹೆಚ್ಚಾಗುವುದು, ನೀವು ಮಾವಿನ ಹಣ್ಣನ್ನು ಹಾಗೆಯೇ ತಿನ್ನಿ, ಬದಲಿಗೆ ಜ್ಯೂಸ್ ಅಥವಾ ಮಿಲ್ಕ್ ಶೇಕ್ ಅಂತ ಮಾಡಲು ಹೋಗಬೇಡಿ.
ನಾರಿನಂಶ ಅಧಿಕವಿರುವ ಮಾವಿನ ಹಣ್ಣು ಸೇವಿಸಿ
ನೀವು ಮಾವಿನ ಹಣ್ಣು ಆಯ್ದುಕೊಳ್ಳುವಾಗ ನಾರಿನಂಶ ಅಧಿಕವಿರುವ ಮಾವಿನ ಹಣ್ಣು ಸೇವಿಸಿ. ಈ ಮಾವಿನ ಹಣ್ಣು ನಾರು ಕಡಿಮೆ ಇರುವ ಮಾವಿನ ಹಣ್ಣಿನಷ್ಟೇ ರುಚಿ ಇರುತ್ತದೆ, ಹಾಗಾಗಿ ಇಂಥ ಹಣ್ಣುಗಳನ್ನು ಆಯ್ಕೆ ಮಾಡಿ.
ಮಧ್ಯಾಹ್ನ ಹೊತ್ತು ತಿನ್ನಿ
ಮಾವಿನ ಹಣ್ಣನ್ನು ರಾತ್ರಿ ಹೊತ್ತು ತಿನ್ನಲು ಹೋಗಬೇಡಿ, ಮಧ್ಯಾಹ್ನ ಹೊತ್ತು ತಿನ್ನಿ, ನಂತರ ಸ್ವಲ್ಪ ವಕ್ ಮಾಡಿ, ಮಾವಿನ ಹಣ್ಣಿನ ಜೊತೆಗೆ ಅಧಿಕ ನಾರಿನಂಶವಿರುವ ಆಹಾರ ಸೇವಿಸಿ.
ಮಾವಿನ ಹಣ್ಣು ತಿಂದಾಗ ಕಾರ್ಬ್ಸ್ ಸವಿಯಬೇಡಿ
ನೀವು ಮಾವಿನ ಹಣ್ಣು ತಿಂದಾಗ ಓಟ್ಸ್ ತಿನ್ನಿ, ಬದಲಿಗೆ ಅನ್ನ ತಿನ್ನಬೇಡಿ, ಈ ರೀತಿ ಡಯಟ್ ಬ್ಯಾಲೆನ್ಸ್ ಮಾಡಿದರೆ ಮಾವಿನ ಹಣ್ಣನ್ನು ಮಧುಮೇಗಳು ತಿನ್ನಬಹುದು.
ಎಷ್ಟು ಮಾವಿನ ಹಣ್ಣು ತಿಂದರೆ ಯಾವುದೇ ಅಪಾಯವಿಲ್ಲ
ಮಧುಮೇಹಿಗಳು ದಿನದಲ್ಲಿ 100 ಗ್ರಾಂನಷ್ಟು ಮಾವಿನ ಹಣ್ಣು ಸೇವಿಸಬಹುದು, ಇಷ್ಟು ಪ್ರಮಾಣದಲ್ಲಿ ತಿಂದರೆ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುವುದಿಲ್ಲ. ಮಾವಿನ ಹಣ್ಣಿನಲ್ಲಿ ನಾರಿನಂಶ, ಕ್ಯಾಲ್ಸಿಯಂ, ಪೊಟಾಷ್ಯಿಯಂ ಅಧಿಕವಿದೆ.
ಮಾವಿನ ಹಣ್ಣು ತಿಂದಾಗ ನಾರಿನಂಶ ಹೆಚ್ಚು ತಿನ್ನಿ
ನೀವು ಒಂದು ಮಾವಿನ ಹಣ್ಣು ತಿಂದರೆ ನಾರಿನಂಶ ಹೆಚ್ಚಾಗಿ ತಿನ್ನಿ. ತರಕಾರಿ ಹೆಚ್ಚಾಗಿ, ರಾಗಿ ಬಳಸಿ, ಈ ರೀತಿ ಆಹಾರಕ್ರಮದಲ್ಲಿಯೇ ಬ್ಯಾಲೆನ್ಸ್ ಮಾಡಿದರೆ ಮಾವಿನ ಹಣ್ಣು ಭಯವಿಲ್ಲದೆ ತಿನ್ನಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
