Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಂಗಳೂರಿನ ಮಹಿಳೆ ಹೊಟ್ಟೆಯಿಂದ 4 ಕೆಜಿ ತೂಕದ ಮೂತ್ರಪಿಂಡ ಹೊರತೆಗೆದ KMC ವೈದ್ಯರು: ಈ ಅಪರೂಪದ ಕಾಯಿಲೆ ಲಕ್ಷಣಗಳೇನು?
ಮಂಗಳೂರಿನ ಕೆಎಂಸಿ ಆಸ್ಪತ್ರೆಯ ವೈದ್ಯರು ಮಹಿಳೆಯೊಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡಿ 4 ಕೆಜಿಯ ಕಿಡ್ನಿ ಸ್ಟೋನ್ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆಟೋಸೋಮಲ್ ಡಾಮಿನೆಂಟ್ ಪಾಲಿಸ್ಟಿಸ್ಟಿಕ್ ಕಿಡ್ನಿ ಡಿಸೀಸ್(ಎಡಿಪಿಕೆಡಿ) ಎಂಬ ಅಪರೂಪದ ರೋಗ ಈ ಮಹಿಳೆಯನ್ನು ಬಾಧಿಸಿತ್ತು. ಈ ಕಾರಣದಿಂದ 52 ವರ್ಷದ ಮಹಿಳೆಯ ಹೊಟ್ಟೆ ವಿಪರೀತ ಊದಿಕೊಂಡಿತ್ತು. ಆದರೆ ಈ ಅಪರೂಪದ ಪ್ರಕರಣವನ್ನು ತೆಗೆದುಕೊಂಡ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ವೈದ್ಯರು ಕಿಡ್ನಿ ಸ್ಟೋನ್ ಹೊರ ತೆಗೆದಿದ್ದಾರೆ.

ಏನಿದು ವಿಚಿತ್ರ ಮೂತ್ರ ಪಿಂಡದ ಕಲ್ಲಿನ ಸಮಸ್ಯೆ?
ಆಟೋಸೋಮಲ್ ಡಾಮಿನೆಂಟ್ ಪಾಲಿಸ್ಟಿಸ್ಟಿಕ್ ಕಿಡ್ನಿ ಡಿಸೀಸ್(ಎಡಿಪಿಕೆಡಿ) ಎಂಬುದು ವಂಶವಾಹಿಗಳಿಂದ ಬರುವ ರೋಗವಾಗಿದ್ದು, ಸಂಕೀರ್ಣ ತೊಂದರೆಗಳು ಉಂಟಾದಾಗ ಗಮನಾರ್ಹ ವೈಕಲ್ಯಕ್ಕೆ ದಾರಿ ಮಾಡಿಕೊಡುತ್ತದೆ. ಎಡಿಪಿಕೆಡಿ ಪ್ರಕರಣಗಳಲ್ಲಿ ವ್ಯಕ್ತಿಯ ಎರಡೂ ಮೂತ್ರಪಿಂಡಗಳಲ್ಲಿ ದ್ರವ ತುಂಬಿದ ಚೀಲಗಳು(ಸಿಸ್ಟ್ಸ್) ಬೆಳವಣಿಗೆ ಹೊಂದುತ್ತವೆ.
ಈ ಚೀಲಗಳು ದೊಡ್ಡದಾಗುತ್ತಾ ಸಾಗುತ್ತವೆ. ಇದರಿಂದಾಗಿ ಹೊಟ್ಟೆಯಲ್ಲಿ ಊತ ಕಂಡು ಬರುವುದು. ಇವುಗಳಲ್ಲಿ ಸೋಂಕು ಉಂಟಾಗಬಹುದು ಅಥವಾ ಈ ಚೀಲಗಳಲ್ಲಿ ರಕ್ತಸ್ರಾವ ಕಂಡುಬರಬಹುದು. ಎಡಿಪಿಕೆಡಿ ತೊಂದರೆ ಪ್ರಗತಿಯಾದಂತೆ ಮೂತ್ರಪಿಂಡ ವೈಫಲ್ಯ ಉಂಟಾಗಬಹುದು. ಈ ರೋಗ ಬಾಧಿಸಿದರೆ ರೋಗಿ ತುಂಬಾನೇ ಕಷ್ಟ ಅನುಭವಿಸಬೇಕಾಗುವುದು, ಎದ್ದು ಓಡಾಡಲು ಕೂಡ ಕಷ್ಟವಾಗುವುದು.
ಶಸ್ತ್ರ ಚಿಕಿತ್ಸೆಗೆ ಮುಂದಾದ ವೈದ್ಯರು
ಈ ಕೆಯ ಪರಿಸ್ಥಿತಿ ನೋಡಿ ಶಸ್ತ್ರ ಚಿಕಿತ್ಸೆ ಮಾಡಲು ಮುಂದಾಗುತ್ತಾರೆ ವೈದ್ಯರು. ಈಕೆಯ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಸೂಕ್ಷ್ಮ ರೀತಿಯಲ್ಲಿ ವೈದ್ಯಕೀಯ ಮೌಲ್ಯೀಕರಣ ಮತ್ತು ಯೋಜನೆಗಳ ನಂತರ ಹಂತ ಹಂತವಾಗಿ ಒಂದೊಂದಾಗಿ ಆಕೆಯ ಮೂತ್ರಪಿಂಡಗಳನ್ನು ಹೊರತೆಗೆಯುವ ನಿರ್ಣಯವನ್ನು ಕೈಗೊಳ್ಳಲಾಯಿತು. ಮೊದಲಿಗೆ ಆಕೆಯ ಎಡಭಾಗದ ಮೂತ್ರಪಿಂಡವನ್ನು ಹೊರತೆಗೆಯಲಾಯಿತು. ಮೂತ್ರಪಿಂಡದ ಗಾತ್ರವನ್ನು ಪರಿಗಣಿಸಿ, ತೆರೆದ ಶಸ್ತ್ರಚಿಕಿತ್ಸೆ ಕ್ರಮವನ್ನು ಇದಕ್ಕಾಗಿ ಆಯ್ದುಕೊಳ್ಳಲಾಯಿತು. ಯಾವುದೇ ಅಹಿತಕರಘಟನೆಗಳಿಲ್ಲದೆ ರೋಗಿಗೆ ಶಸ್ತ್ರಕ್ರಿಯೆ ಪೂರ್ಣಗೊಂಡಿದೆ.
ಮೂತ್ರ ರೋಗಶಾಸ್ತ್ರದ ತಂಡಗಳ ನೇತೃತ್ವವನ್ನು ಡಾ. ಸನ್ಮಾನ್ ವಹಿಸಿದ್ದರು. ಈ ತಂಡದಲ್ಲಿ ಮೂತ್ರಪಿಂಡ ರೋಗ ಶಾಸ್ತ್ರ ವಿಭಾಗದ ಡಾ. ಸುಶಾಂತ್ ಕುಮಾರ್ ಮತ್ತು ಡಾ. ಮಧುಸೂಧನ್ ಉಪಾಧ್ಯ ಹಾಗೂ ಮಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆಯ ಅರಿವಳಿಕೆ ಶಾಸ್ತ್ರ ವಿಭಾಗದ ತಂಡ ಈ ಶಸ್ತ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ರೋಗಿ ಚೇತರಿಸಿಕೊಂಡು ತಮ್ಮ ದೈನಂದಿನ ಜೀವನವನ್ನುಆರಂಭಿಸಿದ್ದಾರೆ
ಈ ಶಸ್ತ್ರ ಚಿಕಿತ್ಸೆ ಬಳಿಕ ಮಹಿಳೆ ಚೇತರಿಸಿಕೊಂಡು ಈಗ ತಮ್ಮ ದೈನಂದಿನ ಜೀವನವನ್ನು ಆರಂಭಿಸಿದ್ದಾರೆ.
ಎಡಿಪಿಕೆಡಿ ಯಾರಿಗೆ ಬರುವ ಸಾಧ್ಯತೆ ಹೆಚ್ಚು?
ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಮೂತ್ರರೋಗಶಾಸ್ತ್ರ ಸಲಹಾ ತಜ್ಞರಾದ (ಯೂರೋಲೊಜಿಸ್ಟ್) ಡಾ.ಸನ್ಮಾನ್ ಗೌಡ ಅವರು ಮಾತನಾಡಿ, ಎಡಿಪಿಕೆಡಿ ಲಕ್ಷಣಗಳು ಸಾಮಾನ್ಯವಾಗಿ 30ರಿಂದ 40 ವರ್ಷ ವಯಸ್ಸಿನಲ್ಲಿ ಬೆಳವಣಿಗೆ ಹೊಂದುತ್ತವೆ ಅಲ್ಲದೆ, ಇದರಿಂದ ಮೂತ್ರಪಿಂಡ ವೈಫಲ್ಯಕ್ಕೆ ದಾರಿಯಾಗುತ್ತದೆ. ಈ ಹಿಂದೆ ಇದನ್ನು ವಯಸ್ಕರ ಪಾಲಿಸ್ಟಿಸ್ಟಿಕ್ ಕಿಡ್ನಿ ಡಿಸೀಸ್ ಎಂದು ಕರೆಯಲಾಗುತ್ತಿತ್ತು. ಆದರೆ, ಮಕ್ಕಳಲ್ಲೂ ಕೂಡ ಈ ತೊಂದರೆ ಕಂಡುಬರಬಹುದು. ಪೋಷಕರ ಪೈಕಿ ಒಬ್ಬರಿಗೆ ಈ ತೊಂದರೆ ಇದ್ದರೂ ವಂಶವಾಹಿಗಳ ಮೂಲಕ ಈ ರೋಗ ಮಕ್ಕಳಿಗೆ ಬರಬಹುದು. ಪೋಷಕರಲ್ಲಿ ಒಬ್ಬರಿಗೆ ಎಡಿಪಿಕೆಡಿ ತೊಂದರೆ ಇದ್ದರೆ ಮಗುವಿಗೆ ಈ ರೋಗ ಬರುವ ಸಾಧ್ಯತೆ ಶೇ.50ರಷ್ಟು ಇರುತ್ತದೆ. ಪುರುಷರು ಮತ್ತು ಮಹಿಳೆಯರಲ್ಲಿ ಈ ರೋಗ ಕಂಡುಬರಬಹುದು. ಇದನ್ನು ಮೂತ್ರಪಿಂಡಗಳ ರೋಗ ಎಂದು ಕರೆದಿದ್ದರೂ ಕೂಡ ಇದರಿಂದ ಶ್ವಾಸಕೋಶಗಳು ಮತ್ತು ಪಿತ್ತಜನಕಾಂಗ(ಯಕೃತ್)ಗಳ ಮೇಲೂ ಪರಿಣಾಮ ಉಂಟಾಗಬಹುದು' ಎಂದು ಹೇಳಿದ್ದಾರೆ.
ವಂಶವಾಹಿಯಾಗಿ ಬರುವ ಕಾಯಿಲೆ
ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಮೂತ್ರಪಿಂಡ ರೋಗ ಸಲಹಾ ತಜ್ಞರಾದ (ಕಿಡ್ನಿ ಸ್ಪೆಷಲಿಸ್ಟ್)ಡಾ. ಸುಶಾಂತ್ ಕುಮಾರ್ ಅವರುಪಿಕೆಡಿ1(16ಪಿ13) ಅಥವಾ ಪಿಕೆಡಿ2 (4ಕ್ಯೂ21) ವಂಶವಾಹಿಗಳಲ್ಲಿ ರೂಪಾಂತರ ಉಂಟಾದಲ್ಲಿ ಆಟೋಸೋಮಲ್ ಡಾಮಿನೆಂಟ್ ಪಾಲಿಸಿಸ್ಟಿಕ್ ಕಿಡ್ನಿ ಡಿಸೀಸ್‍ಗೆ ದಾರಿಯಾಗಬಹುದು. ಪಿಕೆಡಿ1 ವಂಶವಾಹಿ ರೂಪಾಂತರಗಳು ಎಡಿಪಿಕೆಡಿ ಟೈಪ್1 ರೋಗಕ್ಕೆ ಕಾರಣವಾಗುತ್ತವೆ. ಪಿಕೆಡಿ2 ವಂಶವಾಹಿ ರೂಪಾಂತರಗಳು ಎಡಿಪಿಕೆಡಿ ಟೈಪ್ 2 ರೋಗಕ್ಕೆ ಕಾರಣವಾಗುತ್ತವೆ. ಈ ವಂಶವಾಹಿಗಳು ಜೀವಕೋಶಗಳ ಹೊರಭಾಗದಿಂದ ಜೀವಕೋಶದ ಕೇಂದ್ರ(ನ್ಯೂಕ್ಲಿಯಸ್)ಭಾಗಕ್ಕೆ
ರಾಸಾಯನಿಕ ಸಂಕೇತಗಳನ್ನು ಕಳುಹಿಸುವ ಪ್ರೊಟೀನ್‍ಗಳನ್ನು ತಯಾರಿಸಲು ಈ ವಂಶವಾಹಿಗಳು ಸೂಚನೆಗಳನ್ನು ನೀಡುತ್ತವೆ. ಸಾಮಾನ್ಯ ಮೂತ್ರಪಿಂಡ ಬೆಳವಣಿಗೆ, ಸಂಘಟನೆ ಮತ್ತು ಕಾರ್ಯಗಳಿಗೆ ಈ ಎರಡು ಪ್ರೊಟೀನ್‍ಗಳು ಒಂದಾಗಿ ಕೆಲಸ ಮಾಡುತ್ತವೆ. ಪಿಕೆಡಿ1 ಅಥವಾ ಪಿಕೆಡಿ2 ವಂಶವಾಹಿಗಳಲ್ಲಿ ರೂಪಾಂತರಗಳು ಉಂಟಾದರೆ ಅವು ಸಾವಿರಾರು ಚೀಲಗಳು ಮೂತ್ರಪಿಂಡದಲ್ಲಿ ರಚನೆಯಾಗಲು ದಾರಿ ಮಾಡಿಕೊಡುತ್ತವೆ. ಇವು ಮೂತ್ರಪಿಂಡಗಳು ಮತ್ತು ಇತರೆ ಅಂಗಗಳ ಸಾಮಾನ್ಯ ಕಾರ್ಯಗಳಿಗೆ ಅಡ್ಡಿ ಮಾಡುತ್ತವೆ' ಎಂದು ಈ ಕಾಯಿಲೆ ಬಗ್ಗೆ ವಿವರಿದ್ದಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications