Latest Updates
-
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ! -
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ!
ಭೂಮಿ ಮೇಲೆ ಗಂಡು ಮಕ್ಕಳು ಜನಿಸಲ್ಲಾ..! ಮರೆಯಾಗುತ್ತಿದೆ ಪುರುಷರ ವೈ ಕ್ರೋಮೋಸೋಮ್..!!
ನಿಮಗೆ ಮಾನವ ಜನ್ಮ ಹಾಗೂ ಮಕ್ಕಳ ಜನನ, ಕ್ರೋಮೋಸೋಮ್‌ಗಳ ಬಗ್ಗೆ ಒಂದಿಷ್ಟು ಮಾಹಿತಿ ಇರಬಹುದು. ಶಾಲೆಯಲ್ಲೋ ಅಥವಾ ಕಾಲೇಜಿನಲ್ಲೋ ನಾವು ಓದಿದ ನೆನಪು ಬರಬಹುದು. ಈ ಕ್ರೋಮೋಸೋಮ್‌ಗಳೇ ಯಾವ ಮಗು ಹುಟ್ಟಬೇಕು ಎಂಬುದನ್ನು ನಿರ್ಧರಿಸುತ್ತವೆ ಎಂಬುದು ಸಹ ನಮಗೆ ಗೊತ್ತಿದೆ, ಆದ್ರೆ ಈಗೊಂದು ಅಧ್ಯಯನದಲ್ಲಿ ವಿಚಿತ್ರ ವಿದ್ಯಮಾನ ನಡೆಯುವ ಸಾಧ್ಯತೆಯನ್ನು ಜಗತ್ತಿನ ಮುಂದಿಟ್ಟಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಮಾನವ ಸಂತಾನೋತ್ಪತ್ತಿ ಕುರಿತಂತೆ ಮಾಡಲಾದ ಅಧ್ಯಯನವು ಹೊಸ ಹೊಸ ಮಾಹಿತಿಯನ್ನು ಹೊರಗಿಟ್ಟಿದೆ. ಅದರಲ್ಲಿ ಈ ಗಂಡು ಮತ್ತು ಹೆಣ್ಣು ಮಕ್ಕಳು ಹುಟ್ಟುವ ಕುರಿತಂತೆ ವಿಶೇಷ ವರದಿ ನೀಡಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಪುರುಷರಲ್ಲಿರುವ ವೈ (Y) ಕ್ರೋಮೋಸೋಮ್ ಅಂಶ ನಿಧಾನವಾಗಿ ನಾಶವಾಗುತ್ತಿದೆ ಎಂದು ಈ ಅಧ್ಯಯನ ಹೇಳಿದೆ.

ಅರೇ ಅಷ್ಟೇ ತಾನೆ ಈ ವೈ ಕ್ರೋಮೋಸೋಮ್ ನಷ್ಟವಾದರೆ ಜಗತ್ತಿಗೆ ಏನು ನಷ್ಟ ಎಂದು ನೀವು ಅಂದುಕೊಳ್ಳುತ್ತಿರಬಹುದು, ಈ ವೈ ಕ್ರೋಮೋಸೋಮ್‌ಗಳೇ ಗಂಡು ಮಕ್ಕಳ ಜನನಕ್ಕೆ ಕಾರಣವಾಗುವ ಜೀನ್ಸ್ ಆಗಿದೆ. ಮಹಿಳೆಯರ X (ಎಕ್ಸ್) ಕ್ರೋಮೋಸೋಮ್ ಜೊತೆ ಪುರುಷರ ವೈ ಕ್ರೋಮೋಸೋಮ್ ಸೇರಿದರೆ ಗಂಡು ಮಕ್ಕಳು ಹುಟ್ಟುತ್ತಾರೆ ಇನ್ನೊಂದು ಕಡೆ ಮಹಿಳೆಯರ ಎಕ್ಸ್ ಕ್ರೋಮೋಸೋಮ್ ಜೊತೆ ಪುರುಷರ ಎಕ್ಸ್ ಕ್ರೋಮೋಸೋಮ್ ಸೇರಿದರೆ ಮಾತ್ರ ಹೆಣ್ಣು ಮಕ್ಕಳು ಹುಟ್ಟುತ್ತಾರೆ.
ಅಂದರೆ ಪುರುಷರಲ್ಲಿ ಎಕ್ಸ್ ಮತ್ತು ವೈ ಎರಡೂ ಕ್ರೋಮೋಸೋಮ್ ಇರುತ್ತವೆ. ಆದ್ರೆ ಮಹಿಳೆಯರಲ್ಲಿ ಕೇವಲ ಎಕ್ಸ್ ಕ್ರೋಮೋಸೋಮ್‌ಗಳು ಮಾತ್ರ ಕಂಡುಬರುತ್ತವೆ. ನಾವೆಲ್ಲಾ ಹೆಣ್ಣು ಮಗು ಹುಟ್ಟಿತು ಎಂದು ಮಹಿಳೆಯರನ್ನು ದೂಷಿಸುವ ಸಮಾಜದಲ್ಲಿದ್ದೇವೆ. ಆದ್ರೆ ಮಗು ಯಾವುದು ಹುಟ್ಟಬೇಕು ಎಂಬುದು ನಿರ್ಧಾರವಾಗಲು ಕಾರಣ ಪುರುಷನಾಗಿರುತ್ತಾನೆ.
ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್‌ನ ಪ್ರೊಸೀಡಿಂಗ್ಸ್‌ನಲ್ಲಿ ಪ್ರಕಟವಾದ 2-ವರ್ಷ-ಹಳೆಯ ಸಂಶೋಧನಾ ಪ್ರಬಂಧವು ಸ್ಪೈನಿ ಎಂಬ ಇಲಿ ಹೊಸ ಪುರುಷ ಜೀನ್ ಅನ್ನು ಹೇಗೆ ವಿಕಸನಗೊಳಿಸಿದೆ ಎಂಬುದನ್ನು ತೋರಿಸುತ್ತದೆ.
ಈ ವಿದ್ಯಮಾನದ ಮೇಲೆ ಅಧ್ಯಯನ ನಡೆಸಿದ ವಿಜ್ಞಾನಿಗಳು ಗಂಡು ಮಕ್ಕಳ ಬೆಳವಣಿಗೆಗೆ ನಿರ್ಣಾಯಕವಾದ Y ಕ್ರೋಮೋಸೋಮ್ ಕುಗ್ಗುತ್ತಿದೆ ಮತ್ತು ಅಂತಿಮವಾಗಿ ಕಣ್ಮರೆಯಾಗಬಹುದು ಎಂದು ದೃಢಪಡಿಸಿದ್ದಾರೆ. ಈ ಸಿದ್ಧಾಂತದ ಪ್ರಕಾರ ಮುಂದೊಂದು ದಿನ ಕೇವಲ ಹೆಣ್ಣು ಮಕ್ಕಳು ಜನಿಸುವ ಸಾಧ್ಯತೆ ಹೆಚ್ಚಾಗಿದೆ ಎಂದರ್ಥ. ಭೂಮಿ ಮೇಲೆ ಹೆಣ್ಣು ಮಕ್ಕಳು ಮಾತ್ರ ಜನಿಸುವ ಸಾಧ್ಯತೆ ಹೆಚ್ಚಾಗುತ್ತದೆ. ಈಗಿರುವಂತೆ ಲಿಂಗಾನುಪಾತದ ಪ್ರಕಾರ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಕಡಿಮೆಯೇ ಇದೆ. ಆದ್ರೆ ಭವಿಷ್ಯದಲ್ಲಿ ಈ ಸಂಖ್ಯೆ ತಲೆಕೆಳಗಾಗಬಹುದು ಎಂಬುದು ವಿಜ್ಞಾನಿಗಳ ವಾದವಾಗಿದೆ.
ಪುರುಷರು ಅಂತಿಮವಾಗಿ ಭೂಮಿಯಿಂದ ಕಣ್ಮರೆಯಾಗಬಹುದೇ?
ಈ ಸಂಶೋಧನೆಯು ಪರ್ಯಾಯ ಸಾಧ್ಯತೆಯನ್ನು ಬೆಂಬಲಿಸುತ್ತದೆ-ಮನುಷ್ಯರು ಹೊಸ ಲಿಂಗ-ನಿರ್ಧರಿಸುವ ಜೀನ್ ಅನ್ನು ವಿಕಸನಗೊಳಿಸಬಹುದು ಎಂದು ಪ್ರೊಫೆಸರ್ ಗ್ರೇವ್ಸ್ ಹೇಳಿದ್ದಾರೆ. ಆದರೆ ಈ ಹೊಸ ಲಿಂಗ ನಿರ್ಧರಿಸುವ ಜೀನ್ ಹಲವು ಅಪಾಯಗಳು, ಅಡೆತಡೆಗಳ ಎದುರಿಸಿ ಬರಬೇಕಾಗುತ್ತದೆ. ಇದೆಲ್ಲಾ ಸಂಭವಿಸಬೇಕಾದರೆ ಮಿಲಿಯನ್ ವರ್ಷ ದಾಟಬೇಕಾಗುತ್ತದೆ ಎಂದಿದ್ದಾರೆ.
ಸರಿ ಹೊಂದದ ಲಿಂಗಾನುಪಾತ
ದೇಶದ ಹಲವು ಭಾಗದಲ್ಲಿ ಲಿಂಗಾನುಪಾತ ಎಷ್ಟು ಅಸಮತೋಲನದಿಂದ ಕೂಡಿದೆ ಎಂದರೆ 1000 ಪುರುಷರಿಗೆ 800ಕ್ಕಿಂತ ಕಡಿಮೆ ಮಹಿಳೆಯರು ಇರುವ ಮೂಲಕ ಲಿಂಗಾನುಪಾತ ಆತಂಕ ಹುಟ್ಟಿಸಿದೆ. ಅದ್ರಲ್ಲೂ ಇತ್ತೀಚಿಗೆ ಮಂಡ್ಯ ಜಿಲ್ಲೆಯ ಲಿಂಗಾನುಪಾತ ಭಾರೀ ಸುದ್ದಿ ಮಾಡಿತ್ತು. 1000 ಗಂಡು ಮಕ್ಕಳಿಗೆ ಕೇವಲ 865 ಹೆಣ್ಣು ಮಕ್ಕಳಿದ್ದಾರೆ ಎಂಬ ವರದಿ ದೆಹಲಿ ವರೆಗೂ ಸುದ್ದಿಯಾಗಿತ್ತು. ಇದಕ್ಕೆ ಹೆಣ್ಣು ಭ್ರೂಣ ಹತ್ಯೆಯಂತಹ ಪ್ರಕರಣಗಳು ಹೆಚ್ಛಾಗಿವೆ ಎಂಬುದಕ್ಕೆ ಪರೋಕ್ಷ ಸಾಕ್ಷಿ ಒದಗಿಸುತ್ತವೆ. ಇತ್ತ ರಾಜ್ಯದ ಹಲವು ಜಿಲ್ಲೆಯಲ್ಲಿ ಈ ಲಿಂಗಾನುಪಾತ ಮಹಿಳೆಯರ ಸಂಖ್ಯೆ ಹೆಚ್ಚಾಗಿರುವುದು ಸಹ ಇದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications