Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಜಿಬಿ ಸಿಂಡ್ರೋಮ್ ಆತಂಕ: ಪುಣೆಯಲ್ಲಿ ಮೊದಲ ಶಂಕಿತ ಸಾವು..!101 ಮಂದಿ ವೆಂಟಿಲೇಟರ್‌ಗೆ ಶಿಫ್ಟ್.!
ಹೆಚ್‌ಎಂಪಿವಿ, ಹಕ್ಕಿ ಜ್ವರದಂತಹ ವೈರಸ್‌ಗಳ ನಡುವೆ ಹೊಸ ಹೊಸ ರೀತಿಯ ವೈರಸ್ ಸಮಸ್ಯೆಯಿಂದಾಗಿ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಹಲವು ಪ್ರಕರಣಗಳ ನಾವು ನೋಡುತ್ತಿದ್ದೇವೆ. ಅದರಲ್ಲೂ ಮಹಾರಾಷ್ಟ್ರದ ಪುಣೆಯಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ವೈರಸ್ ಕಾಯಿಲೆಯೊಂದು ಈಗ ಆತಂಕ ಹೆಚ್ಚಿಸಿದೆ. ಸದ್ಯ ಪುಣೆಯಲ್ಲಿ ನರ ವೈಜ್ಞಾನಿಕ ಕಾಯಿಲೆಯೊಂದು ಕಾಡಲು ಆರಂಭಿಸಿದ್ದು, ಈಗಾಗಲೇ ಹರಡುವ ಭೀತಿಗೆ ಕಾರಣವಾಗಿದೆ.
ಗುಯಿಲಿನ್ ಬಾರೆ ಸಿಂಡ್ರೋಮ್ ಎಂದು ಕರೆಯಲಾಗುವ ವಿಚಿತ್ರ ಕಾಯಿಲೆಗೆ ಈಗಾಗಲೇ ಒಬ್ಬರು ಮೃತಪಟ್ಟಿದ್ದು, 101 ಜನರು ವೈರಸ್‌ಗೆ ತುತ್ತಾಗಿದ್ದಾರೆ ಎಂದು ವರದಿಗಳಾಗಿವೆ. ಗುಯಿಲಿನ್-ಬಾರೆ ಸಿಂಡ್ರೋಮ್ (GBS) ಒಂದು ಅಪರೂಪದ ನರವೈಜ್ಞಾನಿಕ ಪರಿಸ್ಥಿತಿಯಾಗಿದ್ದು, ಇದರಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ನರಗಳ ಮೇಲೆ ದಾಳಿ ಮಾಡುತ್ತದೆ ಎಂದು ತಿಳಿದುಬಂದಿದೆ.

ಪುಣೆಯಲ್ಲಿ ಈ ಗುಯಿಲಿನ್ ಬಾರೆ ಸಿಂಡ್ರೋಮ್ ಹಠಾತ್ ಆಗಿ ಪ್ರಕರಣಗಳು ಏರಿಕೆ ಕಾಣುತ್ತಿದೆ. ಹೀಗಾಗಿ ಈ ಕುರಿತ ತನಿಖೆಗಾಗಿ ಮಹಾರಾಷ್ಟ್ರ ಸರ್ಕಾರ ವಿಶೇಷ ರಾಪಿಡ್ ಫೋರ್ಸ್ ಸೇರಿ ತಂಡವನ್ನು ರಚಿಸಿದೆ.
ಹಾಗೆ ಪುಣೆಯ ವಿವಿಧ ಭಾಗದ ಸುಮಾರು 25 ಸಾವಿರಕ್ಕೂ ಹೆಚ್ಚು ಮನೆಗಳ ಸಮೀಕ್ಷೆ ನಡೆಸಲಾಗಿದೆ. ಅವರ ರಕ್ತದ ಮಾದರಿ, ಮಲ, ಮೂತ್ರದ ಮಾದರಿಯನ್ನು ಕೂಡ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. 23 ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಎಲ್ಲಾ ಮಾದರಿಯಲ್ಲೂ ಡೆಂಗ್ಯ, ಜಿಕಾ ಚಿಕೂನ್‌ಗುನ್ಯಾ ಸೇರಿ ಯಾವುದೇ ವೈರಸ್‌ಗಳು ಪತ್ತೆಯಾಗಿಲ್ಲ ಎಂದು ವರದಿಯಾಗಿದೆ. ಆದರೆ ಕೆಲವು ಬ್ಯಾಕ್ಟೀರಿಯಾ ಸೋಂಕಿನ ಧನಾತ್ಮಕ ಫಲಿತಾಂಶ ಕೂಡ ಬಂದಿದೆ.
ಗುಯಿಲಿನ್ ಬಾರೆ ಸಿಂಡ್ರೋಮ್ ಎಂದರೇನು?
ಗುಯುಲಿನ್ ಬಾರೆ ಒಂದು ಸ್ವಯಂ ನಿರೋಧಕ ನರವೈಜ್ಞಾನಿಕ ಅಸ್ವಸ್ಥತೆ ಎಂದು ಪರಿಗಣಿಸಲಾಗಿದೆ. ಇದರಲ್ಲಿ ರೋಗನಿರೋಧಕ ವ್ಯವಸ್ಥೆಯು ನರಮಂಡಲದ ಮೇಲೆ ದಾಳಿ ಮಾಡುತ್ತದೆ, ಇದು ಸ್ನಾಯು ದೌರ್ಬಲ್ಯಕ್ಕೆ ಕಾರಣವಾಗುತ್ತದೆ. ಇದರಿಂದ ನಮ್ಮ ದೇಹದ ಒಂದು ಭಾಗ ಕೆಲಸ ಮಾಡುವುದನ್ನೇ ನಿಲ್ಲಿಸಬಹುದು. ಮರಗಟ್ಟುವಿಕೆ, ಪಾರ್ಶ್ವವಾಯುವಿನಂತಹ ಗಂಭೀರ ಸಮಸ್ಯೆಗೆ ಇದು ಕಾರಣವಾಗುತ್ತೆ.
ಜಿಬಿಎಸ್ ಆರಂಭದಲ್ಲಿ ಪಾದಗಳಿಂದ ಆರಂಭವಾಗಿ ನಂತರ ಇಡೀ ದೇಹವನ್ನೂ ಆವರಿಸಬಹುದು. ಕಾಲುಗಳು, ತೋಳು, ಮುಖ ಮತ್ತು ಉಸಿರಾಟ ಪ್ರಕ್ರಿಯೆಗೆ ಕಾರಣವಾಗುವ ಸ್ನಾಯುಗಳಿಗೂ ಇದು ಹರಡುತ್ತದೆ. ಏಕಾಏಕಿ ನಿಮ್ಮ ರೋಗ ನಿರೋಧಕ ಶಕ್ತಿ ಕುಂದುವುದರಿಂದ ಈ ಸಮಸ್ಯೆ ಬಹುಬೇಗ ದೇಹಕ್ಕೆ ಹಾನಿ ಮಾಡಲು ಆರಂಭಿಸುತ್ತದೆ.
ಈ ಸಮಸ್ಯೆಗಳಿಗೆ ಒಳಗಾದವರಲ್ಲಿ ಪಾರ್ಶ್ವವಾಯು ಅಪಾಯ ಹೆಚ್ಚಾಗುತ್ತದೆ. ಹಾಗೆ ಮೆದುಳು ಅಸಹಜ ಸಂಕೇತಗಳ ಪಡೆಯಲು ಆರಂಭಿಸುತ್ತದೆ. ಇದರಿಂದ ಸುಲಭದ ಕೆಲಸಗಳು ಕಷ್ಟವಾಗುತ್ತಾ ಸಾಗುತ್ತದೆ. ನಿಮ್ಮ ಕೈಯಲ್ಲಿ ಸುಲಭದ ಕೆಲಸಗಳನ್ನು ಮಾಡುವುದು ಕಷ್ಟವಾಗುತ್ತದೆ. ನೀವು ಪ್ರಜ್ಞೆ ಕಳೆದುಕೊಳ್ಳುವ ಸಂಭನೀಯ ಅಪಾಯವೂ ಇರುತ್ತದೆ.
ಗುಯಿಲಿನ್-ಬಾರ್ ಸಿಂಡ್ರೋಮ್ ಹೊಂದಿರುವ ಹೆಚ್ಚಿನ ಜನರು ಈ ಸಮಸ್ಯೆಗೆ ಒಳಗಾಗುವ ಕನಿಷ್ಠ 6 ವಾರಗಳ ಮೊದಲು ಅದರ ಲಕ್ಷಣಗಳ ಎದುರಿಸಲು ಮುಂದಾಗುತ್ತಾರೆ. ಸದ್ಯ ಪುಣೆಯಲ್ಲಿ ಸುಮಾರು 101 ಮಂದಿ ವೆಂಟಿಲೇಟರ್‌ನಲ್ಲಿದ್ದಾರೆ. ಸೋಲಾಪುರದಲ್ಲಿ ಒಂದು ಶಂಕಿತ ಸಾವು ಕೂಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಪುಣೆಯ ವಿವಿಧ ಭಾಗಗಳಿಂದ ನೀರಿನ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಪ್ರಯೋಗಾಲಕ್ಕೆ ಕಳುಹಿಸಲಾಗಿದೆ. ಹಾಗೆ ಕೆಲವು ನೀರಿನ ಮೂಲಗಳನ್ನು ಬಳಸದಂತೆಯೂ ಎಚ್ಚರಿಕೆ ನೀಡಲಾಗಿದೆ. ಈ ಕಾಯಿಲೆ ನೀರಿನಿಂದ ಹರಡುತ್ತಿರುವ ಆತಂಕ ಹೆಚ್ಚಾಗಿರುವ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ. ಈ ಸಿಂಡ್ರೋಮ್ ಧನಾತ್ಮಕ ಪರೀಕ್ಷೆಗೆ ಒಳಗಾದವರಲ್ಲಿ ಈ ಸಮಸ್ಯೆ ವಾರಗಳ ಕಾಲ ಇಲ್ಲಿವೆ ವರ್ಷಗಳ ಕಾಲ ಉಳಿಯಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
