Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಲಿಂಪೋಮಾ ಕ್ಯಾನ್ಸರ್: ಮಕ್ಕಳಲ್ಲಿ, ದೊಡ್ಡವರಲ್ಲಿ ಇದರ ಲಕ್ಷಣಗಳೇನು? ಸಂಪೂರ್ಣ ಗುಣ ಪಡಿಸಬಹುದೇ?
ಕ್ಯಾನ್ಸರ್‌ನಲ್ಲಿ ಹತ್ತಾರು ಬಗೆ ಅದರಲ್ಲೊಂದು ಲಿಂಪೋಮಾ ಕ್ಯಾನ್ಸರ್. ಮಾರಾಣಾಂತಿಕ ಕ್ಯಾನ್ಸರ್‌ನಲ್ಲಿ ಲಿಂಪೋಮಾ ಕ್ಯಾನ್ಸರ್ ಕೂಡ ಒಂದಾಗಿದೆ. ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಕ್ಯಾನ್ಸರ್‌ಗಳಲ್ಲಿ ಲಿಂಪೋಮಾ ಕ್ಯಾನ್ಸರ್ ಕೂಡ ಒಂದಾಗಿದೆ. ಈ ಲಿಂಪೋಮಾ ಕ್ಯಾನ್ಸರ್ ಕುರಿತು ಮತ್ತೊಂದಿಷ್ಟು ಮಾಹಿತಿಯನ್ನು ಮಣಿಪಾಲ್ ಆಸ್ಪತ್ರೆಯ ವೈದ್ಯರಾಗಿರುವ ಡಾ. ವಿನಯ್ ಮುನಿಕೋಟಿ ವೆಂಕಟೇಶ್ ( Consultant - Paediatric Haematology Oncology & BMT, Manipal Hosital Yeshwanthpur) ಕನ್ನಡ ಬೋಲ್ಡ್‌ಸ್ಕೈ ಜೊತೆ ಹಂಚಿಕೊಂಡಿದ್ದಾರೆ.

ಲಿಂಪೋಮಾ ಕ್ಯಾನ್ಸರ್ ಎಂದರೇನು?
ಲಿಂಪೋಮಾ ಎಂಬುವುದು ದುಗ್ಧರಸದಲ್ಲಿ ಕಂಡು ಬರುವ ಕ್ಯಾನ್ಸರ್ ಆಗಿದೆ. ಇದರನ್ನು ಎರಡು ವಿಧಗಳಾಗಿ ವಿಂಗಡಿಸಬಹುದು.
1. ಹೋಡ್ಗಿನ್ ಲಿಂಪೋಮಾ( Hodgkin's lymphoma)
2. ನಾನ್ ಹೋಡ್ಗಿನ್ ಲಿಂಪೋಮಾ (non-Hodgkin's lymphom)
ಹೋಚ್ಗಿನ್ ಲಿಂಪೋಮಾ ಕುತ್ತಿ, ಅಂಗೈ, ತೊಡೆ, ಎದೆ, ಕಿಬ್ಬೊಟ್ಟೆಯಲ್ಲಿ ಊತ ಕಂಡು ಬರುವುದು.
ನಾನ್ ಹೋಡ್ಗಿನ್ ಲಿಂಪೋಮಾದಲ್ಲಿ ಲಿವರ್, ಗುದ, ಗುಲ್ಮ ಇವುಗಳಲ್ಲಿ ಊತ ಕಂಡು ಬರುವುದು, ಹೀಗಾದಾಗ ಹೊಟ್ಟೆ ಹಾಳಾಗುವುದು ಹಾಗೂ ತುಂಬಾ ಮೈ ತೂಕ ಕಡಿಮೆಯಾಗುವುದು.
ಲಿಂಪೋಮಾಗೆ ಚಿಕಿತ್ಸೆ ಹೇಗೆ
ಲಿಂಪೋಮಾ ಇರುವ ಮಕ್ಕಳಿಗೆ ಪೀಡಿಯಾಟ್ರಿಕ್ ಆಂಕೊಲಾಜಿ ಯೂನಿಟ್‌ನಲ್ಲಿ ಅತ್ಯುತ್ತಮ ಚಿಕಿತ್ಸಾ ವಿಧಾನದ ಮೂಲಕ ಚಿಕಿತ್ಸೆ ನೀಡಲಾಗುವುದು. ಮಕ್ಕಳ ಕುತ್ತಿಗೆ ಭಾಗದಲ್ಲಿ ಊತ ಅಥವಾ ಈ ಮೇಲೆ ಹೇಳಿದ ಯಾವುದೇ ಲಕ್ಷಣಗಳು ಕಂಡು ಬಂದರೆ, ಎರಡು ವಾರಕ್ಕಿಂತ ಅಧಿಕಕಾಲ ಜ್ವರವಿದ್ದರ ಪೋಷಕರು ಪೀಡಿಯಾಟ್ರಿಕ್ ಆಂಕೊಲಾಜಿ ಎಕ್ಸ್‌ಪರ್ಟ್‌ಗಳನ್ನು ಭೇಟಿ ಮಾಡುವುದು ಒಳ್ಳೆಯದು,.
ಲಿಂಪೋಮಾ ಕ್ಯಾನ್ಸರ್ ಲಕ್ಷಣಗಳು
ಕತ್ತಿನ ಬಾಗ
ಅಂಗೈ ಈ ಭಾಗದಲ್ಲಿ ಊತ ಕಂಡು ಬರುವುದು
* ಜ್ವರ
* ರಾತ್ರಿ ಬೆವರುವುದು
* ಉಸಿರಾಟದಲ್ಲಿ ತೊಂದರೆ
* ಇದ್ದಕ್ಕಿದ್ದಂತೆ ಮೈತೂಕ ಕಡಿಮೆಯಾಗುವುದು
* ತ್ವಚೆಯಲ್ಲಿ ತುರಿಕೆ
ಕ್ಯಾನ್ಸರ್ ಇದೆಯೇ ಎಂದು ತಿಳಿಯಲು ಯಾವ ಪರೀಕ್ಷೆ ಮಾಡಲಾಗುವುದು?
ದುಗ್ಧರಸ ಗ್ರಂಥಿಯ ಬಯೋಸ್ಪೈ
ಪಿಇಟಿ ಅಥವಾ CT ಸ್ಕ್ಯಾನ್ ಮಾಡಲಾಗುವುದು
ಚಿಕಿತ್ಸೆಯೇನು?
ಕೀಮೋಥೆರಪಿ, ಇಮ್ಯೂನೋಥೆರಪಿ ಅಥವಾ ಟಾರ್ಗೆಟೆಡ್ ಚಿಕಿತ್ಸೆ ನೀಡಲಾಗುವುದು. ಕೆಲವರಿಗೆ ರೇಡಿಯೋಥೆರಪಿ ಅವಶ್ಯಕತೆ ಬೀಳಬಹುದು. ಅದರಲ್ಲೂ ಮಕ್ಕಳಿಗೆ ಹಾಗೂ ದೊಡ್ಡವರಿಗೆ ಟಾರ್ಗೆಟೆಡ್ ಥೆರಪಿ, ಇಮ್ಯೋನೋಥೆರಪಿ ಈ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮಹತ್ವದ್ದಾಗಿದೆ.
ಚಿಕಿತ್ಸೆ ಪರಿಣಾಮಕಾರಿಯೇ?
ಸ್ಟೇಜ್ 1ರಲ್ಲಿ ಪತ್ತೆಯಾದರೆ ಶೇ.100ರಷ್ಟು ಗುಣಪಡಿಸಬಹುದು.
ಸ್ಟೇಜ್ 2 ಹಾಗೂ ಸ್ಟೇಜ್ 3ರಲ್ಲಿ ಶೇ. 90ರಷ್ಟು ರೋಗಿಗಳು ಗುಣಮುಖರಾಗುತ್ತಾರೆ.
ಸ್ಟೇಜ್ 4ರಲ್ಲಿ ಶೇ. 60-70ರಷ್ಟು ಗುಣಮುಖರಾಗುವ ಸಾಧ್ಯತೆ ಇದೆ
ಬೇಗನೆ ಗುರುತಿಸಿದರೆ ಗುಣಮುಖರಾಗುವ ಸಾಧ್ಯತೆ ಹೆಚ್ಚು
ಈ ಕ್ಯಾನ್ಸರ್ ಅನ್ನು ಮೊದಲನೇ ಹಂತದಲ್ಲಿ ಗೊತ್ತಾದರೆ ಚಿಕಿತ್ಸೆಯಿಂದ ಶೇ. 100ರಷ್ಟು ಗುಣಮುಖರಾಗುವ ಸಾಧ್ಯತೆ ಇರುವುದರಿಂದ ಲಕ್ಷಣಗಳು ಕಂಡು ಬಂದ ಕೂಡಲೇ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯುವುದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
