Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಲುಪಸ್: ಮೈ ಮೇಲೆ ರ‍್ಯಾಶ್ ನಿರ್ಲಕ್ಷ್ಯ ಬೇಡ್ವೆ ಬೇಡ, ಅಂಗಾಂಗ ವೈಫಲ್ಯವಾಗಿ ಜೀವಕ್ಕೆ ಅಪಾಯ ತರಬಹುದು
ಡಾಕ್ಟರ್ ಶೃತಿ ಪಿ ದೇಸಾಯಿ ರೆಮಟಾಲಜಿಸ್ಟ್ ಮಣಿಪಾಲ್ ಆಸ್ಪತ್ರೆ ಯಶವಂತಪುರ
ಎಲ್ಲರಿಗೂ ಕೆಲವೊಮ್ಮೆ ಮೈಯಲ್ಲಿ ರ‍್ಯಾಶಸ್ ಕಂಡು ಬರುವುದು, ಆದರೆ ಎಲ್ಲಾ ಗುಳ್ಳೆಗಳನ್ನು ನಿರ್ಲಕ್ಷ್ಯ ಮಾಡಲು ಹೋಗಬಾರದು, ಕೆಲವೊಂದು ರ‍್ಯಾಶಸ್ ವೈದ್ಯರಿಗೆ ತೋರಿಸಲೇಬೇಕು, ಇಲ್ಲದಿದ್ದರೆ ನಿರ್ಲಕ್ಷ್ಯ ಮಾಡಿದ ಈ ಗುಳ್ಳೆಗಳು ಪ್ರಾಣಕ್ಕೆ ಅಪಾಯ ತರಬಹುದು. ಉದಾಹರಣೆಗೆ ಬಟರ್ಫ್ಲೈ ರ‍್ಯಾಶ್ , ಇದನ್ನು ಮಲಾರ್ ರ‍್ಯಾಶ್ ಎಂದೂ ಕರೆಯುತ್ತಾರೆ.

ಚರ್ಮದ ರೋಗ ಎಂದು ತಪ್ಪಾಗಿ ಗ್ರಹಿಸಬಹುದಾದ ಬಟರ್ಫ್ಲೈ ರ‍್ಯಾಶ್ , ಕೆನ್ನೆಯ ಉದ್ದಕ್ಕೂ ಕೆಂಪು ಅಥವಾ ಕೆನ್ನೇರಳೆ ರ‍್ಯಾಶ್ ಆಗಿ ಹರಡುತ್ತದೆ, ನಂತರ ಮೂಗಿನ ಮೂಳೆಯ ಮೇಲೆ ಹೋಗುತ್ತದೆ ಮತ್ತು ಇದು ಚಿಟ್ಟೆಯ ರೆಕ್ಕೆಗಳಂತೆ ಕಾಣುತ್ತದೆ. ಇದು ಸಾಮಾನ್ಯವಾಗಿ ಲೂಪಸ್ ಎಂದು ಕರೆಯಲ್ಪಡುವ ಸಿಸ್ಟಮಿಕ್ ಲೂಪಸ್ ಎರಿಥೆಮಾಟೋಸಸ್ ಎಂಬ ಸ್ಥಿತಿಯನ್ನು ಹೊಂದಿರುವ ಜನರಲ್ಲಿ ಕಂಡುಬರುವ ಒಂದು ವಿಭಿನ್ನವಾದ ರ‍್ಯಾಶ್ ಆಗಿದೆ.
ಲೂಪಸ್ ಎಂಬುವುದು ಅಟೋಇಮ್ಯೂನೆ ಕಾಯಿಲೆ, ಇದರಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ತನ್ನದೇ ಅಂಗಗಳ ಮೇಲೆ ದಾಳಿ ಮಾಡುವ ಸ್ಥಿತಿಯಾಗಿದೆ. ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಇದು ಅಂಗಾಂಗಳ ವೈಫಲ್ಯಕ್ಕೆ ಕಾರಣವಾಗಬಹುದು. ಈ ರೀತಿಯಾದಾಗ ಚರ್ಮ, ಕೀಲುಗಳು, ಮೂತ್ರಪಿಂಡಗಳು, ಹೃದಯ, ಶ್ವಾಸಕೋಶಗಳು ಮತ್ತು ಮೆದುಳಿನಂತಹ ದೇಹದ ವಿವಿಧ ಭಾಗಗಳಿಗೆ ಉರಿಯೂತ ಮತ್ತು ಹಾನಿಯನ್ನು ಉಂಟುಮಾಡುತ್ತದೆ.
ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಇದು ಅಂಗಗಳಿಗೆ ಗಂಭೀರ ಹಾನಿಯನ್ನುಂಟುಮಾಡುತ್ತದೆ ಮತ್ತು ಅಂಗವೈಕಲ್ಯಕ್ಕೆ ಕಾರಣವಾಗಬಹುದು. SLE ಪ್ರತಿ ವ್ಯಕ್ತಿಯಲ್ಲಿ ವಿಭಿನ್ನವಾಗಿರಬಹುದು, ಇದರಲ್ಲಿ ಕೆಲವರು ಹೆಚ್ಚು ತೀವ್ರವಾದ ರೋಗಲಕ್ಷಣಗಳನ್ನು ಹೊಂದಿರುತ್ತಾರೆ, ಆದರೆ ಮಯ ಮೇಲೆ ಈ ರೀತಿ ಗುಳ್ಳೆಗಳು ಬಂದರೆ ನಿರ್ಲಕ್ಷ್ಯ ಮಾಡಬೇಡಿ.
ಲೂಪಸ್ ಅನ್ನು ಆದಷ್ಟು ಬೇಗ ಕಂಡುಹಿಡಿದು ಚಿಕಿತ್ಸೆ ನೀಡಿದರೆ ಜೀವ ಹಾಗೂ ಅಂಗಾಂಗಳನ್ನು ಉಳಿಸಬಹುದು, ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಅದು ನಿಮ್ಮ ಜೀವನದ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರಬಹುದು.
ಬಟರ್ಫ್ಲೈ ರ‍್ಯಾಶ್ ಗಳು ಸಾಮಾನ್ಯವಾಗಿ ಲೂಪಸ್‌ಗೆ ಸಂಬಂಧಿಸಿವೆ, ಆದರೆ ರೊಸಾಸಿಯಾ, ಡರ್ಮಟೈಟಿಸ್ ಮತ್ತು ಡರ್ಮಟೊಮಿಯೊಸಿಟಿಸ್ನಂತಹ ಇತರ ಚರ್ಮದ ರೋಗಗಳು ಕೂಡ ಇದೇ ರೀತಿಯ ಗುಳ್ಳೆಗಳಿಗೆ ಕಾರಣವಾಗಬಹುದು. ಆಗಾಗಿ ಮೈ ಮೇಲೆ ಗುಳ್ಳೆಗಳು ಕಂಡು ಬಂದಾಗ ನಿರ್ಲಕ್ಷ್ಯ ಮಾಡಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
