Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸ್ತನ ಕ್ಯಾನ್ಸರ್‌ಗೆ ಒಳಗಾದ ನಟಿಗೆ ಲೂಪಸ್ ರಾಶ್.! ಏನಿದು ಚರ್ಮದ ಸಮಸ್ಯೆ ಗೊತ್ತಾ?
ಇಡೀ ಜಗತ್ತಿನಲ್ಲಿ ಜನರು ಭಯ ಪಡುವ ಕಾಯಿಲೆಗಳಲ್ಲಿ ಕ್ಯಾನ್ಸರ್ ಸಹ ಒಂದು. ಅದ್ರಲ್ಲೂ ಭಾರತ, ಅಮೆರಿಕ, ಇಂಗ್ಲೆಂಡ್‌ನಲ್ಲಿ ಕ್ಯಾನ್ಸರ್ ಪಿಡುಗು ಜನರ ಜೀವ ಹಿಂಡುತ್ತಿದೆ. ಕ್ಯಾನ್ಸರ್‌ಗೆ ಆರಂಭದಲ್ಲೆ ಚಿಕಿತ್ಸೆ ತೆಗೆದುಕೊಳ್ಳುವುದರಿಂದ ಈ ಮಹಾ ಪಿಡುಗಿನಿಂದ ಹೊರಬರಬಹುದು. ಇಲ್ಲದಿದ್ದರೆ ಸಾವು ಹುಡುಕಿ ಬರುತ್ತದೆ. ಕ್ಯಾನ್ಸರ್ ವಿರುದ್ಧದ ಹೋರಾಟ ಒಂದು ಕಡೆಯಾದರೆ ಅದರ ಚಿಕಿತ್ಸೆಯೂ ಸಹ ಒಂದು ಹೋರಾಟವೆ.
ಕ್ಯಾನ್ಸರ್‌ಗೆ ನೀಡುವ ಕೀಮೋಥೆರಪಿ ಚಿಕಿತ್ಸೆ ಮತ್ತೊಂದು ರೀತಿಯ ನೋವು, ಇದು ಸಹ ಒಂದು ಹೋರಾಟವೆ. ಕೀಮೋಥೆರಪಿಗೆ ಒಳಗಾದರೆ ಕೂದಲು ಉದುರುವುದರಿಂದ ಹಿಡಿದು ಹಲವು ಸಮಸ್ಯೆ ಎದುರಾಗುತ್ತೆ. ಆದ್ರೆ ಕ್ಯಾನ್ಸರ್ ಗೆದ್ದ ಬಳಿಕ ಅದರ ಅಪಾಯಗಳು ಅಲ್ಲಿಗೆ ಮುಗಿಯೋದಿಲ್ಲ. ಬೇರೆ ಬೇರೆ ಸಮಸ್ಯೆಗಳು ಎದುರಾಗ್ತವೆ. ಇಲ್ಲಿಯೂ ಸಹ ನಟಿಯೊಬ್ಬರು ಕ್ಯಾನ್ಸರ್ ಗೆದ್ರೂ ಅದರ ಪರಿಣಾಮದಿಂದ ಹೊಸ ಕಾಯಿಲೆಗೆ ಅವರು ತುತ್ತಾಗಿದ್ದಾರೆ.

ನಟಿ ಮತ್ತು ಸ್ತನ ಕ್ಯಾನ್ಸರ್ ನಿಂದ ಬದುಕುಳಿದ ಛಾವಿ ಮಿತ್ತಲ್ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ವರ್ಷಗಳ ಕಾಲ ಅವರು ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡಿದ್ದಾರೆ. ಈ ಹೋರಾಟದಲ್ಲಿ ಅವರು ಗೆದ್ದು ಬಂದಿದ್ದಾರೆ. ಆದ್ರೆ ಹೊಸದೊಂದು ಕಾಯಿಲೆಗೆ ಅವರು ತುತ್ತಾಗಿದ್ದಾರೆ. ಅವರು ತಮ್ಮ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಈ ಕುರಿತ ಮಾಹಿತಿ ಹಂಚಿಕೊಂಡಿದ್ದಾರೆ.
ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಅವರಿಗೆ ಲೂಪಸ್ ರಾಶ್ ಎಂಬ ಕಾಯಿಲೆ ಕಾಣಿಸಿಕೊಂಡಿದೆಯಂತೆ. ಈ ಕುರಿತಂತೆ ಅವರು ಸರಣಿ ಫೋಟೋಗಳ ಹಂಚಿಕೊಂಡಿದ್ದು ಈ ಕಾಯಿಲೆ ಕುರಿತು ಮಾಹಿತಿ ನೀಡಿದ್ದಾರೆ. ಆಕೆಯ ತೋಳುಗಳ ಬಳಿ ಲೂಪಸ್ ರಾಶ್ ಕಾಣಿಸಿಕೊಂಡಿರುವುದು ಫೋಟೋದಲ್ಲಿ ನೋಡಬಹುದು. ಈ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರೂ ಸಹ ಇದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲವಂತೆ. ಇದು ದಿನದಿಂದ ದಿನಕ್ಕೆ ಹರಡುತ್ತಲೇ ಇದೆ ಎಂದು ತಿಳಿಸಿದ್ದಾರೆ.
ಏನಿದು ಲೂಪಸ್ ರಾಶ್..?
ಲೂಪಸ್ ರಾಶ್ ಚರ್ಮದ ಅಲರ್ಜಿ ಎಂದು ಕರೆಯಬಹುದು. ಚರ್ಮದಲ್ಲಾಗುವ ಬದಲಾವಣೆಯು ಈ ಉರಿಯೂತ ಹಾಗೂ ದದ್ದು ಉಂಟಾಗಲು ಕಾರಣವಾಗುತ್ತದೆ. ಸಾಮಾನ್ಯವಾಗಿ ಇದು ಹುಳುಕಡ್ಡಿಯಂತೆ ಕಂಡರು ಅದಕ್ಕಿಂತ ಅಪಾಯ ಹೆಚ್ಚು. ಇದು ಸ್ವಯಂ ನಿರೋಧಕ ಕಾಯಿಲೆ ಎಂದು ವರ್ಗೀಕರಿಸಲಾಗಿದೆ.
ಇದರಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಆರೋಗ್ಯಕರ ಅಂಗಾಂಶಗಳು ಮತ್ತು ಅಂಗಗಳ ಮೇಲೆ ದಾಳಿ ಮಾಡುತ್ತದೆ. ಈ ಪ್ರತಿಕ್ರಿಯೆಯು ಕೀಲುಗಳು, ಮೂತ್ರಪಿಂಡಗಳು, ಮೆದುಳು, ಹೃದಯ ಮತ್ತು ಶ್ವಾಸಕೋಶಗಳು ಸೇರಿದಂತೆ ದೇಹದ ಅನೇಕ ಭಾಗಗಳಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ. ಲೂಪಸ್ ಹೊಂದಿರುವ ಹೆಚ್ಚಿನ ಜನರ ಚರ್ಮದ ಲೂಪಸ್ ಎರಿಥೆಮಾಟೋಸಸ್ ಎಂದು ಕರೆಯಲ್ಪಡುವ ಕೆಲವು ರೀತಿಯ ಚರ್ಮದ ಕಾಯಿಲೆಗಳನ್ನು ಅಭಿವೃದ್ಧಿಪಡಿಸುತ್ತದೆ.
ಈ ಲೂಪಸ್ ರಾಶ್‌ನಿಂದ ನಟಿ ಬಳಲುತ್ತಿದ್ದಾರೆ. "ಈಗ ನನ್ನ ದೇಹದಲ್ಲಿ 100 ಇವೆ (ಮುಖ, ಕುತ್ತಿಗೆ, ಬೆನ್ನು, ತೋಳುಗಳು, ಎದೆ, ಹೊಟ್ಟೆ) ನಾನು ಏನು ತಪ್ಪು ಮಾಡುತ್ತಿದ್ದೇನೆ ಅಥವಾ ಏನು ಮಾಡುತ್ತಿದ್ದೇನೆ ಎಂಬುದರ ಬಗ್ಗೆ ಯಾವುದೇ ಸುಳಿವು ಇಲ್ಲ. ನಾನು ಅದನ್ನು ಸರಿಪಡಿಸಲು ಪರ್ಯಾಯ ಔಷಧ ವಿಫಲವಾಗಿದೆ ಎಂದಿದ್ದಾರೆ.
ನಟಿ ಛಾವಿ ಮಿತ್ತಲ್ ಅವರಿಗೆ 2022 ರಲ್ಲಿ ಆರಂಭಿಕ ಹಂತದ ಸ್ತನ ಕ್ಯಾನ್ಸರ್ ಇರುವುದು ದೃಢವಾಗಿತ್ತು. ಇದಾಗಿ ಅವರು ಚಿಕಿತ್ಸೆಗೆ ಒಳಗಾಗಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಈ ಲೂಪಸ್ ರಾಶ್ ಅವರಿಗೆ ಕಾಣಿಸಿಕೊಂಡಿರುವುದು ಮತ್ತೊಂದು ಸಮಸ್ಯೆ ಹುಟ್ಟುಹಾಕಿದೆ. ಈ ಲೂಪಸ್ ರಾಶ್‌ನಿಂದ ಸಾವು ಸಹ ಸಂಭವಿಸುವ ಸಾಧ್ಯತೆ ಇರಲಿದೆ. ಈಗ ನಟಿ ಈ ಲೂಪಸ್ ರಾಶ್‌ಗೂ ಸಹ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications