Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನವೆಂಬರ್‌ನಲ್ಲಿ ಶ್ವಾಸಕೋಶ ಕ್ಯಾನ್ಸರ್ ಜಾಗೃತಿ: ಇದೊಂದು ಅಪಾಯಕಾರಿ ಕ್ಯಾನ್ಸರ್ ಏಕೆ?
ಕ್ಯಾನ್ಸರ್ ಹೆಸರು ಕೇಳಿದ್ರೆ ಸಾಕು ಮಾರಕ ಕಾಯಿಲೆಯ ನೆನೆದು ಬೆಚ್ಚಿಬೀಳುವಂತೆ ಮಾಡುತ್ತೆ. ಕ್ಯಾನ್ಸರ್‌ನ ಎಲ್ಲಾ ಪ್ರಕಾರಗಳು ಕೂಡ ನೋವು ಯಾತನೆ ತರುವುದರಿಂದ ಕ್ಯಾನ್ಸರ್ ಅಂದರೆ ಎಲ್ಲರು ಬೆಚ್ಚಿ ಬೀಳುತ್ತಾರೆ. ಅದರಲ್ಲೂ ಶ್ವಾಸಕೋಶದ ಕ್ಯಾನ್ಸರ್ ಮತ್ತಷ್ಟು ಅಪಾಯಕಾರಿ ಹೀಗಾಗಿ ಕ್ಯಾನ್ಸರ್ ಕುರಿತಂತೆ ಹಲವು ರೀತಿಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತದೆ.
ಈ ಜಾಗೃತಿಯ ಇನ್ನೊಂದು ಮುಖವಾಗಿ ನವೆಂಬರ್ ತಿಂಗಳಲ್ಲಿ ಶ್ವಾಸಕೋಶ ಕ್ಯಾನ್ಸರ್ ಜಾಗೃತಿ ತಿಂಗಳಾಗಿ ಆಚರಿಸಲಾಗುತ್ತದೆ. ವಾಯು ಮಾಲಿನ್ಯದ ಪರಿಣಾಮ ಮಾನವ ದೇಹದ ಮೇಲೆ ಮೊದಲು ಪರಿಣಾಮ ಬೀರುವುದೇ ನಮ್ಮ ಶ್ವಾಸಕೋಶಕ್ಕೆ. ಹಾಗೆ ಈಗ ಉಂಟಾಗುತ್ತಿರುವ ವಾಯು ಮಾಲಿನ್ಯ ಶ್ವಾಸಕೋಶ ಕ್ಯಾನ್ಸರ್ ಹೆಚ್ಚಲು ಕಾರಣವಾಗಿದೆ. ಇದರ ಜೊತೆಗೆ ಧೂಮಪಾನ ಕೂಡ ಪ್ರಮುಖ ಕಾರಣವಾಗಿದೆ.

ಶ್ವಾಸಕೋಶದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಜಾಗೃತಿ ತಿಂಗಳನ್ನು ಆಚರಿಸಲಾಗುತ್ತದೆ. ವರ್ಲ್ಡ್ ಕ್ಯಾನ್ಸರ್ ರಿಸರ್ಚ್ ಫಂಡ್ ಇಂಟರ್ನ್ಯಾಷನಲ್ ಪ್ರಕಾರ, 2020 ರಲ್ಲಿ ವಿಶ್ವದಾದ್ಯಂತ 2.2 ಮಿಲಿಯನ್‌ಗಿಂತಲೂ ಹೆಚ್ಚು ಹೊಸ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿವೆ. ಶ್ವಾಸಕೋಶದ ಕ್ಯಾನ್ಸರ್ ಸುಮಾರು 1.8 ಮಿಲಿಯನ್ ಸಾವುಗಳಿಗೆ ಕಾರಣವಾಗುವುದಲ್ಲದೆ ವಿಶ್ವದ ಎರಡನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಇದಾಗಿದೆ.
ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಿನ ಸಾವಿನ ಪ್ರಮಾಣವನ್ನು ಹೊಂದಿರುವುದು ಆತಂಕ ಹೆಚ್ಚಲು ಕಾರಣವಾಗಿದೆ. ಕೆಲವು ಕ್ಯಾನ್ಸರ್‌ಗಳು ಆರಂಭದಲ್ಲಿ ಲಕ್ಷಣಗಳು ಗೋಚರವಾಗುವುದಿಲ್ಲ ಆದರೆ ಶ್ವಾಸಕೋಶದ ಕ್ಯಾನ್ಸರ್ ಆರಂಭದಲ್ಲಿ ಪತ್ತೆ ಮಾಡಿ ಚಿಕಿತ್ಸೆ ಪಡೆದರೆ ಬಹುಬೇಗ ಕ್ಯಾನ್ಸರ್‌ನಿಂದ ಮುಕ್ತಿ ಪಡೆಯಬಹುದು. ಆದರೆ ಈ ಶ್ವಾಸಕೋಶ ಕ್ಯಾನ್ಸರ್ ಹೆಚ್ಚಾಗಲು ಕಾರಣವೇನು ಎಂಬುದನ್ನು ನಾವಿಂದು ತಿಳಿಯೋಣ.
ಕಲುಷಿತ ಗಾಳಿಯನ್ನು ಉಸಿರಾಡುವುದು, ವಿಶೇಷವಾಗಿ ಹೆಚ್ಚಿನ ದಟ್ಟಣೆ ಮತ್ತು ಕೈಗಾರಿಕೆಗಳು, ಗಣಿ ಧೂಳು ಸೇರಿ ಹಲವು ರೀತಿಯ ರಾಸಾಯನಿಕ ಗಾಳಿಯು ಶ್ವಾಸಕೋಶ ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗಿದೆ.
ಸೆಕೆಂಡ್ ಹ್ಯಾಂಡ್ ಸ್ಮೋಕಿಂಗ್
ಆದರೆ ಇತ್ತೀಚಿಗೆ ಧೂಮಪಾನಿಗಳಲ್ಲದೇ ಇರುವ ಜನರಲ್ಲೂ ಈ ಶ್ವಾಸಕೋಶದ ಕ್ಯಾನ್ಸರ್ ಬಹಳವಾಗಿ ಕಾಡುತ್ತಿದೆ. ಇದಕ್ಕೆ ಹೆಚ್ಚಾಗಿ ಕಾರಣವಾಗುತ್ತಿರುವುದು ಸೆಕೆಂಡ್ ಹ್ಯಾಂಡ್ ಸ್ಮೋಕಿಂಗ್. ಅಂದರೆ ನೀವು ಧೂಮಪಾನ ಮಾಡುತ್ತಿರುವ ಹೊಗೆಯನ್ನು ತೆಗೆದುಕೊಳ್ಳುತ್ತಿರುವುದು. ಬೇರೆ ಯಾರಾದರು ಧೂಮಪಾನ ಮಾಡುವಾಗ ಆ ಹೊಗೆಯನ್ನು ನೀವು ಉಸಿರಾಡುವುದು ಕೂಡ ಧೂಮಪಾನಕ್ಕೆ ಸಮನಾಗುತ್ತದೆ. ಇದರಿಂದಲೂ ಶ್ವಾಶಕೋಶದ ಕ್ಯಾನ್ಸರ್ ಬರಲು ಕಾರಣವಾಗುತ್ತಿದೆ.
ನಿಮ್ಮ ಕೆಲಸದ ಸ್ಥಳ
ಭಾರತದಲ್ಲಿ ಹಲವು ಶ್ವಾಸಕೋಶ ಕ್ಯಾನ್ಸರ್‌ಗಳಲ್ಲಿ ಬಹುತೇಕ ಇಂತಹ ಪರಿಸ್ಥಿತಿಯಿಂದ ಬಂದಿರುವುದಾಗಿರುತ್ತದೆ. ಅಂದರೆ ಗಣಿ ಕೆಲಸಗಾರರು, ಅಪಾಯಕಾರಿ ವಿಕಿರಣ ಹೊರಸೂಸುವ ಕಾರ್ಖಾನೆಗಳಲ್ಲಿ ಕೆಲಸ ಮಾಡುವುದು, ಗಾರ್ಮೆಂಟ್ಸ್ ಸೇರಿ ಕೆಲಸ ಮಾಡುವ ಸ್ಥಳದಲ್ಲಿ ಉಂಟಾಗುವ ಧೂಳು, ರಾಸಾಯನಿಕವು ಶ್ವಾಸಕೋಶ ಕ್ಯಾನ್ಸರ್‌ಗೆ ಕಾರಣವಾಗುತ್ತಿದೆ.
ಜೆನೆಟಿಕ್ ಕಾರಣಗಳು
ಈ ಶ್ವಾಸಕೋಶದ ಕ್ಯಾನ್ಸರ್ ನಿಮ್ಮ ಕುಟುಂಬಸ್ಥರಲ್ಲಿ ಯಾರಿಗಾದರು ಬಂದಿರುವ ಹಿಸ್ಟರಿ ಇದ್ದರೆ ಬಹುಬೇಗ ಹರಡುವ ಸಾಧ್ಯತೆ ಇದೆ. ಈ ಕೋಶಗಳ ಬೆಳವಣಿಗೆಯಲ್ಲಿ ಜೀನ್‌ಗಳು ಕಾರಣವಾಗುತ್ತವೆ. ಅನುವಂಶೀಯವಾಗಿ ಹರಡುವಂತಹ ಕಾಯಿಲೆಯಾಗಿಯೂ ಬದಲಾಗಿರುತ್ತದೆ. ಹಿರಿಯರಲ್ಲಿ ಶ್ವಾಸಕೋಶ ಸಂಬಂಧಿ ಸಮಸ್ಯೆ ಇದ್ದಾಗಲು ಈ ಕ್ಯಾನ್ಸರ್ ಬರುವ ಅಪಾಯ ಹೆಚ್ಚಿರುತ್ತದೆ.
ದೀರ್ಘಕಾಲದ ಉಸಿರಾಟದ ಸೋಂಕುಗಳು
ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾದಂತಹ ಪುನರಾವರ್ತಿತ ಉಸಿರಾಟದ ಸೋಂಕುಗಳು ಕಾಲಾನಂತರದಲ್ಲಿ ಶ್ವಾಸಕೋಶವನ್ನು ದುರ್ಬಲಗೊಳಿಸಬಹುದು. ಅಂತಹ ಸೋಂಕುಗಳಿಂದ ಉಂಟಾಗುವ ದೀರ್ಘಕಾಲದ ಉರಿಯೂತವು ಶ್ವಾಸಕೋಶದ ಅಂಗಾಂಶವನ್ನು ಹಾನಿಗೊಳಿಸುತ್ತದೆ. ಹಾಗೆ ಇದರಿಂದ ಶ್ವಾಸಕೋಶದ ಮೇಲಿನ ಹಾನಿ ಹೆಚ್ಚಾಗುತ್ತದೆ. ಬಳಿಕ ಕ್ಯಾನ್ಸರ್ ಕೋಶಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications