Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಉಪವಾಸ ವ್ಯಾಯಾಮ ಇಲ್ಲದೆ ಬೊಜ್ಜು ಕರಗಿಸಿ..! ಏನು ಮಾಡಬೇಕು?
ಇತ್ತೀಚಿಗೆ ಜನ ಸಾಮಾನ್ಯರಲ್ಲಿ ಕಾಡುತ್ತಿರುವ ಸಮಸ್ಯೆ ಎಂದರೆ ಅದು ಅಧಿಕ ಬೊಜ್ಜು. ಇದು ತೂಕ ಹೆಚ್ಚಳಕ್ಕೆ ನೇರ ಕಾರಣವಾಗಿದ್ದರೆ ಪರೋಕ್ಷವಾಗಿ ಹಲವು ಸಮಸ್ಯೆಗೆ ಇದು ದಾರಿಯಾಗಿದೆ. ಬೊಜ್ಜು ಈಗ ವಯಸ್ಸಿನ ಮಿತಿ ದಾಟಿ ಎಲ್ಲರಲ್ಲೂ ಅಂಟಿಕೊಂಡ ಸಾಮಾನ್ಯ ಸಮಸ್ಯೆ. ಜನರು ಬೊಜ್ಜು ಕರಗಿಸಲು ಮಾಡದ ಸಾಹಸವಿಲ್ಲ. ಎಲ್ಲರು ಜಿಮ್, ಡಯೆಟ್, ಔಷಧಿ, ಇಂಜೆಕ್ಷನ್, ಓಟ, ಹೀಗೆ ಹತ್ತಾರು ಕಸರತ್ತು ಮಾಡುತ್ತಾರೆ.
ಇಷ್ಟಾದರೂ ಬೊಜ್ಜು ಕರಗಿಸೋದು ನೀರು ಕುಡಿದಂತಲ್ಲ. ಬಹಳ ಕಠಿಣ ಪರಿಶ್ರಮ ಹಾಗೂ ವರ್ಷಗಳ ಶ್ರಮ ಬೇಕಾಗುತ್ತೆ. ಬೊಜ್ಜು ಹೆಚ್ಚಲು ನಮ್ಮ ದೈನಂದಿನ ಜೀವನ ಕ್ರಮವೇ ಕಾರಣ ಎಂಬುದು ತಿಳಿಯುತ್ತೆ. ನಮ್ಮ ಆಹಾರ, ಜೀವನ ಶೈಲಿ, ಆರೋಗ್ಯ ಸಮಸ್ಯೆಗಳಿಂದ ಹಿಡಿದು ಹತ್ತಾರು ಕಾರಣಗಳ ಪಟ್ಟಿ ಮಾಡಬಹುದು.

ಆದ್ರೆ ಈ ಬೊಜ್ಜು ಕರಗಿಸೋದು ಹೇಗೆ? ನಾವಿಂದು ವ್ಯಾಯಾಮ ಮಾಡದೆ, ಡಯೆಟ್ ಇಲ್ಲದೆ, ವಾಕಿಂಗ್, ಓಡಾಟ, ಉಪವಾಸ ಮಾಡದೆಯೂ ಬೊಜ್ಜು ಕರಗಿಸುವುದು ಹೇಗೆ ಎಂಬುದನ್ನು ಹೇಳುತ್ತೇವೆ ನೋಡಿ. ಇದಕ್ಕೆ ಏನು ಮಾಡಬೇಕು? ಆಯುರ್ವೇದದಲ್ಲಿ ಬೊಜ್ಜು ಕರಗಿಸಲು ಯಾವ ಮಾರ್ಗ ಅನುಸರಿಸಲಾಗಿದೆ. ಬೊಜ್ಜು ಕರಗಿಸಲು ನಿಸರ್ಗದಲ್ಲಿ ಇರುವ ಮಾರ್ಗವೇನು ಎಂಬುದನ್ನು ನಾವಿಂದು ತಿಳಿಯೋಣ.
ನಮ್ಮ ತೂಕ ಎಷ್ಟಿರಬೇಕು?
ನಾವು ನಮ್ಮ ದೇಹದ ತೂಕ ಇಳಿಸುವ ಮೊದಲು ನಮ್ಮ ವಯಸ್ಸಿಗೆ ಸರಿಯಾಗಿ ನಮ್ಮ ಎತ್ತರ ಎಷ್ಟಿರಬೇಕು? ಈ ಎತ್ತರಕ್ಕೆ ಸರಿಯಾಗಿ ತೂಕ ಎಷ್ಟಿರಬೇಕು ಎಂಬುದನ್ನು ತಿಳಿದುಕೊಳ್ಳೋಣ. ಈಗ ನಮ್ಮ ಎತ್ತರ 170 ಸೆಂ.ಮೀಟರ್ ಇದ್ದರೆ ತೂಕ 60ರಿಂದ 75 ಇರಬೇಕಾಗುತ್ತದೆ.
ಸಕ್ಕರೆ ಬಳಕೆ ಸಂಪೂರ್ಣ ಕಡಿಮೆ ಮಾಡಬೇಕು
ದೇಹದ ನೊಜ್ಜು ಕರಗಿಸಬೇಕು ಅಂದರೆ ನಾವು ಸಕ್ಕರೆ ಸೇವನೆ ಸಂಪೂರ್ಣ ನಿಲ್ಲಿಸಬೇಕು. ಸಕ್ಕರೆಯನ್ನು ಬಿಳಿ ವಿಷ ಎನ್ನಲಾಗುತ್ತದೆ. ಸಕ್ಕರೆ ದೇಹದಲ್ಲಿ ಹೆಚ್ಚು ಬೊಜ್ಜು ಶೇಖರಣೆಯಾಗಲು ಕಾರಣವಾಗುತ್ತದೆ. ಹೀಗಾಗಿ ನೀವು ಸಕ್ಕರೆ ಸೇವಿಸುವುದನ್ನೇ ನಿಲ್ಲಿಸಿದರೆ ಉತ್ತಮ.
ಉಪ್ಪು ಮತ್ತು ರಿಫೈನ್ಡ್ ಕಾರ್ಬೋಹೈಡ್ರೇಟ್
ನಮ್ಮ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಉಪ್ಪಿನ ಸೇವನೆಯೂ ಅಧಿಕ ಬೊಜ್ಜಿಗೆ ಕಾರಣವಾಗುತ್ತದೆ. ಹೀಗಾಗಿ ಉಪ್ಪು ಸೇವನೆಯನ್ನು ಕಡಿಮೆ ಮಾಡಬೇಕು. ಇನ್ನೊಂದೆಡೆ ರಿಫೈನ್ಡ್ ಕಾರ್ಬೋಹೈಡ್ರೇಟ್ ಆಗಿರುವ ಪಾಲಿಶ್ ಮಾಡಲಾದ ಅಕ್ಕಿ, ಮೈದಾದಿಂದ ತಯಾರಿಸಿದ ವಸ್ತುಗಳ ಸೇವನೆ ಬಿಡಬೇಕು.
ಕರಿದ ಬೇಕರಿ ತಿಂಡಿಗೆ ಬ್ರೇಕ್
ಕರಿದ ತಿಂಡಿಗಳಿಂದ ಈಗ ಅತ್ಯಂತ ಹೆಚ್ಚು ಕೊಲೆಸ್ಟ್ರಾಲ್, ಬೊಜ್ಜು ಹೆಚ್ಚಲು ಕಾರಣವಾಗಿದೆ. ಹೀಗಾಗಿ ಕರಿದ ತಿಂಡಿಗಳು, ಬೇಕರಿಯ ಚೀಸ್ ಹಾಕಿರುವ ಸಿಹಿ ತಿಂಡಿಗಳ ತಿನ್ನುವುದುನ್ನು ನಿಲ್ಲಿಸಬೇಕು.
ಜೇನು ತುಪ್ಪ ಹಾಗೂ ನಿಂಬೆ ನ್ಯೂಸ್
ಬೊಜ್ಜು ಕರಗಿಸುವವರು ಬೆಳಗ್ಗೆ ಎದ್ದ ಕೂಡಲೇ ಒಂದು ನಿಂಬೆ ಹಣ್ಣ ಕತ್ತರಿಸಿ ಜ್ಯೂಸ್ ಮಾಡಿ. ಆದರೆ ಇದಕ್ಕೆ ಬೆಲ್ಲ, ಸಕ್ಕರೆ ಹಾಕಬೇಡಿ. ಸ್ವಲ್ಪ ಜೇನು ತುಪ್ಪ ಬೆರೆಸಿ ನಿತ್ಯವು ಕುಡಿಯಿರಿ. ಇದರಿಂದ ನಿಮ್ಮ ಬೊಜ್ಜಿನ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಬಹಳ ಉತ್ತಮ. ಇದಿಲ್ಲದಿದ್ದರೆ ಗ್ರೀನ್ ಟೀ ಸಹ ಇದೇ ರೀತಿ ನಮ್ಮ ದೇಹದ ಮೇಲೆ ಪ್ರತಿಕ್ರಿಯಿಸಲಿದೆ.
ಸೊಪ್ಪು ಅಥವಾ ತರಕಾರಿ ಜ್ಯೂಸ್
ನಿತ್ಯ ಬೆಳಗ್ಗೆ ಯಾವುದಾದರು ಒಂದು ಸೊಪ್ಪು ಇಲ್ಲವೆ ತರಕಾರಿಯ ಜ್ಯೂಸ್ ಸವಿಯುವುದು ಉತ್ತಮ. ನುಗ್ಗೆ ಸೊಪ್ಪು, ಹರಿವೆ ಸೊಪ್ಪು, ಪಾಲಕ್ ಯಾವುದಾದರು ಒಂದು ಸೊಪ್ಪು ಹಾಗೂ, ಕ್ಯಾರೇಟ್ ಜ್ಯೂಸ್ ಸೇರಿದಂತೆ ಹಣ್ಣಿನ ಜ್ಯೂಸ್ ಸಹ ಬೆಳಗ್ಗೆ ಸವಿಯಬಹುದು. ಈ ಜ್ಯೂಸ್ ಸವಿದ ಬಳಿಕ ಹಗುರವಾದ ವ್ಯಾಯಾಮ ಮಾಡುವುದು ಇನ್ನೂ ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

