30ರ ನಂತರ ಎಂಗ್ ಆಗಿ ಇರೋದು ಹೇಗೆ? ಈ 5 ಸೀಕ್ರೆಟ್ ಟಿಪ್ಸ್ ಪಾಲೋ ಮಾಡಿ..!

ಈಗ 30 ವರ್ಷ ಅಥವಾ 40 ವರ್ಷ ದಾಟಿದ್ರೆ ವಯಸ್ಸಾದ ಭಾವನೆ ಮೂಡುವುದು ಸಹಜ. ಅದರಲ್ಲೂ ಪುರುಷರು ಹಾಗೂ ಮಹಿಳೆಯರಲ್ಲಿ 30 ದಾಟಿದರೆ ಅವರು ಯವ್ವನ ಕಳೆದುಕೊಂಡಂತೆ ಎಂದು ಭಾವಿಸುತ್ತಾರೆ. ಹೀಗಾಗಿ ಯಾವಾಗಲು ಎಂಗ್ ಆಗಿ ಕಾಣಿಸಬೇಕು ಎಂದು ಹಲವು ರೀತಿಯಲ್ಲಿ ಕಸರತ್ತು ಮಾಡುತ್ತಾರೆ. ಅದರಲ್ಲೂ ಮಹಿಳೆಯರು ತುಸು ಹೆಚ್ಚಾಗಿಯೇ ತಮ್ಮ ಸೌಂದರ್ಯಕ್ಕೆ ಒತ್ತು ನೀಡುತ್ತಾರೆ.

ಇನ್ನು ನಿಮಗೂ ಕೂಡ ವಯಸ್ಸಿನ ಜೊತೆ ಜೊತೆಗೆ ಅದರ ಲಕ್ಷಣಗಳು ಬಹುಬೇಗ ಕಾಣಿಸಿಕೊಳ್ಳುತ್ತಿದೆ ಎಂಬ ಭಾವನೆ ಮೂಡಿರಬಹುದು. ಇಂದಿನ ಜೀವನ ಶೈಲಿ ಹಾಗೂ ಆಹಾರ ಕ್ರಮಗಳು ಕೂಡ ನೀವು ವಯಸ್ಸಾದಂತೆ ಕಾಣಿಸಲು ಕಾರಣವಾಗುತ್ತಿವೆ. ಹಾಗೆ ನೀವು ಕೆಲವೊಂದು ಜೀವನ ಶೈಲಿಯಲ್ಲಿ ಬದಲಾವಣೆ ತರುವುದರಿಂದ ಬೇಗ ವಯಸ್ಸಾದಂತೆ ಕಾಣಿಸುವುದರಿಂದ ಪಾರಾಗಬಹುದು.

Look Young And Stay Fit Even In Your 30s Follow These 5 Tips

ಹಾಗಾದ್ರೆ ಬಹುಬೇಗ ವಯಸ್ಸಾದಂತೆ ಕಾಣದಿರಲು ಏನು ಮಾಡಬೇಕು? ನೀವು ದುಬಾರು ಖರ್ಚುಗಳ ಮಾಡದೆ, ಪಾರ್ಲರ್, ಚಿಕಿತ್ಸೆ ಇಲ್ಲದೆಯೂ ನೀವು ಮತ್ತಷ್ಟು ಎಂಗ್ ಆಗಿ ಕಾಣಿಸುವಂತೆ ಇರಲಿ ಕೆಲವು ಟಿಪ್ಸ್‌ಗಳನ್ನು ಇಲ್ಲಿ ನೀಡಲಾಗಿದೆ. ಹಾಗಾದ್ರೆ ಯಾವೆಲ್ಲಾ ಟಿಪ್ಸ್ ನಿಮಗೆ ನೆರವಾಗಲಿದೆ ಎಂಬದನ್ನು ತಿಳಿದುಕೊಳ್ಳಿ.

ವಯಸ್ಸು ದೇಹದ ಹಲವು ಅಂಗಗಳಿಗೂ ಆಗುವುದರಿಂದ ದೇಹದಲ್ಲಿ ಹಲವು ರೀತಿಯ ಬದಲಾವಣೆಗಳು ನಡೆಯುತ್ತಿರುತ್ತದೆ. ಅದರಲ್ಲೂ ನಿಮ್ಮ ದೇಹದ ಚಯಾಪಚಯ ಕ್ರಿಯೆಯಲ್ಲಿ ಬದಲಾವಣೆಗಳು ಕಾಣಿಸುತ್ತವೆ. ನೀವು ಎಷ್ಟು ಫಿಟ್ ಆಗಿದ್ದೀರಿ, ಹಾಗೆ ನಿಮ್ಮ ಆಹಾರ ಕ್ರಮ ಯಾವ ರೀತಿಯಲ್ಲಿದೆ ಎಂಬುದರ ಮೇಲೆ ದೇಹದ ವಯಸ್ಸು ಅಳೆಯಬಹುದು.

ಅಮೆರಿಕ ಮೂಲದ ಫಿಟ್‌ನೆಸ್ ತರಬೇತುದಾರ ನಿಕ್ ಕಾನ್ವೇ 40ರ ದಶಕದಲ್ಲಿ ಗ್ಲಾಮರಸ್ ಆಗಿ ಕಾಣಲು ಹಾಗೆ ಎಂಗ್, ಎನರ್ಜಟಿಕ್ ಆಗಿ ಕಾಣಿಸಬೇಕಾದರೆ 5 ಟಿಪ್ಸ್‌ಗಳ ಫಾಲೋ ಮಾಡುವಂತೆ ಸೂಚಿಸಿದ್ದಾರೆ. ಈ ಕೆಲವು ಟಿಪ್ಸ್‌ಗಳು 40ರ ನಂತರವು ನೀವು ಎಂಗ್ ಆಗಿ ಗ್ಲಾಮ್ ಆಗಿರಲು ಸಹಕಾರಿಯಾಗಲಿವೆ ಎಂದು ಅವರು ಹೇಳಿದ್ದಾರೆ. ಹಾಗಾದ್ರೆ ಆ 5 ಟಿಪ್ಸ್ ಯಾವುದು ಎಂಬುದನ್ನು ನೀವು ಸಹ ನೋಡಿ.

ಬೆಳಗ್ಗೆ ವ್ಯಾಯಾಮ

ಬೆಳಗ್ಗೆ ಸಮಯದಲ್ಲಿ ವ್ಯಾಯಾಮ ಹಾಗೂ ಯೋಗ ಮಾಡುವುದು ನಿಮ್ಮ ಮನಸ್ಸು ಹಾಗೂ ದೇಹದ ಮೇಲೆ ಉತ್ತಮ ಪರಿಣಾಮಕ್ಕೆ ಕಾರಣವಾಗಲಿದೆ. ಇದರಿಂದಾಗಿ ನಿಮ್ಮ ದೇಹದಲ್ಲಿ ಚಯಾಪಚಯ ಕ್ರಿಯೆ ಸುಲಭವಾಗಿ ನಡೆಯಲು ಕಾರಣವಾಗಲಿದೆ. ಹಾಗೆ ದೇಹವು ನಿತ್ಯದ ಚಟುವಟಿಕೆಯಲ್ಲಿ ಸಕ್ರೀಯವಾಗಿ ಭಾಗಿಯಾಗಲು ಬೆಳಗಿನ ವ್ಯಾಯಾಮ ಸಹಕಾರಿಯಾಗಲಿದೆ. ನಿಮ್ಮ ಗಮನವನ್ನು ಕೇಂದ್ರೀಕರಿಸಲು, ದೇಹ ಫಿಟ್ ಆಗಿರಲು ಮತ್ತು ತೂಕ ನಿರ್ವಹಣೆಗೂ ಇದು ಸಹಕಾರಿಯಾಗಲಿದೆ. ಹೀಗಾಗಿ ದೇಹ ಯಾವಾಗಲು ಹುರುಪಿನಿಂದ ಕೂಡಿರಲಿದೆ.

ಬೆಳಗ್ಗೆ ತಡವಾಗಿ ಆಹಾರ ಸೇವಿಸಿ

ನೀವು ವ್ಯಾಯಾಮ ಮುಗಿಸಿದ ತಕ್ಷಣವೇ ಆಹಾರ ಸೇವನೆಗೆ ಮುಂದಾಗಬಾರದು, ಹಾಗೆ ರಾತ್ರಿಯಿಂದ ವಿಶ್ರಾಂತಿಯಲ್ಲಿರುವ ಆಹಾರ ಸರಪಳಿಯ ಅಂಗಗಳು ಒಮ್ಮೆಲೆ ಕೆಲಸ ಮಾಡಬೇಕಾಗುತ್ತದೆ. ನೀವು ವ್ಯಯಾಮ ಮಾಡಿದ ಕನಿಷ್ಠ 4 ಗಂಟೆ ಸಮಯ ಯಾವುದೇ ಆಹಾರ ಸೇವಿಸಬಾರದಂತೆ. ಹಾಗೆ ದಿನವಿಡಿ ನೀವು ಏನಾದರು ಸವಿಯುವುದು ಉತ್ತಮ, ಅಂದರೆ ಹಣ್ಣು, ತರಕಾರಿಗಳು ಇಂತಹ ಆರೋಗ್ಯಕರ ಅಂಶಗಳು ಆಗಾಗ ದೇಹಕ್ಕೆ ನೀಡುವುದರಿಂದ ದೇಹದ ಬೇಕಾದ ಶಕ್ತಿ ಸಿಗುತ್ತಿರುತ್ತದೆ.

ಊಟದಲ್ಲಿ ಪ್ರೋಟೀನ್ ಹೆಚ್ಚಾಗಿರಲಿ

ದಿನದಲ್ಲಿ ನೀವು ಮೂರು ಹೊತ್ತು ಊಟ ಮಾಡಿದರೆ ಮೂರು ಊಟದಲ್ಲೂ ಪ್ರೋಟೀನ್ ಹೇರಳವಾಗಿರಲಿ. ಅದರಲ್ಲೂ ಆರೋಗ್ಯಕರ ರೀತಿಯ ಪ್ರೋಟೀನ್ ಆಗಿರಲಿ. ಕೃತಕವಾಗಿ ಪೌಡರ್, ಮಾತ್ರೆ ಸೇವನೆ ಮಾಡುವುದು ಹಾನಿಯಾಗಲಿದೆ. ಆದ್ರೆ ಈ ಪ್ರೋಟೀನ್ ಜೊತೆಗೆ ದೈಹಿಕ ಕಸರತ್ತು ಕೂಡ ಅಗತ್ಯವಾಗಿರಲಿ.

ಉತ್ತಮ ನಿದ್ರೆ

ದೇಹ ಚೈತನ್ಯದಿಂದ ಕೂಡಿರಬೇಕಾದರೆ ನಿದ್ರೆಯ ಅವಶ್ಯಕತೆ ಇದೆ. ನೀವು 7ರಿಂದ 9 ಗಂಟೆಯ ನಿದ್ರೆಗೆ ಒತ್ತು ನೀಡಿದರೆ ಅದರಿಂದ ಬಹಳ ಉಪಯೋಗವಿದೆ. ಹಾರ್ಮೋನುಗಳು ನಿದ್ರೆಯ ಉತ್ಪತ್ತಿಯಾಗುತ್ತವೆ. ಹಾಗೆ ಇದು ಸ್ನಾಯುಗಳ ಚೇತರಿಕೆ, ಕೊಬ್ಬಿನಾಂಶ ನಷ್ಟವಾಗಲು ನಿದ್ರೆ ಕಾರಣವಾಗಲಿದೆ.

ಹೆಚ್ಚು ನಡೆಯುವುದು

ನೀವು ಸಣ್ಣ ಪುಟ್ಟ ಓಡಾಟಕ್ಕೂ ವಾಹನಗಳ ಅವಲಂಭಿಸುವುದನ್ನು ಬಿಡಬೇಕು. ಯಾವಾಗಲು ನಡೆಯುವ ಕುರಿತಾಗಿ ಹೆಚ್ಚು ಗಮನವಿಡಿ. ದಿನಕ್ಕೆ 8 ಸಾವಿರಕ್ಕೂ ಹೆಚ್ಚು ಹೆಜ್ಜೆಯ ನಡೆದಾಟವು ಬಹಳ ಉತ್ತಮ. ಇದು ಕೂಡ ನಿಮ್ಮ ದೈಹಿಕ ವ್ಯಾಯಾಮದೊಂದಿಗೆ ಸೇರಿಸಿ. ಹಾಗೆ ಊಟದ ಬಳಿಕ ಇಲ್ಲವೆ ನಿದ್ರೆಗೂ ಮುನ್ನ ನಡೆಯುವುದು ಬಹಳ ಉತ್ತಮ ಅಭ್ಯಾಸವಾಗಲಿದೆ. ಇದು ನಿಮ್ಮನ್ನು ಯಾವಾಗಲು ಎಂಗ್ ಆಗಿ ಕಾಣಿಸುವಂತೆ ಮಾಡಲಿದೆ ಎಂದು ನಿಕ್ ಹೇಳುತ್ತಾರೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Look Young And Stay Fit Even In Your 30s: Follow These 5 Tips

What can you do to avoid looking older too quickly? Here are some tips to help you look younger without spending a fortune, going to a parlor, or undergoing treatments.
Story first published: Friday, May 2, 2025, 9:25 [IST]
X
Desktop Bottom Promotion