Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಲಿವರ್ ಸಮಸ್ಯೆ ಇದ್ದರೆ ಇದೊಂದು ಆಹಾರ ಕಡಿಮೆ ಮಾಡಿದರೆ ಹೆಚ್ಚಿನ ವರ್ಷ ಬಾಳಬಹುದು
ಲಿವರ್ ಸಮಸ್ಯೆ ಇರುವವರು ತಮ್ಮ ಆರೋಗ್ಯವನ್ನು ಸುಧಾರಿಸಲು ಆಹಾರದಲ್ಲಿ ಈ ಬದಲಾವಣೆ ಸಾಕು ತುಂಬಾನೇ ಒಳ್ಳೆಯ ಫಲಿತಾಂಶ ದೊರೆಯಲಿದೆ ಎಂದು ಅಧ್ಯಯನ ವರದಿ ತಿಳಿಸಿದೆ.
ಯುಎಸ್‌ನಲ್ಲಿ ನಡೆಸಿದ ಕ್ಲಿನಿಕಲ್ ಅಧ್ಯಯನದಲ್ಲಿ ಆಹಾರಕ್ರಮದಲ್ಲಿ ಸ್ವಲ್ಪ ಬದಲಾವಣೆ ಮಾಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದಿದೆ. ಇದರಿಂದ ರೋಗಿಯ ಆರೋಗ್ಯ ಸ್ಥಿತಿ ತುಂಬಾನೇ ಗಂಭೀರವಾಗುವುದನ್ನು ತಡೆಗಟ್ಟಬಹುದು.

ಅಮೋನಿಯಾ ದೇಹಕ್ಕೆ ಒಳ್ಳೆಯದಲ್ಲ
ಅಮೋನಿಯಾ ದೇಹದಲ್ಲ, ಅದರಲ್ಲೂ ಮೆದುಳಿಗೆ ತಲುಪಿದರೆ ತುಂಬಾಯನೇ ಅಪಾಯಕಾರಿ. ಆದರೆ ಪ್ರೊಟೀನ್ ಜೀರ್ಣಕ್ರಿಯೆವಾಗುವಾಗ ದೇಹದಲ್ಲಿ ಅಮೋನಿಯಾ ಉತ್ಪತ್ತಿಯಾಗುತ್ತದೆ, ಇದನ್ನು ಲಿವರ್ ಮಲ, ಮೂತ್ರದ ಮೂಲಕ ಹೊರ ಹಾಕುತ್ತದೆ, ಇದರಿಂದಾಗಿ ದೇಹದ ಮೇಲೆ ದೊಡ್ಡ ಪರಿಣಾಮ ಬೀರುವುದಿಲ್ಲ. ಆರೋಗ್ಯವಂತ ವ್ಯಕ್ತಿಯಲ್ಲಿ ಪ್ರೊಟೀನ್ ಜೀರ್ಣಕ್ರಿಯೆ ನಡೆಯುವಾಗ ಅಮೋನಿಯಾ ಉತ್ಪತ್ತಿಯಾದರೆ ಯಾವುದೇ ಸಮಸ್ಯೆಯಾಗಲ್ಲ.
ಲಿವರ್ ಸಮಸ್ಯೆ ಇರುವವರಿಗೆ ಪ್ರೊಟೀನ್ ಆಹಾರ ಕಷ್ಟವಾಗುವುದು
ಮಾಂಸಾಹಾರ ಲಿವರ್ ಸಮಸ್ಯೆ ಇರುವವರೆಗೆ ಅಷ್ಟೊಂದು ಒಳ್ಳೆಯದಲ್ಲ, ಹಾಗಾಗಿ ಲಿವರ್ ಸಮಸ್ಯೆ ಇರವವರು ಮಾಂಸಾಹಾರ ಸೇವನೆ ಕಡಿಮೆ ಮಾಡಿದರೆ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಹೆಚ್ಚು ಮಾಂಸಾಹಾರ ಸೇವಿಸಿದಾಗ ಹೆಚ್ಚು ಅಮೋನಿಯಾ ಉತ್ಪತ್ತಿಯಾಗುತ್ತದೆ, ಇದನ್ನು ಹೊರ ಹಾಕಲು ಲಿವರ್ ಸರಿಯಾಗಿ ಕಾರ್ಯನಿರ್ವಹಿಸದೆ ಇರುವಾಗ ತುಂಬಾನೇ ತೊಂದರೆಯಾಗುವುದು, ಇದರಿಂದಾಗಿ ಅಮೋನಿಯಾ ದೇಹದಲ್ಲಿ ಹೆಚ್ವಾಗಿ ಹೆಚ್ ಇ(HE) ಅಂದರೆ hepatic encephalopathy ಎಂದು ವೈದ್ಯಕೀಯ ಭಾಷೆಯಲ್ಲಿ ಹೇಳಲಾಗುವುದು, ಇದರಿಂದಾಗಿ ಆರೋಗ್ಯ ಸಮಸ್ಯೆ ಉಂಟಾಗುತ್ತದೆ.
ಕೋಮಾಗೂ ಜಾರಬಹುದು
ದೇಹದಲ್ಲಿ ಅಮೋನಿಯಾ ಹೆಚ್ಚಾದರೆ ಕೋಮಾಗೂ ಜಾರಬಹುದು. ಹಾಗಾಗಿ ಲಿವರ್ ಸಮಸ್ಯೆ ಇದೆ ಎಂದು ಗೊತ್ತಾದಾಗ ಮಾಂಸಾಹಾರ ಸೇವನೆ ಕಡಿಮೆ ಮಾಡಿದಷ್ಟೂ ಒಳ್ಳೆಯದು. ಏಕೆಂದರೆ ಮಾಂಸಾಹಾರ ಸೇವಿಸುವಾಗ ಉತ್ಪತ್ತಿಯಾಗುವಾಗ ಆಗುವಷ್ಟು ಅಮೋನಿಯಾ ಇತರ ಆಹಾರಗಳನ್ನು ಸೇವಿಸಿದಾಗ ಉಂಟಾಗುವುದಿಲ್ಲ.
ಕೇಸ್ ಸ್ಟಡಿ
ಇದರ ಕುರಿತ ಅಧ್ಯಯನದಲ್ಲಿ 40 ಲಿವರ್ ಸಮಸ್ಯೆ ಇರುವ ರೋಗಿಗಳನ್ನು ಮೂರು ಗುಂಪಾಗಿ ಮಾಡಿ ಅವರಿಗೆ ಅಧ್ಯಯನ ನಡೆಸುತ್ತಿರುವವರೇ 20 ಗ್ರಾಂ ಪ್ರೊಟೀನ್ ಇರುವ ಬರ್ಗರ್ ನೀಡಿದರು, ಒಂದು ಗುಂಪಿಗೆ ಪೋರ್ಕ್ ಅಥವಾ ಬೀಫ್ ಹಾಕಿರುವ ಬರ್ಗರ್ ನೀಡಲಾಯಿತು 2ನೇ ಗುಂಪಿಗೆ ವೇಗನ್ ಬರ್ಗರ್, ಮೂರನೇ ಗುಂಪಿಗೆ ವೆಜ್ ಬರ್ಗರ್ ನೀಡಿದರು, ಇವರುಗಳು ಇದನ್ನು ಬಿಟ್ಟು ಬೇರೇನೂ ತಿನ್ನುವಂತೆ ಇರಲಿಲ್ಲ .
ನಂತರ ಅವರ ರಕ್ತ ಪರೀಕ್ಷೆ ಮಾಡಿದಾಗ ಮಾಂಸಾಹಾರ ಹಾಕಿರುವ ಬರ್ಗರ್ ತಿಂದವರಲ್ಲಿ ಅಮೋನಿಯಾ ಹೆಚ್ಚಿತ್ತು. ಅವರನ್ನು ಆಹಾರ ಸೇವಿಸಿದ ಒಂದು ಗಂಟೆಯ ಬಳಿಕ ಪರೀಕ್ಷೆ ಮಾಡಲಾಗಿತ್ತು. ಆದರೆ ಈ ವ್ಯತ್ಯಾಸ ವೆಜ್ ಹಾಗೂ ವೇಗನ್ ಆಹಾರ ತಿಂದವರಿಗೆ ತುಂಬಾ ಸಮಸ್ಯೆ ಇರಲಿಲ್ಲ. ಹೀಗಾಗಿ ಲಿವರ್ ಸಮಸ್ಯೆಯಿದ್ದರೆ ಮಾಂಸಾಹಾ, ಮೀನು ಈ ಬಗೆಯ ಆಹಾರ ತುಂಬಾನೇ ಕಡಿಮೆ ಸೇವಿಸುವುದು ಅಥವಾ ಸಂಪೂರ್ಣ ಬಿಟ್ಟು ಬಿಡುವುದು ಒಳ್ಳೆಯದು.
ಈ ಅಧ್ಯಯನದಿಂದ ತಿಳಿದು ಬಂದಿದ್ದೇನು?
ಮಾಂಸಾಹಾರ ಮಿತಿಯಲ್ಲಿ ಸೇವಿಸಿ, ಸಸ್ಯಾಹಾರ ಹೆಚ್ಚಾಗಿ ಸೇವಿಸುವುದರಿಂದ ಹೆಚ್ಚಿನ ಕಾಲ ಆರೋಗ್ಯಕರವಾಗಿ ಜೀವಿಸಬಹುದು ಎಂಬುವುದು ಈ ಅಧ್ಯಯನದಿಂದ ತಿಳಿದು ಬಂದಿದೆ. ಮಾಂಸಾಹಾರ ತಿನ್ನಲೇಬಾರದು ಅಂತಲ್ಲ, ಆದರೆ ಮಾಂಸಾಹಾರ ಮಿತಿಯಲ್ಲಿ ತಿನ್ನಬೇಕು ಎಂಬುವುದು ಈ ಅಧ್ಯಯನ ವರದಿ ಹೇಳಿದೆ.
ಲಿವರ್ ದೇಹದ ಕಶ್ಮಲವನ್ನು ಹೊರ ಹಾಕಲು ಅವಶ್ಯಕ, ಆದದ್ರಿಂದ ಲಿವರ್ ಆರೋಗ್ಯದ ಕಡೆಗೆ ಗಮನಹರಿಸಿ. ಮೈ ತೂಕ ನಿಯಂತ್ರಣದಲ್ಲಿಡಿ, ಆಹಾರಕ್ರಮದ ಕಡೆಗೆ ಗಮನಹರಿಸಿ, ವ್ಯಾಯಾಮ ಮಾಡಿ. ಹೀಗೆ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











