Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಲಿವರ್ ದಾನ ಮಾಡಿದರೆ ನಮ್ಮ ಲಿವರ್ ಆರೇ ವಾರಕ್ಕೆ ಮೊದಲಿನಂತಾಗುವುದು: ಲಿವರ್ ದಾನದಲ್ಲಿ ರಿಸ್ಕ್ ಇದೆಯೇ?
ಅಂಗಾಂಗ ದಾನ ಮಹಾದಾನ, ನಾವು ಮಾಡುವ ದಾನದಿಂದ ಅದೆಷ್ಟೋ ಮನೆಗಳಲ್ಲಿ ಬೆಳಕನ್ನು ತುಂಬಬಹುದು. ಕೆಲವು ಅಂಗಗಳನ್ನು ಸತ್ತ ಬಳಿಕ ದಾನ ಮಾಡಲಾಗುವುದು ಆದರೆ ಇನ್ನು ಕೆಲವು ಅಂಗಗಳನ್ನು ನಾವು ಬದುಕಿದ್ದಾಗಲೇ ದಾನ ಮಾಡಬಹುದು, ನಾವು ನಮ್ಮ ಆ ಅಂಗವನ್ನು ದಾನ ಮಾಡಿದರೂ ಉಳಿದ ಜೀವನ ಚೆನ್ನಾಗಿಯೇ ಕಳೆಯಬಹುದು.

ಕಿಡ್ನಿ ದಾನ ಮಾಡಿದರೆ ಒಂದು ಕಿಡ್ನಿಯಷ್ಟೇ ಉಳಿಯುತ್ತದೆ, ಆದರೆ ಲಿವರ್‌ನ ದಾನ ಇದೆಯೆಲ್ಲಾ ಅದನ್ನು ಮಾಡಿದರೆ ನಿಮ್ಮ ಲಿವರ್ ಮತ್ತೆ ಮೊದಲಿದ್ದ ಗಾತ್ರಕ್ಕೆ ಬೆಳೆಯುವುದರಿಂದ ಲಿವರ್ ದಾನವನ್ನು ನೀವು ಹೆಚ್ಚು ಆಲೋಚನೆ ಮಾಡದೆ ಮಾಡಬಹುದು, ಇದರ ಕುರಿತು ಹೆಚ್ಚಿನ ಮಾಹಿತಿ ನೋಡುವುದಾದರೆ:
ಲಿವರ್ ದಾನ ಮಾಡಿದರೆ ಇದರಿಂದ ದಾನಿಗಳಿಗೆ ಏನಾದರೂ ಅಪಾಯವಿದೆಯೇ? ದಾನ ಪಡೆಯುವ ರೋಗಿಗೆ ಸಮಸ್ಯೆ ಉಂಟಾಗುವುದೇ ಮುಂತಾದ ಮಾಹಿತಿ ನೋಡೋಣ ಬನ್ನಿ:
ಲಿವರ್ ದಾನ: ಲಿವರ್ ದಾನ ಮಾಡುವುದರಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿರುವವರನ್ನು ಪ್ರಾಣಾಪಾಯದಿಂದ ಕಾಪಾಡಬಹುದು. ಅಲ್ಲದೆ ಲಿವರ್ ಅನ್ನು ಯಾರು ದಾನ ಮಾಡುತ್ತಾರೋ ಅವರ ಲಿವರ್ ಕೂಡ 6 ವಾರಗಳಲ್ಲ ಮೊದಲಿಗೆ ಗಾತ್ರಕ್ಕೆ ಮರಳುವುದು. ಆದರೆ ಇದರಲ್ಲಿ ರಿಸ್ಕ್ ಇದೆ, ಒಳಿತೂ ಇದೆ.. ಮೊದಲಿಗೆ ಒಳಿತು ಬಗ್ಗೆ ನೋಡುವುದಾದರೆ
* ನಮಗೆ ಲಿವರ್ ದಾನಿ ಯಾರು ಎಂಬುವುದು ಗೊತ್ತಿರುತ್ತದೆ: ನೇತ್ರದಾನ ಪಡೆಯುವಾಗ ಅವರಿಗೆ ತಮಗೆ ನೇತ್ರದಾನ ಮಾಡಿದ ವ್ಯಕ್ತಿ ಯಾರು ಎಂಬುವುದು ತಿಳಿದಿರುವುದಿಲ್ಲ, ಒಂದೇ ವೇಳೆ ತಿಳಿದರೂ ಅವರು ಈ ಲೋಕದಲ್ಲಿ ಇರಲ್ಲ. ಹೃದಯ, ನೇತ್ರದಾನ ಇವೆಲ್ಲಾ ವ್ಯಕ್ತಿ ಸತ್ತ ಬಳಿಕ ಮಾಡಲಾಗುವುದು. ಆದರೆ ಲಿವರ್ ದಾನವನ್ನು ವ್ಯಕ್ತಿ ಬದುಕಿರುವಾಗಲೇ ಮಾಡಲಾಗುವುದು, ಅಲ್ಲದೆ ಲಿವರ್ ನನಗೆ ಯಾರು ದಾನ ಮಾಡಿದ್ದಾರೆ ಎಂಬುವುದು ಕೂಡ ಗೊತ್ತಿರುತ್ತದೆ.
ವ್ಯಕ್ತಿ ದಾನಿಗಾಗಿ ತುಂಬಾ ಕಾಯಬೇಕಾಗಿಲ್ಲ: ಲಿವರ್ ಡೊನೇಷನ್ ಸಿಗುವುದು ಸುಲಭ, ತಮ್ಮ ರಕ್ತದ ಗುಂಪಿಗೆ ಸರಿಹೊಂದುವ ವ್ಯಕ್ತಿಯಿಂದ ಲಿವರ್ ದಾನ ಪಡೆಯಬಹುದು. ಆದ್ದರಿಂದ ಲಿವರ್ ಡೊನೇಷನ್ ಪಡೆಯುವುದು ಇತರ ಡೊನೇಷನ್‌ಗಿಂತ ಸುಲಭ.
ಲಿವರ್ ಡೊನೇಷನ್ ತುಂಬಾ ಅಪರೂಪ
ಜನರು ಲಿವರ್ ಡೊನೇಷನ್‌ಗೆ ಭಯ ಪಡುವುದರಿಂದ ಲಿವರ್ ಡೊನೇಷನ್ ತುಂಬಾನೇ ಅಪರೂಪ. ಕೆಲವರು ಮೊದಲಿಗೆ ಒಪ್ಪಿದರೂ ನಂತರ ಸರ್ಜರಿಗೆ ಭಯಪಟ್ಟು ಹಿಂದೇಟು ಹಾಕುತ್ತಾರೆ. ಇದುವರೆಗೆ ಶೇ.5ರಷ್ಟು ಮಾತ್ರ ಲಿವರ್ ಕಸಿ ನಡೆದಿದೆ.
ರಿಸ್ಕ್ ಏನು?
ಲಿವರ್ ದಾನ ಪಡೆಯುವುದರಿಂದ ರೋಗಿಗೆ ಒಳ್ಳೆಯದು ಇದೆ, ಕೆಟ್ಟದ್ದೂ ಆಗಬಹುದು
ಲಿವರ್ ದಾನ ಪಡೆದಾಗ ರೋಗಿಯ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು. ದಾನಿಗಳಿಗೂ ತೊಂದರೆ ಉಂಟಾಗಬಹುದು, ಕೆಲವೊಮ್ಮೆ ದಾನಿಗಳಿಗಳಿಗೆ ರಕ್ತಸ್ರಾವ ಉಂಟಾಗಿ ರಕ್ತ ಪಡೆಯಬೇಕಾದ ಅನಿವಾರ್ಯತೆ ಉಂಟಾಗಬಹುದು. ಆದ್ದರಿಂದ ದಾನ ಮಾಡುವ ಮುನ್ನ ಈ ವಿಚಾರವೂ ತಿಳಿದಿರಬೇಕು.
ರೋಗಿಗೂ, ದಾನಿಗೂ ಚೇತರಿಸಿಕೊಳ್ಳಲು ಅಧಿಕ ಸಮಯ ಬೇಕು
ಕಿಡ್ನಿ ದಾನ ಮಾಡುವವರು ಆಸ್ಪತ್ರೆಯಲ್ಲಿ ಕೆಲವು ದಿನಗಳಷ್ಟೇ ಕಳೆಯಬೇಕಾಗುವುದು. ಆದರೆ ಲಿವರ್ ದಾನ ನೀಡುವವರು ಚೇತರಿಸಿಕೊಳ್ಳಲು 6 ವಾರಗಳು ಬೇಕಾಗುವುದು. ಲಿವರ್ ಸಂಪೂರ್ಣವಾಗಿ ಬೆಳವಣಿಗೆಯಾಗಲು 6 ವಾರಗಳು ಬೇಕಾಗುವುದು.
ರೋಗಿ ಚೇತರಿಸಿಕೊಂಡ ಬಳಿಕ ಅವರ ಆರೋಗ್ಯದಲ್ಲಿ ತುಂಬಾನೇ ಧನಾತ್ಮಕ ಬದಲಾವಣೆ ಕಂಡು ಬರುವುದು
ಲಿವರ್ ಕಸಿ ಮಾಡಿಸಿಕೊಂಡ 12 ವಾರಗಳಲ್ಲಿ ರೋಗಿ ಸಂಪೂರ್ಣವಾಗಿ ಗುಣಮುಖರಾಗಿ ಸಂಪೂರ್ಣ ಆರೋಗ್ಯವಂತರಾಗಿ ಮೊದಲಿನಂತೆ ಚಟುವಟಿಕೆಯಿಂದ ಓಡಾಡಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications