ಮಕ್ಕಳಲ್ಲಿ ಕಾಡುವ ಆತಂಕ ಎಂಬ ಭೂತ: ಮೌನವಾದಷ್ಟು ಅಪಾಯ ಹೆಚ್ಚು! ಹೊರ ಬರುವುದು ಹೇಗೆ?

ಇತ್ತೀಚಿನ ದಿನಗಳಲ್ಲಿ ಒತ್ತಡ ಅನ್ನೋದು ಪ್ರತಿಯೊಬ್ಬರ ಜೀವನದ ಪ್ರಮುಖ ಭಾಗವಾಗಿ ಸೇರಿಕೊಂಡಿದೆ. ಅದ್ರಲ್ಲೂ ವಯಸ್ಸಿನ ಆಧಾರದಲ್ಲಿ ಒತ್ತಡ ಕೂಡ ನಮ್ಮೊಂದಿ ಗೆ ಬೆಳೆದು ಬರುತ್ತಿದೆ. ಒತ್ತಡದ ಮುಂದಿನ ಹಂತವೇ ಆತಂಕ ಎಂಬುದಾಗಿದೆ. ಎಲ್ಲಾ ವರ್ಗದ ಮಂದಿಯೂ ಈಗ ಒತ್ತಡ ಹಾಗೂ ಆತಂಕದಂತಹ ಸನ್ನಿವೇಶವನ್ನು ಎದುರಿಸುತ್ತೀರಿ. ಹಾಗೆ ಎಲ್ಲಾ ವರ್ಗದ ಮಂದಿ ಇದರಿಂದ ಯಶಸ್ವಿಯಾಗಿ ಹೊರಬರುತ್ತಾರೆ ಎಂದು ಹೇಳಲಾಗದು.

ಭಾರತದಲ್ಲಿ ಇತ್ತೀಚಿನ ಅಧ್ಯಯನಗಳು 10.5ರಷ್ಟು ಭಾರತೀಯರು ರೋಗನಿರ್ಣಯ ಮಾಡಬಹುದಾದ ಮಾನಸಿಕ ಅಸ್ವಸ್ಥತೆಯ ಹೊಂದಿದ್ದಾರೆ ಎಂದು ಅದರಲ್ಲಿ ಬಹುತೇಕರು ಚಿಕಿತ್ಸೆ ಪಡೆಯುವ ಕಡೆ ಗಮನವಿಡುವುದಿಲ್ಲ ಎಂದು ಸಹ ತಿಳಿದುಬಂದಿದೆ. ಅಂದರೆ ಬಹುತೇಕರು ಇದೊಂದು ವೈದ್ಯಕೀಯ ಸಮಸ್ಯೆ ಎಂದು ಪರಿಗಣಿಸುವುದಿಲ್ಲ.

anxiety in children
Photo Credit: AI

ಇನ್ನು ಆತಂಕ ಎಂಬುದು ವ್ಯಕ್ತಿಯೋರ್ವರ ಜೀವನ ಏಳುಬೀಳುಗಳಿಂದ ತುಂಬಲು ಕಾರಣವಾಗುತ್ತದೆ. ಹಲವು ಬಗೆಯ ಆತಂಕಗಳಲ್ಲಿ ನಾವಿಂದು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ಆತಂಕ ಕುರಿತು ತಿಳಿದುಕೊಳ್ಳೋಣ. ಮಕ್ಕಳು ಬೆಳೆದಂತೆಲ್ಲಾ ಅವರಲ್ಲಿ ಆತಂಕ ಕೂಡ ಜೊತೆ ಜೊತೆಗೆ ಬೆಳೆಯಬಹುದು. ಹಂತ ಹಂತವಾಗಿ ಆತಂಕ ಹೆಚ್ಚಾಗುವುದು ಜೀವನ ಶೈಲಿಯಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ.

ಬಾಲ್ಯದಲ್ಲಿ ಕಾಡುವ ಆತಂಕ ದೊಡ್ಡ ಮಟ್ಟದ ಹಾನಿಗೆಕಾರಣಗಾಗುತ್ತದೆ. ಆದರೆ ಕೆಲವರು ಆತಂಕದ ವಿಚಾರವನ್ನು ಬಹಳ ನಿರ್ಲಕ್ಷ್ಯ ಮಾಡುವುದು ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಲು ಕಾರಣವಾಗಲಿದೆ. ಭಾರತೀಯ ಮಕ್ಕಳಲ್ಲಿ ಆತಂಕ ಹೆಚ್ಚುತ್ತಿರುವ ಕಳವಳಕಾರಿ ಸಂಗತಿಯಾಗಿದ್ದು, ಪೋಷಕರ ಆತಂಕ, ಅತಿಯಾದ ರಕ್ಷಣೆ, ಸಾಮಾಜಿಕ ಆರ್ಥಿಕ ಸ್ಥಿತಿ ಮತ್ತು ಕುಟುಂಬ ಪರಿಸರದಂತಹ ಅಂಶಗಳಿಂದ ಇದು ಪ್ರಭಾವಿತವಾಗಿರುತ್ತದೆ.

ಆತಂಕ ನಿರ್ವಹಣೆಯಿಂದ ಹಲವು ಸಮಸ್ಯೆಗಳು ಎದುರಾಗುವುದು ಕೂಡ ನೋಡಬಹುದು. ನಾವು ಕೂಡ ಬಾಲ್ಯದಲ್ಲಿದ್ದಾಗ ದೆವ್ವ ಭೂತ, ರಾಕ್ಷಸರು, ಪ್ರಾಣಿಗಳು, ಪಕ್ಷಿಗಳ ಕುರಿತಾದ ಭಯ ಇರುವುದು ನೆನಪಿರಬಹುದು. ಆದ್ರೆ ಇದೆಲ್ಲವೂ ತಾತ್ಕಾಲಿಕವಾಗಿರಲಿದೆ. ಆದ್ರೆ ಬರುತ್ತಾ ಹಲವರು ನಿದ್ರೆಗಳಿಲ್ಲದ ರಾತ್ರಿಗಳ ಕಳೆದಿರಬಹುದು.

anxiety in children
Photo Credit: AI

ಸದ್ಯ 10 ರಿಂದ 18 ವರ್ಷ ವಯಸ್ಸಿನ ನಡುವೆ ಶೇಕಡಾ 64 ರಷ್ಟು ಹದಿಹರೆಯದವರು ದೀರ್ಘಕಾಲದ ಮಾನಸಿಕ ಆರೋಗ್ಯ ಲಕ್ಷಣಗಳನ್ನು ಎದುರಿಸುತ್ತಾರೆ ಎಂದು ಹೇಳಲಾಗಿದೆ. ಅಚ್ಚರಿ ಏನೆಂದರೆ ಇದರಲ್ಲಿ ಯುವತಿಯರ ಸಂಖ್ಯೆ ಅಧಿಕವಿದೆ. ಹದಿಹರೆಯದಲ್ಲಿ 61% ಹುಡುಗರಿಗೆ ಹೋಲಿಸಿದರೆ 84% ಜನರು ಒಮ್ಮೆಯಾದರೂ ಖಿನ್ನತೆ ಅಥವಾ ಆತಂಕವನ್ನು ಅನುಭವಿಸುತ್ತಾರೆ. ಹುಡುಗಿಯರು ದೀರ್ಘಕಾಲದ ರೋಗಲಕ್ಷಣಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, 49% ಹುಡುಗರಿಗೆ ಹೋಲಿಸಿದರೆ 72% ಹುಡುಗಿಯರು ಈ ಸಮಸ್ಯೆ ಎದುರಿಸಿದ್ದಾರೆ ಎಂದು ಅಧ್ಯಯನ ಹೇಳುತ್ತದೆ.

ಮಕ್ಕಳಲ್ಲಿ ಭಯದ ಮುಂದಿನ ಹಂತವಾಗಿ ಆತಂಕವನ್ನು ಪರಿಗಣಿಬಹುದು.ಅದರಲ್ಲೂ ಶಾಲೆಗೆ ತೆರಳುವ ಮಕ್ಕಳಲ್ಲಿ ಕಂಡುಬರುವ ಆತಂಕ ದೊಡ್ಡ ಸಮಸ್ಯೆಗಳ ತರುವುದು ನೋಡಬಹುದು. ಇಂತಹ 3 ರಲ್ಲಿ 1 ಮಗು ಮತ್ತು ಹದಿಹರೆಯದವರು ಈ ಅಸ್ವಸ್ಥತೆಗಳಿಂದ ಪ್ರಭಾವಿತರಾಗಿದ್ದಾರೆ. 2021ರ ಬಳಿಕ ಈ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ ಎಂದು ದಿ ಪೇರೆಂಟ್ಸ್ ಗೈಡ್ ಆಫ್ ಸೈಕಲಾಜಿಕಲ್ ಫಸ್ಟ್ ಏಡ್: ಹೆಲ್ಪಿಂಗ್ ಚಿಲ್ಡ್ರನ್ ಅಂಡ್ ಅಡೋಲೆಸೆಂಟ್ಸ್ ಕೋಪ್ ವಿಥ್ ಪ್ರಿಡಿಕ್ಟಬಲ್ ಲೈಫ್ ಕ್ರೈಸಿಸ್ ವರದಿ ಮಾಡಿದೆ.

ಹಾಗೆ ಶಿಶುಗಳು ಜೋರಾದ ಶಬ್ದ, ಪರಿಚಯವಿಲ್ಲದ ಜನರು ಮತ್ತು ತಮ್ಮ ಪೋಷಕರಿಂದ ಬೇರ್ಪಡುವಿಕೆಯ ಭಯವನ್ನು ತೋರಿಸುತ್ತಾರೆ. ಮಕ್ಕಳು ಪ್ರಿಸ್ಕೂಲ್ ವಯಸ್ಸನ್ನು ತಲುಪಿದ ನಂತರ ಹೆಚ್ಚು ಕಾಲ್ಪನಿಕ ಆಟದಲ್ಲಿ ತೊಡಗಿಸಿಕೊಳ್ಳಲು ಪ್ರಾರಂಭಿಸುವ ಹೊತ್ತಿಗೆ, ಅವರು ದೆವ್ವಗಳು, ರಾಕ್ಷಸರು ಮತ್ತು ಸಣ್ಣ ಪ್ರಾಣಿಗಳಿಗೆ ಸಂಬಂಧಿಸಿದ ಭಯವನ್ನು ಬೆಳೆಸಿಕೊಳ್ಳಬಹುದು. ಈ ವಯಸ್ಸು ದಾಟಿದ ಬಳಿಕ ಅವರು ಸಾಮಾಜಿಕರಣದೊಂದಿಗೆ ಹಲವು ರೀತಿಯ ಭಯಗಳ ತೋರಿಸಲಿದ್ದಾರೆ.


ಮಕ್ಕಳಲ್ಲಿ ಕಾಡುವ ಆತಂಕದ ಪ್ರಕಾರಗಳೇನು?

ಮಕ್ಕಳಲ್ಲಿ ಹಲವು ರೀತಿಯ ಆತಂಕಗಳನ್ನು ನೋಡಬಹುದು. ಕೆಲವೊಂದನ್ನು ನಾವು ಸುಲಭವಾಗಿ ಗುರುತಿಸಬಹುದು. ಹಾಗೆ ಮತ್ತೆ ಕೆಲವು ನಮ್ಮ ಅರಿವಿಗೆ ಬಾರದೆ ಇರಬಹುದು. ಹಾಗಾದ್ರೆ ಮೊದಲು ಮಕ್ಕಳಲ್ಲಿ ಯಾವ ರೀತಿಯ ಆತಂಕಗಳು ಕಾಡಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಸಾಮಾನ್ಯ ಆತಂಕ ದೋಷ

ಸಾಮಾನ್ಯ ಆತಂಕದ ಅಸ್ವಸ್ಥತೆ ಹೊಂದಿರುವ ಮಕ್ಕಳು ಮತ್ತು ಹದಿಹರೆಯದವರು ನಿರ್ದಿಷ್ಟ ವಸ್ತು ಅಥವಾ ಸನ್ನಿವೇಶದ ಮೇಲೆ ಕೇಂದ್ರೀಕರಿಸಲಾದ ಸ್ಥಿತಿಯಲ್ಲಿರುತ್ತಾರೆ. ಅಂದರೆ ಅವರು ಅತೀಯಾದ ಅವಾಸ್ತವಿಕ ಚಿಂತೆ ಹೊಂದಿರುವ ಮಾನಸಿಕ ಸ್ಥಿತಿ. ಮಗುವು ಶಾಲೆಯಲ್ಲಿ ತನ್ನ ಕಾರ್ಯಕ್ಷಮತೆಯ ಬಗ್ಗೆ ಅಥವಾ ಕ್ರೀಡೆಗಳಂತಹ ಚಟುವಟಿಕೆಗಳಲ್ಲಿ, ವೈಯಕ್ತಿಕ ಸುರಕ್ಷತೆ ಮತ್ತು ಕುಟುಂಬ ಸದಸ್ಯರ ಸುರಕ್ಷತೆಯ ಬಗ್ಗೆ ಅಥವಾ ನೈಸರ್ಗಿಕ ವಿಕೋಪಗಳ ಬಗ್ಗೆ ಅತಿಯಾಗಿ ಚಿಂತೆ ಮಾಡಬಹುದು. ಇದು ಕಲಿಯುವಿಕೆಗೆ ಅಡ್ಡಿಯಾಗುವುದು, ಗಮನ ಒಂದೆ ಕಡೆ ಕೇಂದ್ರೀಕರಿಸಲು ಸಾಧ್ಯವಾಗದೆ ಇರುವ ಆತಂಕವಿದು.

ಗೀಳು-ಕಂಪಲ್ಸಿವ್ ಅಸ್ವಸ್ಥತೆ

ಗೀಳು-ಕಂಪಲ್ಸಿವ್ ಅಸ್ವಸ್ಥತೆ (OCD) ಹೊಂದಿರುವ ಮಕ್ಕಳು ಗೀಳುಗಳನ್ನು ಹೊಂದಿರುತ್ತಾರೆ. ಅನಗತ್ಯ ಆಲೋಚನೆಗಳು ಪುನರಾವರ್ತೀತ ಕ್ರಿಯೆಯಲ್ಲಿ ಭಾಗಿಯಾಗುವುದು ನೋಡಬಹುದು. ಪುನರಾವರ್ತಿತ ಕ್ರಿಯೆಗಳು, ಆಚರಣೆಗಳು ಅಥವಾ ದಿನಚರಿಗಳನ್ನು ಮಾಡುತ್ತಾರೆ. ಬಲವಂತವಾಗಿ ಕೈ ಕಾಲು, ಮುಖ ತೊಳೆಯುವುದು, ಸ್ನಾನ ಮಾಡುವುದು. ಎಣಿಸುವುದು, ವಸ್ತುಗಳನ್ನು ಒಟ್ಟು ಮಾಡುವುದು, ಕ್ಲೀನ್ ಮಾಡುವುದು, ವಸ್ತುಗಳನ್ನು ಆಗಾಗ ಪರಿಶೀಲಿಸುವುದು. ಇದು ಹೆಚ್ಚಾಗಿ 8 ರಿಂದ 12 ವರ್ಷ ವಯಸ್ಸಿನ ನಡುವೆ, ಹದಿಹರೆಯದ ಕೊನೆಯಲ್ಲಿ ಅಥವಾ ಪ್ರೌಢಾವಸ್ಥೆಯ ಆರಂಭದಲ್ಲಿ ಸಂಭವಿಸಬಹುದು.

ಪ್ಯಾನಿಕ್ ಡಿಸಾರ್ಡರ್

ಕೆಲವು ಮಕ್ಕಳು ಅಥವಾ ಹದಿಹರೆಯದವರು ಕೆಲವು ಸಂದರ್ಭಗಳಲ್ಲಿ ಅಥವಾ ಸ್ಥಳಗಳಲ್ಲಿ ತೀವ್ರ ಆತಂಕ, ಭಯ ಎದುರಿಸುವುದು ನೋಡಬಹುದು. ಇದರಿಂದ ಮಕ್ಕಳು ತಕ್ಷಣವೇ ಉಸಿರಾಟದ ಸಮಸ್ಯೆ, ಹೃದಯ ಬಡಿತ ಸೇರಿದಂತೆ ಒಂದಿಷ್ಟು ಲಕ್ಷಣಗಳ ತೋರಿಸಬಹುದು. ಪ್ಯಾನಿಕ್ ಡಿಸಾರ್ಡರ್ ಹೊಂದಿರುವ ಮಗುವಿಗೆ ಯಾವುದೇ ಸ್ಪಷ್ಟ ಪ್ರಚೋದನೆಯಿಲ್ಲದೆ ಪ್ಯಾನಿಕ್ ಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತವೆ.

ನಿರ್ದಿಷ್ಟ ಭಯಗಳು

ಭಯಗಳು ಬಾಲ್ಯದಲ್ಲಿ ಸಾಮಾನ್ಯವಾಗಿದೆ ಮತ್ತು ಮಗು ಪ್ರಬುದ್ಧವಾಗುತ್ತಿದ್ದಂತೆ ಸಾಮಾನ್ಯವಾಗಿ ಹೆಚ್ಚಾಗುತ್ತದೆ. ಭಯ ಅಥವಾ ನಿರ್ದಿಷ್ಟ ವಸ್ತು ಅಥವಾ ಸನ್ನಿವೇಶದ ಬಗ್ಗೆ ತೀವ್ರವಾದ ಆತಂಕ ಉಂಟಾಗುವುದು. ಮಕ್ಕಳು ಐದು ವರ್ಷ ವಯಸ್ಸಿನಲ್ಲೇ ಭಯವನ್ನು ಬೆಳೆಸಿಕೊಳ್ಳಬಹುದು. ನಿರ್ದಿಷ್ಟ ಭಯಗಳು ಸಾಮಾನ್ಯವಾಗಿ ಪ್ರಾಣಿಗಳು, ಕೀಟಗಳು, ಎತ್ತರ, ಗುಡುಗು, ವಾಹನ ಚಲಾಯಿಸುವುದು, ದಂತ ಅಥವಾ ವೈದ್ಯಕೀಯ ವಿಧಾನಗಳು ಮತ್ತು ಲಿಫ್ಟ್‌ಗಳನ್ನು ಒಳಗೊಂಡಿರುತ್ತವೆ.


ಮಕ್ಕಳಲ್ಲಿ ಆತಂಕದ ಲಕ್ಷಣಗಳು ಯಾವುದು?

ಮಕ್ಕಳಲ್ಲಿ ಆಯಾ ಸಂದರ್ಭಕ್ಕೆ ತಕ್ಕಂತೆ ಆತಂಕದ ಲಕ್ಷಣಗಳು ಬದಲಾಗಬಹುದು. ಸನ್ನಿವೇಶಕ್ಕೆ ಅನುಗುಣವಾದ ಲಕ್ಷಣಗಳಿಂದ ಅವರು ಆತಂಕದಲ್ಲಿರುವುದನ್ನು ಗುರುತಿಸಬಹುದು. ಅದ್ರಲ್ಲೂ ಹೆಚ್ಚಾಗಿ ಅವರಿಗೆ ತಲೆ ನೋವು, ಹೊಟ್ಟೆ ನೋವು, ಸ್ನಾಯು ನೋವು ದೂರು ಹೇಳಬಹುದು.
ನಿದ್ರಿಸಲು ತೊಂದರೆಯಾಗುತ್ತಿದೆ, ದುಃಸ್ವಪ್ನಗಳಿಂದ ಎಚ್ಚರಗೊಳ್ಳುತ್ತಿದ್ದಾರೆ ಅಥವಾ ಒಂಟಿಯಾಗಿ ಮಲಗಲು ಅವರು ಭಯ ಪಡುವುದು ಸಹ ಇದರ ಲಕ್ಷಣವಾಗಿದೆ.

ಹಾಗೆ ಒಂದು ಕಡೆ ಮಲಗಿ ವಿಶ್ರಾಂತಿ ಪಡೆಯಲು ಸಹ ಕಷ್ಟಪಡಬಹುದು. ಅತೀ ಹೆಚ್ಚು ಕೋಪ ಬರುವುದು, ಗಮನ ಹರಿಸಲು ಕಷ್ಟಪಡುವುದು, ಹಸಿವಾಗದೆ ಇರುವುದು, ನಡುಕ, ಶಾಲೆಗೆ ತೆರಳಲು ನಿರಾಕರಿಸುವುದು, ತೀವ್ರ ಹಠದಂತಹ ಲಕ್ಷಣ ತೋರಿಸಬಹುದು.

ಆತಂಕಕ್ಕೆ ಚಿಕಿತ್ಸೆ ಏನು?

ನಿಮ್ಮ ಮಕ್ಕಳು ಕೂಡ ಈ ರೀತಿಯ ಯಾವುದಾದರು ಆತಂಕ ಅಥವಾ ಲಕ್ಷಣಗಳಲ್ಲಿ ಸಿಲುಕಿದ್ದರೆ ತಕ್ಷಣ ಹಾಗೆ ಸೂಕ್ತ ಚಿಕಿತ್ಸೆ ಕೊಡಿಸುವುದು ಸೂಕ್ತ. ಅದ್ರಲ್ಲೂ ಮಕ್ಕಳಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬುದನ್ನು ಕ್ಲೀನಿಕಲ್ ಸೈಕಾಲಜಿಸ್ಟ್ ಅರುಣ್ ಕುಮಾರ್ ಅವರು ವಿವರಿಸಿದ್ದಾರೆ. ಮಕ್ಕಳಲ್ಲಿ ಆತಂಕಕ್ಕೆ ಚಿಕಿತ್ಸೆ ನೀಡಲು ಎರಡು ಪ್ರಮುಖ ಮಾರ್ಗಗಳಿವೆ ಅರಿವಿನ ವರ್ತನೆಯ ಚಿಕಿತ್ಸೆ ಮತ್ತು ಔಷಧ ಚಿಕಿತ್ಸೆ.

ಅರಿವಿನ ವರ್ತನೆಯ ಚಿಕಿತ್ಸೆ

ಅರಿವಿನ ವರ್ತನೆಯ ಚಿಕಿತ್ಸೆ (CBT) ಮಕ್ಕಳು ದೇಹದ ಪ್ರತಿಕ್ರಿಯೆಗಳನ್ನು ಶಾಂತಗೊಳಿಸಲು, ವಿಭಿನ್ನವಾಗಿ ಯೋಚಿಸಲು ಮತ್ತು ಸಣ್ಣ ಹಂತಗಳಲ್ಲಿ ಭಯವನ್ನು ಹೇಗೆ ಎದುರಿಸಬೇಕು ಎಂಬುದನ್ನು ಕಲಿಸಲಾಗುತ್ತದೆ. ಇದರಿಂದ ಅವರು ಹಂತ ಹಂತವಾಗಿ ಭಯದಿಂದ ದೂರಾಗುತ್ತಾ ಬರುತ್ತಾರೆ. ಇದು ವೈಯಕ್ತಿಕ ಚಿಕಿತ್ಸೆಯಾಗಿ ಹಾಗೆ ಗುಂಪು ಚಿಕಿತ್ಸೆಯೂ ಆಗಿರಬಹುದು. ಇದರಲ್ಲಿ ಪೋಷಕರು ಕೂಡ ಭಾಗಿಯಾಗಬೇಕಾಗುತ್ತದೆ. ಆದ್ರೆ ಇದಕ್ಕೆ ಔಷಧಿ ಚಿಕಿತ್ಸೆಯಲ್ಲಿ ಹಲವು ರೀತಿಯ ಔಷಧಿಗಳನ್ನು ಮಕ್ಕಳಿಗೆ ನೀಡುವ ಮೂಲಕವೂ ಆತಂಕದಿಂದ ದೂರ ಮಾಡಲಾಗುತ್ತದೆ. ಮಕ್ಕಳು ಯಾವ ಹಂತದ ಆತಂಕ ಹೊಂದಿದ್ದಾರೆ ಎಂಬುದರ ಮೇಲೆ ಈ ಚಿಕಿತ್ಸಾ ವಿಧಾನವೂ ನಿರ್ಧರಿತವಾಗುತ್ತದೆ ಎಂದು ಅವರು ಹೇಳಿದ್ದಾರೆ.

English summary

Like A Shadow That Never Fades, Anxiety Haunts Children In Silence: Experts View

Recent studies in India have shown that 10.5% of Indians have a diagnosable mental illness, and most of them do not seek treatment.
Story first published: Monday, October 13, 2025, 7:30 [IST]
X
Desktop Bottom Promotion