Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಸಕ್ಕರೆ ಹಾಕದ ಬ್ಲಾಕ್ ಕಾಫಿ ಕುಡಿದರೆ ಏನೆಲ್ಲಾ ಲಾಭವಿದೆ ಗೊತ್ತಾ? ತಿಳಿದರೆ ನಿಮಗೆ ಅಚ್ಚರಿ ಆಗಬಹುದು
ನೀವು ನಿತ್ಯ ಬೆಳಗ್ಗೆ ಎದ್ದ ತಕ್ಷಣ ಕಾಫಿ ಅಥವಾ ಟೀ ಕುಡಿಯುತ್ತೀರಿ. ಹಾಗೆ ಮತ್ತೆ ಕೆಲವರು ಆರೋಗ್ಯಕರ ಟೀಗಳನ್ನು ಕುಡಿಯೋದು ನೋಡಬಹುದು. ಲೆಮನ್ ಟೀ, ಗ್ರೀನ್ ಟೀ ಹೀಗೆ, ಮತ್ತೊಂದಿಷ್ಟು ಮಂದಿ ಯಾವಾಗಲು ಕಾಫಿಯನ್ನೇ ಬಹಳ ಇಷ್ಟಪಡುತ್ತಾರೆ. ಕಾಫಿ ಕುಡಿಯದಿದ್ದರೆ ಅವರ ದಿನ ಮುಗಿಯೋದಿಲ್ಲ. ಕಾಫಿ ಅಥವಾ ಟೀ ಯಾವುದಾದರು ಅದಕ್ಕೆ ಸಕ್ಕರೆ ಇಲ್ಲವೆ ಬೆಲ್ಲವನ್ನು ಬಳಸೋದು ಕಾಮನ್.
ಇನ್ನು ಸಕ್ಕರೆ ನಮ್ಮ ಆರೋಗ್ಯಕ್ಕೆ ಉತ್ತಮ ಪದಾರ್ಥವಲ್ಲ ಎಂಬುದನ್ನು ನೀವೆಲ್ಲ ತಿಳಿದಿದ್ದೀರಿ. ಹಾಗೆ ಟೀ ಕಾಫಿಗೆ ಬಳಸುವ ಹಾಲು ಕೂಡ ಒಂದು ಹಂತದವರೆಗೆ ಮಾತ್ರವೆ ನಮ್ಮ ದೇಹಕ್ಕೆ ಉತ್ತಮ. ಆದ್ರೆ ಹಾಲು, ಸಕ್ಕರೆ ಹಾಕದೆಯೇ ನೀವು ಕಪ್ಪು ಕಾಫಿ ಕುಡಿಯೋದು ಎಷ್ಟೊಂದು ಆರೋಗ್ಯಕರ ಲಾಭಗಳ ಹೊಂದಿದೆ ಎಂಬುದು ನಿಮಗೆ ತಿಳಿದಿದ್ಯಾ?

ಹೌದು ಸಕ್ಕರೆ, ಹಾಲು ಬಳಸದೆಯೇ ಕುಡಿಯುವಂತಹ ಕಪ್ಪು ಕಾಫಿಯು (Black Coffee) ನಿಮಗೆ ಹಲವು ರೀತಿಯ ಆರೋಗ್ಯ ತರಲು ಕಾರಣವಾಗುತ್ತಿದೆ. ಟಫ್ಟ್ಸ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಮತ್ತು ಇತ್ತೀಚೆಗೆ ದಿ ಜರ್ನಲ್ ಆಫ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಹೊಸ ವೀಕ್ಷಣಾ ಅಧ್ಯಯನದಲ್ಲಿ ಹೊಸ ವಿಚಾರಗಳು ತಿಳಿದುಬಂದಿದೆ. ಅದ್ರೆಲ್ಲೂ ಈ ಕಪ್ಪು ಕಾಫಿ ಸೇವೆನಯಿಂದಾಗಿ ಹೃದಯದ ಆರೋಗ್ಯಕ್ಕೆ ಬಹಳ ಉತ್ತಮವಂತೆ.
ಹಾಗೆ ಸಕ್ಕರೆ, ಕೆಫಿನ್ ಹಾಗೆ ಪುಡಿಗಳ ಬಳಸಿ ಮಾಡಿರುವ ಕಾಫಿಯನ್ನು ಸೇವಿಸುವವರಿಗೆ ಹೋಲಿಸಿದರೆ ಕಪ್ಪು, ಸಕ್ಕರೆ ರಹಿತ ಕಾಫಿ ಸೇವಿಸುವವರ ಜೀವಿತಾವಧಿಯು ಶೇ 14ರಷ್ಟು ಹೆಚ್ಚು ಹಾಗೆ ಮರಣ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಹಾಗೆ ಹೃದಯ ರಕ್ತನಾಳದ ಕಾಯಿಲೆಯಿಂದ ಸಾವಿನ ಅಪಾಯ ಕಡಿಮೆ ಮಾಡಲಿದೆ ಎಂದು ಸಂಶೋಧನೆಯಿಂದ ತಿಳಿದುಬರುತ್ತದೆ.
ದಿನಕ್ಕೆ ಮೂರು ಕಪ್‌ಗಳಿಗಿಂತ ಹೆಚ್ಚು ಕಾಫಿ ಕುಡಿಯುವ ಮಂದಿಯಲ್ಲಿ ಈ ಅಪಾಯಗಳ ಪ್ರಮಾಣ ಕಡಿಮೆಯಾಗಿಲ್ಲ ಎಂದು ಕೂಡ ಹೇಳಿದ್ದಾರೆ. ಹಾಗೆ ನಿಯಮಿತವಾಗಿ ಕಾಫಿ ಕುಡಿಯುವವರಲ್ಲಿ ಕಡಿಮೆ ಕ್ಯಾನ್ಸರ್ ಮರಣದ ಅಪಾಯವನ್ನು ಅವರು ಗಮನಿಸಿಲ್ಲ ಎಂದು ಸಂಶೋಧಕರು ಹೇಳಿಕೊಂಡಿದ್ದಾರೆ.
ಸಕ್ಕರೆ ಸೇರಿಸದ ಕಪ್ಪು ಕಾಫಿಯು ಸಮೃದ್ಧ ಉತ್ಕರ್ಷಣ ನಿರೋಧಕ ಅಂಶ ಮತ್ತು ಉತ್ತೇಜಕ ಗುಣಲಕ್ಷಣಗಳಿಂದಾಗಿ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಕಾಫಿಯಲ್ಲಿನ ಕೆಫೀನ್ ನರಮಂಡಲವನ್ನು ಉತ್ತೇಜಿಸುತ್ತದೆ, ಅಡ್ರಿನಾಲಿನ್ ಅನ್ನು ಬಿಡುಗಡೆ ಮಾಡುತ್ತದೆ ಮತ್ತು ದೈಹಿಕ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಹೀಗಾಗಿ ನೀವು ಬೆಳಗ್ಗೆ ಎದ್ದ ತಕ್ಷಣ ಕಪ್ಪು ಕಾಫಿ ಸೇವಿಸಿದರೆ ನೀವು ಉತ್ಸಾಹದಿಂದ ಯಾವುದಾದರು ಚಟುವಟಿಕೆಯಲ್ಲಿ ಭಾಗಿಯಾಗಲು ಇಚ್ಛಿಸುತ್ತೀರಿ.
ಕಪ್ಪು ಕಾಫಿ ಕ್ಯಾಲೋರಿ ಮುಕ್ತವಾಗಿದೆ, ಇದು ನಿಮ್ಮ ಜೀರ್ಣಕ್ರಿಯೆಗೂ ಬಹಳ ಉಪಯಕಾರಿಯಾಗಿರಲಿದೆ. ಹಾಗೆ ತೂಕ ಇಳಿಸಲು ಇಚ್ಛಿಸುವವರು ಕೂಡ ಈ ಕಪ್ಪು ಬಣ್ಣದ ಕಾಫಿಯನ್ನು ಸೇವಿಸುವುದು ಬಹಳ ಉತ್ತಮ. ಇದು ಕೊಬ್ಬಿನ ಅಂಗಾಂಶಗಳಿಂದ ಕೊಬ್ಬಿನಾಮ್ಲಗಳ ಬಿಡುಗಡೆಯನ್ನು ಉತ್ತೇಜಿಸುವ ಮೂಲಕ ಕೊಬ್ಬನ್ನು ನಾಶ ಮಾಡಲು ಕೂಡ ಸಹಕಾರಿಯಾಗಲಿದೆ, ಇದರಿಂದ ನೀವು ಬಹುಬೇಗ ತೂಕ ಇಳಿಸಿಕೊಳ್ಳಬಹುದು.
ಇದು ಇನ್ಸುಲಿನ್ ಸಂವೇದನೆ ಮತ್ತು ಗ್ಲೂಕೋಸ್ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ, ಇದರಿಂದಾಗಿ ಟೈಪ್ 2 ಮಧುಮೇಹ ನಿಮ್ಮ ಬಳಿಯೂ ಸುಳಿಯುವುದಿಲ್ಲ. ಕಪ್ಪು ಕಾಫಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಹೃದಯ ಕಾಯಿಲೆ ಹೆಚ್ಚಿಸುವಂತಹ ಉರಿಯೂತದಂತಹ ಅಂಶಗಳ ಕಡಿಮೆ ಮಾಡಲಿದೆ. ಕೆಲವು ಅಧ್ಯಯನಗಳಲ್ಲಿ ಈ ಕಪ್ಪು ಕಾಫಿಯು ಅಧಿಕ ರಕ್ತದೊತ್ತಡ ಕಡಿಮೆ ಮಾಡಲು ಹಾಗೆ ಪಾರ್ಶ್ವವಾಯು ಅಪಾಯ ಕೂಡ ಕಡಿಮೆ ಮಾಡಲಿದೆ ಎಂದು ಹೇಳಲಾಗಿದೆ.



Click it and Unblock the Notifications
