Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಲೆನಾಡಲ್ಲಿ ಮತ್ತೆ ಮಂಗನಕಾಯಿಲೆ ಆತಂಕ: ಕಾಡಂಚಿನ ಗ್ರಾಮದಲ್ಲಿ ಸಮೀಕ್ಷೆ..!
ಬೇಸಿಗೆಯ ಆರಂಭದಲ್ಲಿ ಮಲೆನಾಡು ಭಾಗವನ್ನು ಕಾಡು ಅತ್ಯಂತ ದೊಡ್ಡ ಸಮಸ್ಯೆಗಳಲ್ಲಿ ಈ ಮಂಗನ ಕಾಯಿಲೆ ಅತೀವವಾಗಿ ಕಾಡುವ ಆತಂಕ ಹುಟ್ಟಿಸುವ ಸಮಸ್ಯೆಯಾಗಿದೆ. ಹಾಗೆ ಇದರಿಂದ ವರ್ಷ ವರ್ಷವೂ ಪೀಡಿತರ ಸಂಖ್ಯೆ ಏರಿಕೆಯಾಗುತ್ತಲೇ ಇರುತ್ತದೆ. ಅದರಲ್ಲೂ ನೀವು ಮಲೆನಾಡಿನ ಗ್ರಾಮೀಣ ಭಾಗದ ಜನರನ್ನು ಬಹಳವಾಗಿ ಕಾಡಲಿದೆ.
ಇತ್ತೀಚಿಗೆ ತೀರ್ಥಹಳ್ಳಿಯ ದತ್ತರಾಜಪುರದ ಬಾಲಕನೊಬ್ಬ ಈ ಕೆಎಫ್‌ಡಿ ಸಮಸ್ಯೆಗೆ ತುತ್ತಾಗಿ ಮೃತಪಟ್ಟಿದ್ದ. ಇದು ಮಂಗನಕಾಯಿಲೆ ಕುರಿತಾದ ಆತಂಕ ಹೆಚ್ಚುವಂತೆ ಮಾಡಿದೆ. ಆರಂಭದಲ್ಲಿ ಶಿವಮೊಗ್ಗ, ಉತ್ತರ ಕನ್ನಡದಲ್ಲಿ ಮಾತ್ರವೇ ವರದಿಯಾಗುತ್ತಿದ್ದ ಈ ಸಮಸ್ಯೆ ಈಗ ಅಕ್ಕ ಪಕ್ಕದ ಜಿಲ್ಲೆಗಳ ಜನರಲ್ಲೂ ವರದಿಯಾಗುತ್ತಿರುವುದು ಹೊಸ ರೀತಿ ಆತಂಕಕ್ಕೆ ಕಾರಣವಾಗಿದೆ.

ಮಂಗನ ಮೈನಲ್ಲಿನ ಉಣ್ಣೆಯಿಂದ ಈ ಸಮಸ್ಯೆ ಹರಡುವುದು ನೋಡಬಹುದು. ಸುತ್ತಲಿನ ಪ್ರದೇಶದಲ್ಲಿ ಮಂಗಗಳು ಕಾಣಿಸಿಕೊಳ್ಳುವುದು, ಮಂಗಗಳು ಮೃತಪಟ್ಟಿರುವುದು ವರದಿಯಾದರೆ ಈ ಸಮಸ್ಯೆ ಹೆಚ್ಚಾಗುವ ಸಂಭವವಿದೆ. ಕೆಎಫ್‌ಡಿ ಎಂಬುದು ಫ್ಲೇವಿವಿರಿಡೆ ಕುಟುಂಬಕ್ಕೆ ಸೇರಿದ ಕ್ಯಾಸನೂರ್ ಫಾರೆಸ್ಟ್ ಡಿಸೀಸ್ ವೈರಸ್‌ನಿಂದ ಉಂಟಾಗುವ ಸಮಸ್ಯೆಯಾಗಿದೆ.
ತೀವ್ರ ಜ್ವರದಿಂದ ಆರಂಭವಾಗುವ ಈ ಸಮಸ್ಯೆಯೂ ಮುಂದೆ ಪ್ರಾಣಕ್ಕೆ ಸಂಚಕಾರ ತರಲಿದೆ. ಇದು 1957ರಲ್ಲಿ ರೋಗವನ್ನು ಪತ್ತೆ ಮಾಡಲಾಗಿತ್ತು. ಶಿವಮೊಗ್ಗದ ಕ್ಯಾಸನೂರಿನ ಅರಣ್ಯ ಪ್ರದೇಶದಲ್ಲಿ ಈ ವೈರಸ್ ಕಂಡುಬಂದಿತ್ತು. ಹೀಗಾಗಿ ಕ್ಯಾಸನೂರ್ ಫಾರೆಸ್ಟ್ ಡಿಸೀಸ್ ಎಂದು ಕರೆಯಲಾಗಿದೆ. ಮಾನವರು ಹೀಮಾಫಿಸಾಲಿಸ್ ಸ್ಪಿನಿಗೆರಾ ಮೂಲಕ ಸೋಂಕಿಗೆ ಒಳಗಾಗುತ್ತಾರೆ. ಸಣ್ಣ ಸಸ್ತನಿಗಳು, ಮಂಗಗಳು ಮತ್ತು ಉಣ್ಣಿಗಳಲ್ಲಿ ಈ ವೈರಸ್ ಕಂಡುಬರುತ್ತದೆ.
2018ರಲ್ಲಿ ಈ ಕೆಎಫ್‌ಡಿ ವೈರಸ್ ಹೆಚ್ಚಾಗಿ ಕಂಡುಬಂದ ವರ್ಷವಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡದ ಅರಣ್ಯದಲ್ಲಿ ಅತೀ ಹೆಚ್ಚು ಮಂಗಗಳು ಈ ಸಮಯದಲ್ಲಿ ಮೃತಪಟ್ಟ ವರದಿಯ ಜೊತೆಗೆ ಮಂಗನ ಕಾಯಿಲೆಗೆ ತುತ್ತಾಗಿರುವವರ ಸಂಖ್ಯೆಯು ಹೆಚ್ಚಾಗಿತ್ತು.
ಕೆಎಫ್‌ಡಿಯ ಲಕ್ಷಣಗಳೇನು?
- ತೀವ್ರ ಜ್ವರ ಮತ್ತು ಶೀತ
- ತೀವ್ರ ತಲೆನೋವು
- ತೀವ್ರ ಬೆನ್ನು ಮತ್ತು ಕೈಕಾಲು ನೋವು
- ವಾಕರಿಕೆ
- ಅತಿಸಾರ
- ಚಳಿ
ಕ್ಯಾಸನೂರು ಫಾರೆಸ್ಟ್ ಡಿಸೀಜ್ (ಕೆಎಫ್‌ಡಿ) ಬಗ್ಗೆ ಐಸಿಎಂಆರ್ ಸಮೀಕ್ಷೆಯನ್ನು ನಡೆಸಿದೆ. ಈ ರೋಗದ ಹರಡುವಿಕೆ ಪ್ರಮಾಣವನ್ನು ಅರ್ಥಮಾಡಿಕೊಳ್ಳಲು ಐಸಿಎಂಆರ್ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ವಿಭಾಗವು ಪಶ್ಚಿಮ ಘಟ್ಟದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳ ಹಾಗೂ ವಯಸ್ಕರಲ್ಲಿ ಕೆಎಫ್‌ಡಿ ಸೀರೋ ಸಮೀಕ್ಷೆ ನಡೆಸಿದೆ. ಹಿಂದೆ ಕೆಎಫ್‌ಡಿ ಪ್ರಕರಣಗಳು ವರದಿಯಾದ 20 ಗ್ರಾಮಗಳು ಸೇರಿದಂತೆ ಒಟ್ಟು 51 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಾರ್ಚ್ 22 ರಿಂದ ಏಪ್ರಿಲ್ 15 ರ ತನಕ ಈ ಸಮೀಕ್ಷೆಯನ್ನು ನಡೆಸಲಾಗಿದೆ.
ಪ್ರತಿ ಗ್ರಾಮದಲ್ಲಿ 6 ರಿಂದ 18 ವರ್ಷದೊಳಗಿನ 14 ಮಕ್ಕಳಿಂದ ಹಾಗೂ 18 ರಿಂದ 50 ವರ್ಷದೊಳಗಿನ 22 ವಯಸ್ಕರಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಹಾಗೆ ಚಿಕ್ಕಮಗಳೂರು, ಉಡುಪಿ, ಉತ್ತರ ಕನ್ನಡ, ಕೊಡಗು, ಹಾಸನ, ದಕ್ಷಿಣ ಕನ್ನಡ, ಬೆಳಗಾವಿಯ ಕಾಡಂಚಿನ ಗ್ರಾಮದಲ್ಲೂ ಸಮೀಕ್ಷೆ ನಡೆಲಾಗುತ್ತಿದೆ. ಇದರಿಂದ ರೋಗ ನಿರ್ಣಯ ಸುಲಭವಾಗಿಸುವುದು ಇಲಾಖೆಯ ಉದ್ದೇಶವಾಗಿದೆ.
ಈ ವರ್ಷ ರಾಜ್ಯದಲ್ಲಿ ಸುಮಾರು 150ಕ್ಕೂ ಹೆಚ್ಚು ಮಂದಿಯಲ್ಲಿ ಕೆಎಫ್‌ಡಿ ವರದಿಯಾಗಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. ಹಾಗೆ ಈವರೆಗೆ ಇಬ್ಬರು ಕೆಎಫ್‌ಡಿಗೆ ಬಲಿಯಾಗಿದ್ದಾರೆ. ಈ ರೋಗವು ಶೇಕಡಾ 3 ರಿಂದ 15 ರವರೆಗೆ ಸಾವಿನ ಪ್ರಮಾಣವನ್ನು ಹೊಂದಿದೆ.
2026ಕ್ಕೆ ಚುಚ್ಚು ಮದ್ದು
ಈಗಾಗಲೇ ಮಂಗನಕಾಯಿಲೆಗೆ ಚುಚ್ಚುಮದ್ದು ಪರೀಕ್ಷಾ ಹಂತದಲ್ಲಿದೆ. ಲಸಿಕೆ 2026 ರ ವೇಳೆಗೆ ಬಳಕೆಗೆ ಲಭ್ಯವಾಗುವ ಸಾಧ್ಯತೆಯಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ 2024ರಲ್ಲಿ ತಿಳಿಸಿದ್ದರು. ಐಸಿಎಂಆರ್ ಒಪ್ಪಿಗೆಯೊಂದಿಗೆ ಹೈದರಾಬಾದ್ ಮೂಲದ ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಮೊದಲ ಹಂತದಲ್ಲಿ ಭರವಸೆಯ ಫಲಿತಾಂಶ ನೀಡಿದೆ ಎಂದು ಅವರು ಹೇಳಿದ್ದರು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











