Latest Updates
-
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ!
ಅಡುಗೆ ಮನೆ ವಸ್ತುಗಳು- ಮಕ್ಕಳ ಆಟಿಕೆಗಳೇ ಅನಾರೋಗ್ಯದ ದಾರಿಗಳು..! ಹೇಗೆ ಗೊತ್ತಾ?
ನಾವಿಂದು ಬಳಸುತ್ತಿರುವ ಅದೆಷ್ಟೋ ವಸ್ತುಗಳು ನಮ್ಮ ಅನಾರೋಗ್ಯಕ್ಕೆ ಕಾರಣವಾಗುತ್ತಿವೆ ಎಂಬುದು ನಮಗೆಲ್ಲಾ ತಿಳಿದಿದೆ. ಉದಾಹರಣೆಗೆ ಮೊಬೈಲ್ ಫೋನ್ ತೆಗೆದುಕೊಂಡರೆ ಅತೀ ಹೆಚ್ಚಿನ ಸಮಸ್ಯೆ ತರುತ್ತಿವೆ. ಆದರೆ ನಮ್ಮ ಮನೆಯ ಅಡುಗೆ ಮನೆಯಲ್ಲೂ ನಮಗೆ ಅನಾರೋಗ್ಯ ಉಂಟು ಮಾಡುವಂತಹ ವಸ್ತುಗಳಿವೆ ಎಂಬುದನ್ನು ನೋಡಿದ್ದೇವೆ.
ನಾವು ಅಡುಗೆ ಮನೆಯಲ್ಲಿ ಬಳಸು ನಾನ್ ಸ್ಟಿಕ್ ಪಾನ್ ಕೂಡ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತಿದೆ ಎಂಬ ವಿಚಾರ ನಿಮಗೆ ತಿಳಿದಿದ್ಯಾ? ಹೌದು ಕೆಮೊಸ್ಪಿಯರ್ ಜರ್ನಲ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವು ಮನೆಗಳಲ್ಲಿ ಸಾಮಾನ್ಯವಾಗಿ ಬಳಸುವ ಕಪ್ಪು ಪ್ಲಾಸ್ಟಿಕ್ ಉತ್ಪನ್ನಗಳ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಅಡುಗೆಗೆ ಬಳಸುವ ಪಾತ್ರೆಗಳು ಮತ್ತು ಮಕ್ಕಳ ಆಟಿಕೆಗಳಂತಹ ವಿವಿಧ ಕಪ್ಪು ಪ್ಲಾಸ್ಟಿಕ್ ವಸ್ತುಗಳು ಹೆಚ್ಚಿನ ಮಟ್ಟದ ವಿಷಕಾರಿ ಅಂಶ ಹೊಂದಿದೆ ಎಂದು ಬಹಿರಂಗಗೊಂಡಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ನೆದರ್ಲ್ಯಾಂಡ್ಸ್ನ ಸಂಶೋಧಕರು ನಡೆಸಿದ ಅಧ್ಯಯನವು 200ಕ್ಕೂ ಹೆಚ್ಚು ಕಪ್ಪು ಪ್ಲಾಸ್ಟಿಕ್ ಉತ್ಪನ್ನಗಳನ್ನು ಪರೀಕ್ಷಿಸಿದೆ.
ಇವುಗಳಲ್ಲಿ ಟ್ರೇಗಳು, ಸ್ಪಾಟುಲಾಗಳು ಮತ್ತು ಮಕ್ಕಳು ಧರಿಸಿರುವ ಪ್ಲಾಸ್ಟಿಕ್ ಮಣಿಗಳಿಂದ ಕೂಡಿದ ಆಭರಣಗಳು ಸೇರಿ ಹಲವು ವಸ್ತುಗಳಲ್ಲಿ ಶೇ.85ರಷ್ಟು ಹಾನಿಕಾರಕ ರಾಸಾಯನಿಕ ಒಳಗೊಂಡಿರುವುದು ಕಂಡುಬಂದಿದೆ. ಉದಾಹರಣೆಗೆ ಬ್ರೋಮಿನೇಟೆಡ್ ಜ್ವಾಲೆಯ ನಿವಾರಕಗಳು (BFRs) ಮತ್ತು ಆರ್ಗನೋಫಾಸ್ಫೇಟ್ ಜ್ವಾಲೆಯ ನಿವಾರಕಗಳು (OPFRs).
ಈ ವಸ್ತುಗಳನ್ನು ಬಹುಬೇಗ ಬೆಂಕಿಯಿಂದ ಹಾಳಾಗದಂತೆ ತಡೆಯುವ ಸಲುವಾಗಿ ವಿವಿಧ ರೀತಿಯ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಈ ರಾಸಾಯನಿಕಗಳು ಹತ್ತಾರು ಸಮಸ್ಯೆಗೆ ಕಾರಣವಾಗುತ್ತದೆ. ಅದರಲ್ಲಿ ಮುಖ್ಯವಾಗಿ ಟೆಲಿವಿಷನ್‌ಗಳು ಮತ್ತು ಕಂಪ್ಯೂಟರ್ ಕೇಸಿಂಗ್‌ಗಳಂತಹ ಎಲೆಕ್ಟ್ರಾನಿಕ್ಸ್‌ಗಳಿಗೆ ಬೆಂಕಿ ನಿರೋಧಕ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ಮರುಬಳಕೆಯ ಪ್ರಕ್ರಿಯೆಯಲ್ಲಿ ಈ ಪ್ಲಾಸ್ಟಿಕ್‌ಗಳನ್ನು ಹೆಚ್ಚಾಗಿ ಹೊಸ ಉತ್ಪನ್ನಗಳಾಗಿ ಮರುಬಳಕೆ ಮಾಡಲಾಗುತ್ತದೆ. ಅಂದರೆ ಹಳೆಯ ಕೆಮಿಕಲ್ ಆಗಿದ್ದರೂ ಕೂಡ ಇದರಿಂದ ಹೊಸ ವಸ್ತುಗಳು ಮಾರುಕಟ್ಟೆಗೆ ಸಿದ್ಧವಾಗಿ ಬರುತ್ತವೆ.
ಅಚ್ಚರಿ ಎಂದರೆ ಈ ನಿಷೇಧಿತ ರಾಸಾಯನಿಕಗಳೇ ಈ ಮರುಬಳಕೆಯಾಗುವ ವಸ್ತುಗಳಲ್ಲಿ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವ ಕಾರಣ ಈ ಆತಂಕ ಹೆಚ್ಚಾಗಲು ಕಾರಣವಾಗಿದೆ. ಈ ಬೆಂಕಿ ನಿರೋಧಕ ಹಾಗೂ ಪ್ರತಿರೋಧಕ ವಸ್ತುಗಳು ನಮ್ಮ ದೇಹ ಸೇರುವುದರಿಂದ ಕ್ಯಾನ್ಸರ್ ಅಪಾಯ ಹೆಚ್ಚಾಗಲಿದೆ.
ಮರುಬಳಕೆಯ ಪ್ಲಾಸ್ಟಿಕ್‌ಗಳಿಂದ ಮಾಡಿದ ಮ್ಕಕಳ ಆಟಿಕೆಗಳು ಹೆಚ್ಚು ಅಪಾಯಕಾರಿ ಏಕೆಂದರೆ ಮಕ್ಕಳು ಸದಾ ಕಾಲ ಅಥವಾ ಹೆಚ್ಚಿನ ಸಮಯ ಈ ಆಟಿಕೆಗಳ ಜೊತೆಗೆ ಕಳೆಯುತ್ತಾರೆ. ಅದನ್ನು ಬಾಯಿಗೆ ಹಾಕುವುದು, ಪ್ಲಾಸ್ಟಿಕ್ ಸ್ಪೂನ್ ಬಳಸಿ ಅವರಿಗೆ ಆಹಾರ ನೀಡುವುದು, ಇದೆಲ್ಲವು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಇದರಿಂದ ಪಾರಾಗುವುದು ಹೇಗೆ?
ನಾವು ಅಡುಗೆಗೆ ಪ್ಲಾಸ್ಟಿಕ್ ಮುಕ್ತ ವಸ್ತುಗಳ ಬಳಸುವುದು. ಅದರಲ್ಲೂ ಈ ಪಾನ್‌ಗಳು, ಬೌಲ್‌ಗಳು, ಸ್ಪೂನ್‌ಗಳನ್ನು ಆದಷ್ಟು ಸ್ಟೀಲ್‌ನದ್ದೇ ಬಳಸುವುದು ಉತ್ತಮ. ಹಾಗೆ ಪ್ಲಾಸ್ಟಿಕ್‌ಗೆ ಯಾವೆಲ್ಲಾ ಸಮಯದಲ್ಲಿ ಪರ್ಯಾಯ ವಸ್ತು ಬಳಕೆ ಸಾಧ್ಯವೋ ಅದನ್ನು ಮಾಡುವುದು ಅಥವಾ ಬಳಸುವುದು.
ಮಕ್ಕಳಿಗೆ ನೀಡುವ ಆಟಿಕೆಗಳು ಕೂಡ ಹೆಚ್ಚು ಪ್ಲಾಸ್ಟಿಕ್‌ನಿಂದ ಕೂಡಿರದಂತೆ ನೋಡಿಕೊಳ್ಳುವುದು, ಬಟ್ಟೆ, ಮರದ ಆಟಿಕೆ, ಸ್ಟೀಲ್ ಈ ರೀತಿಯ ವಸ್ತುವಿನಿಂದ ಮಾಡಿರುವ ಆಟಿಕೆಗಳ ನೀಡುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications