Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ಲಕ್ಷಣಗಳಿದ್ದರೆ ನಿಮ್ಮಲ್ಲಿ ಕಿಡ್ನಿ ಸ್ಟೋನ್ ಅಪಾಯವಿದೆ ಎಂದರ್ಥ..! ಯಾವ ಲಕ್ಷಣ ಗೊತ್ತಾ..!?
ಇತ್ತೀಚಿನ ಆಧುನಿಕ ಮತ್ತು ಒತ್ತಡದ ಜೀವನ ಶೈಲಿಯ ನಡುವೆ ನಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವುದೇ ಕಷ್ಟವಾಗಿದೆ ಹೀಗಿರುವಾಗ ನಮ್ಮ ಸುತ್ತ ಕಿಡ್ನಿ ಸ್ಟೋನ್‌ನಿಂದ ಬಳಲುತ್ತಿರುವವ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಕಿಡ್ನಿ ಸ್ಟೋನ್ ಉಂಟಾಗಲು ಕೆಲವು ಬಾಹ್ಯಕಾರಣಗಳಿವೆ. ಇದಕ್ಕೆ ನಾವೇ ಮೂಲವಾಗಿರುತ್ತೇವೆ.
ಹೌದು ಸಾಕಷ್ಟು ನೀರು ಕುಡಿಯದೇ ಇದ್ದರೆ ಕಿಡ್ನಿ ಸ್ಟೋನ್ ಆಗುವ ಸಾಧ್ಯತೆ ಅಧಿಕವಾಗಿರುತ್ತದೆ ಎಂದು ಹೇಳಲಾಗಿದೆ. ಆದರೆ ಕಿಡ್ನಿ ಸ್ಟೋನ್ ಉಂಟಾಗಲು ಹಲವು ಕಾರಣಗಳಿವೆ. ಇದನ್ನು ಆರಂಭದಲ್ಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆದರೆ ಉತ್ತಮ, ದೀರ್ಘಕಾಲದ ಸಮಸ್ಯೆಯಾದರೆ ಶಸ್ತ್ರ ಚಿಕಿತ್ಸೆ ಮಾಡುವುದು ಅನಿವಾರ್ಯವಾಗುತ್ತದೆ.

ಆದರೆ ನಮಗೆ ಮೂತ್ರಪಿಂಡದಲ್ಲಿ ಕಲ್ಲುಗಳಾಗಿದೆ ಎಂಬುದು ತಿಳಿಯುವುದು ಹೇಗೆ? ಅದರ ಆರಂಭಿಕ ಲಕ್ಷಣಗಳೇನು?, ಯಾವ ರೀತಿಯ ಅನಾರೊಗ್ಯ ಸಮಸ್ಯೆ ಇದರಿಂದ ನಮ್ಮ ಮೇಳೆ ಉಂಟಾಗಲಿದೆ ಎಂಬೆಲ್ಲಾ ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡಲಾಗಿದೆ.
ಮೂತ್ರಪಿಂಡದ ಕಲ್ಲುಗಳು ಮೂತ್ರನಾಳದ ಸೂಕ್ಷ್ಮ ಅಪಾಯಗಳಾಗಿವೆ. ಇವು ಖನಿಜಯುಕ್ತ ನಿಕ್ಷೇಪಗಳಿಂದ ರೂಪುಗೊಂಡಿವೆ ಮತ್ತು ತುಲನಾತ್ಮಕವಾಗಿ ನೋವಿನಿಂದ ಕೂಡಿದೆ. ಅಂದರೆ ದೇಹದಿಂದ ಹೊರಹೋಗದೆ ಉಳಿದಿರುವ ಖನಿಜಗಳ ನಿಕ್ಷೇಪವೇ ಈ ಕಲ್ಲುಗಳು. ಇದು ಮೊದಲು ಚಿಕ್ಕಗಾತ್ರದಿಂದ ದೊಡ್ಡದಾಗುತ್ತಾ ಸಾಗುತ್ತದೆ. ಕಲ್ಲುಗಳು ದೊಡ್ಡದಾಗಿತ್ತಾ ಹೋದಂತೆ ಅಸಹನೀಯ ನೋವು ಕಾಣಿಸಿಕೊಳ್ಳುತ್ತದೆ.
- ನಿಮ್ಮ ಬೆನ್ನ ಕೆಳಗಿನ ಭಾಗದಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು. ಯಾರೋ ನಿಮ್ಮ ಬೆನ್ನಿಗೆ ಒಂದೇ ಸಮನೆ ಗುದ್ದುತ್ತಿರುವಂತೆ ನೋವು ಭಾಸವಾಗುವುದು. ಕೆಲವೊಮ್ಮ ಇದು ಹೊಟ್ಟೆಯ ಕೆಳಭಾಗದಲ್ಲೂ ಅಸಹನೀಯ ನೋವು ಉಂಟುಮಾಡುತ್ತದೆ.
- ಪದೇ ಪದೇ ಮೂತ್ರ ವಿಸರ್ಜನೆಯ ಪ್ರಚೋಧನೆ ಹೆಚ್ಚುವುದು. ಆದರೆ ಸರಿಯಾಗಿ ಮೂತ್ರ ವಿಸರ್ಜನೆಯಾಗದೆ ತಡೆಯೊಡ್ಡಿದ ಭಾವನೆ ಎದುರಾಗುವುದು. ಇಲ್ಲದೆ ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವಾಗುವುದು.
- ಉರಿಯೂತ ಮತ್ತು ಮೂತ್ರದ ಬಣ್ಣ ಹಳದಿ ಇಲ್ಲದೆ ಕಂದು ಬಣ್ಣಕ್ಕೆ ತಿರುಗಿದ್ದರೆ.
- ಮೂತ್ರದ ಸೋಂಕು ಮತ್ತೊಂದು ಸೂಚಕವಾಗಿರಬಹುದಾದ ದುರ್ವಾಸನೆಯಿಂದ ಕೂಡಿದ ಮೂತ್ರವು ಸಹ ಮೂತ್ರಪಿಂಡದ ಕಲ್ಲಿನ ಸೂಚಕವಾಗಿರುತ್ತದೆ.
ಮೂತ್ರಪಿಂಡದಲ್ಲಿ ಕಲ್ಲು ನಿರ್ಮಾಣವಾಗುವ ಸಾಧ್ಯತೆ ಹೇಗೆ?
ಇತ್ತೀಚಿನ ಸಂಶೋಧನೆಯ ಪ್ರಕಾರ ಯಾವ ಆಹಾರದಲ್ಲಿ ಆಕಲೇಟ್ (oxalate) ಎಂಬ ಕಣಗಳು ಹೆಚ್ಚಿರುತ್ತವೆಯೋ ಆ ಅಹಾರಗಳ ಸೇವನೆಯಿಂದ ಮೂತ್ರಪಿಂಡಗಳಲ್ಲಿ ಕಲ್ಲುಗಳು ಮೂಡುವ ಸಂಭವ ಅತಿ ಹೆಚ್ಚಾಗುತ್ತದೆ. ಪೀನಟ್ ಬಟರ್, ಚಾಕಲೇಟು, ಪಾಲಕ್ ಸೊಪ್ಪು, ಕಾಫಿ, ಬಿಯರ್ ಮೊದಲಾದ ಆಹಾರಗಳ ಸೇವನೆಯಿಂದ ಮೂತ್ರಪಿಂಡಗಳ ಕಲ್ಲುಗಳಾಗುವ ಸಾಧ್ಯತೆ ಹೆಚ್ಚುತ್ತದೆ.
ಮೂತ್ರಪಿಂಡಗಳಲ್ಲಿ ಕಲ್ಲುಗಳಾಗಲು ಕೆಲವು ವಾತಾವರಣದ ಪರಿಸ್ಥಿತಿಗಳೂ ಕಾರಣವಾಗುತ್ತವೆ. ಅಂದರೆ ಬಿಸಿ ಇರುವ ಪ್ರದೇಶದಲ್ಲಿ ವಾಸಿಸುವವರು ಈ ಸ್ಥಿತಿಗೆ ಹೆಚ್ಚು ಒಳಗಾಗುತ್ತಾರೆ. ಏಕೆಂದರೆ ವಾತಾವರಣದ ಬಿಸಿಯ ಪರಿಣಾಮದಿಂದ ತಂಪುಗೊಳಿಸಲು ದೇಹ ಹೆಚ್ಚಿನ ನೀರನ್ನು ಬಳಸುವ ಕಾರಣ ಮೂತ್ರ ಹೆಚ್ಚು ಸಾಂದ್ರೀಕೃತವಾಗುತ್ತದೆ.
ಮೂತ್ರಪಿಂಡದ ಕಲ್ಲುಗಳಿಗೆ ಚಿಕಿತ್ಸೆ ನೀಡುವುದು ಹೇಗೆ?
ಮೂತ್ರಪಿಂಡದ ಕಲ್ಲುಗಳನ್ನು ತೊಡೆದುಹಾಕಲು ಹಲವಾರು ಚಿಕಿತ್ಸಾ ಆಯ್ಕೆಗಳಿವೆ. ಆದಾಗ್ಯೂ, ಅವರು ನಿಮ್ಮ ಸ್ಥಿತಿಯ ಹಂತವನ್ನು ಅವಲಂಬಿಸಿರುತ್ತದೆ. ಎಲ್ಲಾ ರೀತಿಯ ಮೂತ್ರಪಿಂಡದ ಕಲ್ಲುಗಳಿಗೆ ಟಾಪ್ 3 ಚಿಕಿತ್ಸಾ ಆಯ್ಕೆಗಳು ಇಲ್ಲಿವೆ
- ಕಲ್ಲು ಗಾತ್ರದಲ್ಲಿ ಚಿಕ್ಕದಾಗಿದ್ದರೆ, ವೈದ್ಯರು ಶಸ್ತ್ರ ಚಿಕಿತ್ಸೆಯ ಅಗತ್ಯವಿಲ್ಲದೆ ನೈಸರ್ಗಿಕ ರೀತಿಯಲ್ಲಿ ಅದನ್ನು ಹೊರಹಾಕುವ ಮಾರ್ಗವನ್ನು ಸೂಚಿಸಬಹುದು. ಇದಕ್ಕೆ ನಿತ್ಯವು 3ರಿಂದ 4 ಲೀಟರ್ ನೀರು ಕುಡಿಯುವಂತೆಯೂ ಹೆಚ್ಚು ಹೆಚ್ಚು ಮೂತ್ರ ವಿಸರ್ಜನೆ ಮಾಡುವಂತೆಯೂ ಸೂಚಿಸಬಹುದು.
- ಎರಡನೆಯ ಆಯ್ಕೆಯು ನೋವು ಔಷಧಿಗಳನ್ನು ಅನುಸರಿಸುವುದು; ಇದಲ್ಲದೆ ದೊಡ್ಡ ಮಟ್ಟದ ಪರಿಹಾರವನ್ನು ಸಹ ನೀಡಬಹುದು. ಅಂದರೆ ಕಲ್ಲು ಮೂತ್ರಪಿಂಡದಲ್ಲಿಯೇ ಕರಗುವಂತೆ ಮಾಡಲು ಕೆಲವು ಔಷಧಿ, ಆಹಾರ ಕ್ರಮವನ್ನು ಪಾಲಿಸುವಂತೆ ಸೂಚಿಸಬಹುದು.
- ಮೂರನೇ ಆಯ್ಕೆಯಾಗಿ ಕಲ್ಲು ಹೆಚ್ಚು ದೊಡ್ಡ ಗಾತ್ರದಾಗಿದ್ದರೆ ಶಸ್ತ್ರಚಿಕಿತ್ಸಾ ವಿಧಾನಗಳು ಮತ್ತು ಚಿಕಿತ್ಸಾ ಆಯ್ಕೆ ಮಾಡಿಕೊಳ್ಳುವುದು. ಅವರು ನಿಗದಿ ಪಡಿಸಿದ ದಿನದಂದು ಶಸ್ತ್ರ ಚಿಕಿತ್ಸೆ ನೆರವೇರಿಸಿ ಕಲ್ಲನ್ನು ಹೊರತೆಗೆಯುವುದಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
