Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಿಡ್ನಿ ಆರೋಗ್ಯಕ್ಕೆ ಏನು ಮಾಡಬೇಕು? ಕಿಡ್ನಿಯ ಆರೋಗ್ಯ ತಿಳಿಯಲು ಈ ಪ್ರಶ್ನೆಗಳನ್ನು ಡಾಕ್ಟರ್ ಹತ್ರ ಕೇಳಿ
ಇಂದು ವಿಶ್ವ ಕಿಡ್ನಿ ದಿನ, ಕಿಡ್ನಿ ಆರೋಗ್ಯದ ಬಗ್ಗೆ ಜನರಲ್ಲಿ ಜಾಗ್ರತೆ ಮೂಡಿಸಲು ಈ ದಿನ ಆಚರಿಸಲಾಗುವುದು. ಕಿಡ್ನಿ ಸಮಸ್ಯೆ ಹೆಚ್ಚಾಗಿ ಮಧುಮೇಹಿಗಳಿಗೆ, ಅಧಿಕ ರಕ್ತದೊತ್ತಡದ ಸಮಸ್ಯೆ ಇರುವವರಿಗೆ, ಹೃದಯದ ಸಮಸ್ಯೆ ಇರುವವರಿಗೆ ಅಥವಾ ವಂಶವಾಹಿಯಾಗಿ ಬರುವ ಸಾಧ್ಯತೆ ಇದೆ.

ಕಿಡ್ನಿ ಆರೋಗ್ಯ ಕಾಪಾಡಲು ಆಹಾರದಲ್ಲಿ ಈ ಬಗ್ಗೆ ಜಾಗ್ರತೆವಹಿಸಿ
ಆಹಾರವನ್ನು ಉಪ್ಪು ಮಾತ್ರವಲ್ಲ ಮಸಾಲೆ ಹಾಕಿ ಬೇಯಿಸಿ
ಪಾಲಾಕ್, ಬ್ರೊಕೋಲಿ ಈ ಬಗೆಯ ತರಕಾರಿ ಬಳಸಿ
ಕೊಬ್ಬಿನಂಶದ ಆಹಾರ ಮಿತಿಯಲ್ಲಿ ಸೇವಿಸಿ.
ಸಕ್ಕರೆಯನ್ನು ಬಳಸದಿದ್ದರೆ ಒಳ್ಳೆಯದು
ಧ್ಯಾನ್ಯಗಳನ್ನು ಬಳಸಿ (ಗಧಿ, ಕೆಂಪಕ್ಕಿ, ಓಟ್ಸ್, ಜೋಳ) ಈ ಬಗೆಯ ಆಹಾರ ಸೇವಿಸಿ
ಕಡಿಮೆ ಸ್ಯಾಚುರೇಟಡ್ ಆಹಾರ ಬಳಸಿ, ಜ್ಯೂಸ್ ಕುಡಿಯುವ ಬದಲಿಗೆ ತಾಜಾ ಹಣ್ಣುಗಳನ್ನು ಸೇವಿಸಿ.
ಕಡಿಮೆ ಕ್ಯಾಲೋರಿಯ ಆಹಾರ ಸೇವಿಸಿ.
ದೈಹಿಕ ವ್ಯಾಯಾಮ ಮಾಡಿ
ನೀವು ಪ್ರತಿದಿನ 30 ನಿಮಿಷ ವ್ಯಾಯಾಮ ಮಾಡಿ. ದೈಹಿಕ ವ್ಯಾಯಾಮ ಮಾಡುವುದರಿಂದ ಮೈ ತೂಕ ಕಾಪಾಡಲು ಸಹಕಾರಿ ಹಾಗೂ ಇತರ ಆರೋಗ್ಯ ಸಮಸ್ಯೆಗಳನ್ನು ಕಾಪಾಡಲು ಸಹಕಾರಿ.
ನಿದ್ದೆ ಅವಶ್ಯಕ
ಪ್ರತಿದಿನ 7-8 ಗಂಟೆ ನಿದ್ದೆ ಮಾಡಿ, ನಿದ್ರಾಹೀನತೆ ಸಮಸ್ಯೆ ಇದ್ದರೆ ಆ ಸಮಸ್ಯೆ ಹೋಗಲಾಡಿಸಲು ಧ್ಯಾನ, ದೈಹಿಕ ವ್ಯಾಯಾಮ ಮಾಡಿ.
ಮಧುಮೇಹ, ರಕ್ತದೊತ್ತಡ, ಹೃದಯ ಸಮಸ್ಯೆ ನಿಯಂತ್ರಣದಲ್ಲಿಡಿ
ಈ ಬಗೆಯ ಸಮಸ್ಯೆ ಇರುವವರು ಕಿಡ್ನಿ ಆರೋಗ್ಯದ ಬಗ್ಗೆ ತುಂಬಾ ಜಾಗ್ರತೆವಹಿಸಬೇಕು. ವೈದ್ಯರು ಸೂಚಿಸಿದ ಔಷಧಿಗಳನ್ನು ನಿಯಮಿತಾಗಿ ತಿಳಿದುಕೊಳ್ಳಿ. ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಿ.
ಕಿಡ್ನಿ ಆರೋಗ್ಯದ ಬಗ್ಗೆ ತಿಳಿಯಲು ನೀವು ಈ ಪ್ರಶ್ನೆಗಳನ್ನು ನಿಮ್ಮ ಆರೋಗ್ಯ ತಜ್ಞರ ಬಳಿ ಕೇಳಿ?
ನನ್ನ ಜಿಎಫ್‌ಆರ್ ( glomerular filtration rate) ಎಷ್ಟಿದೆ ಎಂದು ಕೇಳಿ
ಮೂತ್ರದ ಆಲ್ಬುಮಿನ್ ಎಷ್ಟಿದೆ?
ನನ್ನ ರಕ್ತದೊತ್ತಡ ಎಷ್ಟಿದೆ?
ನನ್ನ ರಕ್ತದ ಗ್ಲುಕೋಸ್ ಎಷ್ಟಿದೆ (ಮಧುಮೇಹಿಗಳಾಗಿದ್ದರೆ ಈ ಬಗ್ಗೆ ಜಾಗ್ರತೆವಹಿಸಿ)
ವರ್ಷದಲ್ಲಿ ಎಷ್ಟು ಬಾರಿ ಕಿಡ್ನಿ ಪರೀಕ್ಷೆ ಮಾಡಬೇಕು?
ಇತರ ಪ್ರಶ್ನೆ
ನನ್ನ ಕಿಡ್ನಿಯ ಆರೋಗ್ಯಕ್ಕೆ ಏನು ಮಾಡಬೇಕು?
ದಿನದಲ್ಲಿ ಎಷ್ಟು ಸಮಯ ದೈಹಿಕ ವ್ಯಾಯಾಮ ಮಾಡಬೇಕು?
ನಾನು ಯಾವ ಆಹಾರಗಳನ್ನು ತಿಂದರೆ ಒಳ್ಳೆಯದು?
ಕಿಡ್ನಿ ಸಮಸ್ಯೆಯ ಲಕ್ಷಣಗಳೇನು?
ತುಂಬಾನೇ ಸುಸ್ತು ಅನಿಸುವುದು, ಕೆಲಸದ ಕಡೆಗೆ ಗಮನ ಹರಿಸಲು ಸಾಧ್ಯವಾಗಲ್ಲ: ಕಿಡ್ನಿ ಸಮಸ್ಯೆ ಹೆಚ್ಚಾದರೆ ರಕ್ತದಲ್ಲಿ ಕಷ್ಮಲ ಹೆಚ್ಚಾಗುವುದು. ರಕ್ತ ಹೀನತೆ ಸಮಸ್ಯೆ ಉಂಟಾಗುವುದು, ಇದರಿಂದ ತುಂಬಾನೇ ಸುಸ್ತು ಅನಿಸುವುದು.
ನಿದ್ರಾಹೀನತೆ ಸಮಸ್ಯೆ
ಕಿಡ್ನಿ ಸರಿಯಾಗಿ ಕೆಲಸ ಮಾಡದಿದ್ದರೆ ಮೂತ್ರ ಪಿಂಡದಲ್ಲಿ ಕಷ್ಮಲ ಸಂಗ್ರಹವಾಗುವುದು. ಇದರಿಂದ ನಿದ್ರಾಹೀನತೆಗೆ ತೊಂದರೆಯಾಗುವುದು.
ತ್ವಚೆ ತುಂಬಾ ಡ್ರೈಯಾಗುವುದು
ತ್ವಚೆ ಡ್ರೈಯಾಗುವುದು ಹಾಗೂ ತ್ವಚೆಯಲ್ಲಿ ತುರಿಕೆ ಇದು ಕಿಡ್ನಿ ಸಮಸ್ಯೆಯ ಲಕ್ಷಣವಾಗಿದೆ. ಕಿಡ್ನಿ ತನ್ನ ಕಾರ್ಯ ಮಾಡಲು ವಿಫಲವಾದಾಗ ಅದರ ಲಕ್ಷಣಗಳು ತ್ವಚೆಯಲ್ಲಿ ಕಂಡು ಬರುವುದು.
ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕೆನಿಸುವುದು
ಕಿಡ್ನಿ ಸಮಸ್ಯೆ ಉಂಟಾದರೆ ಆಗಾಗ ಅದರಲ್ಲೂ ರಾತ್ರಿ ಹೊತ್ತಿನಲ್ಲಿ ಆಗಾಗ ಮೂತ್ರ ವಿಸರ್ಜನೆಗೆ ಉಂಟಾಗುವುದು. ಮೂತ್ರ ಸೋಂಕು ಉಂಟಾಗುವುದು.
ಮೂತ್ರ ನೊರೆ ನೊರೆಯಾಗುವುದು
ಮೂತ್ರದಲ್ಲಿ ತುಂಬಾನೇ ನೊರೆಯಿದ್ದರೆ ಮೂತ್ರದಲ್ಲಿ ಪ್ರೊಟೀನ್ ಅಧಿಕವಿದೆ ಎಂದರ್ಥ.
ಕಣ್ಣುಗಳಲ್ಲಿ ಊತ ಕಂಡು ಬರುವುದು
ಕಿಡ್ನಿಯಲ್ಲಿ ಸಮಸ್ಯೆ ಉಂಟಾದಾಗ ಕಣ್ಣುಗಳಲ್ಲಿ ಊತ ಉಂಟಾಗುವುದು. ಈ ರೀತಿ ಕಂಡು ಬಂದರೆ ಕಿಡ್ನಿ ಹೆಚ್ಚು ಪ್ರೊಟೀನ್ ಮೂತ್ರದಲ್ಲಿ ಬಿಡುತ್ತದೆ ಎಂದರ್ಥ.
ಸ್ನಾಯು ಸೆಳೆತ ಉಂಟಾಗುವುದು
ಕಿಡ್ನಿ ಸಮಸ್ಯೆ ಉಂಟಾದರೆ ದೇಹದಲ್ಲಿ ಎಲೆಕ್ಟ್ರೋಲೈಟ್ ಅಸಮತೋಲನ ಉಂಟಾಗುವುದು, ಇದರಿಂದ ಸ್ನಾಯು ಸೆಳೆತ ಉಂಟಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications









