Latest Updates
-
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ
ಕರ್ನಾಟಕದಲ್ಲಿ ಝಿಕಾ ವೈರಸ್ ಭೀತಿ: ರೋಗ ತಡೆಗಟ್ಟಲು ಈ ಮುನ್ನೆಚ್ಚರಿಕೆವಹಿಸಿ
ಕರ್ನಾಟಕದಲ್ಲಿ ಝಿಕಾ ವೈರಸ್ ಆತಂಕ ಕಾಡಿದೆ. ಚಿಕ್ಕಮಂಗಳೂರಿನಲ್ಲಿ ಝಿಕಾ ವೈರಸ್ ಲಕ್ಷಣಗಳು ಕಂಡು ಬಂದಿದ್ದು ಅವರ ಬ್ಲಡ್ ಸ್ಯಾಂಪಲ್ ಕಲೆಕ್ಟ್ ಮಾಡಲಾಗಿದೆ. ಪ್ರತಿನಿತ್ಯ ನೂರಾರು ಮಂದಿ ಬೆಂಗಳೂರಿನಿಂದ ಚಿಕ್ಕಮಂಗಳೂರಿಗೆ, ಚಿಕ್ಕ ಮಂಗಳೂರಿನಿಂದ ಬೆಂಗಳೂರಿಗೆ ಓಡಾಡುತ್ತಿರುತ್ತಾರೆ. ಆದ್ದರಿಂದ ಝಿಕಾ ವೈರಸ್ ಕುರಿತು ಸರ್ಕಾರ ಕಟ್ಟೆಚ್ಚರವಹಿಸಿದೆ.
ರಾಜ್ಯ ಆರೋಗ್ಯ ಇಲಾಖೆ ಪ್ರಕಾರ ದಿಬ್ಬುರಹಳ್ಳಿಯ 30 ವರ್ಷದ ವ್ಯಕ್ತಿಗೆ, ತಾಲಕ್ಯಾಲಬೆಟ್ಟದ 38ವರ್ಷದ ಮಹಿಳೆಗೆ, ಬಚ್ಚನ ಹಳ್ಳಿಯ 30 ವರ್ಷದ ಮಹಿಳೆಗೆ ಜ್ವರ ಕಾಣಿಸಿಕೊಂಡಿದ್ದು ಝಿಕಾ ವೈರಸ್ ಲಕ್ಷಣಗಳು ಕಂಡು ಬಂದಿರುವುದರಿಂದ ಅವರ ರಕ್ತದ ಸ್ಯಾಂಪಲ್ ಅನ್ನು ಪುಣೆಯ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಿಕೊಡಲಾಗಿದೆ, ವರದಿ ಇನ್ನಷ್ಟೇ ಬರಬೇಕಾಗಿದೆ.

ಈಡಿಸ್ ಎಂಬ ಸೊಳ್ಳೆ ಕಚ್ಚಿದಾಗ ಝಿಕಾ ವೈರಸ್ ಹರಡುತ್ತದೆ, ಈ ಸೊಳ್ಳೆ ಹಗಲಿನಲ್ಲಿ ಕಚ್ಚುವ ಸೊಳ್ಳೆಯಾಗಿದೆ. ಈ ಝಿಕಾ ವೈರಸ್ ತಗುಲಿರುವ ವ್ಯಕ್ತಿಯ ರಕ್ತ ಪಡೆದರೆ ಅಥವಾ ಅವರ ದೇಹದ ದ್ರವ ತಾಗಿದಾಗ, ಲೈಂಗಿಕ ಸಂಪರ್ಕದಿಂದ , ಗರ್ಭಿಣಿಗೆ ಝಿಕಾ ವೈರಸ್ ತಗುಲಿದರೆ ಮಗುವಿಗೆ ಹೀಗೆ ಝಿಕಾ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡುವುದು.
ಈ ಝಿಕಾ ವೈರಸ್ ಲಕ್ಷಣಗಳೇನು?
* ತೀವ್ರ ಜ್ವರ
* ಚರ್ಮದಲ್ಲಿ ಗುಳ್ಳೆಗಳು ಏಳುವುದು
* ಮೈಕೈ ನೋವು
* ಕಣ್ಣುಗಳು ತುಂಬಾನೇ ಕೆಂಪಾಗುವುದು
* ತುಂಬಾನೇ ಸುಸ್ತು
* ತೀವ್ರ ಹೊಟ್ಟೆನೋವು, ವಾಂತಿ, ಬೇಧಿ ಈ ಬಗೆಯ ಸಮಸ್ಯೆ ಉಂಟಾಗುವುದು.
ಝಿಕಾ ವೈರಸ್ ಅಪಾಯಕಾರಿಯೇ?
ಈ ಝಿಕಾ ವೈರಸ್ ಅಪಾಯಕಾರಿಯಾಗಿದ್ದು ಇದಕ್ಕೆ ಯಾವುದೇ ಸೂಕ್ತ ಚಿಕಿತ್ಸೆಯಿಲ್ಲ. ಝಿಕಾ ವೈರಸ್ ತಗುಲಿದರೆ ರೋಗ ಲಕ್ಷಣಗಳಿಗೆ ತಕ್ಕಂತೆ ಚಿಕಿತ್ಸೆ ನೀಡಲಾಗುವುದು. ಝಿಕಾ ವೈರಸ್ ತಗುಲಿದಾಗ ವೈದ್ಯರ ಸೂಚಿಸಿದ ಔಷಧಿ ಜೊತೆಗೆ ತುಂಬಾನೇ ವಿಶ್ರಾಂತಿ ಅವಶ್ಯಕ.
ಝಿಕಾ ವೈರಸ್ ತಡೆಗಟ್ಟುವುದು?
* ಝಿಕಾ ವೈರಸ್ ತಡೆಗಟ್ಟಲು ಸೊಳ್ಳೆಕಚ್ಚದಂತೆ ಜಾಗ್ರತೆವಹಿಸಿ. ಆದ್ದರಿಂದ ಸೊಳ್ಳೆಗಳನ್ನು ತಡೆಗಟ್ಟಲು ತುಂಬಾನೇ ಜಾಗ್ರತೆವಹಿಸಿ.
* ಮನೆ ಸುತ್ತ ಮುತ್ತು ಸೊಳ್ಳೆ ನಿವಾರಕಗಳನ್ನು ಸಿಂಪಡಿಸಿ.
* ಮಕ್ಕಳು, ಗರ್ಭಿಣಿಯರು ಸೊಳ್ಳೆಗಳು ಕಚ್ಚದಂತೆ ತುಂಬು ತೋಳಿನ ಉಡುಪು ಧರಿಸಬೇಕು.
* ಸೊಳ್ಳೆ ಪರದೆ ಒಳಗಡೆ ಮಲಗಿ
* ಕಿಟಿಕಿಗಳಿಗೆ ಸೊಳ್ಳೆ ಪರದೆ ಹಾಕಿಸಿ.
* ಝಿಕಾ ವೈರಸ್ ತಗುಲಿದವರಿಂದ ಅಂತರ ಕಾಯ್ದುಕೊಳ್ಳಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
