Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
45 ದಿನದಲ್ಲಿ 19 ಕೆ.ಜಿ ಇಳಿಸಿಕೊಂಡ 'ಜೇಠಾಲಾಲ್'..! ಜಿಮ್ ಇಲ್ಲ ಡಯಟ್ ಕೂಡ ಮಾಡಿಲ್ಲ!!
ತೂಕ ಇಳಿಸುವುದು ಈಗ ಪ್ರತಿಯೊಬ್ಬರ ಬಯಕೆ, ಆಸೆ ಆಗಿರಲಿದೆ. ಅದ್ರಲ್ಲೂ ನಟ ನಟಿಯರಂತು ತಮ್ಮ ತೂಕ ನಿರ್ವಹಣಗೆ ಬಹಳ ಗಮನ ನೀಡುತ್ತಾರೆ. ಪಾತ್ರಗಳಿಗೆ ತಕ್ಕಂತೆ ಅವರು ತೂಕ ಹೆಚ್ಚಿಸಿಕೊಂಡರೂ ಅವರು ಯಾವಾಗು ಸಣ್ಣದಾಗಿ ಕಾಣಿಸಿಕೊಳ್ಳಬೇಕು ಎಂದುಕೊಳ್ಳುತ್ತಾರೆ. ಹಾಗೆ ಈಗ ಹಿಂದಿ ಕಿರುತೆರೆಯ ಫೇಮಸ್ ನಟ ಕೇವಲ 45 ದಿನದಲ್ಲಿ ಬರೋಬ್ಬರಿ 16 ಕೆ.ಜಿ ಇಳಿಸಿಕೊಂಡು ಅಚ್ಚರಿ ಮೂಡಿಸಿದ್ದರೆ.
ಹಿಂದಿಯ ಜನಪ್ರಿಯ ಸೀರಿಯಲ್ 'ತಾರಕ್ ಮೆಹತಾ ಕಾ ಉಲ್ಟಾ ಚಸ್ಮಾ' ನೀವು ಸಹ ನೋಡಿರಬಹುದು. ದಶಕಗಳಿಂದ ನಂಬರ್ ಒನ್ ಕಾಮಿಡಿ ಸೀರಿಯಲ್ ಆಗಿ ಇಂದಿಗೂ ಮೂಡಿಬರುತ್ತಿದೆ. ಆ ಧಾರಾವಾಹಿಯ ಪ್ರಮುಖ ಪಾತ್ರದಾರಿ ಜೇಠಲಾಲ್ ಪಾತ್ರ ಮಾಡಿರುವ ದಿಲೀಪ್ ಜೋಶಿ ಬಹುತೇಕ ಎಲ್ಲರಿಗೂ ಚಿರಪರಿಚಿತ.

ದಿಲೀಪ್ ಜೋಶಿ ಮೊದಲಿನಿಂದಲೂ ತೂಕ ಹೆಚ್ಚಿಸಿಕೊಂಡಿದ್ದರು. ಅವರ ಪಾತ್ರಕ್ಕೆ ಅನುಗುಣವಾಗಿ ತೂಕ ಹೆಚ್ಚಿಸಿಕೊಂಡಿದ್ದರು. ಸದ್ಯ ಈಗ ತೂಕ ಇಳಿಸಿಕೊಂಡಿದ್ದಾರೆ. ಅದ್ರಲ್ಲೂ ಕೇವಲ 45 ದಿನದಲ್ಲಿ ಸುಮಾರು 16 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ಇನ್ನೂ ಅಚ್ಚರಿ ಅಂದರೆ ಅವರು ಜಿಮ್, ಡಯಟ್ ಏನನ್ನೂ ಮಾಡದೆಯೇ ತೂಕ ಇಳಿಸಿಕೊಂಡಿದ್ದಾರೆ.
ಹಾಗಾದ್ರೆ ದಿಲೀಪ್ ಜೋಶಿ ಸುಲಭವಾಗಿ ತೂಕ ಇಳಿಸಿಕೊಂಡಿದ್ದು ಹೇಗೆ?
ಇತ್ತೀಚಿಗೆ ದಿಲೀಪ್ ಜೋಶಿ ಒಂದು ಸಂದರ್ಶನದಲ್ಲಿ ತೂಕ ಇಳಿಸಿಕೊಂಡಿದ್ದು ಹೇಗೆ ಅನ್ನೋದನ್ನು ಹೇಳಿಕೊಂಡಿದ್ದಾರೆ ಸುಲಭವಾಗಿ ಹೇಗೆ ತೂಕ ಇಳಿಸಿಕೊಂಡಿರಿ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಅವರು, ತೂಕ ಇಳಿಸಿಕೊಳ್ಳಲು ನಿರ್ಧರಿಸಿದಾಗಿನಿಂದ ವಾಕಿಂಗ್ ಆರಂಭಿಸಿದ್ದರಂತೆ. ಶೂಟಿಂಗ್ ಮುಗಿದ ನಂತರ ಅವರು ಹತ್ತಿರದ ಈಜು ಕ್ಲಬ್‌ಗೆ ಬಟ್ಟೆ ಬದಲಾಯಿಸಲು ನಡೆದು ಹೋಗುತ್ತಿದ್ದರು. ಹಾಗೆ ಮಳೆಯಲ್ಲಿಯೂ ಸಹ ಒಬೆರಾಯ್ ಹೋಟೆಲ್‌ನಿಂದ ಮರೀನ್ ಡ್ರೈವ್‌ಗೆ ಓಡುತ್ತಿದ್ದರು ಎಂದು ಅವರು ಬಹಿರಂಗಪಡಿಸಿದರು.
ದಿಲೀಪ್ ಜೋಶಿ ಅವರು ಜಿಮ್ ಹಾಗೆ ಊಟದ ವಿಚಾರದಲ್ಲಿ ರಾಜಿ ಆಗಲಿಲ್ಲವಂತೆ. ಬದಲಿಗೆ ಬೆಳಗ್ಗೆ ವಾಕಿಂಗ್, ಸಮಯಕ್ಕೆ ಸರಿಯಾಗಿ ಊಟ, ನಿದ್ರೆ ಮಾಡುವುದು ಮುಖ್ಯ ಎಂದಿದ್ದಾರೆ. ಹಾಗೆ ಅವರು ಶೂಟಿಂಗ್ ಬ್ರೇಕ್‌ನಲ್ಲಿ ಏನನ್ನೂ ಸೇವಿಸುತ್ತಿರಲಿಲ್ಲವಂತೆ. ಹಾಗೆ ರಾತ್ರಿ ಊಟ ಬೇಗ ಮುಗಿಸುತ್ತಿದ್ದರಂತೆ. ಹಾಗೆ ಹೆಚ್ಚು ನೀರು ಕುಡಿಯಬೇಕು ಎಂದು ಅವರು ಹೇಳುತ್ತಾರೆ. ಇದರಿಂದ 45 ದಿನದಲ್ಲಿ ಅವರು 16 ಕೆ.ಜಿ ಇಳಿಸಿಕೊಂಡಿದ್ದಾರೆ.
ಬಾಲಿವುಡ್‌ನಲ್ಲಿ ನಟ ನಟಿಯರು ತೂಕ ಇಳಿಸಿಕೊಳ್ಳಲು ಯಾವಾಗಲು ಜಿಮ್, ಡಯಟ್, ವ್ಯಾಯಾಮ, ಫಿಟ್‌ನೆಸ್ ಹಿಂದೆ ಬಿದ್ದಿರುತ್ತಾರೆ. ಆದ್ರೆ ದಿಲೀಪ್ ಜೋಶಿ ಸುಲಭವಾಗಿ ತೂಕ ಇಳಿಸಿರುವುದನ್ನು ಕಂಡು ಎಲ್ಲರೂ ಅಚ್ಚರಿಗೊಳಗಾಗಿದ್ದಾರೆ. ದಿಲೀಪ್ ಜೋಶಿ ಈ ಮೊದಲು ಬಹಳ ಸಣ್ಣಗಿದ್ದರು ಆದ್ರೆ ತಾರಕ್ ಮೆಹ್ತಾ ಕಾ ಉಲ್ಟ ಚಸ್ಮಾ ಮೂಲಕ ಅವರು ಜೇಠಾಲಾಲ್ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡರು.
ನಾವು ಈ ಹಿಂದೆ ನಟ ಮಾಧವನ್ ಕೂಡ ತೂಕ ಇಳಿಸಿಕೊಂಡಿದ್ದ ಕಾರಣ ಹೇಳಿಕೊಂಡಿದ್ದರು ಅವರು, ಇಂತಹದ್ದೇ ವಿಧಾನದ ಮೂಲಕ ಒಂದು ತಿಂಗಳಲ್ಲಿ ತೂಕ ಇಳಿಸಿಕೊಂಡಿದ್ದರು. ಅವರು ಕೂಡ ಉಪವಾಸ ಮಾಡದೆ, ಜಿಮ್ ಹೋಗದೆ ತೂಕ ಇಳಿಸಿಕೊಂಡಿದ್ದರು. ಇತ್ತೀಚಿಗೆ ಸುಲಭವಾಗಿ ತೂಕ ಇಳಿಸುವಂತಹ ವಿಧಾನವನ್ನು ಎಲ್ಲರೂ ಅನುಸರಿಸುತ್ತಿದ್ದಾರೆ. ಹಾಗೆ ದುಬಾರಿ ಚಿಕಿತ್ಸೆಗಳು, ಡಯೆಟ್, ಸ್ಟಿರಾಯ್ಡ್‌ಗಳ ಸೇವನೆಯ ಮೊರೆ ಹೋಗದೆ ಈ ರೀತಿ ಆರೋಗ್ಯಕರ ಶೈಲಿಯಲ್ಲಿ ಸುಲಭವಾಗಿ ತೂಕ ಇಳಿಸಿ.
ಇದರಿಂದ ಆರೋಗ್ಯದ ಮೇಲೂ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ಹಾಗೆ ಕಡಿಮೆ ಸಮಯದಲ್ಲಿ ತೂಕ ಇಳಿಸಿದ ತೃಪ್ತಿಯು ಇರಲಿದೆ.



Click it and Unblock the Notifications
