ನವಜಾತ ಶಿಶು ಕಾಮಾಲೆಗೆ ತುತ್ತಾಗುವುದು ಹೇಗೆ? ಚಿಕಿತ್ಸೆ ಹೇಗಿರಬೇಕು?

ಮಕ್ಕಳ ಆರೋಗ್ಯ ಕಾಪಾಡಲು ಎಷ್ಟು ಕಾಳಜಿ ವಹಿಸಿದರು ಸಾಲದು ಎನ್ನುವಂತಾಗಿದೆ. ಅದರಲ್ಲೂ 3 ವರ್ಷದ ಕೆಳಗಿನ ಮಕ್ಕಳು ವೇಗವಾಗಿ ಸಣ್ಣ ಪುಟ್ಟ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಹೀಗಾಗಿ ಅವರ ಆರೋಗ್ಯ ಕಾಪಾಡುವುದು ಸವಾಲಿನ ಕೆಲಸವಾಗಿರುತ್ತದೆ.

ಇನ್ನು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕಾಯಿಲೆ ಎಂದರೆ ಶೀತ, ಕೆಮ್ಮು, ಜ್ವರ ಇದರ ಜೊತೆ ಕಾಮಾಲೆ ರೋಗ ಸಹ ಹೆಚ್ಚಾಗಿ ಕಂಡುಬರುತ್ತದೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ.

ಅಷ್ಟಕ್ಕು ನವಜಾತ ಶಿಶುವಿನಲ್ಲಿ ಕಾಮಾಲೆ ರೋಗ ಕಾಣಿಸಿಕೊಳ್ಳೋದಕ್ಕೆ ಕಾರಣ ಮಗುವಿನ ರಕ್ತದಲ್ಲಿ ಬಿಲುರುಬೀನ್ ಅಂಶ ಹೆಚ್ಚಿನ ಪ್ರಮಾಣದಲ್ಲಿದ್ದಾಗ ಹೀಗಾಗುತ್ತದೆ. ಯಕೆ ರಾಷ್ಟ್ರೀಯ ಆರೋಗ್ಯ ಸಮೀಕ್ಷೆಯ ಪ್ರಕಾರ ಹುಟ್ಟಿದ 10 ರಲ್ಲಿ 6 ಮಕ್ಕಳು ಕಾಮಾಲೆ ರೋಗದಿಂದ ಬಳಲುತ್ತಾರಂತೆ. 10 ರಲ್ಲಿ 8 ಶಿಶುಗಳು ಗರ್ಭಧಾರಣೆಯ 37 ನೇ ವಾರದ ಮೊದಲು ಅಕಾಲಿಕವಾಗಿ ಜನಿಸುತ್ತವೆ. ಇನ್ನೂ ಆರೋಗ್ಯ ತಜ್ಞರ ಪ್ರಕಾರ 20 ರಲ್ಲಿ 1 ಮಗುವಿಗೆ ಮಾತ್ರ ಚಿಕಿತ್ಸೆಯ ಅಗತ್ಯವಿದ್ಯಂತೆ.

Jaundice Can Cause New Born Babies To Suffer

ನವಜಾತ ಶಿಶುಗಳಲ್ಲಿ ಚಾಂಡಿಸ್ ಬರಲು ಕಾರಣವೇನು?

ಹೆಚ್ಚಿನ ನವಜಾತ ಶಿಶುಗಳಲ್ಲಿ ಜಾಂಡಿಸ್ ಕಾಣಿಸಿಕೊಳ್ಳುತ್ತದೆ. ಏಕೆಂದರೆ ಮಕ್ಕಳು ಜನಿಸುವಾಗ ಅವರಲ್ಲಿ ವಯಸ್ಕರಿಗಿಂತ ಹೆಚ್ಚಿನ ರಕ್ತ ಕಣಗಳಿರುತ್ತದೆ. ರಕ್ತ ಕಣಗಳು ಹೆಚ್ಚು ಕಾಲ ಉಳಿಯುವುದಿಲ್ಲ ಮತ್ತು ದೇಹದಲ್ಲಿ ಇದು ಹೆಚ್ಚು ಬಿಲಿರುಬಿನ್ ಅನ್ನು ಉಂಟುಮಾಡುತ್ತದೆ. ಮಗು ಜನಿಸಿದ 2-4 ದಿನಗಳ ನಂತರ ಕಾಮಾಲೆ ರೋಗ ಕಾಣಿಸಿಕೊಳ್ಳುತ್ತದೆ. ಆದರೆ ಮುಂದಿನ ಎರಡು ವಾರಗಳಲ್ಲಿ ಹೆಚ್ಚಿನ ಮಕ್ಕಳು ಗುಣಮುಖರಾಗುತ್ತಾರೆ. ಕೆಲವೇ ಕೆಲವು ಮಕ್ಕಳಿಲ್ಲಿ ಮಾತ್ರ ಈ ರೋಗ ತೀವ್ರ ಸ್ವರೂಪಕ್ಕೆ ತಿರುಗುತ್ತದೆ.

ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಶಿಶುಗಳು ಅಕಾಲಿಕವಾಗಿ ಜನಿಸಿದರೆ ಅಥವಾ ನಿಯಮಿತವಾಗಿ ಸ್ತನ್ಯಪಾನ ಮಾಡದಿದ್ದರೆ ಕಾಮಾಲೆ ರೋಗ ಉಂಟಾಗುವ ಸಾಧ್ಯತೆಯಿದೆ. ಮಗುವಿನ ರಕ್ತದ ಗುಂಪು ತಾಯಿಯ ರಕ್ತಕ್ಕೆ ಹೊಂದಿಕೆಯಾಗದಿದ್ದರೆ ಕೂಡ ಈ ರೀತಿ ಆಗುತ್ತದೆ.

ಕಾಮಾಲೆ ರೋಗದ ಲಕ್ಷಣಗಳೇನು?

ನವಜಾತ ಶಿಶುಗಳಲ್ಲಿ ಕಾಮಾಲೆ ರೋಗದ ಲಕ್ಷಣ ಯಾವುದೆಂದರೆ ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು. ಮೊದಲು ಮುಖದ ಮೇಲಿಂದ ಪ್ರಾರಂಭವಾಗಿ ನಂತರ ಎದೆ ಮತ್ತು ಹೊಟ್ಟೆಯ ಮೇಲೆ ಕಾಣಿಸಿಕೊಳ್ಳುತ್ತದೆ. ನಂತರ ಕಾಲುಗಳು. ಚರ್ಮದ ಹೊರತಾಗಿ ಮಗುವಿನ ಕಣ್ಣುಗಳ ಬಿಳಿ ಭಾಗವು ಹಳದಿ ಬಣ್ಣಕ್ಕೆ ತಿರುಗುತ್ತದೆ.

ಈ ಸಮಯದಲ್ಲಿ ದೇಹದಲ್ಲಿ ಬಿಲಿರುಬಿನ್ ಮಟ್ಟ ಹೆಚ್ಚಾಗೋದ್ರಿಂದ ಮಗು ಹೆಚ್ಚಿನ ನಿದ್ರೆ ಮತ್ತು ಗಡಿಬಿಡಿಗೆ ಒಳಗಾಗುತ್ತದೆ. ಇನ್ನೂ ಮಕ್ಕಳು ಕಪ್ಪಿದ್ದರೆ ಕಪ್ಪು ಚರ್ಮದ ಮೇಲೆ ಕಾಮಾಲೆಯನ್ನು ಗುರುತಿಸುವುದು ಕಷ್ಟವಾಗಬಹುದು. ಇಂತಹ ಸಮಯದಲ್ಲಿ ಕಣ್ಣು ನೋಡಿ ಪತ್ತೆ ಹಚ್ಚಬಹುದು.


ವೈದ್ಯರ ಬಳಿ ಯಾವಾಗ ಹೋಗಬೇಕು?

ನವಜಾತ ಶಿಶುಗಳಲ್ಲಿ ಕಾಮಾಲೆ ರೋಗ ಕಾಣಿಸಿಕೊಳ್ಳುವುದು ಸಾಮಾನ್ಯ. ಹೀಗಂತ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಕೆಲವೊಂದು ಸಲ ಎರಡು ವಾರಗಳ ನಂತರ ಅದರಷ್ಟಕ್ಕೆ ಕಡಿಮೆಯಾಗುತ್ತದೆ. ಆದರೆ ಇನ್ನೂ ಕೆಲವು ಮಕ್ಕಳಲ್ಲಿ ಇದು ಗಂಭೀರವಾಗುತ್ತದೆ. ಮಗುವಿನ ಆರೋಗ್ಯ ತುಂಬಾನೇ ಹದಗೆಡುತ್ತದೆ. ಮಗು ಎದೆಹಾಲನ್ನೂ ಕುಡಿಯೋದಿಲ್ಲ. ಮಗು ಇಡೀ ದಿನ ಮಲಗಿರುತ್ತದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸೋದು ಉತ್ತಮ.

ಮಕ್ಕಳಲ್ಲಿ ಕಾಮಾಲೆ ರೋಗದ ಅಪಾಯವನ್ನು ತಡೆಗಟ್ಟುವುದು ಹೇಗೆ?

ಸ್ತನ್ಯಪಾನ ಮಾಡುವ ಶಿಶುಗಳು ಜೀವನದ ಮೊದಲ ಹಲವಾರು ದಿನಗಳವರೆಗೆ ದಿನಕ್ಕೆ ಎಂಟರಿಂದ 12 ಬಾರಿ ಸ್ತನ್ಯಪಾನ ಮಾಡಿಸಬೇಕು. ಇದರಿಂದ ಮಕ್ಕಳು ಆರೋಗ್ಯವಾಗಿರಲು ಸಾಧ್ಯವಾಗುತ್ತದೆ.

ಕಾಮಾಲೆ ರೋಗಕ್ಕೆ ಚಿಕಿತ್ಸೆ ಏನು?

ನಿಮ್ಮ ನವಜಾತ ಶಿಶುವಿಗೆ ಈಗಾಗಲೇ ಕಾಮಾಲೆ ಕಾಣಿಸಿಕೊಂಡಿದ್ದರೆ ನಿರ್ಲಕ್ಷ ಮಾಡಬೇಡಿ. ಇಲ್ಲದೆ ಮನಮದ್ದು ಮಾಡಲು ಹೋಗಬೇಡಿ. ಮನೆಮದ್ದು ಮಾಡುವುದಾದರೆ ಅದು ಕೇವಲ ಪ್ರಾಥಮಿಕ ಚಿಕಿತ್ಸೆಯಾಗಿರಲಿ. ಆದರೆ ವೈದ್ಯರ ಬಳಿ ತೆರಳುವ ಬದಲು ಮನೆಮದ್ದು ಬಳಸಿ ಕಾಮಾಲೆಗೆ ಚಿಕಿತ್ಸೆ ನೀಡುವ ಸಾಹಸಕ್ಕೆ ಕೈಹಾಕಬೇಡಿ. ಕಾಮಾಲೆ ಬಂದಾಗ ಮಕ್ಕಳಿಗೆ ಹೆಚ್ಚು ಸ್ತನಪಾನ ಮಾಡಿಸಬೇಕು. ತಾಯಿಯ ಎದೆಹಾಲಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ.ಜೊತೆಗೆ ವೈದ್ಯರು ಆಗಾಗ್ಗೆ ಆಹಾರ ಅಥವಾ ಪೂರಕವನ್ನು ಶಿಫಾರಸು ಮಾಡಬಹುದು. ನೀಲಿ-ಹಸಿರು ವರ್ಣಪಟಲದಲ್ಲಿ ಬೆಳಕನ್ನು ಹೊರಸೂಸುವ ವಿಶೇಷ ದೀಪದ ಅಡಿಯಲ್ಲಿ ಮಗುವನ್ನು ಇರಿಸುವುದು. ರೋಗ ತೀವ್ರ ಸ್ವರೂಪಕ್ಕೆ ತಿರುಗಿದಾಗ ಮಗುವಿಗೆ ರಕ್ತ ವರ್ಗಾವಣೆಯ ಅಗತ್ಯವಿರಬಹುದು.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Jaundice Can Cause New Born Babies To Suffer: What Should Be The Treatment In Kannada

Jaundice is a common problem in children. So how do children get jaundice? Find out what causes jaundice and how to treat it.
Story first published: Thursday, January 25, 2024, 17:30 [IST]
X
Desktop Bottom Promotion