Latest Updates
-
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ
ದಿನದಲ್ಲಿ ಒಮ್ಮೆಯಾದರೂ ನಗಲೇಬೇಕೆಂದು ಕಾನೂನು ಮಾಡಿದ ಜಪಾನ್, ಇದು ಖಂಡಿತ ನಗುವ ವಿಷಯವಲ್ಲ
ಜಪಾನಿಯರು ದಿನದಲ್ಲಿ ಒಂದು ಬಾರಿಯಾದರು ಮನಸ್ಸು ಬಿಚ್ಚಿ ನಗಬೇಕು ಎಂಬ ಕಾನೂನು ಅನ್ನು ಜಪಾನ್ ಕಾನೂನು ತಂದಿದೆ, ಇದು ಕೇಳುವಾಗ ನಮಗೆ ನಗು ಬರಬಹುದು, ಆದರೆ ಜಪಾನ್ ಅಲ್ಲಿಯ ಜನರ ಮಾನಸಿಕ, ದೈಹಿಕ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ಇಂಥದ್ದೊಂದು ಕಾನೂನು ತಂದಿದೆ.

ಅಂದ ಹಾಗೆ ನೀವು ದಿನದಲ್ಲಿ ಎಷ್ಟು ಬಾರಿ ಮನಸ್ಸು ಬಿಚ್ಚಿ ನಗುತ್ತೀರಿ, ದಿನದಲ್ಲಿ ನಾನು ತುಂಬಾ ಸಲ ನಗುತ್ತೇನೆ ಎಂದು ನೀವು ಹೇಳುವುದಾದರೆ ನೀವು ಲಕ್ಕಿ ಕಣ್ರಿ, ಏಕೆಂದರೆ ಎಷ್ಟೋ ಜನ ನಗುವುದನ್ನೇ ಮರೆತು ಹೋಗುತ್ತಿದ್ದಾರೆ. ಬೆಳಗ್ಗೆ ಎದ್ದು ಗಡಿಬಿಡಿಯಿಂದ ಕೆಲಸಕ್ಕೆ ಓಡುವುದು, ಕೆಲಸದ ಜಾಗದಲ್ಲಿ ಮೀಟಿಂಗ್, ಟಾರ್ಗೆಟ್ ಅಂತ ಒತ್ತಡ, ಕೆಲಸದಿಂದ ಮರಳುವಾಗ ಅದೇ ತಲೆಯಲ್ಲಿ, ಮನೆಗೆ ಬಂದಾಗ ಅಲ್ಲಿಯೂ ಕೆಲವೊಂದು ಸಮಸ್ಯೆಗಳು ಹೀಗಾಗಿ ಜನ ನಗುವುದನ್ನೇ ಮರೆತಿದ್ದಾರೆ, ನಿಜ ತಾನೆ?
ಆದರೆ ಗೊತ್ತಾ ನಾವು ಮನಸ್ಸು ಬಿಚ್ಚಿ ದಿನದಲ್ಲಿ ಒಮ್ಮೆಯಾದರೂ ನಗಬೇಕು ಕಣ್ರಿ, ಈ ರೀತಿ ನಗುವುದರಿಂದ ಈ ಪ್ರಯೋಜನಗಳಿವೆ ನೋಡಿ:
ಇಡೀ ದೇಹಕ್ಕೆ ವಿಶ್ರಾಂತಿ ನೀಡುತ್ತದೆ: ಹೌದು ನೀವು ಖುಷಿಯಿಂದ ನಕ್ಕಾಗ ಇಡೀ ದೇಹದ ಸ್ನಾಯುಗಳು ವಿಶ್ರಾಂತಿಯನ್ನು ಪಡುತ್ತದೆ, ನಮ್ಮಲ್ಲಿನ ಒತ್ತಡ ಹೊರದೂಡಲ್ಪಡುತ್ತದೆ. ನೀವು ಒಮ್ಮೆ ನಕ್ಕರೆ ನಿಮ್ಮ ಸ್ನಾಯುಗಳು 45 ನಿಮಿಷ ರಿಲ್ಯಾಕ್ಸ್ ಆಗುತ್ತದೆ.
ನಗು ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ನಕ್ಕಾಗ ಮಾನಸಿಕ ಒತ್ತಡ ಕಡಿಮೆಯಾಗುವುದು, ಖುಷಿಯ ಹಾರ್ಮೋನ್‌ಗಳು ಉತ್ಪತ್ತಿಯಾಗುವುದು, ಅಲ್ಲದೆ ನಮ್ಮಲ್ಲಿ ರೋಗನಿರೋಧಕ ಕಣಗಳು ರೋಗಾಣುಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಪಡೆಯುತ್ತದೆ, ಹಾಗಾಗಿ ರೋಗ ತಡೆಗಟ್ಟಲು ಕೂಡ ಸಹಕಾರಿಯಾಗಿದೆ.
ಎಂಡೋಪ್ರಿನ್ಸ್ ಉತ್ಪತ್ತಿ ಹೆಚ್ಚಿಸುತ್ತದೆ: ಎಂಡೋಪ್ರಿನ್ಸ್ ಎಂಬುವುದು ಖುಷಿಯ ಹಾರ್ಮೋನ್, ಈ ಹಾರ್ಮೋನ್‌ಗಳ ಉತ್ಪತ್ತಿ ಚೆನ್ನಾಗಿ ಆದರೆ ಮನಸ್ಸು, ದೇಹದಲ್ಲಿ ನವಚೈತನ್ಯ ಮೂಡುವುದು, ನಾವು ಖುಷಿಯಾಗಿರುತ್ತೀರಿ.
ತೂಕ ನಿಯಂತ್ರಣಕ್ಕೆ ಸಹಕಾರಿ: ನೀವು ನಗುತ್ತಾ ಖುಷಿ ಖುಷಿಯಿಂದ ಇದ್ದರೆ ಮೈ ತೂಕ ನಿಯಂತ್ರಣದಲ್ಲಿರುತ್ತದೆ. ಯಾರು ತುಂಬಾ ಖಿನ್ನತೆಗೆ ಒಳಗಾಗಿರುತ್ತಾರೋ ಅವರ ಮೈ ತೂಕ ತುಂಬಾನೇ ಹೆಚ್ಚಾಗುವುದು. ಹಾಗಾಗಿ ನಗು ನಗುತ್ತಾ ಇರುವುದರಿಂದ ಖಿನ್ನತೆ ಕಾಡುವುದಿಲ್ಲ, ಮೈ ತೂಕ ಕೂಡ ಆರೋಗ್ಯಕರವಾಗಿರುತ್ತದೆ. ಹಾಗಾಗಿ ತೂಕ ಇಳಿಕೆಯ ಬಗ್ಗೆ ಯೋಚಿಸುತ್ತಿದ್ದರೆ ನೀವು ಖುಷಿಯಾಗಿ ಇರುವುದರ ಕಡೆಯೂ ಗಮನಹರಿಸಬೇಕು.
ನಗು ಜನರನ್ನು ನಿಮ್ಮತ್ತ ಸೆಳೆಯುತ್ತದೆ: ನೀವು ನಗು ನಗುತ್ತಾ ಇದ್ದರೆ ಜನರು ಕೂಡ ನಿಮ್ಮನ್ನು ಮಾತನಾಡಿಸಲು ಇಷ್ಟಪಡುತ್ತಾರೆ, ಆದರೆ ನೀವು ಮುಖವನ್ನು ಗಂಟಾಕಿಕ್ಕೊಂಡು ಕೂತರೆ ನಿಮ್ಮನ್ನು ಮಾತನಾಡಿಸಲು ಯಾರು ಬರುವುದಿಲ್ಲ, ಹಾಗಾಗಿ ನಗುವೇ ಮುಖದ ಆಭರಣವಾಗಿದೆ. ಹಾಗಾಗಿ ನಗು ನಗುತ್ತಾ ಯಾರು ಇರುತ್ತಾರೋ ಅವರು ತಮ್ಮ ಸುತ್ತ ಇರುವವರನ್ನು ಕೂಡ ಖುಷಿಯಾಗಿ ಇಡುತ್ತಾರೆ. ಇಂಥವರನ್ನು ಎಲ್ಲರೂ ಇಷ್ಟಪಡುತ್ತಾರೆ ಕೂಡ.
ನಗು-ನಗುತ್ತಾ ಇದ್ದಾಗ ನಮ್ಮಲ್ಲಿ ಕೋಪ ಕಡಿಮೆಯಾಗುವುದು: ನೀವು ಕೋಪದ ಸ್ವಭಾವದವರೇ, ಪಟ್ ಅಂತ ಕೋಪ ಬರುವುದೇ ನಗುವುದನ್ನು ಅಭ್ಯಾಸ ಮಾಡಿ ಕೋಪ ಕಡಿಮೆಯಾಗುತ್ತಾ ಹೋಗುವುದು.
ಸುಮ್ಮನೆ ನಗಲು ಸಾಧ್ಯವೇ?
ಹೌದು ಸುಮ್ಮನೆ ನಗಲು ಸಾಧ್ಯವೇ ಖಂಡಿತ ಇಲ್ಲ, ನಾವು ನಗಬೇಕೆಂದರೆ ನಗುವಂಥ ವಿಷಯವಿರಬೇಕು? ನಾವು ಕುಟುಂಬದ ಜೊತೆ ಕೂತು ಮಾತನಾಡುವುದು , ಹರಟೆ ಹೊಡೆಯುವುದು ಮಾಡಿದಾಗ, ಸ್ನೇಹಿತರ ಜೊತೆ ಸ್ವಲ್ಪ ಸಮಯ ಕಳೆದಾಗ, ಮಕ್ಕಳ ಜೊತೆ ಆಟವಾಡಿದಾಗ, ಮನೆಯಲ್ಲಿ ಸಾಕು ಪ್ರಾಣಿಗಳಿರುತ್ತದೆ ಅಲ್ವಾ ಅವುಗಳ ಜೊತೆ ಆಟವಾಡಿದಾಗ ನಾವು ಖುಷಿಯಾಗಿರುತ್ತೇವೆ, ನಗುತ್ತೇವೆ, ಹಾಗಾಗಿ ನಗುವಂಥ ವಾತಾವರಣ ನಾವೇ ಸೃಷ್ಟಿಸಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
