Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಳಿಗಾಲದಲ್ಲಿ ಈ ಹಣ್ಣುಗಳ ಸೇವನೆ ಬಿಡುವುದು ಉತ್ತಮ..! ಯಾವುದೆಲ್ಲಾ ಗೊತ್ತಾ?
ಹಣ್ಣುಗಳು ದೇಹದ ಆರೋಗ್ಯಕ್ಕೆ ಬಹಳ ಮುಖ್ಯ ಅನ್ನುವುದನ್ನು ನಾವು ತಿಳಿದಿದ್ದೇವೆ. ಹಣ್ಣುಗಳು ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರಿಂದ ಹಿಡಿದು, ದೇಹಕ್ಕೆ ಅಗತ್ಯವಾಗಿ ಬೇಕಾದ ವಿಟಮಿನ್‌ಗಳು, ಫೋಷಕಾಂಶಗಳನ್ನು ನೀಡುತ್ತವೆ. ಆದ್ರೆ ಕೆಲವೊಂದು ಹಣ್ಣುಗಳನ್ನು ಯಾವ ಸಮಯದಲ್ಲಿ ಸವಿಯಬೇಕು ಯಾವ ಸವಿಯಬಾರದು ಎಂಬುದು ನಿಮಗೆ ಗೊತ್ತಾ?
ಚಳಿಗಾಲದಲ್ಲಿ ನಾವು ಕೆಲವೊಂದು ಹಣ್ಣುಗಳ ಸೇವನೆ ಬಿಡಬೇಕು ಎಂಬ ಸತ್ಯ ನಿಮಗೆ ಗೊತ್ತಾ? ಚಳಿಗಾಲದಲ್ಲಿ ಕೆಲವೊಂದು ಹಣ್ಣುಗಳು ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆಯಂತೆ. ಕೆಲವು ಹಣ್ಣುಗಳ ಸೇವನೆಯು ಅವುಗಳ ತಂಪಾಗಿಸುವ ಗುಣಲಕ್ಷಣಗಳಿಂದಾಗಿ ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಅಥವಾ ಶೀತ ವಾತಾವರಣದಲ್ಲಿ ಹಾಳಾಗುವ ಸಾಧ್ಯತೆ ಹೆಚ್ಚಾಗುತ್ತದೆ.

ಹಾಗಾದ್ರೆ ನಾವಿಂದು ಚಳಿಗಾಲದಲ್ಲಿ ಯಾವ ಹಣ್ಣುಗಳ ಸವಿಯುವುದರಿಂದ ದೂರ ಇರಬೇಕು? ಯಾವ ಹಣ್ಣನ್ನು ನಾವು ಚಳಿಗಾಲದಲ್ಲಿ ಸವಿಯುವುದು ಬಿಡಬೇಕು ಎಂಬುದನ್ನು ತಿಳಿದುಕೊಳ್ಳೋಣ.
ಕಲ್ಲಂಗಡಿ
ಕಲ್ಲಂಗಡಿ ಒಂದು ಹೈಡ್ರೇಟಿಂಗ್ ಹಣ್ಣಾಗಿದ್ದು, ಅದರ ತಂಪಾಗಿಸುವ ಪರಿಣಾಮದಿಂದಾಗಿ ಬೇಸಿಗೆಯಲ್ಲಿ ಸವಿಯುವುದು ಬಹಳ ಉತ್ತಮ. ಇದರ ನೀರಿನಾಂಶವು ಬೇಸಿಗೆಯಲ್ಲಿ ನಿಮ್ಮ ದೇಹಕ್ಕೆ ಮರಳಿ ಶಕ್ತಿ ತುಂಬುತ್ತದೆ, ಆದರೆ ಚಳಿಗಾಲದಲ್ಲಿ ಈ ಕಲ್ಲಂಗಡಿ ನಿಮ್ಮ ದೇಹದ ಉಷ್ಣತೆಯನ್ನು ಮತ್ತಷ್ಟು ಕಡಿಮೆ ಮಾಡಲಿದೆ. ಇದು ಶಿತ, ಉಸಿರಾಟ ಸಮಸ್ಯೆ ಹೆಚ್ಚಿಸಲು ಕಾರಣವಾಗಬಹುದು. ಹಾಗೆ ಜ್ವರ ಹಾಗೂ ಗಂಟಲು ನೀವು ಇರುವವರು ಚಳಿಗಾಲದಲ್ಲಿ ಈ ಕಲ್ಲಂಗಡಿ ಸವಿಯುವುದು ಉತ್ತಮವಲ್ಲ.
ಬಾಳೆಹಣ್ಣುಗಳು
ಬಾಳೆಹಣ್ಣು ಎಲ್ಲಾ ಕಾಲದಲ್ಲೂ ಸವಿಯಬಹುದು ಎಂದು ನೀವು ತಿಳಿದಿದ್ದರೆ ಅದು ತಪ್ಪು, ಬಾಳೆಹಣ್ಣನ್ನು ಕೂಡ ಬೇಸಿಗೆಯನ್ನು ಹೊರತುಪಡಿಸಿ ಚಳಿಗಾಲ ಮತ್ತು ಮಳೆಗಾಲದಲ್ಲಿ ಸವಿಯುವುದು ಉತ್ತಮವಲ್ಲ. ವಿಶೇಷವಾಗಿ ಶೀತಗಳು, ಕೆಮ್ಮು ಅಥವಾ ಉಸಿರಾಟದ ಸಮಸ್ಯೆಗಳಿಗೆ ಒಳಗಾಗುವವರು ಬಾಳೆಹಣ್ಣನ್ನು ಚಳಿಗಾಲದಲ್ಲಿ ಸವಿಯಬಾರದಂತೆ.
ಸಿಟ್ರಸ್ ಹಣ್ಣುಗಳು
ಸಿಟ್ರಿಕ್ ಆಮ್ಲ ಹೊಂದಿರುವಂತಹ ಕಿತ್ತಳೆ, ನಿಂಬೆಹಣ್ಣು ಮತ್ತು ದ್ರಾಕ್ಷಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಆದರೆ ಅವುಗಳ ಆಮ್ಲೀಯ ಗುಣವು ಚಳಿಗಾಲದಲ್ಲಿ ಅತಿಯಾಗಿ ಸೇವಿಸಿದರೆ ಗಂಟಲನ್ನು ಕೆರಳಿಸುತ್ತದೆ. ಶೀತ-ಸಂಬಂಧಿತ ಸಮಸ್ಯೆಗಳ ಹೊಂದಿರುವವರು ಈ ಹಣ್ಣುಗಳಿಂದ ದೂರ ಇರುವುದು ಒಳಿತು.
ಅನಾನಸ್
ಅನಾನಸ್ ಬ್ರೋಮೆಲಿನ್ ಅನ್ನು ಹೊಂದಿರುತ್ತದೆ. ಅದರ ತಂಪಾಗಿಸುವ ಗುಣಲಕ್ಷಣಗಳು ಮತ್ತು ಆಮ್ಲೀಯ ಗುಣವು ಗಂಟಲನ್ನು ಕೆರಳಿಸಬಹುದು, ಅದರಲ್ಲೂ ಚಳಿಗಾಲದಲ್ಲಿ ಇದು ನಿಮ್ಮ ಸಮಸ್ಯೆ ಹೆಚ್ಚಾಗಿಸಬಹುದು.
ಪಪ್ಪಾಯಿ
ಪಪ್ಪಾಯಿಯು ಪೌಷ್ಟಿಕವಾಗಿದ್ದರೂ, ಸಾಂಪ್ರದಾಯಿಕ ಔಷಧ ವ್ಯವಸ್ಥೆಗಳಲ್ಲಿ ಇದನ್ನು ತಂಪಾಗಿಸುವ ಹಣ್ಣು ಎಂದು ವರ್ಗೀಕರಿಸಲಾಗಿದೆ. ಇದು ದೇಹದ ಉಷ್ಣಾಂಶವನ್ನು ಕೆಳಗಿಳಿಸುತ್ತದೆ. ಹೀಗಾಗಿ ಚಾಳಿಗಾಲದಲ್ಲಿ ನಿಮಗೆ ಯಾವುದಾದರು ತಾಪಮಾನ ಸಂಬಂಧಿ ಸಮಸ್ಯೆ ಇದ್ದರೆ ಈ ಹಣ್ಣು ಮಿತವಾಗಿ ಸೇವಿಸಿ.
ದ್ರಾಕ್ಷಿ
ದ್ರಾಕ್ಷಿಗಳು ವಿಶೇಷವಾಗಿ ತಾಜಾವಾಗಿಲ್ಲದಿದ್ದಾಗ, ಚಳಿಗಾಲದಲ್ಲಿ ಉಸಿರಾಟದ ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು. ಅವುಗಳ ಹೆಚ್ಚಿನ ಸಕ್ಕರೆ ಅಂಶವು ಗಂಟಲು ನೋವು, ಶೀತಕ್ಕೆ ಕಾರಣವಾಗುವ ಲೋಳೆಯ ಉತ್ಪಾದನೆಗೆ ಸಹಕಾರಿಯಾಗಲಿದೆ. ಹೀಗಾಗಿ ದ್ರಾಕ್ಷಿ ಸೇವನೆ ಆದಷ್ಟು ಕಡಿಮೆ ಮಾಡಿ.
ಸೀಬೆ ಹಣ್ಣು
ಸೀಬೆ ಹಣ್ಣಿನಲ್ಲಿ ಅತ್ಯಧಿಕ ವಿಟಮಿನ್‌ಗಳಿರುವುದರಿಂದ ಆರೋಗ್ಯಕ್ಕೆ ಬಹಳ ಉತ್ತಮ. ಆದ್ರೆ ಇದು ಚಳಿಗಾಲದಲ್ಲಿ ನಿಮ್ಮ ದೇಹದ ಉಷ್ಣಾಂಶವನ್ನು ಇಳಿಕೆ ಮಾಡಲು ಕಾರಣವಾಗುತ್ತದೆ. ಇದು ಬೇಸಿಗೆಯಲ್ಲಿ ಸವಿಯಲು ಬಹಳ ಉತ್ತಮವಾದ ಹಣ್ಣು. ಹೀಗಾಗಿ ಚಳಿಗಾಲದಲ್ಲಿ ಆದಷ್ಟು ಮಿತವಾಗಿ ಸೇವಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











