Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಮಕ್ಕಳು ಹೇಳಿದ್ದೇ ಕೇಳಲ್ಲ ಅನ್ನೋದು ಎಡಿಹೆಚ್‌ಡಿ ಇರಬಹುದು..! ಸೈಕಾಲಜಿಸ್ಟ್ ಸಲಹೆ ಏನು ಗೊತ್ತಾ?
ಮಕ್ಕಳ ಮನಸ್ಸು ಗಾಜಿನಂತೆ ನೀವು ಎಷ್ಟು ಜೋಪಾನವಾಗಿ ನೋಡಿಕೊಳ್ಳುತ್ತೀರೋ ಅಷ್ಟು ಒಳ್ಳೆಯದು. ಅವರ ಬಳಿ ನೀವು ಹೇಗೆ ನಡೆದುಕೊಳ್ಳುತ್ತಿರಿ ಅನ್ನೋದರ ಮೇಲೆ ಅವರ ವರ್ತನೆಗಳು ನಿಂತಿರುತ್ತದೆ. ಆದ್ರೆ ಕೆಲವು ಮಕ್ಕಳನ್ನು ನೀವು ನಿಯಂತ್ರಿಸೋದೆ ಕಷ್ಟವಾಗಿಬಿಡುತ್ತೆ. ಮಕ್ಕಳು ಹಠ ಮಾಡುತ್ತಾರೆ ಹೇಳಿದ ಮಾತು ಕೇಳಲ್ಲ ಎಂಬುದು ಎಲ್ಲಾ ಪೋಷಕರ ದೂರಾಗಿರುತ್ತೆ. ಆದ್ರೆ ಇದರ ಹಿಂದೆ ಕೆಲವು ಕಾರಣವೂ ಇರಬಹುದು.
ಆದ್ರೆ ನಿಮ್ಮ ಮಕ್ಕಳು ಸಾಮಾನ್ಯ ಮಕ್ಕಳಿಗಿಂತ ಸ್ವಲ್ಪ ವಿಭಿನ್ನವಾಗಿ ವರ್ತನೆ ಕಂಡುಬರುತ್ತಿದ್ದರೆ ನೀವು ಹೆಚ್ಚು ಗಮನ ಹರಿಸಬೇಕಾಗುತ್ತದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ಒತ್ತಡ, ಮಾನಸಿಕ ತಳಮಳ, ಓದು, ಆಹಾರ, ಪರಿಸರ ಎಲ್ಲವೂ ಪರಿಣಾಮ ಬೀರುವುದರಿಂದ ಅವರಲ್ಲಿ ಹಲವು ರೀತಿ ಸಮಸ್ಯೆ ಕಾಣಬಹುದು.

ಅದರಲ್ಲಿ ಪ್ರಮುಖವಾಗಿ ಎಡಿಎಚ್‌ಡಿ (ಗಮನ ಕೊರತೆ ಹೈಪರ್ಆಕ್ಟಿವಿಟಿ ಡಿಸಾರ್ಡರ್) ಸಹ ಒಂದಾಗಿದೆ. ಹೆಚ್ಚಾಗಿ ಚಿಕ್ಕ ಮಕ್ಕಳಲ್ಲಿ ಕಂಡುಬರುವ ಈ ಸಮಸ್ಯೆ ಭವಿಷ್ಯದಲ್ಲಿ ಆ ಮಗುವಿನ ವರ್ತನೆಯನ್ನೇ ನಿರ್ಧರಿಸಬಹುದು. ಆದ್ರೆ ಈ ಸಮಸ್ಯೆ ಬಂದಿರುವುದು ತಿಳಿಯುವುದಾದರು ಹೇಗೆ? ಈ ಸಮಸ್ಯೆಗೆ ನಿಖರ ಲಕ್ಷಣಗಳಿಲ್ಲದ ಕಾರಣ ನಿಮ್ಮ ಮಕ್ಕಳಲ್ಲಿ ಎಡಿಹೆಚ್‌ಡಿ ಇದ್ದರೂ ನಿಮಗೆ ತಿಳಿಯುವುದು ಕಷ್ಟವಾಗಬಹುದು.
ಮೊದಲಿಗೆ ನಾವು ಈ ಎಡಿಹೆಚ್‌ಡಿ ಅಂದರೆ ಏನು? ಇದು ಹೇಗೆ ಮಕ್ಕಳಲ್ಲಿ ಕಂಡುಬರುತ್ತದೆ ಎಂಬ ಕುರಿತು ತಿಳಿದುಕೊಳ್ಳೋಣ. ಗಮನ-ಕೊರತೆ/ಹೈಪರ್ಆಕ್ಟಿವಿಟಿ ಡಿಸಾರ್ಡರ್ (ಎಡಿಎಚ್‌ಡಿ) ಇದೊಂದು ಬೆಳವಣಿಗೆಯ ಅಸ್ವಸ್ಥತೆ ಎನ್ನಬಹುದು. ಆದರೆ ಇದು ಮನೋರೋಗವಲ್ಲ.
ಅದು ನಿರಂತರ ಅಜಾಗರೂಕತೆ, ಹೈಪರ್ಆಕ್ಟಿವಿಟಿ ಮತ್ತು ಹಠಾತ್ ಪ್ರವೃತ್ತಿಯನ್ನು ಉಂಟುಮಾಡಬಹುದು.
ಸರಳವಾಗಿ ವಿವರಿಸುವುದಾರೆ ಯಾವ ವ್ಯಕ್ತಿ ಒಂದೇ ವಸ್ತು, ಒಂದೇ ಕೆಲಸದ ಮೇಲೆ ಹೆಚ್ಚು ಹೊತ್ತು ಗಮನ ಕೊಡಲು ಆಗದೆ ಇರುವ ಪರಿಸ್ಥಿತ ಇದಾಗಿದೆ. ಅಂದರೆ ಹೆಚ್ಚು ಹೊತ್ತು ಕುಳಿತಲ್ಲಿ ಕುಳಿತುಕೊಳ್ಳಲು ಆಗದಿರುವುದು, ಒಂದೇ ಕಡೆ ಗಮನ ಕೊಡಲು ಆಗದಿರುವುದು, ಅವರು ಹೊರಗಿನ ಪ್ರಪಂಚದ ಕಾರ್ಯನಿರ್ವಹಣೆಯಿಂದ ದೂರ ಉಳಿದುಬಿಡುತ್ತಾರೆ.
ಹಾಗಾದ್ರೆ ಈ ಎಡಿಹೆಚ್‌ಡಿ ಕುರಿತಂತೆ ಕ್ಲೀನಿಕಲ್ ಸೈಕಾಲಜಿಸ್ಟ್ ಅರುಣ್ ಎನ್.ಆರ್ ಅವರು ವಿವರಿಸಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.
ಈ ಎಡಿಹೆಚ್‌ಡಿ ಎರಡು ರೀತಿ ಕಂಡುಬರುತ್ತದೆ. ಹೈಪರ್ ಆಕ್ಟಿವಿಟಿ ಇಂಪಲ್ಸ್‌ವಿಟಿ, ಇನ್ ಅಟೆಂನ್ಷನ್. ಹೈಪರ್ ಆಕ್ಟಿವಿಟಿಯಲ್ಲಿ ಮಕ್ಕಳು ಒಂದು ಕಡೆ ಕುಳಿತುಕೊಳ್ಳೋಕೆ ಕಷ್ಟಪಡುತ್ತಾರೆ. ವಿಪರೀತವಾದ ಆಕ್ಟಿವಿಟಿ ಅವರಲ್ಲಿ ಇರುತ್ತೆ. ಅವರನ್ನು ಕಂಟ್ರೋಲ್ ಮಾಡೋದು ಕಷ್ಟ ಆಗಿರುತ್ತೆ. ಶಾಲೆ, ಮನೆ ಹೀಗೆ ಯಾವುದೇ ಸ್ಥಳದಲ್ಲಿ ಅವರು ಒಂದೇ ಕಡೆ ಇರಲು ಆಗುವುದಿಲ್ಲ. ಇನ್ ಅಟೆಂನ್ಷನ್ ಅಂದರೆ ಮರೆಯುವುದು ಎನ್ನಬಹುದು. ಶಾಲೆಯಲ್ಲಿ ಹೇಳಿದ ಹೋಮ್ ವರ್ಕ್ ಯಾವಾಗಲು ಮರೆಯುವುದು, ಶಾಲೆಯಲ್ಲಿ ವಸ್ತುಗಳನ್ನು ಬಿಟ್ಟು ಮನೆಗೆ ಬರುವುದು ಎನ್ನಬಹುದು. ಮಕ್ಕಳ ಸುಮಾರು ಶೇ.5 ರಷ್ಟು ಜನಸಂಖ್ಯೆಯಲ್ಲಿ ಈ ಎಡಿಹೆಚ್‌ಡಿ ಸಮಸ್ಯೆ ಕಂಡುಬರಬಹುದು ಎಂದು ಅರುಣ್ ಎನ್ ಆರ್ ವಿವರಿಸಿದ್ದಾರೆ.
ಎಡಿಹೆಚ್‌ಡಿ ಬಂದಿದೆಯೇ ಎಂದು ಗುರುತಿಸುವುದು ಹೇಗೆ?
ಈ ಸಮುದಾಯದ ಮಕ್ಕಳು ಮನೆಗಿಂತ ಹೆಚ್ದು ಸಮಯ ಶಾಲೆಯಲ್ಲಿರುತ್ತಾರೆ. ಹೀಗಾಗಿ ಈ ಸಮಸ್ಯೆ ಇರುವುದು ಮೊದಲು ತಿಳಿಯುವುದು ಶಿಕ್ಷಕರಿಗೆ, ಯಾವ ಮಕ್ಕಳು ತರಗತಿಯಲ್ಲಿ ಗಲಾಟೆ ಮಾಡುವುದು, ತರಗತಿ ಬಿಟ್ಟು ಹೋಗುವುದು, ಆಲಸ್ಯ, ಪಾಠ ಕೇಳದೆ ಇರುವುದು ಇಂತಹ ಸಮಸ್ಯೆ ಹೊಂದಿರುತ್ತಾರೆ. ಇದನ್ನು ನೀವು ಶಾಲೆಯ ಮುಖಾಂತರ ತಿಳಿಯಬಹುದು. ಮನೆಯಲ್ಲಿದ್ದಾಗ ಓದಿನ ಕಡೆ ಗಮನ ಇಡದಿರುವುದು, ಪದೇ ಪದೇ ಏನಾದರು ನೆಪ ಹೇಳಿ ಬಾತ್‌ರೂಮ್‌ಗೆ ಹೋಗುವುದು, ಶಾಲೆಗೆ ಹೊರಡುವ ಸಮಯದಲ್ಲಿ ಮಂಕಾಗಿರುವುದು ಇಂತಹ ಕೆಲವು ಲಕ್ಷಣಗಳನ್ನು ಅವರು ಹೊಂದಿರುತ್ತಾರೆ ಎಂದು ಅರುಣ್ ಎನ್ ಆರ್ ಹೇಳಿದ್ದಾರೆ.
ಇದಕ್ಕೆ ಚಿಕಿತ್ಸೆ ಏನು?
ನೀವು ನಿಮ್ಮ ಮಕ್ಕಳಲ್ಲಿ ಎಷ್ಟು ಬೇಗ ಈ ಸಮಸ್ಯೆಯನ್ನ ಗಮನಿಸುತ್ತೀರಿ ಎನ್ನುವುದರ ಮೇಲೆ ಚಿಕಿತ್ಸೆ ನಿಂತಿರುತ್ತದೆ. ಅತ್ಯಂತ ಬೇಗ ಈ ಸಮಸ್ಯೆ ಗುರುತಿಸಿದರೆ ಚಿಕಿತ್ಸೆ ಸುಲಭವಾಗುತ್ತದೆ, ಇದು ನರಮಂಡಲಕ್ಕೆ ಸಂಬಂಧಿಸಿದ ಸಮಸ್ಯೆ ಆಗಿರುವುದರಿಂದ ನರರೋಗ ತಜ್ಞರು, ಸೈಕಾಲಜಿಸ್ಟ್ ಮೂಲಕ ಈ ಸಮಸ್ಯೆಗೆ ಪರಿಹಾರವಿದೆ ಎಂದು ಕ್ಲೀನಿಕಲ್ ಸೈಕಾಲಜಿಸ್ಟ್ ಅರುಣ್ ಎನ್ ಆರ್ ಹೇಳಿದ್ದಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
