Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಪುರುಷರಿಗಿಂತ ಮಹಿಳೆಯರು ತೂಕ ಇಳಿಸುವುದು ಕಷ್ಟ..! ಏಕೆ ಗೊತ್ತಾ?
ತೂಕ ಇಳಿಸುವುದು ಎಲ್ಲರ ಆಸೆಯಾಗಿರುತ್ತೆ, ಅದರಲ್ಲೂ ಸ್ಲಿಮ್ ಆಗಿ ಕಾಣಬೇಕು ಎಂದುಕೊಳ್ಳುತ್ತಾರೆ. ಹೀಗಾಗಿ ಕಸರತ್ತು, ವ್ಯಾಯಾಮ, ಜಿಮ್ ಹೀಗೆ ಹತ್ತಾರು ರೀತಿಯ ಸಾಹಸ ಮಾಡುವುದು ನಾವು ನೋಡಬಹುದು. ಅದರಲ್ಲೂ ಹೆಚ್ಚು ತೂಕ ಹೊಂದಿರುವ ಮಂದಿ ಔಷಧಿಗಳ ಮೂಲಕವೂ ತೂಕ ಇಳಿಸಲು ಮುಂದಾಗುತ್ತಾರೆ.
ಆದ್ರೆ ಅವರು ಎಷ್ಟೇ ಪ್ರಯತ್ನ ಮಾಡಿದರು ತೂಕ ಇಳಿಸುವುದು ಅಷ್ಟು ಸುಲಭವಲ್ಲ. ನಿತ್ಯ ಒಂದಲ್ಲಾ ಒಂದು ರೀತಿ ಸಾಹಸ ಮಾಡಿದರೂ ತೂಕ ಮಾತ್ರ ಕೊಂಚವು ಇಳಿಯುವುದಿಲ್ಲ. ವರ್ಷಗಳ ಕಾಲ ಕಸರತ್ತು ನಡೆಸಿದ ಬಳಿಕ ಒಂದಿಷ್ಟು ತೂಕ ಇಳಿಸಿರುವವರನ್ನು ನಾವು ನೋಡಬಹುದು. ಆದರೆ ತೂಕ ಇಳಿಸುವುದು ಪುರುಷರಿಗಿಂತ ಮಹಿಳೆಯರಿಗೆ ಕಷ್ಟವಂತೆ.

ತೂಕ ಇಳಿಸುವುದು ಪುರುಷರಿಗಿಂತಲೂ ಮಹಿಳೆಯರಿಗೆ ಕಷ್ಟವಂತೆ. ಏಕೆಂದರೆ ತೂಕ ಇಳಿಸುವುದು ದೈಹಿಕ ಸ್ಥಿತಿಗೆ ಸಂಬಂಧಿಸಿದ ವಿಚಾರ ಮಾತ್ರವಲ್ಲ ಮಾನಸಿಕ ಸ್ಥಿತಿಗೂ ಸಂಬಂಧಿಸಿದ ವಿಚಾರವಾಗಿದೆ. ಹಾಗಾದ್ರೆ ಮಹಿಳೆಯರಿಗೆ ತೂಕ ಇಳಿಸುವುದು ಏಕೆ ಕಷ್ಟ? ಇದಕ್ಕೇನು ಕಾರಣ ಎನ್ನುವುದನ್ನು ತಿಳಿದುಕೊಳ್ಳಿ.
ಮಹಿಳೆಯರಿಗಿಂತ ಪುರುಷರಲ್ಲಿ ಮೆಟಾಬಾಲಿಸಂ ಹೆಚ್ಚು
ಮಹಿಳೆಯರಿಗೆ ಹೋಲಿಸಿದರೆ ಪುರುಷರು ಸ್ವಾಭಾವಿಕವಾಗಿ ಹೆಚ್ಚಿನ ಚಯಾಪಚಯ ದರವನ್ನು ಹೊಂದಿರುತ್ತಾರೆ. ಅನ್ವರ್ಸ್ಡ್ಗೆ, ಬೇಸಲ್ ಮೆಟಾಬಾಲಿಕ್ ರೇಟ್ (BMR) ಎಂಬುದು ವಿಶ್ರಾಂತಿ ಸಮಯದಲ್ಲಿ ಕ್ಯಾಲೋರಿಯನ್ನು ಹೆಚ್ಚಾಗಿ ಜೀರ್ಣ ಮಾಡುವ ಕ್ರಿಯೆಯಾಗಿದೆ. ಹೀಗಾಗಿ ಪುರುಷರು ಹೆಚ್ಚಾಗಿ ಕ್ಯಾಲೋರಿಯನ್ನು ಕಳೆದುಕೊಳ್ಳುತ್ತಾರೆ. ಪುರುಷರು 1600-1800 ಕ್ಯಾಲೋರಿಯನ್ನು ಕರಗಿಸಿದರೆ ಮಹಿಳೆಯೊಬ್ಬರ ದೇಹ 1400 ಕ್ಯಾಲೋರಿ ಕರಸಗಿಸಲಿದೆ. ಹೀಗಾಗಿ ಅವರು ತೂಕ ಇಳಿಸುವುದು ಕಷ್ಟವಾಗುತ್ತದೆ.
ಹೆಚ್ಚು ಲೀನ್ ಬಾಡಿ ಮಾಸ್
ನಿಮ್ಮ ತೂಕ ನಷ್ಟ ಪ್ರಯಾಣದಲ್ಲಿ ತೆಳ್ಳಗಿನ ದೇಹದ ದ್ರವ್ಯರಾಶಿಯು ಮತ್ತೊಂದು ನಿರ್ಣಾಯಕ ಅಂಶವಾಗಿದೆ. ಪುರುಷರು ಸ್ವಾಭಾವಿಕವಾಗಿ ಹೆಚ್ಚು ತೆಳ್ಳಗಿನ ದೇಹದ ದ್ರವ್ಯರಾಶಿಯನ್ನು ಹೊಂದುತ್ತಾರೆ, ಇದು ಮಹಿಳೆಯರಿಗಿಂತ ವೇಗವಾಗಿ ತೂಕವನ್ನು ಕಳೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ (NIH) ಪ್ರಕಾರ, ಪುರುಷರು ಸುಮಾರು 80-90% ನಷ್ಟು ತೆಳ್ಳಗಿನ ದೇಹದ ದ್ರವ್ಯರಾಶಿಯನ್ನು ಹೊಂದಿದ್ದಾರೆ, ಆದರೆ ಮಹಿಳೆಯರಿಗೆ ಇದು ಸಾಮಾನ್ಯವಾಗಿ 70-85% ರ ನಡುವೆ ಇರಲಿದೆ. ಹೀಗಾಗಿ ಮಹಿಳೆಯರು ವೇಗವಾಗಿ ತೂಕ ಇಳಿಸಲು ಸಾಧ್ಯವಾಗುವುದಿಲ್ಲ.
ಪುರುಷರಲ್ಲಿ ಹೆಚ್ಚಿನ ಟೆಸ್ಟೋಸ್ಟೆರಾನ್ ಮಟ್ಟ
ಪುರುಷರು ಹೆಚ್ಚಿನ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೊಂದಿರುತ್ತಾರೆ, ಅದಕ್ಕಾಗಿಯೇ ಅವರು ವೇಗವಾಗಿ ತೂಕವನ್ನು ಕಳೆದುಕೊಳ್ಳುತ್ತಾರೆ. ಆದರೆ ಮಹಿಳೆಯರಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ಇರುವುದೇ ಇಲ್ಲ. ಇದ್ದರೂ ಕಡಿಮೆ ಪ್ರಮಾಣದಲ್ಲಿ ಇರುತ್ತದೆ.
ಆಹಾರ ಕ್ರಮ
ಮಹಿಳೆಯರ ತೂಕ ಹೆಚ್ಚಳಕ್ಕೆ ಆಹಾರ ಕ್ರಮ ಸಹ ಕಾರಣವಾಗಿರುತ್ತದೆ. ಅವರು ವಿಶ್ರಾಂತಿ ಸಮಯದಲ್ಲಿ ಹೆಚ್ಚಾಗಿ ಏನಾದರು ಸೇವಿಸುತ್ತಾರೆ. ಆದರೆ ಪುರುಷರಲ್ಲಿ ಈ ಅಭ್ಯಾಸ ಕಡಿಮೆ ಇರುತ್ತದೆ. ಹಾಗೆ ಪುರುಷರು ತೂಕ ಇಳಿಸಲು ಜಿಮ್, ವ್ಯಾಯಾಮ, ಯೋಗ ಹೀಗೆ ಹಲವು ದಾರಿ ಕಂಡುಕೊಳ್ಳಬಹುದು, ಆದರೆ ಮಹಿಳೆಯರಲ್ಲಿ ಈ ಅಭ್ಯಾಸ ಹಾಗೂ ಸಮಯವೂ ಅವರಿಗೆ ಸಮಸ್ಯೆಯಾಗಬಹುದು.
ತಾಯ್ತನ, ಗರ್ಭದಾರಣೆ
ಮಹಿಳೆಯರಲ್ಲಿ ಗರ್ಭದಾರಣೆ ಹಾಗೂ ತಾಯ್ತನದ ಸಮಯದಲ್ಲಿ ತೂಕ ಹೆಚ್ಚಳವಾಗುವುದನ್ನು ನಾವು ನೋಡಬಹುದು. ಈ ಸಮಯದಲ್ಲಿ ಅವರು ಹಚ್ಚಾಗಿ ಕೊಬ್ಬಿನ ಅಂಶ, ಪ್ರೋಟೀನ್ ಸೇವಿಸುತ್ತಾರೆ. ಬಳಿಕ ಇದು ಆರೋಗ್ಯಕರ ಕೊಬ್ಬಾಗಿ ಪರಿವರ್ತನೆಯಾಗುತ್ತದೆ. ಆದರೆ ಇದು ತೂಕ ಹೆಚ್ಚಳಕ್ಕೂ ಕೂಡ ದಾರಿಯಾಗುತ್ತದೆ. ಮಕ್ಕಳ ಪಾಲನೆಯಲ್ಲಿ ನಂತರದ ಸಮಯ ಮೀಸಲಿಡುವುದು ತೂಕ ಇಳಿಸಲು ಕಷ್ಟವಾಗುತ್ತದೆ. ಆದರೆ ಪುರುಷದಲ್ಲಿ ಈ ಪ್ರಕ್ರಿಯೆ ಇಲ್ಲದಿರುವುದು ತೂಕ ಇಳಿಸಲು ಸಹಾಯ ಮಾಡುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

