Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆನ್ನುಮೂಳೆಯ ಅಸಹಜ ವಕ್ರತೆಗೂ (ಸ್ಕೋಲಿಯೋಸಿಸ್), ಅನುವಂಶೀಯತೆ ಸಂಬಂಧವಿದೆಯೇ?
ಸ್ಕೋಲಿಯೋಸಿಸ್ ಬೆನ್ನುಮೂಳೆಯ ಅಸಹಜ ವಕ್ರತೆ ಆಗಿದೆ. ಈ ವಕ್ರತೆಯು ಕಳೆದ ಹಲವಾರು ವರ್ಷಗಳಿಂದ ವೈದ್ಯಕೀಯ ಸಂಶೋಧಕರನ್ನು ಗೊಂದಲಕ್ಕೀಡು ಮಾಡಿದೆ. ಇತ್ತೀಚಿನ ದಿನಗಳ ಸಂಶೋಧನೆಗಳು ಅನುವಂಶಿಕ ಕಾರಣಗಳು ಸ್ಕೋಲಿಯೋಸಿಸ್ ನ ಬೆಳವಣಿಗೆಯಲ್ಲಿ ನಿರ್ದಿಷ್ಟ ಪಾತ್ರವನ್ನು ವಹಿಸಿದೆ.
ಅನುವಂಶಿಕ ಪ್ರಭಾವಗಳು ಸ್ಕೋಲಿಯೋಸಿಸ್ ನ ಆರಂಭಿಕೆಯಲ್ಲಿ ಗಹನವಾದ ಪಾತ್ರವನ್ನು ವಹಿಸುತ್ತವೆ. ಸ್ಕೋಲಿಯೋಸಿಸ್ನ ಆನುವಂಶಿಕತೆಯು ಹಲವಾರು ಅಧ್ಯಯನಗಳಿಂದ ಬೆಂಬಲಿತವಾಗಿದೆ, ಇದು ಪೀಡಿತ ವ್ಯಕ್ತಿಗಳ ಮೊದಲ ಹಂತದ ಸಂಬಂಧಿಗಳಲ್ಲಿ ಹೆಚ್ಚಿನ ಅಪಾಯವನ್ನು ಸೂಚಿಸುತ್ತದೆ.

ನಿಕೋಲೋವಾ ಮತ್ತು ಇತರರು (2018) ಮತ್ತು ಗ್ರವೂಯ್ರ್ಸ್ ಮತ್ತು ಇತರರು (2011) ಇವರ ಅಧ್ಯಯನಗಳು ಸ್ಕೋಲಿಯೋಸಿಸ್ ಬೆಳವಣಿಗೆ ಮತ್ತು ತೀವ್ರತೆಯನ್ನು ಊಹಿಸುವಲ್ಲಿ ಅನುವಂಶಿಕ ಅಂಶಗಳ (ಜೆನೆಟಿಕ್ ಮಾರ್ಕರ್‌ಗಳ) ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಅನುವಂಶಿಕ ಅಂಶಗಳು ವೈಯಕ್ತಿಕವಾದ ರೀತಿಯಲ್ಲಿ ಚಿಕಿತ್ಸಾ ವಿಧಾನಗಳನ್ನು ಸಕ್ರಿಯಗೊಳಿಸುವಲ್ಲಿ ಸಹಕಾರಿಯಾಗಿವೆ.
ಪತ್ತೆ ಹೇಗೆ?
ಸ್ಕೋಲಿಯೋಸಿಸ್‌ಗೆ ಸಂಬಂಧಿಸಿದ ತೀವ್ರ ವಿರೂಪಗಳು ಮತ್ತು ನರವೈಜ್ಞಾನಿಕ ಕೊರತೆಗಳನ್ನು ತಡೆಗಟ್ಟುವಲ್ಲಿ ಆರಂಭಿಕ ಪತ್ತೆಹಚ್ಚುವಿಕೆ ನಿರ್ಣಾಯಕವಾಗಿದೆ. ವಿಕ್ ಮತ್ತು ಇತರರ ಪ್ರಕಾರ (2009), ಆರಂಭಿಕ ಹಂತದಲ್ಲಿ ಸ್ಕೋಲಿಯೋಸಿಸ್ ನ ಗುರುತಿಸುವಿಕೆಯು ಚಿಕಿತ್ಸೆಯ ಫಲಿತಾಂಶಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಮತ್ತು ಸಮಯೋಚಿತ ಚಿಕಿತ್ಸಾ ಮಧ್ಯಸ್ಥಿಕೆಗಳನ್ನು ಸಕ್ರಿಯಗೊಳಿಸುತ್ತದೆ.
ಅನುವಂಶಿಕ ಅಂಶಗಳು ಸ್ಕೋಲಿಯೋಸಿಸ್ ನ ಬೆಳವಣಿಗೆ ಊಹಿಸುವ ಗುರುತುಗಳನ್ನು ಎತ್ತಿ ತೋರಿಸುತ್ತವೆ. ರೋಗಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ಸ್ಕೋಲಿಯೋಸಿಸ್ ನ ಪತ್ತೆಹಚ್ಚುವ ಸ್ಕ್ರೀನಿಂಗ್ ಸಾಧನಗಳಿಗೆ ಇದು ದಾರಿ ಮಾಡಿಕೊಟ್ಟಿದೆ. ಈ ರೀತಿಯಾಗಿ, ಅನುವಂಶಿಕ ಅಂಶಗಳು ಸಕಾಲಿಕ ಚಿಕಿತ್ಸಾ ಮಧ್ಯಸ್ಥಿಕೆಯಿಂದ ಸ್ಕೋಲಿಯೋಸಿಸ್ ನ ಬೆಳವಣಿಗೆ ನಿಲ್ಲಿಸಲು ಅಥವಾ ನಿಧಾನಗೊಳಿಸಲು ಅನುವು ಮಾಡಿಕೊಡುತ್ತದೆ.
ಗುಣಪಡಿಸಬಹುದೇ?
ಸ್ಕೋಲಿಯೋಸಿಸ್ ಅನ್ನು ಗುಣಪಡಿಸುವ ಪರಿಕಲ್ಪನೆಯು ವೈಯಕ್ತಿಕಗೊಳಿಸಿದ ಚಿಕಿತ್ಸೆಗಳು, ಆನುವಂಶಿಕ ಪರಿಗಣನೆಗಳು, ಮತ್ತು ದೀರ್ಘಾವಧಿ ನಿರ್ವಹಣೆ ತಂತ್ರಗಳನ್ನು ಒಳಗೊಂಡಿದೆ. ಸಧ್ಯಕ್ಕೆ ಸ್ಕೋಲಿಯೋಸಿಸ್ ಅನ್ನು ಗುಣಪಡಿಸುವಲ್ಲಿ ನಿರ್ಣಾಯಕ ಚಿಕಿತ್ಸೆ ಇಲ್ಲದಿದ್ದರೂ, ಆರಂಭಿಕ ಮತ್ತು ವೈಯಕ್ತೀಕರಿಸಿದ ಚಿಕಿತ್ಸಾ ವಿಧಾನಗಳು, ಬ್ರೇಸಿಂಗ್ (Bracing) ಮತ್ತು ದೈಹಿಕ ಚಿಕಿತ್ಸೆ (Physial Therapy) ಯಂತಹ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಪರಿಣಾಮಕಾರಿಯಾಗಿದೆ.
ಅನುವಂಶಿಕ ಅಂಶಗಳ ಬಗ್ಗೆ ಮಾಹಿತಿಯು ಸ್ಕೋಲಿಯೋಸಿಸ್‌ನ ಆಧಾರವಾಗಿರುವ ಆನುವಂಶಿಕ ಕಾರಣಗಳ ಉದ್ದೇಶಿತ ಚಿಕಿತ್ಸೆಗಳನ್ನು ಸುಗಮಗೊಳಿಸಿದೆ. ಜೀನ್ ಎಡಿಟಿಂಗ್ ಮತ್ತು ರಿಜೆನೆರೇಟಿವ್ ಮೆಡಿಸಿನ್ ಸೇರಿದಂತೆ ಜೆನೆಟಿಕ್ ಥೆರಪಿಯಲ್ಲಿ ನಡೆಯುತ್ತಿರುವ ಸಂಶೋಧನೆ ಮತ್ತು ಪ್ರಗತಿಗಳು ಸಮರ್ಥ ಮತ್ತು ಹೆಚ್ಚು ಪರಿಣಾಮಕಾರಿ ಚಿಕಿತ್ಸೆಗಳಾಗಿ ಹೊರಹೊಮ್ಮಬಹುದು ಎಂಬ ಆಶಾಭಾವವನ್ನು ತಜ್ಞರು ಹೊಂದಿದ್ದಾರೆ.
ತಜ್ಞರ ಅಭಿಪ್ರಾಯಗಳು
ತಜ್ಞರು ಸ್ಕೋಲಿಯೋಸಿಸ್ ನ ಪರಿಣಾಮಕಾರಿ ಮತ್ತು ವೈಯಕ್ತಿಕ ಚಿಕಿತ್ಸಾ ಯೋಜನೆಗಳನ್ನು ಕೇಂದ್ರೀಕರಿಸುವಲ್ಲಿ ಆನುವಂಶಿಕ ಆಧಾರವನ್ನು ಅರ್ಥಮಾಡಿಕೊಳ್ಳುವ ಪ್ರಾಮುಖ್ಯತೆ, ಬಹುವರ್ಗೀಯ ವೈದ್ಯರ ಸಹಕಾರ ಮತ್ತು ವೈದ್ಯಕೀಯ ಜ್ಞಾನದ ಸಮ್ಮೇಳನವನ್ನು ಅನುಮೋದಿಸುತ್ತಾರೆ.
ಒಟ್ಟಿನಲ್ಲಿ ಹೇಳುವುದಾದರೆ, ಸ್ಕೋಲಿಯೋಸಿಸ್ ನ ಆರಂಭ, ಬೆಳವಣಿಗೆ, ಮತ್ತು ತೀವ್ರತೆಯ ಮೇಲೆ ಅನುವಂಶಿಕತೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ. ಆನುವಂಶಿಕ ಗುರುತುಗಳು ಮತ್ತು ವೈಯಕ್ತೀಕರಿಸಿದ ಚಿಕಿತ್ಸಾ ವಿಧಾನಗಳ ಮೂಲಕ ಆರಂಭಿಕ ಪತ್ತೆಹಚ್ಚುವಿಕೆ, ಸ್ಕೋಲಿಯೋಸಿಸ್ ನ ನಿರ್ವಹಣೆಗೆ ಭರವಸೆಯನ್ನು ನೀಡಿದೆ. ತಜ್ಞರು ಈ ಕುರಿತು ನಿರಂತರ ಸಂಶೋಧನೆ ಮಾಡುತ್ತಿದ್ದಾರೆ ಕೂಡ.
(ಈ ಲೇಖನವನ್ನು ಡಾ. ಎಸ್ ವಿದ್ಯಾಧರ, ಅಧ್ಯಕ್ಷರು ಮತ್ತು ಎಚ್‌ಒಡಿ - ಸ್ಪೈನ್ ಸರ್ಜರಿ ಮತ್ತು ಕನ್ಸಲ್ಟೆಂಟ್ - ರೋಬೋಟಿಕ್ ಸ್ಪೈನ್ ಸರ್ಜರಿ, ಮಣಿಪಾಲ್ ಆಸ್ಪತ್ರೆ, ಹಳೆಯ ವಿಮಾನ ನಿಲ್ದಾಣ ರಸ್ತೆ, ಬೆಂಗಳೂರು, ಇವರು ಬರೆದಿದ್ದಾರೆ)
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications