Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ರುಮಟಾಯ್ಡ್ ಸಂಧಿವಾತ ಇರುವವರಿಗೆ ಕ್ಯಾನ್ಸರ್ ಸಾಧ್ಯತೆಯಿದೆಯೇ? ವೈದ್ಯರು ಹೇಳುವುದೇನು?
ರುಮಟಾಯ್ಡ್ ಸಂಧಿವಾತವು ಲಿಂಫೋಮಾದ ಸಾಧ್ಯತೆಯನ್ನು ಹೆಚ್ಚಿಸುತ್ತಿದೆಯೇ? ಈ ರುಮಟಾಯ್ಸ್ ಸಂಧಿವಾತದ ಲಕ್ಷಣಗಳೇನು? ಲಿಂಫೋಮಾ ಸಂಧಿವಾತ ಇರುವವರಿಗೆ ಬಂದರೆ ಎದುರಾಗುವ ಸಮಸ್ಯೆಯೇನು, ಚಿಕಿತ್ಸೆಯೇನು ಇದರ ಬಗ್ಗೆ ಡಾ ಅಭಿಷೇಕ್ ಪಾಟೀಲ್ ( ಎಚ್‌ಒಡಿ ಮತ್ತು ಸಲಹೆಗಾರ - ರುಮಟಾಲಜಿ, ಮಣಿಪಾಲ್ ಹಾಸ್ಪಿಟಲ್ ಓಲ್ಡ್ ಆರಿಪೋರ್ಟ್ ರಸ್ತೆ, ಬೆಂಗಳೂರು) ನಮ್ಮ ಓದುಗರಿಗೆ ಮಾಹಿತಿ ನೀಡಿದ್ದಾರೆ ನೋಡಿ:

ರುಮಟಾಯ್ಡ್ ಸಂಧಿವಾತ ಎಂದರೇನು?
ರುಮಟಾಯ್ಡ್ ಸಂಧಿವಾತವು ದೀರ್ಘಕಾಲದ ಉರಿಯೂತದ ಸಂಧಿವಾತವಾಗಿದ್ದು ಅದು ಕೀಲುಗಳ ಮೇಲೆ ಪರಿಣಾಮ ಬೀರುತ್ತದೆ. ಸುಮಾರು 0.4 ಪ್ರತಿಶತ ಭಾರತೀಯರು ರುಮಟಾಯ್ಡ್ ಸಂಧಿವಾತದಿಂದ ಭಾದಿತರಾಗಿದ್ದಾರೆ, ಈ ರುಮಟಾಯ್ಡ್ ಸಂಧಿವಾತದ ಸಮಸ್ಯೆ ಸಾಮಾನ್ಯವಾಗಿ 1000 ವಯಸ್ಕ ಭಾರತೀಯರಲ್ಲಿ 4 ಜನರಲ್ಲಿ ಕಂಡು ಬರುತ್ತಿದೆ, ಅದರಲ್ಲಿಯೂ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಪುರುಷರಿಗಿಂಥ ಮಹಿಳೆಯರಲ್ಲಿ ನಾಲ್ಕು ಪಟ್ಟು ಹೆಚ್ಚಾಗಿ ಅನುಪಾತದಲ್ಲಿ ಹೇಳುವುದಾದರೆ 4:1ರಷ್ಟು ಸ್ತ್ರೀ ಪುರುಷರಲ್ಲಿ ಈ ರುಮಟಾಯ್ಡ್ ಸಂಧಿವಾತ ಕಂಡು ಬರಲಿದೆ.
ರುಮಟಾಯ್ಡ್ ಸಂಧಿವಾತದಿಂದ ಕ್ಯಾನ್ಸರ್ ಬರುವುದೇ?
ರುಮಟಾಯ್ಡ್ ಸಂಧಿವಾತದಲ್ಲಿ, ದೇಹದ ಪ್ರತಿರಕ್ಷಣಾ ಕೋಶಗಳಾದ T ಮತ್ತು B ಜೀವಕೋಶಗಳು ಪ್ರತಿಜನಕ (ಆಂಟಿಜೆನ್)ಗಳ ಉತ್ತೇಜನದಿಂದ ಸಕ್ರಿಯಗೊಂಡು ನಿಮ್ಮ ಕೀಲುಗಳ ಸಮಸ್ಯೆ ಹೆಚ್ಚಿಸುತ್ತವೆ. ಈ ರೀತಿಯಾದ ಲಿಂಫೋಸೈಟ್ ಜೀವಕೋಶಗಳ ದೀರ್ಘಕಾಲದ ಪ್ರಸರಣವು ಕೀಲುಗಳ ವಿನಾಶಕ್ಕೆ ಕಾರಣವಾಗುವುದಲ್ಲದೆ ಗೆಡ್ಡೆ (ಟ್ಯೂಮರ್)ಗಳ ಅಪಾಯವನ್ನು ಹೆಚ್ಚಿಸುತ್ತದೆ. T ಮತ್ತು B ಜೀವಕೋಶಗಳ ಪ್ರಸರಣದಿಂದ ಉಂಟಾಗುವ ಗೆಡ್ಡೆಗಳನ್ನು ಲಿಂಫೋಮಾ ಗೆಡ್ಡೆಗಳೆಂದು ಕರೆಯಲಾಗುತ್ತದೆ. ಹಾಗಾಗಿ ರುಮಟಾಯ್ಡ್ ಸಂಧಿವಾತ ಇರುವವರಲ್ಲಿ ಲಿಂಫೋಮಾದ ಅಪಾಯ ಎರಡು ಪಟ್ಟು ಹೆಚ್ಚು.
ಯಾರಲ್ಲಿ ಲಿಂಫೋಮಾ ಅಪಾಯ ಹೆಚ್ಚು?
ವಂಶವಾಯಿ ರುಮಟಾಯ್ಡ್ ಸಮಸ್ಯೆ ಇರುವವರಿಗೆ ಈ ಅಪಾಯ ಹೆಚ್ಚು. ಆದರೆ ಇದರಿಂದಲೇ ಬರುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ರುಮಟಾಯ್ಡ್ ಸಂಧಿವಾತದಲ್ಲಿ T ಮತ್ತು B ಜೀವಕೋಶಗಳ ಪ್ರಸರಣ ಉತ್ಪ್ರೇಕ್ಷಿತವಾಗಿದ್ದು, ಪ್ರಸರಣದ ಸಮಯದಲ್ಲಿ, ಕೆಲವು ಜೀವಕೋಶಗಳು ರೂಪಾಂತರಕ್ಕೆ (ಮ್ಯುಟೇಷನ್)ಗೆ ಒಳಗಾಗಿ, ರೂಪಾಂತರಿತ ತದ್ರೂಪು ಲಿಂಫೋಮಾಗಳ ವೃದ್ಧಿಯಾಗಬಹುದು. ವಿಶಿಷ್ಟವಾಗಿ ರುಮಟಾಯ್ಡ್ ಸಂಧಿವಾತದಲ್ಲಿ ಸಂಭವಿಸುವ ಈ ಮ್ಯುಟೇಷನ್ ಅನ್ನು ನಾನ್-ಹೋಡ್ಜ್ಕಿನ್ ಲಿಂಫೋಮಾ ಎಂದು ಕರೆಯಲಾಗುತ್ತದೆ . ಈ ಲಿಂಫೋಮಾ ಹೆಚ್ಚು ಅಪಾಯಕಾರಿಯಾಗಿದೆ.
ರುಮಟಾಯ್ಡ್ ಸಂಧಿವಾತದ ಲಕ್ಷಣಗಳೇನು?
ರುಮಟಾಯ್ಡ್ ಸಂಧಿವಾತ ಇರುವವರಲ್ಲಿ ಜ್ವರ, ತೂಕ ನಷ್ಟ, ಕತ್ತಿನ ಭಾಗದಲ್ಲಿ ಮತ್ತು ಕಂಕುಳಲ್ಲಿ (ಆರ್ಮ್ ಪಿಟ್) ಗಳಲ್ಲಿ ಉಬ್ಬುಗಳು ಅಥವಾ ದುಗ್ಧರಸ ಗ್ರಂಥಿಗಳ ಊತ ಕಂಡುಬಂದಲ್ಲಿ, ಇದು ಲಿಂಫೋಮಾ ಲಕ್ಷಣವಾಗಿದೆ. ಲಿಂಫ ಅಡಿನೊಪತಿಯಲ್ಲಿ ದೇಹದಲ್ಲಿ ಸಣ್ಣ ಊತಗಳು ಸಂಭವಿಸಬಹುದು , ಈ ರೀತಿ ಕಂಡು ಬಂದಾಗ ವೈದ್ಯರಿಂದ ಪರೀಕ್ಷೆ ಮಾಡಿಸುವುದು ಒಳ್ಳೆಯದು.
ಲಿಂಫೋಮಾ ಇದೆಯೇ ಎಂದು ಪತ್ತೆ ಹಚ್ಚುವುದು ಹೇಗೆ?
LDH ಅಂಶ ಹೆಚ್ಚಾಗುವುದು, ಯೂರಿಕ್ ಆಮ್ಲದಂತಹ ಕೆಲವು ಜೈವಿಕ ಗುರುತುಗಳು ಸಹ ಲಿಂಫೋಮಾ ಕಾಯಿಲೆಯ ರೋಗ ಲಕ್ಷಣಗಳನ್ನು ಹೆಚ್ಚಿಸುತ್ತದೆ. ಈ ರೀತಿ ಸಂಶಯ ಮೂಡಿದಾಗ ದುಗ್ಧರಸ ಗ್ರಂಥಿಯ, ಅಥವಾ ಗಡ್ಡೆಯ ಬಯಾಪ್ಸಿ ಪರೀಕ್ಷೆ ಮೂಲಕ ಖಾತರಿ ಪಡಿಸಲಾಗುವುದು.
ಲಿಂಫೋಮಾಗೆ ಚಿಕಿತ್ಸೆಯೇನು?
ರುಮಟಾಯ್ಡ್ ಇರುವವರಿಗೆ ಲಿಂಫೋಮಾ ಬಂದರೆ ಇತರ ಲಿಂಫೋಮಾ ರೋಗಿಗಳಿಗೆ ನೀಡುವ ಚಿಕಿತ್ಸೆಯನ್ನೇ ನೀಡಲಾಗುವುದು. ರುಮಟಾಯ್ಡ್ ಸಂಧಿವಾತದ ಚಿಕಿತ್ಸೆಯಲ್ಲಿ ಬಳಸಲಾಗುವ ಮೆಥೊಟ್ರೆಕ್ಸೇಟ್ ಅಥವಾ ಕೆಲವು ಜೈವಿಕ ಔಷಧಗಳು ಲಿಂಫೋಮಾಗೆ ಸಂಭವನೀಯ ಕಾರಣಗಳು ಎಂದು ಹೇಳಲಾಗುವುದಾದರೂ ಇದೇ ನಿಖರ ಕಾರಣವಲ್ಲ, ಕೆಲವು ಜೀವಕೋಶಗಳು ರೂಪಾಂತರಗೊಂಡು ಲಿಂಫೋಮಾ ಆಗಿ ಬದಲಾಗುವುದು. . ಲಿಂಫೋಮಾ ಇರುವವರಿಗೆ ಕ್ಲಿನಿಕಲ್ ಮತ್ತು ಹಿಸ್ಟೋಪಾಥೋಲಾಜಿಕಲ್ ಪರೀಕ್ಷೆಯ ಮೂಲಕ ಅದನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಪ್ರಾರಂಭಿಸಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
