Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನೆಯಲ್ಲಿ ಬೆಕ್ಕು ಸಾಕಿದ್ದೀರಾ? ಹಕ್ಕಿ ಜ್ವರ ಹರಡಲು ಬೆಕ್ಕು ಕಾರಣವಾಗೋದು ಹೇಗೆ ಗೊತ್ತಾ?
ನೀವು ಹಕ್ಕಿಜ್ವರ ಕುರಿತು ಕೇಳಿರುತ್ತೀರಿ. ಪಕ್ಷಿಗಳು, ಪ್ರಾಣಿಗಳ ಮೂಲಕ ಹರಡುತ್ತಿದ್ದ ವೈರಲ್ ಕಾಯಿಲೆ ಇದಾಗಿತ್ತು. ಇಡೀ ಜಗತ್ತಿಗೆ ದೊಡ್ಡ ಶಾಪವಾಗಿ ಕಾಡಿದಂತಹ ಕಾಯಿಲೆ ಇದು. ಈ ವೈರಸ್‌ನಿಂದ ಸಾಕು ಪ್ರಾಣಿಗಳ ಸಾವಿಗೆ ಕಾರಣವಾಗಿತ್ತು. ಹಕ್ಕಿ ಜ್ವರ ಸಾಮಾನ್ಯವಾಗಿ ಕೋಳಿ, ಕಾಡು ಪಕ್ಷಿಗಳು, ಪಾರಿವಾಳಗಳಿಂದ ಹರಡುತ್ತದೆ ಎಂದು ಹೇಳಲಾಗಿದೆ.
ಆದ್ರೆ ಇತ್ತೀಚಿಗೆ ಹಂದಿಗಳು, ಗೋವಿನ ಹಾಲಿನಲ್ಲಿ ಈ ವೈರಲ್ ಪತ್ತೆಯಾಗಿ ಭಾರೀ ಆತಂಕಕ್ಕೆ ಕಾರಣವಾಗಿತ್ತು. ಆದ್ರೆ ಈಗ ಹೊಸದೊಂದು ಅಧ್ಯಯನದ ಪ್ರಕಾರ ಬೆಕ್ಕುಗಳು ಈ ಹಕ್ಕಿ ಜ್ವರ ವೈರಸ್‌ಗಳ ಹರಡುವ ವಾಹಕಗಳಂತೆ ಕೆಲಸ ಮಾಡುತ್ತವೆ ಎಂಬ ಆತಂಕಕಾಗಿ ವಿಚಾರ ಬಯಲಾಗಿದೆ.

ಎಮರ್ಜಿಂಗ್ ಮೈಕ್ರೋಬ್ಸ್ ಅಂಡ್ ಇನ್ಫೆಕ್ಷನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ, ಸಾಕು ಬೆಕ್ಕುಗಳು H5N1 ಬರ್ಡ್ ಫ್ಲೂ ವೈರಸ್‌ನ ಅಭಿವೃದ್ಧಿ ಹಾಗೂ ಹರಡುವಿಕೆಯಲ್ಲಿ ಅನಿರೀಕ್ಷಿತ ವಾಹಕನಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ವರ್ಷ ಡೈರಿ ಪ್ರಾಣಿಗಳಲ್ಲಿ ಕಾಣಿಸಿಕೊಂಡ ಈ ವೈರಸ್ ಬೆಕ್ಕುಗಳ ಸಾವಿಗೂ ಕಾರಣವಾಗಿತ್ತು. ಸುಮಾರು 60ಕ್ಕೂ ಹೆಚ್ಚು ಜನರಿಗೆ ಹರಡಲು ಇದು ಕಾರಣವಾಗಿತ್ತು. ಇವರಲ್ಲಿ ಹಲವರು ಡೈರಿ ಪ್ರಾಣಿಗಳು, ಕೋಳಿಗಳೊಂದಿಗೆ ನೇರ ಸಂಪರ್ಕ ಹೊಂದಿದ್ದು ಕಾರಣವಾಗಿತ್ತು. ಈ ಹೆಚ್1ಎನ್1 ಮಾನವರಿಗೆ ಸುಳಭವಾಗಿ ಹರಡುವುದಿಲ್ಲ ಎಂದು ತಿಳಿದುಬಂದಿದೆ. ಅದರ ಕೆಲವೇ ಕೆಲವು ರೂಪಾಂತರಗಳು ಮಾನವರಿಗೆ ಹರಡುತ್ತವೆ ಎಂಬುದು ಕೂಡ ದೃಢವಾಗಿತ್ತು.
ಈ ವರ್ಷದ ಆರಂಭದಲ್ಲಿ ಅಮೆರಿಕದಾದ್ಯಂತ ಹರಡಿದ ಈ ಹಕ್ಕಿ ಜ್ವರವು ಬೆಕ್ಕುಗಳ ಕಾರಣದಿಂದಲೂ ಹರಡಿವೆ ಎಂಬುದು ತಿಳಿದುಬಂದಿದೆ. ಯಾವ ಸ್ಥಳದಲ್ಲಿ ಈ ವೈರಸ್ ಹರಡಿತ್ತೋ ಆ ಸ್ಥಳದಲ್ಲಿದ್ದ ಬೆಕ್ಕುಗಳು ಈ ವೈರಸ್‌ಗಳನ್ನು ತಮ್ಮ ಮೂಲಕ ಹರಡಿವೆ ಎಂಬುದನ್ನು ಪತ್ತೆ ಮಾಡಲಾಗಿತ್ತು. ಈ ಬೆಕ್ಕುಗಳು ಕೋಳಿ ಸಾಕಾಣಿಕೆ, ಹಂದಿ, ಹಸುಗಳ ಸಾಕಣೆ ಕೇಂದ್ರಗಳಿಂದ ಹಿಡಿದು ಮನೆಯಲ್ಲಿ ಸುತ್ತಾಡುತ್ತಿದ್ದ ಕಾರಣದಿಂದಾಗಿ ವೈರಸ್ ಹರಡಿತ್ತು ಎಂದು ತಿಳಿದುಬಂದಿದೆ.
H5N1 ಪ್ರಸ್ತುತ ಮಾನವರಲ್ಲಿ ಸುಲಭವಾಗಿ ಹರಡುವುದಿಲ್ಲ, ಆದರೆ ವಿವಿಧ ಸಂಶೋಧನೆಗಳ ಪ್ರಕಾರ, ಕೇವಲ ಒಂದು ಅಥವಾ ಎರಡು ಪ್ರಮುಖ ರೂಪಾಂತರಗಳು ಮಾನವರಿಗೆ ಹರಡಲು ನೆರವಾಗುತ್ತವೆ. ಆದರೆ ಬೆಕ್ಕುಗಳಿಂದ ನೇರವಾಗಿ ಈ ವೈರಸ್ ಮಾನವರಿಗೆ ಹರಡಿದ ಎಂಬುದಕ್ಕೆ ಪುರಾವೆಗಳಲ್ಲಿಲ್ಲದಿದ್ದರೂ ಇವು ವೈರಸ್ ವಾಹಕಗಳು ಎಂಬುದಕ್ಕೆ ಹಲವು ಅಂಶಗಳು ಸಾಬೀತುಪಡಿಸುತ್ತವೆ.
ವಿಜ್ಞಾನಿಗಳ ಪ್ರಕಾರ, ಬೆಕ್ಕು ಒಂದೇ ಸಮಯದಲ್ಲಿ ಏವಿಯನ್ ಇನ್ಫ್ಲುಯೆನ್ಸ ಮತ್ತು ಇನ್ನೊಂದು ಕಾಲೋಚಿತ ಜ್ವರ ವೈರಸ್ ಸೋಂಕಿಗೆ ಒಳಗಾಗಿದ್ದರೆ, H5N1 ಮಾನವರಲ್ಲಿ ವ್ಯಾಪಕವಾಗಿ ಹರಡಲು ಅಗತ್ಯವಾದ ರೂಪಾಂತರಗಳನ್ನು ಪಡೆದುಕೊಳ್ಳಬಹುದು. ಬೆಕ್ಕುಗಳು ಆಗಾಗ್ಗೆ ಕಾಡು ಪ್ರಾಣಿಗಳು ಮತ್ತು ಜನರೊಂದಿಗೆ ಬೆರೆಯುತ್ತವೆ, ಇದು ವೈರಸ್ ಮತ್ತಷ್ಟು ಅಭಿವೃದ್ಧಿ ಹೊಂದಲು ಕಾರಣವಾಗಬಹುದು.
ಇತ್ತೀಚಿನ ಅಧ್ಯಯನದಲ್ಲಿ ಸಂಶೋಧಕರು ದಕ್ಷಿಣ ಡಕೋಟಾದಲ್ಲಿ 10ಕ್ಕೂ ಹೆಚ್ಚು ಬೆಕ್ಕುಗಳು ಮರಣ ಹೊಂದಿದ್ದವು ಈ ಪ್ರಕರಣವನ್ನು ತನಿಖೆಗೆ ಒಳಪಡಿಸಿದಾಗ ಆ ಬೆಕ್ಕುಗಳಲ್ಲಿ ಉಸಿರಾಟದ ಸಮಸ್ಯೆ, ಹಾಗೆ ಹಲವು ರೀತಿಯ ಸಮಸ್ಯೆಗಳು ಅಲ್ಲಿದ್ದ ಜಾನುವಾರುಗಳಲ್ಲಿ ಕಂಡುಬಂದಿದ್ದ ರೂಪಾಂತರಗಳ ಹೋಲುತ್ತಿದ್ದವು.
ಕೆಲವೊಮ್ಮೆ ಈ ವೈರಸ್ ಹೊಂದಿದ್ದ ಕಾಡು ಪಕ್ಷಿಗಳು, ಸಾಕು ಕೋಳಿಗಳು ಮೃತಪಟ್ಟಾಗ ಅದರ ಮಾಂಸ ಸೇವನೆ ಮಾಡಿರುವುದರಿಂದ ಬೆಕ್ಕುಗಳಿಗೂ ಈ ವೈರಸ್ ಹರಡಿರಬಹುದು ಎಂದು ಅಂದಾಜಿಸಲಾಯಿತು. ಹಾಗೆ 2022ರಿಂದ ಅಮೆರಿಕದಲ್ಲಿ ಸುಮಾರು 53ಕ್ಕೂ ಹೆಚ್ಚು ಬೆಕ್ಕುಗಳು ಈ ವೈರಸ್ ಸೋಂಕಿಗೆ ತುತ್ತಾದ ವರದಿಯಾಗಿವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications