Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಇರ್ಫಾನ್ ಖಾನ್, ಸ್ಟೀವ್ ಜಾಬ್ಸ್ ಇದೇ ಕ್ಯಾನ್ಸರ್‌ಗೆ ಬಲಿಯಾಗಿದ್ರು..! ಇದ್ಯಾಕೆ ಅಪಾಯಕಾರಿ ಗೊತ್ತಾ?
ಇತ್ತೀಚಿನ ವರ್ಷಗಳಲ್ಲಿ ನಾವು ಎಂತಹ ಕಾಯಿಲೆಗಳಿಂದ ಬಳಲುತ್ತಿರುವವರು ಪ್ರಾಣ ಬಿಡುತ್ತಿರುವವರನ್ನು ನೋಡುತ್ತಿದ್ದೇವೆ ಎಂದರೆ ಆ ಕಾಯಿಲೆಗಳ ಹೆಸರನ್ನೇ ನಾವು ಕೇಳಿರುವುದಿಲ್ಲ. ಅದರಲ್ಲೂ ಹಲವರು ಸೆಲೆಬ್ರಿಟಿಗಳು ಮೃತಪಟ್ಟಾಗ ಅವರಿಗಿದ್ದ ಕಾಯಿಲೆಗಳ ತಿಳಿದು ನಮಗೆ ಶಾಕ್ ಆಗುತ್ತದೆ. ಏಕೆಂದರೆ ಆ ಹೆಸರನ್ನೇ ನಾವು ಕೇಳಿರುವುದಿಲ್ಲ.
ಇನ್ನು ಬಾಲಿವುಡ್‌ನ ಫೇಮಸ್ ನಟ ಇರ್ಫಾನ್ ಖಾನ್ ಹಾಗೂ ಆಪಲ್ ಸಂಸ್ಥೆಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ಇಬ್ಬರು ಒಂದೇ ಕಾಯಿಲೆಗೆ ಬಲಿಯಾಗಿದ್ದರು. ಅವರಿಬ್ಬರು ಅಪರೂಪದಲ್ಲಿ ಅಪರೂಪದ ಕ್ಯಾನ್ಸರ್‌ಗೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದರು. ಅವರಿಬ್ಬರಿಗೂ ನ್ಯೂರೋಎಂಡೋಕ್ರೈನ್ ಟ್ಯೂಮರ್ ಎಂಬ ಅಪರೂಪದ ಕ್ಯಾನ್ಸರ್ ಇತ್ತು.

ಇಬ್ಬರಿಗೂ ಉಂಟಾದ ಈ ಕ್ಯಾನ್ಸರ್ ಹಾರ್ಮೋನ್‌ಗಳಿಗೆ ಸಂಬಂಧಿಸಿದ್ದಾಗಿದೆ. ನ್ಯೂರೋಎಂಡೋಕ್ರೈನ್ ಎಂಬ ಅಂಗ ಹಾರ್ಮೋನ್‌ಗಳ ಬಿಡುಗಡೆಗೆ ಸಹಕಾರಿಯಾಗಿದೆ. ಇದು ರಕ್ತದ ಮೂಲಕ ಇಡೀ ದೇಹಕ್ಕೆ ಕ್ಯಾನ್ಸರ್ ಕೋಶಗಳ ಹರಡಲು ಕಾರಣವಾಗಿತ್ತು. ಅಂದರೆ ಮೇದೋಜ್ಜೀರಕ ಗ್ರಂಥಿ, ಶ್ವಾಸಕೋಶಗಳು, ಜಠರ, ಕರುಳಿನ ಪ್ರದೇಶ ಮತ್ತು ಮೂತ್ರಜನಕಾಂಗದ ಗ್ರಂಥಿಗಳಂತಹ ಅಂಗಕ್ಕೆ ಕ್ಯಾನ್ಸರ್ ಹರಡಲು ಕಾರಣವಾಗಿತ್ತು.
ನ್ಯೂರೋಎಂಡೋಕ್ರೈನ್ ಟ್ಯೂಮರ್‌ಗಳು ದೇಹದಲ್ಲಿ ಬೆಳವಣಿಗೆಯಾಗುವ ಲಕ್ಷಣಗಳ ಗೋಚರವಾಗುವುದಿಲ್ಲ, ಹೀಗಾಗಿ ಈ ಕ್ಯಾನ್ಸರ್ ತಡವಾಗಿ ತಿಳಿಯುತ್ತದೆ. ಅಲ್ಲದೆ ದೇಹದ ಪ್ರಮುಖ ಅಂಗಗಳಲ್ಲಿ ಕ್ಯಾನ್ಸರ್ ಕೋಶಗಳು ಅಭಿವೃದ್ಧಿ ಹೊಂದಿದ್ದ ಬಳಿಕ ತಿಳಿಯುವುದರಿಂದ ಚಿಕಿತ್ಸೆ ನೀಡುವಾಗ ತಡವಾಗುತ್ತದೆ.
ನ್ಯೂರೋಎಂಡೋಕ್ರೈನ್ ಕೋಶಗಳು ಹಾರ್ಮೋನ್‌ಗಳ ಉತ್ಪಾದನೆಯಿಂದಾಗಿ ರೋಗ ನಿರ್ಣಯ ಕಷ್ಟಸಾಧ್ಯ ಹಾಗೆ ಈ ಕ್ಯಾನ್ಸರ್ ಉಳಿದೆಲ್ಲಾ ವಿಧಾನಕ್ಕಿಂತ ಕಡಿಮೆ ವೇಗದಲ್ಲಿ ಹರಡುತ್ತಿರುತ್ತದೆ. ಪ್ರಾಥಮಿಕವಾಗಿ ಈ ನ್ಯೂರೋಎಂಡೋಕ್ರೈನ್ ಟ್ಯೂಮರ್ ಸಣ್ಣ ಕರುಳು, ಗುದನಾಳದ ಮೇಲೆ ಪರಿಣಾಮ ಬೀರುವುದು ಹೆಚ್ಚು. ಕಾರ್ಸಿನಾಯ್ಡ್ ಸಿಂಡ್ರೋಮ್ಗೆ ಕಾರಣವಾಗುವ ಹಾರ್ಮೋನುಗಳನ್ನು ಉಂಟುಮಾಡಬಹುದು. ಇದರಿಂದ ನಿಮ್ಮಲ್ಲಿ ಆಗಾಗ ಅತಿಸಾರ, ಉಸಿರಾಡುವಾಗ ಸಮಸ್ಯೆ, ಕರುಳಿನ ಉರಿ ಕಾಣಿಸಿಕೊಳ್ಳಬಹುದು.
ಉಸಿರಾಡುವಾಗ ಶ್ವಾಸಕೋಶದ ನೋವು, ಉಬ್ಬಸ ಸೇರಿ ಕೆಲವೊಂದು ಲಕ್ಷಣಗಳು ಇದರಿಂದ ಗೋಚರವಾಗಬಹುದು. ಕೆಲವೊಮ್ಮೆ ಮೂತ್ರಜನಕಾಂಗದ ಗ್ರಂಥಿಗಳಲ್ಲಿ ಫಿಯೋಕ್ರೊಮೋಸೈಟೋಮಾ ಅಥವಾ ಥೈರಾಯ್ಡ್‌ನಲ್ಲಿ ಮೆಡುಲ್ಲರಿ ಥೈರಾಯ್ಡ್ ಕಾರ್ಸಿನೋಮವಾಗಿ ಕಂಡುಬರಬಹುದು. ಹೀಗಾಗಿಯೇ ನ್ಯೂರೋಎಂಡೋಕ್ರೈನ್ ಟ್ಯೂಮರ್ ಅನ್ನು ಪತ್ತೆ ಮಾಡುವುದು ಕಷ್ಟವಾಗುತ್ತದೆ ಎನ್ನಲಾಗುತ್ತದೆ. ಇದರ ಲಕ್ಷಣಗಳು ಗೋಚರವಾಗುವುದು ತಡವಾಗುತ್ತದೆ. ಅಲ್ಲದೆ ಕಂಡು ಹಿಡಿಯುವುದು ಕೂಡ ಕಷ್ಟವೇ.
ನ್ಯೂರೋಎಂಡೋಕ್ರೈನ್ ಟ್ಯೂಮರ್‌ನ ಲಕ್ಷಣಗಳೇನು?
- ಹೊಟ್ಟೆಯಲ್ಲಿ ನೋವು
- ಏಕಾಏಕಿ ತೂಕ ಕಳೆದುಕೊಳ್ಳುವುದು
- ಸುಸ್ತು
- ಚರ್ಮ ಬಿಳಿಯಾಗುವುದು
- ಅತಿಸಾರ
- ಉಸಿರಾಟಕ್ಕೆ ಸಮಸ್ಯೆ
ಈ ಕ್ಯಾನ್ಸರ್ ಬರಲು ಕಾರಣವೇನು?
ಈ ಕ್ಯಾನ್ಸರ್ ಉಂಟಾಗಲು ನಿಖರ ಕಾರಣ ಏನು ಎಂಬುದನ್ನು ಪತ್ತೆ ಮಾಡುವುದು ಕೂಡ ಕಷ್ಟವಾಗಿದೆ. ಹೆಚ್ಚಾಗಿ ಈ ಕ್ಯಾನ್ಸರ್ ಕೌಟುಂಬಿಕ ಹಿನ್ನೆಲೆಯಿಂದ ಬರಬಹುದು ಎನ್ನಲಾಗಿದೆ. ವಯಸ್ಸಿನ ಕಾರಣ ಹಾಗೂ ಜೀವನ ಶೈಲಿಯೂ ಒಂದು ಕಾರಣ ಎನ್ನಲಾಗುತ್ತದೆ.
ಚಿಕಿತ್ಸೆ ಏನು
ನ್ಯೂರೋಎಂಡೋಕ್ರೈನ್ ಟ್ಯೂಮರ್ ನಿಧಾನವಾಗಿ ಬೆಳವಣಿಗೆ ಆಗುವುದರಿಂದ ಇದರನ್ನು ಪತ್ತೆ ಮಾಡುವುದೇ ದೊಡ್ಡ ಸವಾಲು, ಪತ್ತೆಯಾದ ಬಳಿಕ ಚಿಕಿತ್ಸಾ ಹಂತವೂ ಕೂಡ ಸವಾಲಾಗುತ್ತದೆ. CT ಸ್ಕ್ಯಾನ್, ಎಂಆರ್‌ಐ ಸೇರಿ ಹಲವು ಸ್ಕ್ಯಾನಿಂಗ್ ಮೂಲಕ ಮಾತ್ರ ಇದನ್ನು ಸುಲಭವಾಗಿ ಪತ್ತೆ ಮಾಡಬಹುದು. ಇದು ಕೋಶಗಳನ್ನು ಕೊಂದು ಗಡ್ಡೆಯಾಗಿ ಮಾರ್ಪಡುವ ಕಾರಣ ಶಸ್ತ್ರ ಚಿಕಿತ್ಸೆ ಕೂಡ ಕೆಲವು ಪ್ರಕರ್ಣದಲ್ಲಿ ನಡೆಸಬೇಕಾಗುತ್ತದೆ. ಕೀಮೋಥೆರಪಿ, ವಿಕಿರಣ ಚಿಕಿತ್ಸೆ, ಔಷಧಿಗಳು, ಸೇರಿ ಒಂದಿಷ್ಟು ಚಿಕಿತ್ಸಾ ವಿಧಾನಗಳು ಸಹ ಇದೆ.
ಬಾಲಿವುಡ್ ನಟ ಇರ್ಫಾನ್ ಖಾನ್ ಕೇವಲ 53 ವಯಸ್ಸಿನಲ್ಲಿ ಈ ಕ್ಯಾನ್ಸರ್‌ಗೆ ಬಲಿಯಾಗಿದ್ದರು. ಹಾಗೆ ಸ್ಟೀವ್ ಜಾಬ್ಸ್ ತಮ್ಮ 56ನೇ ವಯಸ್ಸಿನಲ್ಲಿ ಇದೇ ಕ್ಯಾನ್ಸರ್‌ನಿಂದ ಮರಣ ಹೊಂದಿದ್ದರು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











