Latest Updates
-
ಜುಲೈ 17: ದಂಪತಿಗಳ ನಡುವಿನ ಮನಸ್ತಾಪ ದೂರವಾಗಿಸಲು ಈ ಸರಳ ಟಿಪ್ಸ್ ಪಾಲಿಸಿ! -
ದೆಹಲಿಯ ಸೆಖೆ ಮತ್ತು ಆರ್ದ್ರತೆ: ಕರೆಂಟ್ ಬಿಲ್ ಉಳಿಸಿ, ಮನೆಯನ್ನು ತಂಪಾಗಿರಿಸುವ ಸ್ಮಾರ್ಟ್ ಟಿಪ್ಸ್! -
ಬೆಲೆ ಏರಿಕೆಯ ಬಿಸಿ: ಟೊಮೆಟೊ, ಈರುಳ್ಳಿ ಇಲ್ಲದೆ ರುಚಿಕರ ಮತ್ತು ಪೌಷ್ಟಿಕ ಅಡುಗೆ ಮಾಡುವುದು ಹೇಗೆ? -
IND vs ENG ODI: ಇಂದಿನ ಹೈ-ವೋಲ್ಟೇಜ್ ಪಂದ್ಯದ ನೇರ ಪ್ರಸಾರ ಮತ್ತು ಕನ್ನಡ ಕಾಮೆಂಟರಿ ಮಿಸ್ ಮಾಡ್ಬೇಡಿ! -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಈ 7 ನಿಮಿಷದ ರೂಟೀನ್ ನಿಮ್ಮನ್ನು ರಕ್ಷಿಸುತ್ತದೆ! -
ಬೆಂಗಳೂರಿನಲ್ಲಿ ಇಂದೇ ವಿದ್ಯುತ್ ಕಡಿತ: ನಿಮ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸುರಕ್ಷಿತವಾಗಿಡುವುದು ಹೇಗೆ? -
ಕರ್ಕ ಸಂಕ್ರಾಂತಿ ವಿಶೇಷ: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ!
ಹದಿಹರೆಯದ ಹೆಣ್ಮಕ್ಕಳಲ್ಲಿ ತಿಂಗಳಿನಲ್ಲಿ 2 ಬಾರಿ ಋತುಸ್ರಾವ, ಇದು ಸಹಜವೇ?
ಹದಿಹರೆಯದ ಪ್ರಾಯದಲ್ಲಿ ಹೆಣ್ಮಕ್ಕಳ ದೇಹದಲ್ಲಿ ಹಲವು ರೀತಿಯ ಬದಲಾವಣೆಗಳಾಗುತ್ತಿರುತ್ತದೆ. ಹಾರ್ಮೋನ್‌ಗಳಲ್ಲಿ , ದೇಹದಾಕೃತಿಯಲ್ಲಿ ಬದಲಾವಣೆಯಾಗುತ್ತಿರುತ್ತದೆ, ಋತುಚಕ್ರ ಆರಂಭವಾಗಿರುತ್ತದೆ. ಈ ಋತುಚಕ್ರದಲ್ಲಿ ಕೆಲವೊಂದು ಬದಲಾವಣೆಯಾದಾಗ ಇದು ಸಹಜವೇ, ಅಲ್ಲವೇ ಎಂಬ ಗೊಂದಲ ಉಂಟಾಗುವುದು.
ಅತಿಯಾದ ರಕ್ತಸ್ರಾವ, ಮುಟ್ಟಾಗಿ ಒಂದು ವಾರವಾದರೂ ರಕ್ತಸ್ರಾವ ನಿಲ್ಲದಿರುವುದು, ಅತಿ ಕಡಿಮೆ ರಕ್ತಸ್ರಾವ, ಒಂದು ದಿನ ಬಿಟ್ಟು ಒಂದು ದಿನ ರಕ್ತಸ್ರಾವವಾಗುವುದು ಈ ರೀತಿಯೆಲ್ಲಾ ಕಂಡು ಬಂದಾಗ ಏನಾದರೂ ಸಮಸ್ಯೆ ಇದೆಯೇ ಎಂದು ಆತಂಕ ಮೂಡುವುದು ಸಹಜ. ಆದರೆ ಇದರಲ್ಲಿ ಯಾವುದು ಸಹಜ, ಯಾವುದು ಸಹಜವಲ್ಲ ಎಂದು ನೋಡೋಣ ಬನ್ನಿ:

ಅನಿಯಮಿತ ಮುಟ್ಟು
ಅನಿಯಮಿತ ಮುಟ್ಟು ಹಲವು ಹದಿಹರೆಯ ಪ್ರಾಯದ ಹೆಣ್ಮಕ್ಕಳಲ್ಲಿ ಕಂಡು ಬರುತ್ತಿದೆ. ಇದು ಸಹಜವೇ, ಅಸಹಜವೇ ಎಂಬ ಆತಂಕ ಆ ಹೆಣ್ಮಕ್ಕಳನ್ನು ಮಾತ್ರವಲ್ಲ, ಅವರ ಪೋಷಕರನ್ನು ಕಾಡುವುದು. ಹೆಣ್ಣು ಮೊದಲ ಬಾರಿ ಋತುಮತಿಯಾದ ಬಳಿಕ ಸಾಮಾನ್ಯವಾಗಿ ಪ್ರತಿ ತಿಂಗಳು ಮುಟ್ಟಾಗುತ್ತಾಳೆ. ಆದರೆ ಕೆಲವರು ತಿಂಗಳಿನಲ್ಲಿ ಎರಡು ಬಾರಿ ಅಥವಾ ಒಂದು ಬಾರಿಯಾದರೆ 4-5 ತಿಂಗಳವರೆಗೆ ಆಗದೆ ಇರುವುದು ಇದೆ. ಇದು ಸಹಜ, ಸಾಮಾನ್ಯವಾಗಿ ಎರಡು ವರ್ಷದವರೆಗೆ ಈ ರೀತಿ ಕಂಡು ಬರುತ್ತದೆ. ಆದ್ದರಿಂದ ಆತಂಕ ಪಡಬೇಕಾದ ಅಗ್ಯತವಿಲ್ಲ.
ಈ ಪ್ರಾಯದಲ್ಲಿ ದೇಹದಲ್ಲಿ ಹಲವಾರು ಹಾರ್ಮೋನ್‌ಗಳು ಬಿಡುಗಡೆಯಾಗುವುದು, ಒಮ್ಮೆ ದೇಹವು ಸೆಟ್ ಆದಾಗ ಋತುಚಕ್ರ ನಿಯಮಿತವಾಗಿ ನಡೆಯುವುದು. ಆದರೆ ನಿರಂತರವಾಗಿ ಈ ಸಮಸ್ಯೆ ಕಾಡುತ್ತಿದೆ ಎಂದಾದರೆ ವೈದ್ಯರನ್ನು ಭೇಟಿ ಮಾಡಿ.
ಅತ್ಯಧಿಕ ರಕ್ತಸ್ರಾವ
ತುಂಬಾನೇ ರಕ್ರಸ್ರಾವವಿದ್ದರೆ ಅದು ಸಹಜವಲ್ಲ. ಈ ರೀತಿಯಾದಾಗ ರಕ್ತಹೀನತೆ ಉಂಟಾಗಬಹುದು. ರಕ್ತಹೀನತೆ ಉಂಟಾದರೆ ಸುಸ್ತು ಹೆಚ್ಚಾಗುವುದು. ಆಗಾಗ ತಲೆನೋವು, ತಲೆಸುತ್ತು ಈ ಬಗೆಯ ಸಮಸ್ಯೆ ಕಂಡು ಬರುವುದು.
ಈ ರೀತಿಯ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ
* 8 ದಿನಕ್ಕೂ ಅಧಿಕ ದಿನ ರಕ್ತಸ್ರಾವವಿದ್ದರೆ
* ಪ್ಯಾಡ್ ಅಥವಾ ಟ್ಯಾಂಫೂನ್ ತುಂಬಾ ಬೇಗನೆ ಒದ್ದೆಯಾಗುವುದು, ಧರಿಸಿದ ಒಂದರಿಂದ-ೆರಡು ಗಂಟೆಯ ಒಳಗಾಗಿ ಪ್ಯಾಡ್ ಬದಲಾಯಿಸಬೇಕಾಗಿ ಬರುವುದು.
* ರಾತ್ರಿಯಲ್ಲಿ ಅತಿಯಾದ ರಕ್ತಸ್ರಾವದಿಂದಾಗಿ 2-3 ಪ್ಯಾಡ್ ಬದಲಾಯಿಸಬೇಕಾಗಿ ಬಂದಾಗ
* ರಕ್ತ ಹೆಪ್ಪು-ಹೆಪ್ಪಾಗಿ ಬರುತ್ತಿದ್ದರೆ
ಈ ರೀತಿಯ ಲಕ್ಷಣಗಳು ಕಂಡು ಬಂದಾಗ ನಿರ್ಲಕ್ಷ್ಯ ಮಾಡಬೇಡಿ. ರಕ್ತಹೀನತೆ ಉಂಟಾದರೆ ಅದು ತುಂಬಾನೇ ಅಪಾಯಕಾರಿ.
ಮುಟ್ಟಿನ ಸಮಯದಲ್ಲಿ ತುಂಬಾ ಹೊಟ್ಟೆ ನೋವು
ಮುಟ್ಟಿನ ಸಮಯದಲ್ಲಿ ನೋವು ಇರುವುದು ಸಹಜ. ಕೆಲವರಿಗೆ ಎದ್ದು ನಡೆದಾಡಲು ಸಾಧ್ಯವಾಗದಷ್ಟು ಕಷ್ಟವಾಗುವುದು. ಇದೆಲ್ಲಾ ಸಹಜ, ಸಹಿಸಲು ತುಂಬಾನೇ ಕಷ್ಟ ಅನಿಸಿದರೆ ವೈದ್ಯರ ಸಲಹೆ ಪಡೆಯಿರಿ. ಜೀರಿಗೆ ನೀರು ಕಾಯಿಸಿ ಕುಡಿಯುವುದು, ಎಳನೀರು ಕುಡಿಯುವುದು, ಹಾಟ್ ಬ್ಯಾಗ್ ಕಂಪ್ರೆಷನ್ ಇವುಗಳಿಂದ ನೋವು ತುಂಬಾನೇ ಕಡಿಮೆಯಾಗುವುದು.
ಯಾವಾಗ ಅನಿಯಮಿತ ಮುಟ್ಟು ಅದು ಸಹಜ ಅಲ್ಲವೇ ಅಲ್ಲ?
* ಋತುಮತಿಯಾಗಿ ಎರಡು ವರ್ಷ ಕಳೆದ ಮೇಲೆ ಋತುಚಕ್ರ ಸರಿಯಾಗಿ ಆಗುತ್ತಿದ್ದ ನಂತರ ಮತ್ತೆ ಅನಿಯಮಿತ ಮುಟ್ಟು ಉಂಟಾದಾಗ
* ಮುಟ್ಟು ನಿಂತು ಹೋದಾಗ, ಕೆಲವು ತಿಂಗಳಾದರೂ ಮುಟ್ಟು ಆಗದಿದ್ದರೆ
* ಮುಖದಲ್ಲಿ, ಗಲ್ಲದಲ್ಲಿ, ಎದೆಭಾಗದಲ್ಲಿ, ಹೊಟ್ಟೆಭಾಗದಲ್ಲಿ ಕೂದಲು ಬೆಳೆಯುತ್ತಿದ್ದರೆ
* ಒಂದು ವಾರಕ್ಕಿಂತ ಅಧಿಕ ದಿನ ಅಧಿಕ ರಕ್ತಸ್ರಾವವಿದ್ದರೆ
* ಮುಟ್ಟಾದಾಗ ಒಂದು ದಿನ ರಕ್ತಸ್ರಾವ, ಮತ್ತೊಂದು ದಿನ ರಕ್ತಸ್ರಾವ ಇಲ್ಲದೇ ಇದ್ದಾಗ
* 3 ವರ್ಷಕ್ಕಿಂತ ಅದಿಕ ಸಮಯದಿಂದ ಅನಿಯಮಿತ ಮುಟ್ಟಿನ ಸಮಸ್ಯೆ ಎದುರಿಸುತ್ತಿದ್ದರೆ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications