Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಅಂತಾರಾಷ್ಟ್ರೀಯ ಯೋಗ ದಿನ: ಯೋಗ ಆರಂಭವಾಗಿದ್ದು ಯಾವಾಗ..? ಏನಿದರ ಇತಿಹಾಸ?
ಯೋಗ ಭಾರತದಲ್ಲಿ ಹುಟ್ಟಿ ಈಗ ವಿಶ್ವದಾದ್ಯಂತ ಕೋಟಿ ಕೋಟಿ ಮಂದಿ ಅನುಸರಿಸುತ್ತಿದ್ದಾರೆ. ಯೋಗಕ್ಕೆ ಅಂತರಾಷ್ಟ್ರೀಯ ಮನ್ನಣೆ ಸಹ ಸಿಕ್ಕಿದೆ. ಅದರಲ್ಲಿ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಯೋಗವನ್ನು ಮತ್ತಷ್ಟು ಪಸರಿಸುವ ಹಾಗೂ ಯೋಗ ಮಾಡುವುದರಿಂದಾಗುವ ಆರೋಗ್ಯಲರ ಲಾಭಗಳ ವಿಶ್ವಕ್ಕೆ ತಿಳಿಸುವ ಧ್ಯೇಯ ಹೊಂದಲಾಗಿದೆ.
ಅಂತಾರಾಷ್ಟ್ರೀಯ ಯೋಗ ದಿನವನ್ನು ಪ್ರತಿ ವರ್ಷ ಜೂನ್ 21 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿ ಯೋಗ ಬೆಳೆದುಕೊಂಡು ಬಂದಿದೆ. ಈ ದಿನವನ್ನು ಮಾನವ ದೇಹದ ಆಂತರಿಕ ಮತ್ತು ಬಾಹ್ಯ ಯೋಗಕ್ಷೇಮಕ್ಕಾಗಿ ಮೀಸಲಿಡಲಾಗಿದೆ ಮತ್ತು ಪ್ರಪಂಚದಾದ್ಯಂತ ಈ ದಿನ ಕೋಟಿ ಕೋಟಿ ಮಂದಿ ಯೋಗ ಅಭ್ಯಾಸ ಮಾಡುತ್ತಾರೆ.

ಮೊದಲು ಯೋಗವನ್ನು ಕಂಡು ಹಿಡಿದಿದ್ದು ಯಾರು? ಯಾವ ಕಾರಣಕ್ಕೆ ಯೋಗ ಎಂಬುದು ಹುಟ್ಟಿಕೊಂಡಿತು ಎಂಬ ಹತ್ತಾರು ಪ್ರಶ್ನೆಗಳು ಸಹ ಹುಟ್ಟಿಕೊಂಡಿವೆ. ಇದಕ್ಕೆಲ್ಲ ಇಂದು ಉತ್ತರ ಪಡೆಯುವ ಪ್ರಯತ್ನ ಮಾಡೋಣ.
ಯೋಗವು 'ಯುಜಾ' ಎಂಬ ಸಂಸ್ಕೃತ ಪದದಿಂದ ಹುಟ್ಟಿಕೊಂಡಿದೆ. ಯುಜಾ ಎಂದರೆ "ಸೇರಲು ಅಥವಾ ಒಂದುಗೂಡಿಸಲು" ಮತ್ತು ದೇಹ ಮತ್ತು ಮನಸ್ಸಿನ ಏಕತೆಯನ್ನು ಪ್ರತಿನಿಧಿಸುತ್ತದೆ.
ನಾಗರೀಕತೆಯ ಆರಂಭದಿಂದಲೂ ಯೋಗವನ್ನು ಅಭ್ಯಾಸ ಮಾಡಲಾಗಿದೆ ಎಂದು ಇತಿಹಾಸದಲ್ಲಿ ಉಲ್ಲೇಖಳು ಸಿಗುತ್ತವೆ. ವಿಜ್ಞಾನವಾಗಿ ಯೋಗವು ಸಾವಿರಾರು ವರ್ಷಗಳ ಹಿಂದೆ ಪ್ರಾರಂಭವಾಯಿತು, ಯಾವುದೇ ಧರ್ಮಗಳು ಅಥವಾ ನಂಬಿಕೆ ವ್ಯವಸ್ಥೆಗಳು ಅಸ್ತಿತ್ವಕ್ಕೆ ಬರುವ ಮೊದಲೇ ಯೋಗ ಹುಟ್ಟಿತ್ತು ಎಂದು ನಂಬಲಾಗಿದೆ.
ಪುರಾಣದಲ್ಲೂ ಇದೆ ಯೋಗದ ಉಲ್ಲೇಖ
ಭಗವಾನ್ ಶಿವನನ್ನು ಯೋಗ ಪುರಾಣಗಳಲ್ಲಿ ಮೊದಲ ಯೋಗಿ, ಅಥವಾ ಆದಿಯೋಗಿ, ಮತ್ತು ಮೊದಲ ಗುರು ಅಥವಾ ಆದಿ ಗುರು ಎಂದು ಪರಿಗಣಿಸಲಾಗಿದೆ. ಆದಿಯೋಗಿಯು ಸಾವಿರಾರು ವರ್ಷಗಳ ಹಿಂದೆ ಹಿಮಾಲಯದ ಕಾಂತಿಸರೋವರ ಸರೋವರದ ತೀರದಲ್ಲಿ ಸಪ್ತಋಷಿಗಳಿಗೆ ಸಿದ್ಧಿ, ವಿಶೇಷ ಶಕ್ತಿ ನೀಡಿದ್ದರಂತೆ.
ಅಂತರಾಷ್ಟ್ರೀಯ ಯೋಗ ದಿನ 2024
ಈ ವರ್ಷದ ಅಂತರಾಷ್ಟ್ರೀಯ ಯೋಗ ದಿನದ ಥೀಮ್ "ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ". ಅಭ್ಯಾಸವು ವೈಯಕ್ತಿಕ ಆರೋಗ್ಯದ ಜೊತೆಗೆ ಸಾಮಾಜಿಕ ಯೋಗಕ್ಷೇಮವನ್ನು ಹೇಗೆ ಸುಧಾರಿಸುತ್ತದೆ ಎಂಬುದರ ಮೇಲೆ ಇದು ಕೇಂದ್ರೀಕರಿಸುತ್ತದೆ.
ಈ ವರ್ಷದ ಅಂತರಾಷ್ಟ್ರೀಯ ಯೋಗ ದಿನದ ಥೀಮ್ "ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ". ಅಭ್ಯಾಸವು ವೈಯಕ್ತಿಕ ಆರೋಗ್ಯದ ಜೊತೆಗೆ ಸಾಮಾಜಿಕ ಯೋಗಕ್ಷೇಮವನ್ನು ಹೇಗೆ ಸುಧಾರಿಸುತ್ತದೆ ಎಂಬುದರ ಮೇಲೆ ಇದು ಕೇಂದ್ರೀಕರಿಸುತ್ತದೆ.
ಪ್ರತೀ ವರ್ಷ ಜೂನ್ 21ರಂದು ವಿಶ್ವ ಯೋಗ ದಿನವನ್ನಾಗಿ ಆಚರಣೆ ಮಾಡಬೇಕು ಎಂದು ವಿಶ್ವಸಂಸ್ಥೆಯು ನಿರ್ಣಯ ತೆಗೆದುಕೊಂಡ ಬಳಿಕ ಪ್ರತೀ ವರ್ಷ ವಿಶ್ವ ಯೋಗ ದಿನವನ್ನು ಆಚರಿಸಲಾಗುತ್ತಿದೆ. 2015ರಲ್ಲಿ ಜೂನ್ 21ರಂದು ಮೊದಲ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.
ಇತಿಹಾಸದಲ್ಲಿ ಯೋಗ
ಕ್ರಿ.ಶ.400ರಲ್ಲಿ ಬರೆಯಲ್ಪಟ್ಟ ಯೋಗ ಸೂತ್ರ ಎನ್ನುವ ಪುಸ್ತಕದಲ್ಲಿ ಮೊದಲ ಬಾರಿಗೆ ಈ ಯೋಗಾ ಕುರಿತು ಉಲ್ಲೇಖವಿದೆ. ಇದರಲ್ಲಿ ಯೋಗದ ಬಗ್ಗೆ ವಿವರಣೆ ಇದೆ. ಈ ಪುಸ್ತಕದ ಎರಡನೇ ಆವೃತ್ತಿಯಲ್ಲಿ ಯೋಗವನ್ನು ಮನಸ್ಸಿನ ಅಲೆದಾಟ ನಿಲ್ಲಿಸುವುದು'' ಎಂದು ವಿವರಿಸಲಾಗಿದೆ. 20ನೇ ಶತಮನಾದಲ್ಲಿ ಶ್ರೀ ತಿರುಮಲೈ ಕೃಷ್ಣಾಮಾಚಾರಿ ಅವರು ರಚಿಸಿದ್ದರು. ಇವರ ಮೂವರು ಶಿಷ್ಯರು ಇದನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿದರು. ಇದರಿಂದಾಗಿ ಆರೋಗ್ಯ ಹಾಗೂ ಅವರ ಮಾನಸಿಕ ನೆಮ್ಮದಿ ಸೇರಿ ಹಲವು ರೀತಿ ಲಾಭಗಳು ಉಂಟಾಯಿತು.
2016ರಲ್ಲಿ ಯೋಗ ಜರ್ನಲ್ ಮತ್ತು ಯೋಗ ಅಲೈಯನ್ಸ್ ಕೈಗೊಂಡಿರುವಂತಹ ಅಧ್ಯಯನದ ಪ್ರಕಾರ ಅಮೆರಿಕಾದಲ್ಲಿ ಸುಮಾರು 36.7 ಮಿಲಿಯನ್ ಜನರು ಯೋಗಾಭ್ಯಾಸ ಮಾಡುತ್ತಿದ್ದಾರೆ ಎಂದು ಹೇಳಿದೆ. 2012ಕ್ಕೆ ಹೋಲಿಕೆ ಮಾಡಿದರೆ ಇದು ಶೇ.50ರಷ್ಟು ಹೆಚ್ಚಾಗಿತ್ತು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
