Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Yoga For Heart Healthy: ಹೃದಯದ ಆರೋಗ್ಯ ಕಾಪಾಡಿಕೊಳ್ಳಬೇಕೆ? ಇಲ್ಲಿವೆ 15 ಸುಲಭ ಯೋಗಾಸನಗಳು
ಹೃದಯದ ಆರೋಗ್ಯಕ್ಕೆ ಬೇಕು ಈ ಯೋಗಾಸನಗಳು. ಯೋಗಾಭ್ಯಾಸದಿಂದ ನಿಮ್ಮ ಹೃದಯದ ಆರೋಗ್ಯ ಸುಧಾರಿಸುತ್ತದೆ. ಹೌದು, ಹೃದಯದ ಆರೋಗ್ಯಕ್ಕೆ ಪೂರಕ ಜೀವನಶೈಲಿ ಅತ್ಯಗತ್ಯ. ಹೃದಯದ ಆರೋಗ್ಯಕ್ಕೆ ಮುಖ್ಯವಾಗಿ ಬೇಕಾಗಿದ್ದು ವ್ಯಾಯಾಮ, ಉತ್ತಮ ಆಹಾರ ಪದ್ಧತಿ ಮತ್ತು ಒತ್ತಡಮುಕ್ತ ಜೀವನ. ಕೆಲವೊಂದು ಯೋಗಾಸನಗಳನ್ನು ಮಾಡುವುದರ ಮುಲಕ ಹೃದಯವನ್ನು ಜೋಪಾನವಾಗಿಡಬಹುದು. ಬನ್ನಿ, ಆರೋಗ್ಯಕರ ಹೃದಯಕ್ಕೆ ನೆರವಾಗುವ ಯೋಗಾಸನಗಳ ಬಗ್ಗೆ ತಿಳಿಯೋಣ.
ಪ್ರತಿ ವರ್ಷ ಜೂನ್ 21ರಂದು ಅಂತರರಾಷ್ಟ್ರೀಯ ಯೋಗ ದಿನ (International Yoga day 2025) ಆಚರಿಸಲಾಗುತ್ತದೆ. ಯೋಗ ದೈಹಿಕ ಆರೋಗ್ಯಕ್ಕೆ ಎಷ್ಟು ಪೂರಕವೋ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಕೂಡ ಅಷ್ಟೇ ಮುಖ್ಯ. ಯೋಗ ಎಂದರೆ ವಿವಿಧ ಭಂಗಿಗಳನ್ನು ಮಾಡುತ್ತಾ, ಉಸಿರಿನ ಮೇಲೆ ಗಮನವಿಟ್ಟು ವಿಶ್ರಮಿಸುವುದು. ಇದರಿಂದಾಗಿ ಪ್ರತಿಯೊಂದು ಯೋಗಾಸನವೂ ಶ್ವಾಸಕೋಶದ ವ್ಯವಸ್ಥೆಯ ಮೇಲೆ ಒಂದು ನಿರ್ದಿಷ್ಟವಾದ ಪ್ರಭಾವ ಬೀರುತ್ತದೆ. ಇದರಿಂದಾಗಿ ಹೃದಯದ ಮೇಲೆಯೂ ಇದೇ ರೀತಿಯ ಪರಿಣಾಮ ಕಾಣಬಹುದು.
ತಾಡಾಸನ
ತಾಡಾಸನ ಅಥವಾ ಪರ್ವತದ ಭಂಗಿಯು ಹೃದಯವನ್ನು ಬಲಿಷ್ಟವಾಗಿಸುತ್ತದೆ. ಅಲ್ಲದೆ, ದೇಹದ ನಮ್ಯತೆಯನ್ನೂ ಹೆಚ್ಚಿಸುತ್ತದೆ.

ವೃಕ್ಷಾಸನ
ಇದನ್ನು ವೃಕ್ಷದ ಭಂಗಿ ಎನ್ನಬಹುದು. ವೃಕ್ಷಾಸನವು ಮನಸ್ಸನ್ನು ಪ್ರಶಾಂತಗೊಳಿಸುತ್ತದೆ. ಮನಸ್ಸಿಗೆ ಸಮಚಿತ್ತತೆ ತರುತ್ತದೆ. ಈ ಯೋಗಾಸನದಿಂದ ಹೃದಯವು ಆರೋಗ್ಯಕರವಾಗಿ ತನ್ನ ಕಾರ್ಯ ನಿರ್ವಹಿಸುತ್ತದೆ.
ಉತ್ತಿಥ ಹಸ್ತಪಾದಾಸನ
ಉತ್ತಿಥ ಹಸ್ತಪಾದಾಸನ ಹೃದಯದ ಆರೋಗ್ಯಕ್ಕೆ ಅತ್ಯಗತ್ಯ. ಈ ಯೋಗಾಸನದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಹೆಚ್ಚು ಏಕಾಗ್ರತೆ ಮತ್ತು ಬಲ ಅವಶ್ಯಕ.
ತ್ರಿಕೋನಾಸನ
ಇದು ಹೃದಯದ ವ್ಯಾಯಾಮವಾಗಿದೆ. ಹೃದಯವನ್ನು ತೆರೆಯುವ, ನಿಂತುಕೊಂಡು ಮಾಡಬೇಕಾದ ಭಂಗಿಯಲ್ಲಿ ಮಾಡಬೇಕಾದ ಯೋಗಾಸನವಾಗಿದೆ. ಆಳವಾಗಿ ಉಸಿರಾಡಿದಾಗ ಎದೆಯ ವಿಸ್ತಾರವಾಗುತ್ತದೆ. ಲಯಬದ್ಧವಾದ ಉಸಿರಾಟದಿಂದ ದಾಢ್ರ್ಯತೆ ಹೆಚ್ಚುತ್ತದೆ.
ವೀರಭದ್ರಾಸನ
ವೀರ ಭಂಗಿ ಅಥವಾ ವೀರಭದ್ರಾಸನವು ದೇಹದ ಸಮತೋಲನ ಹೆಚ್ಚಿಸುತ್ತದೆ. ಈ ಯೋಗಾಸನ ಒತ್ತಡವನ್ನು ನಿವಾರಿಸಿ, ಮನಸ್ಸನ್ನು ಪ್ರಶಾಂತವಾಗಿಡುತ್ತದೆ. ಇದು ಹೃದಯದ ಬಡಿತವನ್ನು ನಿಯಂತ್ರಣದಲ್ಲಿ ಇಡುತ್ತದೆ.
ಉತ್ಕಟಾಸನ
ಕುರ್ಚಿಯ ಭಂಗಿ ಅಥವಾ ಉತ್ಕಟಾಸನವು ಹೃದಯದ ಬಡಿತ ಮತ್ತು ಉಸಿರಾಟವೂ ಹೆಚ್ಚಾಗುವುದನ್ನು ಅನುಭವಿಸಬಹುದು. ಈ ಯೋಗಾಸನವು ದೇಹದ ಉಷ್ಣತೆಯನ್ನು ಹೆಚ್ಚಿಸಿ ಬಲವನ್ನೂ ವರ್ಧಿಸುತ್ತದೆ.
ಮಾರ್ಜರಿ ಆಸನ
ಈ ಯೋಗಾಸನವನ್ನು ಬೆಕ್ಕಿನ ಭಂಗಿ ಎಂದೂ ಕರೆಯುವರು. ಈ ಆಸನವನ್ನು ಉತ್ಕಟಾಸನದ ಬಳಿಕ ಮಾಡುವುದರಿಂದ ಹೃದಯದ ಬಡಿತವು ಮತ್ತೆ ಸಾಮಾನ್ಯ ಸ್ಥಿತಿಗೆ ಬರುತ್ತದೆ. ಮೃದುವಾಗಿ ಮತ್ತೆ ಲಯಬದ್ಧವಾಗುತ್ತದೆ.
ಅಧೋಮುಖಶ್ವಾನಾಸನ
ಅಧೋಮುಖಶ್ವಾನಾಸನವು ಶ್ವಾನದ ಭಂಗಿಯದ್ದಾಗಿದೆ. ಇದನ್ನು ವಿಶ್ರಮಿಸಲು ಬಳಸುತ್ತಾರೆ. ಇದರಿಂದ ವ್ಯವಸ್ಥೆಯು ಪ್ರಶಾಂತ ಮತ್ತು ಶಕ್ತಿಯುತವಾಗಿಯೂ ಇರುತ್ತದೆ.
ಭುಜಂಗಾಸನ
ಈ ಭುಜಂಗಾಸನ ಮಾಡಲು ಸ್ಫಿಂಕ್ಸ್ ಭಂಗಿಗಿಂತಲೂ ಹೆಚ್ಚು ಬಲ ಮತ್ತು ದಾಢ್ರ್ಯತೆ ಅಗತ್ಯವಿದೆ. ಈ ಆಸನವು ಎದೆಯ ವಿಸ್ತರಣವನ್ನು ಹೆಚ್ಚಾಗಿ ಮಾಡುತ್ತದೆ.
ಧನುರಾಸನ
ಧನುರಾಸನ ಇಡೀ ದೇಹವನ್ನು ಪ್ರಚೋದಿಸಿ ವಿಸ್ತರಣಗೊಳಿಸುತ್ತದೆ. ಈ ಆಸನವು ಎದೆಯ ಭಾಗವನ್ನು ತೆರೆಯುವುದಲ್ಲದೆ, ಅದನ್ನು ಬಲಿಷ್ಟವಾಗಿಯೂ ಮಾಡುತ್ತದೆ.
ಸೇತು ಬಂಧಾಸನ
ಸೇತುಬಂಧಾಸನವು ಧನುರಾಸನಕ್ಕಿಂತಲೂ ಸುಲಭವಾದ ಯೋಗಾಸನವಾಗಿದೆ. ಇದನ್ನು ಆಳವಾದ ಉಸಿರಾಟದೊಂದಿಗೆ ಮಾಡಿದಾಗ ಎದೆಯ ಭಾಗವನ್ನು ತೆರೆದು, ರಕ್ತಚಲನೆಯನ್ನು ಹೆಚ್ಚಿಸುತ್ತದೆ.
ಸಲಂಬ ಸರ್ವಾಂಗಾಸನ
ಇದನ್ನು ಅರ್ಧ ಭುಜದ ಹಲಗೆಯ ಭಂಗಿಯಲ್ಲಿ ಮಾಡಬೇಕು. ಈ ಆಸನವು ಪ್ಯಾರಾಸಿಂಪ ಥೆಟಿಕ್ ನರವ್ಯವಸ್ಥೆಯನ್ನು ಪ್ರಚೋದಿಸಿ, ಪ್ರಶಾಂತಗೊಳಿಸುತ್ತದೆ. ಎದೆಯ ವಿಸ್ತರಣವನ್ನು ಮಾಡುತ್ತದೆ. ಇದರಿಂದಾಗಿ ವಿಶ್ರಾಂತಿಯೂ ಉಂಟಾಗಿ, ದೇಹವು ಪುನಶ್ಚೇತವಾಗುತ್ತದೆ.
ಅರ್ಧಮತ್ಸ್ಯೇಂದ್ರಿಯಾಸನ
ಈ ಯೋಗಾಸನವನ್ನು ಕುಳಿತು ಅರ್ಧ ಬೆನ್ನಲುಬನ್ನು ತಿರುಚುವ ಮೂಲಕ ಮಾಡಲಾಗುತ್ತದೆ. ಇದು ಇಡೀ ಬೆನ್ನೆಲುಬಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಎದೆಯ ಒಂದು ಭಾಗದ ಬಳಿಕ ಮತ್ತೊಂದು ಭಾಗವನ್ನು ತೆರೆಯುತ್ತದೆ.
ಪಶ್ಚಿಮೋತ್ತಾಸನ
ಪಶ್ಚಿಮೋತ್ತಾಸನವನ್ನು ಕುಳಿತುಕೊಂಡು ಮುಂದೆ ಬಗ್ಗಿ ಮಾಡಬೇಕು. ಇದು ವಿಶ್ರಾಂತಿಯನ್ನು ನೀಡುತ್ತದೆ. ತಲೆಯನ್ನು ಹೃದಯದ ಮಟ್ಟಕ್ಕಿಂತಲೂ ಕೆಳತರುವುದರಿಂದ ಹೃದಯದ ಬಡಿತ ಮತ್ತು ಉಸಿರಾಟ ಕಡಿಮೆಯಾಗಿ, ವ್ಯವಸ್ಥೆಗೆ ವಿಶ್ರಾಂತಿ ನೀಡುತ್ತದೆ.
ದಂಡಾಸನ
ಕೋಲಿನ ಆಸನ ಅಥವಾ ದಂಡಾಸನವು ಇತರೆ ಯೋಗಾಸನಗಳಿಗಿಂತಲೂ ವ್ಯತಿರಿಕ್ತವಾಗಿದೆ. ಇದು ಒಳ್ಳೆಯ ಭಂಗಿಯನ್ನು ನೀಡಿ, ಬೆನ್ನನ್ನು ಬಲಿಷ್ಟವಾಗಿಸುತ್ತದೆ. ಭುಜಗಳ ಮತ್ತು ಎದೆಯ ವಿಸ್ತರಣವನ್ನೂ ಮಾಡುತ್ತದೆ.
ಇದರ ಜೊತೆಗೆ ಶವಾಸನ, ಅಂಜಲಿ ಮುದ್ರ, ಡಾಲ್ಫಿನ್ ಭಂಗಿ, ಡಾಲ್ಫಿನ್ನ ಹಲಗೆ ಭಂಗಿ, ಸ್ಫಿಂಕ್ಸ್ ಭಂಗಿಯ ಯೋಗಾಸನವನ್ನು ನೀವು ಮಾಡಬಹುದು. ಇದರಿಂದ ಮತ್ತೆ ಹೃದಯದ ಬಡಿತವು ಹೆಚ್ಚುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications













