Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಸೂರ್ಯನಮಸ್ಕಾರ ಮಾಡುವಾಗ ಈ 6 ಮಿಸ್ಟೇಕ್ಸ್ ಮಾಡಲೇಬೇಡಿ
ಜೂನ್ 21ಕ್ಕೆ ಅಂತರರಾಷ್ಟ್ರೀಯ ಯೋಗ ದಿನ. ಯೋಗದ ಮಹತ್ವದ ಬಗ್ಗೆ ದೇಶ-ವಿದೇಶಗಳಲ್ಲಿ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತಿದೆ. ಯೋಗ ಮಾಡಿದರೆ ಅದರಿಂದ ದೊರೆಯುವ ಪ್ರಯೋಜನಗಳ ಬಗ್ಗೆ ತಿಳಿಯಬೇಕೆಂದರೆ ಯೋಗ ಅಭ್ಯಾಸ ಮಾಡಿದರಷ್ಟೇ ಗೊತ್ತಾಗುವುದು. ನೀವು ಯೋಗ ಅಭ್ಯಾಸ ಆರಂಭಿಸಿ ಒಂದು ತಿಂಗಳು ಕಳೆಯುವಷ್ಟರಲ್ಲಿ ನಿಮ್ಮ ದೇಹದಲ್ಲಿ ಅನೇಕ ಧನಾತ್ಮಕ ಬದಲಾವಣೆಗಳು ಕಂಡು ಬರುವುದು. ನಿಮ್ಮ ಮಾನಸಿಕ ಆರೋಗ್ಯದಲ್ಲಿ ತುಂಬಾ ಬದಲಾವಣೆ ಕಂಡು ಬರುವುದು. ಆದ್ದರಿಂದಲೇ 'ಯೋಗ ಬಲ್ಲವನಿಗೆ ರೋಗ ಇಲ್ಲ' ಎಂದು ಹೇಳುವುದು.
ಅದರಲ್ಲೂ ಸೂರ್ಯ ನಮಸ್ಕಾರ ಮಾಡಿದರೆ ತುಂಬಾನೇ ಒಳ್ಳೆಯದು. ಆದರೆ ತುಂಬಾ ಜನರು ಸೂರ್ಯ ನಮಸ್ಕಾರ ಮಾಡುವಾಗ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ. ಸೂರ್ಯ ನಮಸ್ಕಾರ ಮಾಡಿದಾಗ ತಪ್ಪು ಮಾಡಿದರೆ ಅದರ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ನೀವು ಸೂರ್ಯ ನಮಸ್ಕಾರ ಮಾಡುವಾಗ ಈ ತಪ್ಪುಗಳನ್ನು ಮಾಡಲೇಬೇಡಿ:

1. ಉಸಿರಾಟದ ನಿಯಮಗಳನ್ನು ಸರಿಯಾಗಿ ಪಾಲಿಸದೆ ಇರುವುದು
ಬರೀ ನೀವು ಯೋಗಾ ಭಂಗಿಗಳನ್ನು ಮಾಡುವುದರಿಂದ ಸೂರ್ಯ ನಮಸ್ಕಾರದ ಪ್ರಯೋಜನ ಪಡೆಯಲು ಸಾಧ್ಯವಿಲ್ಲ. ಸೂರ್ಯ ನಮಸ್ಕಾರದ ಭಂಗಿಗಳನ್ನು ಅಭ್ಯಾಸ ಮಾಡುವಾಗ ಉಸಿರಾಟದ ನಿಯಮಗಳನ್ನು ಅಭ್ಯಾಸ ಮಾಡಬೇಕು. ಉಸಿರನ್ನು ಯಾವಾಗ ತೆಗೆದುಕೊಳ್ಳಬೇಕು, ಯಾವಾಗ ಬಿಡಬೇಕು ಎಂಬುವುದು ಗೊತ್ತಿರಬೇಕು.
2. ಹಸ್ತ ಉತ್ತಾನಾಸನ ಮಾಡದೇ ಇರುವುದು
ಸೂರ್ಯ ನಮಸ್ಕಾರ ಮಾಡುವಾಗ ಪ್ರತಿಯೊಂದು ಭಂಗಿ ಮಾಡಬೇಕು, ನೀವು ಹಸ್ತ ಉತ್ತಾನಾಸನ ಮಾಡದೆ ಇರುವುದು. ಈ ಆಸನ ಬೆನ್ನು ಮೂಳೆಯನ್ನು ಬಲಪಡಿಸುತ್ತದೆ, ಉಸಿರನ್ನು ದೀರ್ಘವಾಗಿ ತೆಗೆದುಕೊಳ್ಳಲು ಸಹಕಾರಿ. ಈ ಆಸನ ಮಾಡದೆ ಇದ್ದರೆ ಉಸಿರಾಟದ ವ್ಯಾಯಾಮದಲ್ಲಿ ವ್ಯತ್ಯಾಸ ಉಂಟಾಗುವುದು. ಅಲ್ಲದೆ ಈ ಆಸನ ಮಾಡದೇ ಹೋದರೆ ನಿಮ್ಮ ಬೆನ್ನುಮೂಳೆ ಹಾಗೂ ಕುತ್ತಿಗೆ ಭಾಗಕ್ಕೆ ಒತ್ತಡ ಬೀಳುವುದು. ಆದ್ದರಿಂದ ಈ ಆಸನ ಮಿಸ್ ಮಾಡಬೇಡಿ.
3. ಚದುರಂಗ ದಂಡಾಸನ ಸರಿಯಾಗಿ ಮಾಡದೇ ಇರುವುದು
ಸೂರ್ಯ ನಮಸ್ಕಾರ ಮಾಡುವಾಗ ಚದುರಂಗ ದಂಡಾಸನವನ್ನು ಸರಿಯಾದ ರೀತಿಯಲ್ಲಿ ಮಾಡದೆ ಇದ್ದರೆ ಇದರಿಂದ ಕೈ, ಬೆನ್ನು ಮೂಳೆಗೆ ಹಾನಿಯುಂಟಾಗುವುದು. ನೀವು ಸೂರ್ಯ ನಮಸ್ಕಾರದ ಪ್ರಯೋಜನ ಪಡೆಯಲು ಚದುರಂಗ ದಂಡಾಸನವನ್ನು ಸರಿಯಾದ ರೀತಿಯಲ್ಲಿ ಮಾಡಬೇಕು.
4. ಭುಜಾಂಗಾಸನ ಹಾಗೂ ಊರ್ಧ್ವಮುಖ ಶವಾಸನ ನಡುವೆ ಗೊಂದಲ
ಸೂರ್ಯ ನಮಸ್ಕಾರ ಮಾಡುವಾಗ ನೀವು ಭುಜಾಂಗಾಸನವನ್ನು ಸರಿಯಾದ ರೀತಿಯಲ್ಲಿ ಮಾಡಬೇಕು. ಎದೆಭಾಗವನ್ನು ಅಗಲಿಸಿ, ತಲೆಯನ್ನು ಮೇಲೆಕ್ಕೆ ಎತ್ತಬೇಕು.
5. ಸೂರ್ಯ ನಮಸ್ಕಾರ ಸುತ್ತು ಹೆಚ್ಚು ಮಾಡುವುದು
ಸೂರ್ಯ ನಮಸ್ಕಾರ ಮೊದ ಮೊದಲು ಅಭ್ಯಾಸ ಮಾಡುವವರು ಜೋಶ್‌ನಿಂದ ತಮ್ಮ ಸುತ್ತುಗಳನ್ನು ಅಧಿಕ ಮಾಡುವ ತಪ್ಪು ಮಾಡುತ್ತಾರೆ, ಆ ರೀತಿ ಮಾಡಬಾರದು. ನೀವು ನಿಧಾನಕ್ಕೆ ನಿಮ್ಮ ಸುತ್ತುಗಳನ್ನು ಹೆಚ್ಚಿಸಬೇಕು. ಮೊದಲ ದಿನ ಎರಡು ರೌಂಡ್ ಮಾಡಿದರೆ ನಂತರ 3.. 4 ಈ ರೀತಿ ಹೆಚ್ಚಿಸಬೇಕು. ಸೂರ್ಯ ನಮಸ್ಕಾರದ 12 ಭಂಗಿಗಳನ್ನು ಮಾಡುವಾಗ ಉಸಿರಾಟದ ವ್ಯಾಯಾಮ ಸರಿಯಾಗಿ ಮಾಡಿ.
6. ಸೂರ್ಯ ನಮಸ್ಕಾರದ ಭಂಗಿಗಳನ್ನು ಸಂಪೂರ್ಣ ಮಾಡದೇ ಇರುವುದು
ಸೂರ್ಯ ನಮಸ್ಕಾರದಲ್ಲಿ 12 ಭಂಗಿಗಳು ಇರಬೇಕು. ಆ 12 ಭಂಗಿ ಮಾಡಿದರೆ ಮಾತ್ರ ಒಂದು ರೌಂಡ್ ಕಂಪ್ಲೀಟ್ ಆಗುವುದು. ಅದರಲ್ಲಿ ಒಂದು ಭಂಗಿ ಮಿಸ್ ಆದರೂ ಸೂರ್ಯ ನಮಸ್ಕಾರದ ರೌಂಡ್ ಸಂಪೂರ್ಣವಾಗಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
