Latest Updates
-
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ!
ನಿಮ್ಮ ದೇಹದ ಕುರಿತ ನಿಮಗೆ ಖಂಡಿತ ಅಚ್ಚರಿ ಮೂಡಿಸುವ ಸಂಗತಿಗಳು, ಸಕತ್ ಇಂಟೆರೆಸ್ಟಿಂಗ್ ಆಗಿದೆ
ಜಗತ್ತಿನಲ್ಲಿರುವ ಸಕಲ ಜೀವ ಸಂಕುಲಗಳ ದೇಹ ರಚನೆಯನ್ನು ಗಮನಿಸಿದರೆ ಯಾವುದೇ ವಿಸ್ಮಯಕ್ಕಿಂತ ಕಡಿಮೆಯಿಲ್ಲ. ಪ್ರತಿಯೊಂದು ಜೀವಿಗೂ ಅದರದ್ದೇ ಆದ ಪ್ರತ್ಯೇಕ ಅಕಾರ, ಗುಣಗಳು, ಆಯಸ್ಸು, ಹಾವ ಭಾವ ಇವೆಲ್ಲವನ್ನೂ ನೋಡಿದರೆ ನಿಜಕ್ಕೂ ಆಶ್ಚರ್ಯವೆನಿಸುತ್ತಿದೆ.

ಜಗತ್ತಿನ ಎಲ್ಲಾ ಪ್ರಾಣಿಗಳು ಒಂದೆಡೆಯಾದರೆ ಮನುಷ್ಯನೇ ಮತ್ತೊಂದು ಕಡೆ. ಮಿಕ್ಕೆಲ್ಲ ಪ್ರಾಣಿಗಳನ್ನು ಮೂಕ ಪ್ರಾಣಿಗಳು ಎಂದು ಕರೆದರೆ ಮನುಷ್ಯ ಮಾತ್ರ ಬುದ್ಧಿವಂತ ಪ್ರಾಣಿ ಎನಿಸಿಕೊಂಡಿದ್ದಾನೆ. ಮಾನವನ ದೇಹ ರಚನೆ ಕೂಡ ಮಿಕ್ಕೆಲ್ಲ ಪ್ರಾಣಿಗಳಿಗಿಂತ ಭಿನ್ನವಾಗಿದೆ. ಮಂಗನಿಂದ ಮಾನವ ಎಂದು ಕರೆಯಿಸಿಕೊಳ್ಳುವ ಮನುಜನ ಜೀವದಲ್ಲಿಯೂ ನಿಮಗೆ ತಿಳಿದಿರದಂತಹ ಸಾಕಷ್ಟು ಕುತೂಹಲಕಾರಿ ಅಂಶಗಳಿವೆ. ಹಾಗಾದರೆ ನಿಮ್ಮ ದೇಹದ ಬಗ್ಗೆ ನಿಮಗೆ ತಿಳಿದಿರದ ಕೆಲವು ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ :
ನಿಮ್ಮ ದೇಹದಲ್ಲಿರುವ ಉಗುರುಗಳ ಬಗ್ಗೆ ಇರುವ ಈ ಗುಟ್ಟು ನಿಮಗೆ ತಿಳಿದಿತ್ತೇ..?
ಮನುಷ್ಯನ ದೇಹದ ಕೈ ಹಾಗೂ ಕಾಲಿನಲ್ಲಿರುವ ಬೆರಳುಗಳಲ್ಲಿ ಉಗುರುಗಳು ಬೆಳೆಯುತ್ತವೆ ಎನ್ನುವುದು ತಿಳಿದಿರುವ ವಿಚಾರ. ಇದರ ಬೆಳವಣಿಗೆಯು ನಿಮ್ಮ ವಯಸ್ಸು, ಲಿಂಗ ಎಲ್ಲದರ ಮೇಲೂ ಅವಲಂಬಿತವಾಗಿರುತ್ತದೆ. ಆದರೆ ಎಂದಾದರೂ ನಿಮ್ಮ ಕಾಲಿನ ಉಗುರುಗಳಿಗೆ ಹೋಲಿಕೆ ಮಾಡಿದರೆ ನಿಮ್ಮ ಕೈ ಬೆರಳುಗಳ ಉಗುರು ಬಹಳ ವೇಗವಾಗಿ ಬೆಳೆಯುತ್ತದೆ ಎಂಬ ವಿಚಾರವನ್ನು ಗಮನಿಸಿದ್ದೀರೇ..? ಯಾಕೆ ಹೀಗೆ ಆಗುತ್ತದೆ ಎಂಬ ಯೋಚನೆ ಮಾಡಿದ್ದೀರೇ..? ನಿಮ್ಮ ಹೃದಯಕ್ಕೆ ಸಮೀಪದಲ್ಲಿರುವ ಕೈ ಬೆರಳುಗಳು ಹೆಚ್ಚಿನ ಆಮ್ಲಜನಕ ಹಾಗೂ ಪೋಷಕಾಂಶಗಳನ್ನು ಸ್ವೀಕರಿಸುತ್ತವೆ. ಕೈ ಹಾಗೂ ಕಾಲುಗಳಲ್ಲಿ ಬೆಳೆಯುವ ಉಗುರುಗಳ ಕಾರ್ಯ ವಿಧಾನ ಒಂದೇ ಆಗಿದ್ದರೂ ಸಹ ಇದೊಂದು ವಿಚಾರಕ್ಕೆ ಕೈ ಬೆರಳಿನ ಉಗುರುಗಳು ಕಾಲ್ಬೆರಳಿನ ಉಗುರುಗಳಿಗಿಂತ ಉದ್ದವಾಗಿ ಬೆಳೆಯುತ್ತವೆ.
ನಮ್ಮ ದೇಹದ ಪ್ರಬಲ ಸ್ನಾಯು ಯಾವುದೆಂದು ತಿಳಿದರೆ ದಂಗಾಗುತ್ತೀರಿ..!
ಮನುಷ್ಯನ ದೇಹವು 500ಕ್ಕೂ ಅಧಿಕ ಸ್ನಾಯುಗಳನ್ನು ಹೊಂದಿದೆ. ಆದರೆ ಇವುಗಳಲ್ಲಿ ಅತ್ಯಂತ ಬಲಿಷ್ಠವಾದ ಸ್ನಾಯು ಎಂದರೆ ಅದು ನಮ್ಮ ನಾಲಗೆ. ನಾಲಗೆಯು ಅತೀ ಹೆಚ್ಚು ಸೂಕ್ಷ್ಮಾಣು ಜೀವಿಗಳನ್ನು ಹೊಂದಿರುವ ಸ್ನಾಯು ಆಗಿದೆ. ನಾಲಗೆಯನ್ನು ನಾವು ಮಾತನಾಡಲು, ಆಹಾರ ಸೇವನೆ ಮಾಡಲು. ಆಹಾರದ ರುಚಿಯನ್ನು ಸವಿಯಲು ಹೀಗೆ ನಾನಾ ಕಾರಣಗಳಿಗೆ ಬಳಸುತ್ತೇವೆ.
ಅಯ್ಯೋ ದೇವರೇ..! ನಮ್ಮ ದೇಹದ ಈ ಭಾಗ ಆಗಲೇ ಸತ್ತು ಹೋಗಿದೆ..!
ಮನುಷ್ಯ ಜೀವಂತವಾಗಿದ್ದರೂ ಸಹ ಆತನ ದೇಹದ ಎಲ್ಲಾ ಅಂಗಗಳು ಜೀವಂತವಾಗಿರುವುದಿಲ್ಲ. ಕೂದಲು ಎಪಿರ್ಡಮಿಸ್ ಒಳಗೆ ಇರುವಾಗ ಮಾತ್ರ ಜೀವ ಹೊಂದಿರುತ್ತದೆ. ಆದರೆ ಕೂದಲು ಸತ್ತ ಬಳಿಕವೂ ಬಹಳ ಬಲಿಷ್ಠವಾಗಿ ಇರುತ್ತವೆ. ಒಬ್ಬ ವ್ಯಕ್ತಿಯ ರಕ್ತದಲ್ಲಿ ಏನೇನಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಕೂದಲು ನೀಡುತ್ತವೆ. ಇದೇ ಕಾರಣಕ್ಕೆ ಅಪರಾಧಗಳು ಸಂಭವಿಸಿದಾಗ ಅಥವಾ ಡೋಪಿಂಗ್ ಪರೀಕ್ಷೆಗಳಲ್ಲಿ ಕೂದಲು ಪ್ರಮುಖ ಪಾತ್ರ ವಹಿಸುತ್ತವೆ.
ಮೂಳೆ ಸ್ಪರ್ಧೆ ಇಟ್ಟರೆ ನಿಮ್ಮನ್ನು ಸೋಲಿಸುತ್ತಾರೆ ಪುಟಾಣಿ ಮಕ್ಕಳು.!
ಮಾನವನ ದೇಹಕ್ಕೆ ಒಂದು ನಿರ್ದಿಷ್ಟ ಆಕಾರ ನೀಡುವುದು ಮೂಳೆಗಳು. ಒಬ್ಬ ಮನುಷ್ಯನ ದೇಹದಲ್ಲಿ 206 ಮೂಳೆಗಳು ಇರುತ್ತದೆ. ಆದರೆ ಮಕ್ಕಳ ದೇಹದಲ್ಲಿ ಮೂಳೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತದೆ. ಬೆಳವಣಿಗೆ ಆಗುತ್ತಾ ಹೋದಂತೆ ಈ ಮೂಳೆಗಳು ಹೊಂದಿಕೊಳ್ಳಲು ಆರಂಭಿಸುತ್ತವೆ. ಬಳಿಕ ಸಾಮಾನ್ಯ ಮನುಷ್ಯನಲ್ಲಿರುವಂತೆ 206 ಮೂಳೆಗಳನ್ನು ಹೊಂದುತ್ತಾರೆ.
ನೋವಾಗಿರುವುದನ್ನು ಪತ್ತೆ ಹಚ್ಚಲು ನಿಮ್ಮ ಮೆದುಳಿನಿಂದ ಸಾಧ್ಯವಿಲ್ಲ..!
ನಮಗೆ ಎಲ್ಲಿಯಾದರೂ ಏಟಾದ ತಕ್ಷಣ ನಾವು ಮೆದುಳಿಗೆ ಸಂದೇಶ ಹೋಗಿ ಅಲ್ಲಿಂದ ನಮಗೆ ನೋವಿನ ಅನುಭವವಾಗಬಹುದು ಎಂದು ಭಾವಿಸಿದ್ದೇವೆ. ಅಸಲಿಗೆ ಮೆದುಳಿನಲ್ಲಿ ನೇರವಾಗಿ ನೋವಿಗೆ ಸಂಬಂಧಿಸಿದ ಯಾವುದೇ ಸಂವೇದಕಗಳು ಇರುವುದಿಲ್ಲ. ತಲೆಬುರುಡೆ ಹಾಗೂ ಮೆದುಳನ್ನು ಆವರಿಸಿಕೊಂಡಿರುವ ಪೊರೆಯು ಈ ನೋವು ಸಂವೇದಕಗಳನ್ನು ಹೊರ ಸೂಸುವ ಕಾರ್ಯ ಮಾಡುತ್ತವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications










