Latest Updates
-
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ?
PCOS:ಹಾರ್ಮೋನ್ ನಿಯಂತ್ರಿಸಲು ಪರಿಣಾಮಕಾರಿಯಾದ ಮನೆಮದ್ದುಗಳು
ಪಿಎಸ್‌ಒಎಸ್ ಎಂಬುವುದು ಇತ್ತೀಚಿನ ವರ್ಷಗಳಲ್ಲಿ ತುಂಬಾ ಹೆಣ್ಮಕ್ಕಳಿಗೆ ಕಾಡುತ್ತಿರುವ ಸಮಸ್ಯೆಯಾಗಿದೆ. ಕೆಲವರಿಗೆ ಈ ಸಮಸ್ಯೆ ಹದಿಹರೆಯದ ಪ್ರಾಯದಲ್ಲಿಯೇ ಕಂಡು ಬರುತ್ತಿರುವುದು ಆಘಾತಕಾರಿ ವಿಷಯ. ಪಿಸಿಒಎಸ್ ಸಮಸ್ಯೆ ಉಂಟಾದರೆ ಅನೇಕ ಅಡ್ಡಪರಿಣಾಮಗಳು ಉಂಟಾಗುವುದು. ಎಷ್ಟು ದಂಪತಿಗೆ ಮಕ್ಕಳಾಗುವುದಕ್ಕೆ ಪ್ರಮುಖ ಸಮಸ್ಯೆಯಾಗಿರುವುದು ಪಿಸಿಒಎಸ್ ಸಮಸ್ಯೆಯಾಗಿದೆ.
ಪಿಸಿಒಎಸ್ ಸಮಸ್ಯೆಗೆ ನೀವು ಮನೆಮದ್ದು ತಿಳಿಯಲು ಇಷ್ಟಪಡುವುದಾದರೆ ಇಲ್ಲಿ ಕೆಲವೊಂದು ಮನೆಮದ್ದು ನೀಡಿದ್ದೇವೆ. ಈ ಮನೆಮದ್ದು ಮಾಡುವುದರಿಂದ ಪಿಸಿಒಎಸ್ ಲಕ್ಷಣಗಳು ಕಡಿಮೆಯಾಗುವುದು.

ನೆಲ್ಲಿಕಾಯಿ: ಪಿಸಿಒಎಸ್ ಸಮಸ್ಯೆ ಇರುವವರಿಗೆ ನೆಲ್ಲಿಕಾಯಿ ತುಂಬಾನೇ ಪರಿಣಾಮಕಾರಿಯಾದ ಮನೆಮದ್ದಾಗಿದೆ. ನೆಲ್ಲಿಕಾಯಿಯಲ್ಲಿ ಕಬ್ಬಿಣದಂಶ, ಕ್ಯಾಲ್ಸಿಯಂ, ವಿಟಮಿನ್ ಸಿ ಇರುವುದರಿಂದ ಸಂತಾನೋತ್ಪತ್ತಿ ಸಾಮರ್ಥ್ಯ ಉಳಿಸಲು ಸಹಕಾರಿ. ಹಾರ್ಮೋನ್‌ಗಳನ್ನು ಸಮತೋಲನಕ್ಕೆ ತಂದು ದೇಹದಲ್ಲಿ ಅನಗ್ಯತ ಕೂದಲು ಬರುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ.
ಜೇನು
ಪಿಸಿಒಎಸ್ ಸಮಸ್ಯೆ ಇರುವವರೆಗೆ ಜೇನು ಸೇವಿಸುವಂತೆ ಸಲಹೆ ನೀಡಲಾಗಿದೆ. ಜೇನು ಚಯಪಚಯ ಕ್ರಿಯೆಗೆ ತುಂಬಾ ಒಳ್ಳೆಯದು. ಇದರಿಂದ ತೂಕ ನಿಯಂತ್ರಣಕ್ಕೆ ಸಹಕಾರಿಯಾಗಿದೆ.
ಜೇನನ್ನು ಹೇಗೆ ಬಳಸಬೇಕು
ಒಂದು ಚಮಚ ಜೇನನ್ನು ಬಿಸಿ ನೀರಿಗೆ ಹಾಕಿ ಕುಡಿಯಿರಿ. ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಹೀಗೆ ಸೇವಿಸಿದರೆ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.
ಅಗಸೆ ಬೀಜ
ಅಗಸೆ ಬೀಜ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ವಿಟಮಿನ್ ಬಿ, ಪೊಟಾಷ್ಯಿಯಂ, ಮೆಗ್ನಿಷ್ಯಿಯಂ, ರಂಜಕ, ಆ್ಯಂಟಿಆಕ್ಸಿಡೆಂಟ್, ಒಮೆಗಾ 3 ಕೊಬ್ಬಿನಂಶ ಇರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದನ್ನು ಸೇವಿಸುವುದರಿಂದ ದೇಹಕ್ಕೆ ಪೋಷಕಾಂಶ ಸಿಗುವುದರ ಜೊತೆಗೆ ತೂಕ ನಿಯಂತ್ರಿಸಲು ಸಹಕಾರಿ.
ಅಗಸೆ ಬೀಜ ಪುಡಿ, ಒಂದು ಚಮಚ ಅಗಸೆ ಬೀಜವನ್ನು ಬಿಸಿ ನೀರಿಗೆ ಹಾಕಿ ಕುಡಿದರೆ ಒಳ್ಳೆಯದು.
ಮೆಂತೆ ಬೀಜ
ಮೆಂತೆ ಬೀಜದಲ್ಲಿ ಆ್ಯಂಟಿಆಕ್ಸಿಡೆಂಟ್ ಇರುವುದರಿಂದ ತೂಕ ಇಳಿಕೆಗೆ, ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣಕ್ಕೆ, ಹಾರ್ಮೋನ್‌ಗಳ ಸಮತೋಲನ ಕಾಪಾಡಲು ಸಹಕಾರಿ.
ಮೆಂತೆ ಬೀಜವನ್ನು ರಾತ್ರಿ ನೀರಿನಲ್ಲಿ ನೆನೆ ಹಾಕಿ, ಆ ನೀರನ್ನು ಬೆಳಗ್ಗೆ ಕುಡಿಯಿರಿ. ನೀವು ಮೆಂತೆಯನ್ನು ನೀರಿನಲ್ಲಿ ಹಾಕಿ ಕುದಿಸಿ 4-5 ಗಂಟೆಯಾದ ಮೇಲೆ ಕುಡಿಯಬಹುದು.
ಪಿಸಿಒಎಸ್ ಸಮಸ್ಯೆಯಿಂದ ಸಂಪೂರ್ಣ ಹೊರಬರಬಹುದೇ?
ಪಿಸಿಒಎಸ್ ಸಮಸ್ಯೆಯಿಂದ ಸಂಪೂರ್ಣ ಹೊರಬರಲು ಸಾಧ್ಯವೇ ಎಂದು ನೋಡುವುದಾದರೆ ಈ ಕುರಿತು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಅದೇ ಔಷಧ ತೆಗೆದುಕೊಳ್ಳುವುದು, ವ್ಯಾಯಾಮ, ಆಹಾರಕ್ರಮದಿಂದ ಹಾರ್ಮೋನ್‌ಗಳನ್ನು ನಿಯಂತ್ರಣದಲ್ಲಿಡಬಹುದು.
ಪಿಸಿಒಎಸ್‌ಗೆ ಯಾವ ಔಷಧಿಯನ್ನು ನೀಡಲಾಗುವುದು?
ಗರ್ಭ ನಿರೋಧಕ ಮಾತ್ರೆಗಳು, ಆ್ಯಂಟಿ ಆ್ಯಂಡ್ರೋಜೆನ್ಸ್, ಇನ್ಸುಲಿನ್ ಸೆನ್ಸಿಟಿಂಗ್ ಡ್ರಗ್ಸ್, clomid, ಸಂತಾನೋತ್ಪತ್ತಿಗೆ ಔಷಧಗಳನ್ನು ನೀಡಲಾಗುವುದು. ಈ ಔಷಧಗಳು ಮಹಿಳೆಯರಲ್ಲಿ ಮುಟ್ಟು ನಿಯಮಿತವಾಗಲೂ, ಹಾರ್ಮೋನ್‌ಗಳು ಸಮತೋಲನದಲ್ಲಿಡಲು ಸಹಕಾರಿಯಾಗಿದೆ.
ಪಿಸಿಒಎಸ್ ಸಮಸ್ಯೆಯಿದ್ದರೆ ಗರ್ಭಧಾರಣೆಯ ಸಾಧ್ಯತೆ ಹೆಚ್ಚಿಸುವುದು ಹೇಗೆ?
ಪಿಸಿಒಎಸ್ ಸಮಸ್ಯೆಯಿದ್ದರೆ ಅಂಡಾಣು ಉತ್ಪತ್ತಿಯಲ್ಲಿ ತೊಂದರೆಯಾಗುವುದು. ತುಂಬಾ ಅಧಿಕ ತೂಕವಿದ್ದರೆ ಮೈ ತೂಕವನ್ನು ಕಡಿಮೆ ಮಾಡಬೇಕು. ಇನ್ನು ಕೆಲವರಿಗೆ ಸರ್ಜರಿ ಮಾಡಬೇಕಾಗುತ್ತದೆ.
ಪಿಸಿಒಎಸ್ ಸಮಸ್ಯೆಯಿದ್ದರೆ ತೂಕ ಇಳಿಕೆ ಅವಶ್ಯಕ ಏಕೆ?
ಪಿಸಿಒಎಸ್ ಸಮಸ್ಯೆಯಿದ್ದರೆ ಮೈ ತೂಕ ಹೆಚ್ಚಾಗುವುದು. ದೇಹದಲ್ಲಿ ಆ್ಯಂಡ್ರೋಜೆನ್ ಪ್ರಮಾಣ ಹೆಚ್ಚಾದರೆ ಮೈ ತೂಕ ಹೆಚ್ಚಾಗುವುದು. ಯಾವಾಗ ಮೈ ತೂಕ ಹೆಚ್ಚಾಗುವುದೋ ಮುಟ್ಟಿನಲ್ಲಿ ವ್ಯತ್ಯಾಸ ಕಂಡು ಬರುವುದು. . ಆದ್ದರಿಂದ ಮೈ ತೂಕ ಕಡಿಮೆ ಮಾಡುವುದು ಅವಶ್ಯಕ.
ಮೈ ತೂಕ ಕಡಿಮೆಯಾಗುವುದೇ?
ಪಿಸಿಒಎಸ್ ಇದ್ದರೂ ಆರೋಗ್ಯಕರ ಆಹಾರಶೈಲಿ ಹಾಗೂ ನಿಯಮಿತ ವ್ಯಾಯಾಮ ಮಾಡುವುದರಿಂದ ಮೈ ತೂಕವನ್ನು ಕಡಿಮೆ ಮಾಡಬಹುದು. ಮೈ ತೂಕ ನಿಯಂತ್ರಣಕ್ಕೆ ಬಂದರೆ ಹಾರ್ಮೋನ್‌ಗಳು ಕೂಡ ಸಮತೋಲನಕ್ಕೆ ಬರುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications