Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಏಷ್ಯಾದಲ್ಲಿ ಕ್ಯಾನ್ಸರ್ ಅಪಾಯ ಅಧಿಕವಿರುವ 2ನೇ ರಾಷ್ಟ್ರ ಭಾರತ: ಕ್ಯಾನ್ಸರ್ ಹೆಚ್ಚುತ್ತಿರಲು ಕಾರಣವೇನು?
ಕ್ಯಾನ್ಸರ್ ಎಂಬ ಮಹಾಮಾರಿ ಇತ್ತೀಚಿನ ವರ್ಷಗಳಲ್ಲಿ ತುಂಬಾ ಸಾಮಾನ್ಯವಾಗಿದೆ, ಬಹುತೇಕ ಕುಟುಂಬಗಳು ಈ ಕ್ಯಾನ್ಸರ್‌ನಿಂದಾಗಿ ಸಂಕಷ್ಟಕ್ಕೆ, ಸಂಕಟಕ್ಕೆ ಒಳಗಾಗುತ್ತಿದ್ದಾರೆ. ಕ್ಯಾನ್ಸರ್ ಬಂದರೆ ಆ ವ್ಯಕ್ತಿಯನ್ನು ಮಾತ್ರವಲ್ಲ, ಇಡೀ ಮನೆಯವರನ್ನು ಸಂಕಷ್ಟಕ್ಕೆ ದೂಡುತ್ತದೆ, ಅದರಲ್ಲೂ ಮಧ್ಯಮ ವರ್ಗದ ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್ ಬಂದರೆ ಆರ್ಥಿಕವಾಗಿ ತುಂಬಾನೇ ತೊಂದರೆ ಅನುಭವಿಸುತ್ತಾರೆ, ಮಾಡಿರುವ ಅಲ್ಪಸ್ವಲ್ಪ ಉಳಿತಾಯ ಎಲ್ಲವೂ ಖರ್ಚಾಗಿ ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುವಂತಾಗುವುದು.

ಏಷ್ಯಾದಲ್ಲಿಯೇ ಅತೀ ಹೆಚ್ಚು ಕ್ಯಾನ್ಸರ್ ರೋಗಿಗಳಿರುವ ದೇಶಗಳಲ್ಲಿ ಭಾರತ 2ನೇ ಸ್ಥಾನದಲ್ಲಿರುವುದು ಆತಂಕದ ಸಂಗತಿ, ಕೆಲವು ದಶಕಗಳ ಹಿಂದೆ ಅಪರೂಪಕ್ಕೆ ಕಂಡು ಬರುತ್ತಿದ್ದ ಕ್ಯಾನ್ಸರ್ ಈಗ ತುಂಬಾನೇ ಹೆಚ್ಚಾಗುತ್ತಿದೆ, ಬದಲಾದ ಜೀವನಶೈಲಿ ಅಂದರೆ ಅಧಿಕ ರಾಸಾಯನಿಕ ಬಳಸಿರುವ ಆಹಾರಗಳ ಸೇವನೆ ಕ್ಯಾನ್ಸರ್ ಎಂಬ ಮಹಾಮಾರಿ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.
ಬೆಚ್ಚಿಬೀಳಿಸುವ ಅಂಕಿಅಂಶ
2010ರಲ್ಲಿ 12 ಲಕ್ಷ ಕ್ಯಾನ್ಸರ್ ಕೇಸ್‌ಗಳು ಪತ್ತೆಯಾಗಿದ್ದು 9.3 ಲಕ್ಷ ಕ್ಯಾನ್ಸರ್ ರೋಗಿಗಳು ಸಾವನ್ನಪ್ಪಿದ್ದಾರೆ.
ಭಾರತ, ಚೀನಾ, ಜಪಾನ್ ಈ ಭಾಗಗಳಲ್ಲಿ ಕೇಸ್‌ಗಳು ಹೆಚ್ಚಾಗಿ ಕಂಡು ಬರುತ್ತಿದೆ.
* ಚೀನಾದಲ್ಲಿ 48 ಲಕ್ಷ ಜನರಿಗೆ ಕ್ಯಾನ್ಸರ್ ಕಾಣಿಸಿಕೊಂಡಿದ್ದು ಅದರಲ್ಲಿ 27 ಲಕ್ಷ ಜನ ಸಾವನ್ನಪ್ಪಿದ್ದಾರೆ.
ಯಾವ ಬಗೆಯ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತಿದೆ?
ಶ್ವಾಸಕೋಶದ ಕ್ಯಾನ್ಸರ್
TBL ಕ್ಯಾನ್ಸರ್ ಇದು ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ
* ಗರ್ಭಕೋಶದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ.
ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳೇನು?
ತಂಬಾಕು ಸೇವನೆ
* ಪರಿಸರ ಮಾಲಿನ್ಯ (ವಾಯು, ಜಲ, ತಿನ್ನುವ ಆಹಾರ)
ಧೂಮಪಾನ: ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಾಗಿ ಧೂಮಪಾನಿಗಳಲ್ಲಿ ಕಂಡು ಬರುತ್ತಿದೆ. ಅತ್ಯಧಿಕ ವಾಯುಮಾಲಿನ್ಯ ಇರುವ ಕಡೆ ವಾಸಿಸುತ್ತಿದ್ದರೆ ಅವರಲ್ಲಿಯೂ ಶ್ವಾಸಕೋಶಕ್ಕೆ ಹಾನಿಯಾಗಿ ಶ್ವಾಸಕೋಶದ ಕ್ಯಾನ್ಸರ್ ಉಂಟಾಗುವುದು.
ಆಹಾರ: ನಮ್ಮ ಅನಾರೋಗ್ಯಕರ ಆಹಾರಕ್ರಮ ಕೂಡ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ, ಸಕ್ಕರೆ ಹೆಚ್ಚಾಗಿ ಸೇವಿಸುವುದು, ರಾಸಾಯನಿಕ ಹಾಕಿರುವ ಹಣ್ಣು-ತರಕಾರಿಗಳ ಸೇವನೆ ಇವೆಲ್ಲಾ ಕ್ಯಾನ್ಸರ್ ಅಪಾಯ ಹೆಚ್ಚು ಮಾಡುತ್ತೆ.
* ವಿಕಿರಣ: ಸೂರ್ಯನ ನೇರಳಾತೀತ ಕಿರಣಗಳು ಬಿದ್ದಾಗ ತ್ವಚೆ ಕ್ಯಾನ್ಸರ್ ಉಂಟಾಗುವುದು.
* ಹಾರ್ಮೋನ್ ಥೆರಪಿ
ಹಾರ್ಮೋನ್ ಬದಲಾವಣೆಯ ಥೆರಪಿಯಿಂದ ಕೂಡ ಕೆಲವೊಂದು ಬಾರಿ ಕ್ಯಾನ್ಸರ್ ಉಂಟಾಗುವುದು.
ಕ್ಯಾನ್ಸರ್ ಅಪಾಯ ತಡೆಗಟ್ಟುವುದು ಹೇಗೆ?
* ಧೂಮಪಾನ ಬಿಡಿ, ತಂಬಾಕು ಸೇವಿಸಬೇಡಿ
* ಆರೋಗ್ಯಕರ ಆಹಾರ ಸೇವಿಸಿ, ರಾಸಾಯನಿಕ ಬಳಸದೆ ಇರುವ ಆಹಾರ ಸೇವಿಸಿ.
* ವ್ಯಾಯಾಮ ಮಾಡಿ, ಇದು ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು
* ನಿಯಮಿತ ಕ್ಯಾನ್ಸರ್ ತಪಾಸಣೆ ಮಾಡಿಸಿ.
ಕ್ಯಾನ್ಸರ್‌ನ ಪ್ರಾರಂಭದ ಲಕ್ಷಣಗಳು
* ಇದ್ದಕ್ಕಿದ್ದಂತೆ ತೂಕ ಕಡಿಮೆಯಾಗುವುದು
* ತುಂಬಾ ಸುಸ್ತು
* ನಿತ್ಯ ನೋವು ಕಾಣಿಸಿಕೊಳ್ಳುವುದು
* ರಾತ್ರಿಯಲ್ಲಿ ಜ್ವರ ಬರುವುದು
* ತ್ವಚೆಯಲ್ಲಿ ಮಚ್ಚೆ ಕಂಡು ಬರುವುದು ಅದರ ಗಾತ್ರ, ಬಣ್ಣದಲ್ಲಿ ವ್ಯತ್ಯಾಸ
* ತ್ವಚೆಯಲ್ಲಿ ಗಂಟು ಗಂಟು ಕಂಡು ಬರುವುದು
* ಉಸಿರಾಟದಲ್ಲಿ ತೊಂದರೆ
* ನುಂಗಲು ಕಷ್ಟವಾಗುವುದು
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
