Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭಾರತದಲ್ಲಿ HMPV ವೈರಸ್‌ನ 3 ಪ್ರಕರಣ ಪತ್ತೆ..! ಆತಂಕದ ಅಗತ್ಯವಿಲ್ಲ ಎಂದ ಸರ್ಕಾರ..!
ಹೊಸ ವರ್ಷದ ಆರಂಭದಲ್ಲೇ ವೈರಸ್ ಸಂಬಂಧಿ ಸಮಸ್ಯೆಯೊಂದು ಜಾಗತಿಕ ತಲ್ಲಣಕ್ಕೆ ಕಾರಣವಾಗಿದೆ. ಚೀನಾದಲ್ಲಿ ಕಾಣಿಸಿಕೊಂಡಿದೆ ಎನ್ನಲಾಗಿದ್ದ HMPV ವೈರಸ್ ಈಗ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ವರದಿಯಾಗುತ್ತಿರುವುದು ಆತಂಕ ಹೆಚ್ಚಾಗಲು ಕಾರಣವಾಗುತ್ತಿದೆ. ಅದರಲ್ಲೂ ಭಾರತದಲ್ಲಿ ಈ ಪ್ರಕರಣಗಳು ವರದಿಯಾಗಿರುವುದು ಮತ್ತಷ್ಟು ಆಘಾತ ಉಂಟು ಮಾಡುತ್ತಿದೆ.
ಈಗಾಗಲೇ ಚೀನಾ, ಜಪಾನ್, ಮಲೇಷ್ಯಾ, ಹಾಂಗ್‌ಕಾಂಗ್‌ನಲ್ಲಿ ಈ ವೈರಸ್ ಪತ್ತೆಯಾಗಿದೆ. ಭಾರತದಲ್ಲಿ ಈಗ ಈ ಪ್ರಕರಣಗಳ ಸಂಖ್ಯೆ 3ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ. ಬೆಂಗಳೂರಿನಲ್ಲಿ 2 ಹಾಗೂ ಮಹಾರಾಷ್ಟ್ರಲ್ಲಿ ಒಂದು ವೈರಸ್ ಪತ್ತೆಯಾಗಿದೆ. ಹೀಗಾಗಿ ಈಗ ಕಟ್ಟೆಚ್ಚರಕ್ಕೆ ಮುಂದಾಗಲಾಗಿದೆ.

3 ತಿಂಗಳ ಇಬ್ಬರು ಮಕ್ಕಳು ಹಾಗೂ 8 ತಿಂಗಳ ಮಗುವಿನಲ್ಲಿ ಈ ವೈರಸ್ ಪತ್ತೆಯಾಗಿದೆ. ಹಾಗೆ ಗುಜರಾತ್‌ನಲ್ಲಿ ಶಂಕಿತ ಪ್ರಕರಣವೊಂದು ವರದಿಯಾಗಿದೆ ಎಂದು ಸುದ್ದಿಯಾಗಿದೆ. ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ಹಲವು ರೀತಿಯ ಅನಾರೋಗ್ಯ ಲಕ್ಷಣಗಳಿಂದ ಕೂಡಿದೆ. ಉಸಿರಾಟ ಸಮಸ್ಯೆ ಪ್ರಮುಖ ಲಕ್ಷಣದಲ್ಲಿ ಒಂದಾಗಿದೆ. ಅದರಲ್ಲೂ ಹೆಚ್ಚಾಗಿ ಮಕ್ಕಳಲ್ಲಿ ಇದು ಕಂಡುಬರಲಿದೆ ಎಂದು ಹೇಳಲಾಗಿದೆ.
ಭಾರತದಲ್ಲಿ ಹರಡುತ್ತಿದೆ ಎಂದ ಐಸಿಎಂಆರ್
HMPV ಈಗಾಗಲೇ ಭಾರತ ಸೇರಿ ಹಲವು ದೇಶಗಳಿಗೆ ಹರಡುತ್ತಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ತಿಳಿಸಿದೆ. ಹಾಗೆ ಭಾರತ ಯಾವುದೇ ವೈರಸ್ ಸಂಬಂಧಿ ಸಮಸ್ಯೆಗೆ ತಯಾರಾಗಿದೆ. ಎಲ್ಲಾ ತುರ್ತು ವೈದ್ಯಕೀಯ ಸೌಲಭ್ಯಗಳ ಹೊಂದಿದ್ದು, ಸುಸಜ್ಜಿತವಾಗಿದೆ ಎಂದು ಐಸಿಎಂಆ್ ತಿಳಿಸಿದೆ. ಭಾರತದಲ್ಲಿ ವರದಿಯಾಗುತ್ತಿರುವ ಹೆಚ್‌ಎಂಪಿವಿ ವೈರಸ್ ಪ್ರಕರಗಳಲ್ಲಿ ಯಾವುದೇ ಪ್ರಯಾಣದ ಇತಿಹಾಸವಿಲ್ಲ ಎಂದು ಕೂಡ ತಿಳಿಸಿದೆ.
HMPV ವೈರಸ್ ಎಂದರೇನು?
ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ ಅಥವಾ HMPV ಹೊಸದಾಗಿ ಕಂಡುಬಂದಿರುವ ವೈರಸ್ ಅಲ್ಲ. ಇದು 2001ರಲ್ಲಿ ಪತ್ತೆ ಮಾಡಲಾಗಿರುವ ವೈರಸ್ ಆಗಿದೆ. ಇದು ಹಲವು ರೀತಿಯ ಉಸಿರಾಟ ಸಂಬಂಧಿ ಸಮಸ್ಯೆಯಾಗಿ ಕಾಡುವ ವೈರಸ್ ಆಗಿದೆ. ಸೋಂಕಿತ ವ್ಯಕ್ತಿಗಳು ಅಥವಾ ಅವರ ಸಂಪರ್ಕಕ್ಕೆ ಬರುವ ವಸ್ತುಗಳ ಬಳಕೆಯಿಂದ ಹರಡುತ್ತದೆ.
ಸಾಮಾನ್ಯವಾಗಿ ಕೆಮ್ಮು, ಜ್ವರ, ಗಂಟಲು ನೋವು, ಉಸಿರಾಡುವಾಗ ಅಡೆತಡೆ, ತಲೆನೋವು, ಮೈ ಕೈ ನೋವು, ಕೀಲು ನೋವು ಕಂಡುಬರುತ್ತದೆ. ಇದು ಕೋವಿಡ್ ರೀತಿಯ ಲಕ್ಷಣಗಳಂತೆ ಕಾಣಿಸಬಹುದು.
ಅಚ್ಚರಿ ಏನೆಂದರೆ ಈ ವೈರಸ್ ನಿಗೂಢವಾಗಿ ಅಥವಾ ಈ ವರ್ಷ ಹುಟ್ಟಿದ ವೈರಸ್ ಅಲ್ಲ. ಬದಲಿಗೆ ಹಲವು ವರ್ಷದಿಂದಲೂ ಜಾಗತಿಕವಾಗಿದೆ. ಸುಮಾರು 20 ವರ್ಷಕ್ಕಿಂತ ಹಿಂದೆಯೂ ಕೂಡ ಈ ವೈರಸ್ ಜನರನ್ನು ಕಾಡಿದೆ. ಸಾಮಾನ್ಯವಾಗಿ ಜುಲೈ ಅಥವಾ ಆಗಸ್ಟ್‌ನಿಂದ ಡಿಸೆಂಬರ್ ಅಥವಾ ಜನವರಿವರೆಗೆ ಇದು ಹೆಚ್ಚಾಗಿ ಹರಡಲು ಆರಂಭಿಸುತ್ತದೆ. ಶುಷ್ಕ ವಾತಾವರಣದಲ್ಲಿ ವೈರಸ್ ಹೆಚ್ಚು ಕಾಲ ಬದುಕಬಹುದು ಎಂದು ಅಂದಾಜಿಸಲಾಗಿದೆ.
ಈ ವೈರಸ್ ಹೇಗೆ ಹರುಡುತ್ತದೆ?
HMPV ಉಸಿರಾಟದ ಕಾಯಿಲೆಗಳಿಗೆ ಕಾರಣವಾಗಬಹುದು ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ವೈರಸ್ ಆಗಿದೆ. 2001 ರಲ್ಲಿ ಈ ವೈರಸ್ ಮೊದಲ ಬಾರಿಗೆ ಪತ್ತೆ ಮಾಡಲಾಗಿತ್ತು ಆದ್ರೆ ಇದು ಉಸಿರಾಟ ಕ್ರಿಯೆಗೆ ಗಮನಾರ್ಹವಾಗಿ ಸಮಸ್ಯೆ ತರುವುದು ಎಂದು ಪರಿಣಿಸಲಾಗಿತ್ತು. ಸಾಮಾನ್ಯವಾಗಿ ವೈರಸ್ ತಗುಲಿರುವ ವ್ಯಕ್ತಿಯ ಸಂಪರ್ಕಕ್ಕೆ ಬಂದಾಗ ಈ ವೈರಸ್ ಹರಡುತ್ತದೆ ಎಂದು ತಿಳಿದುಬಂದಿದೆ. ಯಾರಿಗಾದರೂ ಕೆಮ್ಮು, ನೆಗಡಿ ಇದ್ದಲ್ಲಿ ಸೋಂಕು ಹರಡದಂತೆ ಇತರರೊಂದಿಗೆ ಸಂಪರ್ಕಕ್ಕೆ ಬರದಂತೆ ಜಾಗೃತೆ ವಹಿಸಿದರೆ ಹಾಗೂ ಮಾಸ್ಕ್ ಧರಿಸುವ ಅಭ್ಯಾಸ ಇಟ್ಟುಕೊಂಡರೆ ಈ ವೈರಸ್ ಹರಡುವಿಕೆ ತಡೆಯಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications