Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಕ್ಯಾನ್ಸರ್ ರಾಜಧಾನಿ ಆಗ್ತಿದೆ ಭಾರತ..! ಬೆಚ್ಚಿಬೀಳಿಸುವ ಅಂಕಿ ಅಂಶ ಹೊರಕ್ಕೆ..!
ಕ್ಯಾನ್ಸರ್ ಎಂಬ ಮಹಾಮಾರಿ ಇತ್ತೀಚಿನ ವರ್ಷಗಳಲ್ಲಿ ತುಂಬಾ ಸಾಮಾನ್ಯವಾಗಿದೆ, ಬಹುತೇಕ ಕುಟುಂಬಗಳು ಈ ಕ್ಯಾನ್ಸರ್‌ನಿಂದಾಗಿ ಸಂಕಷ್ಟಕ್ಕೆ, ಒಳಗಾಗುತ್ತಿದ್ದಾರೆ. ಕ್ಯಾನ್ಸರ್ ಬಂದರೆ ಆ ವ್ಯಕ್ತಿಯನ್ನು ಮಾತ್ರವಲ್ಲ, ಇಡೀ ಮನೆಯವರನ್ನು ಸಂಕಷ್ಟಕ್ಕೆ ದೂಡುತ್ತದೆ, ಅದರಲ್ಲೂ ಮಧ್ಯಮ ವರ್ಗದ ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್ ಬಂದರೆ ಆರ್ಥಿಕವಾಗಿ ತುಂಬಾನೇ ತೊಂದರೆ ಅನುಭವಿಸುತ್ತಾರೆ, ಮಾಡಿರುವ ಅಲ್ಪಸ್ವಲ್ಪ ಉಳಿತಾಯ ಎಲ್ಲವೂ ಖರ್ಚಾಗಿ ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುವಂತಾಗುತ್ತದೆ.
ಇನ್ನು ಕ್ಯಾನ್ಸರ್ ಕಾಯಿಲೆ ಭಾರತದಲ್ಲಿ ಏರಿಕಾಗತಿಯಲ್ಲಿದೆ. ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಭಾರತೀಯರು ಅತ್ಯಧಿಕ ಪ್ರಮಾಣದಲ್ಲಿ ಕ್ಯಾನ್ಸರ್‌ಗೆ ಒಳಗಾಗುತ್ತಿದ್ದಾರೆ. ಅದರಲ್ಲೂ ಭಾರತದ ಯುವ ಪೀಳಿಗೆ ಕ್ಯಾನ್ಸರ್ ಮಹಾಮಾರಿಗೆ ತುತ್ತಾಗುತ್ತಿರುವುದು ಆತಂಕ ಹುಟ್ಟಿಸಿದೆ.

ಏಷ್ಯಾದಲ್ಲಿಯೇ ಅತೀ ಹೆಚ್ಚು ಕ್ಯಾನ್ಸರ್ ರೋಗಿಗಳಿರುವ ದೇಶಗಳಲ್ಲಿ ಭಾರತ 2ನೇ ಸ್ಥಾನದಲ್ಲಿರುವುದು ಆತಂಕದ ಸಂಗತಿ, ಕೆಲವು ದಶಕಗಳ ಹಿಂದೆ ಅಪರೂಪಕ್ಕೆ ಕಂಡು ಬರುತ್ತಿದ್ದ ಕ್ಯಾನ್ಸರ್ ಈಗ ತುಂಬಾನೇ ಹೆಚ್ಚಾಗುತ್ತಿದೆ, ಬದಲಾದ ಜೀವನಶೈಲಿ ಅಂದರೆ ಅಧಿಕ ರಾಸಾಯನಿಕ ಬಳಸಿರುವ ಆಹಾರಗಳ ಸೇವನೆ ಕ್ಯಾನ್ಸರ್ ಎಂಬ ಮಹಾಮಾರಿ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.
ಆದರೆ ಹೊಸ ಅಧ್ಯಯನವೊಂದರ ಪ್ರಕಾರ ಇನ್ನು ಎರಡು ವರ್ಷದಲ್ಲಿ ಭಾರತ ಕ್ಯಾನ್ಸರ್‌ನ ರಾಜಧಾನಿಯಾಗಲಿದೆಯಂತೆ. 2024 ರ ವಿಶ್ವ ಆರೋಗ್ಯ ದಿನದಂದು ಅಪೊಲೊ ಆಸ್ಪತ್ರೆಗಳು ಬಿಡುಗಡೆ ಮಾಡಿದ ಹೆಲ್ತ್ ಆಫ್ ನೇಷನ್ ವರದಿಯು ಭಾರತವನ್ನು "ವಿಶ್ವದ ಕ್ಯಾನ್ಸರ್ ರಾಜಧಾನಿ" ಎಂದು ಕರೆದಿದೆ. ಜಾಗತಿಕ ದರಗಳಿಗೆ ಹೋಲಿಸಿದರೆ ಭಾರತದಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಮಾಣವು ವಿಶೇಷವಾಗಿ ಆತಂಕಕಾರಿಯಾಗಿದೆ ಎಂದು ಅದು ಗಮನಿಸಿದೆ.
ವರದಿಯ ಪ್ರಕಾರ, 2020ರಲ್ಲಿ ಭಾರತದಲ್ಲಿ 13 ಲಕ್ಷ ಜನರು ಕ್ಯಾನ್ಸರ್ ಹೊಂದಿದ್ದರು ಮತ್ತು 2025 ರಲ್ಲಿ ಇದು 15.7 ಲಕ್ಷ ಪ್ರಕರಣಗಳಿಗೆ ಏರುವ ನಿರೀಕ್ಷೆಯಿದೆ. ಇದು ಐದು ವರ್ಷಗಳಲ್ಲಿ ಇದು ಶೇ.13 ರಷ್ಟು ಹೆಚ್ಚಳವಾಗಿದೆ. ಇದರ ಜೊತೆ ಕ್ಯಾನ್ಸರ್‌ಗೆ ಒಳಗಾಗುತ್ತಿರುವವರ ಸರಾಸರಿ ವಯಸ್ಸು ಕಡಿಮೆಯಾಗಿರುವುದು ಮತ್ತಷ್ಟು ಆತಂಕ ಹೆಚ್ಚಾಗುವಂತೆ ಮಾಡಿದೆ. ಇದು ಬೇರೆಲ್ಲಾ ದೇಶಕ್ಕೆ ಹೋಲಿಸಿದರೆ ಕಡಿಮೆ ವಯಸ್ಸಿನವರಲ್ಲಿ ಕ್ಯಾನ್ಸರ್ ಕಂಡುಬರುತ್ತಿದೆ.
"ಭಾರತದಲ್ಲಿ ಕ್ಯಾನ್ಸರ್ ರೋಗನಿರ್ಣಯದ ಸರಾಸರಿ ವಯಸ್ಸು ಇತರ ದೇಶಗಳಿಗಿಂತ ಕಡಿಮೆಯಾಗಿದೆ. ಅಪೊಲೊ ಸಂಶೋಧನೆಗಳ ಪ್ರಕಾರ, ಭಾರತದಲ್ಲಿ ಸ್ತನ ಕ್ಯಾನ್ಸರ್ ರೋಗನಿರ್ಣಯದ ಸರಾಸರಿ ವಯಸ್ಸು 52 ಆಗಿದೆ, ಆದರೆ ಯುಎಸ್ಎ ಮತ್ತು ಯುರೋಪ್‌ನಲ್ಲಿ ಈ ವಯಸ್ಸು 63 ಆಗಿದೆ. ಶ್ವಾಸಕೋಶದ ಕ್ಯಾನ್ಸರ್‌ನ ಸರಾಸರಿ ವಯಸ್ಸು 59 ವರ್ಷವಾಗಿದೆ, ಆದರೆ ಬೇರೆ ರಾಷ್ಟ್ರಗಳಲ್ಲಿ ಈ ವಯಸ್ಸು ಸರಾಸರಿ 70 ವರ್ಷಗಳಾಗಿದೆ" ಎಂದು ವರದಿ ಹೇಳಿದೆ.
ಭಾರತದಲ್ಲಿ ಕ್ಯಾನ್ಸರ್‌ಗೆ ಒಳಗಾಗುತ್ತಿರುವ ಶೇ.30ರಷ್ಟು ಮಂದಿ 50 ವರ್ಷಕ್ಕಿಂತ ಕೆಳಗಿನ ವಯಸ್ಸಿನವರು ಎಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಇದಲ್ಲದೆ ಭಾರತದಲ್ಲಿ ಕ್ಯಾನ್ಸರ್ ಸ್ಕ್ರೀನಿಂಗ್ ಅಥವಾ ಕ್ಯಾನ್ಸರ್ ಪರೀಕ್ಷೆಗೆ ಒಳಗಾಗುತ್ತಿರುವ ಸಂಖ್ಯೆ ಸಹ ಕಡಿಮೆಯಾಗಿದೆ.
ಸ್ತನ ಕ್ಯಾನ್ಸರ್ ಅಮೆರಿಕದಲ್ಲಿ ಶೇ.82ರಷ್ಟು ಸ್ಕ್ರೀನಿಂಗ್ ಹಾಗೂ ಯುಕೆಯಲ್ಲಿ ಶೇ.70ರಷ್ಟು ಮತ್ತು ಚೀನಾದಲ್ಲಿ ಶೇ.23ರಷ್ಟು ಇದ್ದರೆ ಭಾರತದಲ್ಲಿ ಈ ಸಂಖ್ಯೆ ಕೇವಲ 1.9ರಷ್ಟಿದೆ. ಇನ್ನು ಗರ್ಭಕಂಠದ ಕ್ಯಾನ್ಸರ್‌ನ ಸ್ಕ್ರೀನಿಂಗ್ ಅಮೆರಿಕದಲ್ಲಿ ಶೇ 73ರಷ್ಟು, ಯುಕೆಯಲ್ಲಿ ಶೇ. 70 ರಷ್ಟು ಚೀನಾದಲ್ಲಿ ಶೇ. 43ರಷ್ಟು ಇದ್ದರೆ ಭಾರತದಲ್ಲಿ ಈ ದರ ಶೇ 0.9ರಷ್ಟಿದೆ. ಹೀಗಾಗಿ ಭಾರತದಲ್ಲಿ ಕ್ಯಾನ್ಸರ್ ಪರೀಕ್ಷೆಗೆ ಒಳಗಾಗುವವರ ಸಂಖ್ಯೆ ಭಾರೀ ಕಡಿಮೆ ಇದ್ದು, ಇದೂ ಸಹ ಸಾವಿನ ಪ್ರಮಾಣ ಏರಿಕೆಯಾಗುವಲ್ಲಿ ಪ್ರಮುಖ ಕಾರಣವಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
