Latest Updates
-
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ!
ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಜ್ವರ, ಕೆಮ್ಮು, ಶೀತದ ಸಮಸ್ಯೆ: ಆರೋಗ್ಯ ತಜ್ಞರ ಅಭಿಪ್ರಾಯವೇನು?
ಡಾ ಶ್ರೀವಿದ್ಯಾ ಎಸ್, ಸಮಾಲೋಚಕರು - ಇಂಟರ್ನಲ್ ಮೆಡಿಸಿನ್, ಮಣಿಪಾಲ್ ಆಸ್ಪತ್ರೆ, ಯಶವಂತಪುರ
ಚಳಿಗಾಲದಲ್ಲಿನ ಶೀತಲ ವಾತಾವರಣದಲ್ಲಿ ಜ್ವರ ಮತ್ತು ಉಸಿರಾಟದ ಸೋಂಕುಗಳು ಹರಡುವುದನ್ನು ನೋಡುವುದು ಸಾಮಾನ್ಯವಾಗಿದೆ. ಮೇಲಾಗಿ ಕಳೆದ ಎರಡು ತಿಂಗಳುಗಳಲ್ಲಿ ತಂಪಾದ ರಾತ್ರಿಗಳು, ಮೋಡ ಕವಿದ ದಿನಗಳು, ಮತ್ತು ಕಡಿಮೆ ಸೂರ್ಯನ ಬೆಳಕು, ವೈರಲ್ ಸೋಂಕುಗಳ ತ್ವರಿತ ಹರಡುವಿಕೆಗೆ ಅನುಕೂಲಕರ ಪರಿಸ್ಥಿತಿ ಉಂಟುಮಾಡಿವೆ. ಇದರಿಂದಾಗಿ ಮೇಲ್ಭಾಗದ ಶ್ವಾಸಕೋಶಕ್ಕೆ ಸಂಬಂಧಿತ ವೈರಲ್ ಸೋಂಕುಗಳಲ್ಲಿ ಗಮನಾರ್ಹ ಹೆಚ್ಚಳವಾಗಿದೆ.

ಜ್ವರ ಮತ್ತು ಉಸಿರಾಟದ ಸೋಂಕುಗಳನ್ನೂ ಒಳಗೊಂಡಂತೆ ಶೇಖಡಾ 75 ರಿಂದ 80% ಮೇಲ್ಭಾಗದ ಶ್ವಾಸಕೋಶದ ವೈರಲ್ ಸೋಂಕುಗಳ ತೊಂದರೆಯಿಂದ ಪೀಡಿತ ಜನರು ಹೆಚ್ಚಾಗಿ ಆಸ್ಪತ್ರೆಗೆ ಬರುತ್ತಿರುವುದನ್ನು ನಾವು ನಮ್ಮ ನೋಡುತ್ತಿದ್ದೇವೆ. ಇವರಲ್ಲಿ ಸೌಮ್ಯದಿಂದ ತೀವ್ರ ಮಟ್ಟಿನಲ್ಲಿ ರೋಗಲಕ್ಷಣಗಳನ್ನು ಹೊಂದಿದವರೂ ಇದ್ದಾರೆ. ಇದರಲ್ಲಿ ಹೆಚ್ಚಿನ ಪ್ರತಿಶತ ರೋಗಿಗಳು ಒಪಿಡಿ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಕಿರಿಯ ಮಕ್ಕಳು ಮತ್ತು ಹಿರಿಯ ವಯಸ್ಕರು, ವಿಶೇಷವಾಗಿ ಶ್ವಾಸಕೋಶ ಸಂಭಂದಿತ ಸಹ-ರೋಗಗಳಿರುವ ವ್ಯಕ್ತಿಗಳಲ್ಲಿ ಆಸ್ಪತ್ರೆಗೆ ಸೇರಿಸುವ ಪರಿಸ್ಥಿತಿ ಉಲ್ಭಣವಾಗಿರುವ ಉದಾಹರಣೆಗಳು ಕೂಡ ಇವೆ ಎಂದು ಡಾ ಶ್ರೀವಿದ್ಯಾ ವಿವರಿಸಿದ್ದಾರೆ.
ಡಾ ಇರ್ಫಾನ್ ಕೆಜೆ, ಸಲಹೆಗಾರ- ಇಂಟರ್ನಲ್ ಮೆಡಿಸಿನ್, ಮಣಿಪಾಲ್ ಆಸ್ಪತ್ರೆ, ಹೆಬ್ಬಾಳ ಅವರು ಚಳಿಗಾಲದಲ್ಲಿ ಜ್ವರ, ಕೆಮ್ಮು ಮತ್ತು ಶೀತದಿಂದ ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸಲು, ಜನರು ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ಅನುಸರಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ:
•ಆಗಾಗ್ಗೆ ಕೈ ತೊಳೆಯಿರಿ ಮತ್ತು ತೊಳೆಯದ ಕೈಗಳಿಂದ ಮುಖವನ್ನು (ವಿಶೇಷವಾಗಿ ಬಾಯಿ, ಕಣ್ಣು ಮತ್ತು ಮೂಗು) ಸ್ಪರ್ಶಿಸುವುದನ್ನು ತಪ್ಪಿಸಿ
ಆಗಾಗ ಕೈ ತೊಳೆಯುವುದರಿಂದ ಈ ರೀತಿ ವೈರಲ್ ಸೋಮಖಿನ ಸಮಸ್ಯೆ ತಡೆಗಟ್ಟಬಹುದು, ಅಲ್ಲದೆ ಕೈಯಿಂದ ಆಗಾಗ ಮುಖ ಮುಟ್ಟುವ ಅಭ್ಯಾಸವನ್ನು ಕಡಿಮೆ ಮಾಡಿ.
•ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳೊಂದಿಗೆ ಆರೋಗ್ಯಕರ ಆಹಾರವನ್ನು ಸೇವಿಸಿ ಮತ್ತು ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳಿ
ಚಳಿಗಾಲ, ಬಾಯಾರಿಕೆ ಆಗುತ್ತಿಲ್ಲ ಎಂದು ನೀರು ಕುಡಿಯುವುದು ಕಡಿಮೆ ಮಾಡಬೇಡಿ, ನೀರು ಚೆನ್ನಾಗಿ ಕುಡಿಯಿರಿ. ಬಿಸಿ ಬಿಸಿ ನೀರು ಕುಡಿಯುವುದು ಒಳ್ಳೆಯದು. ಅಲ್ಲದೆ ಸೀಸನ್‌ನಲ್ ಹಣ್ಣುಗಳನ್ನು ಸೇವಿಸಿ, ವಿಟಮಿನ್ ಸಿ ಇರುವ ಹಣ್ಣುಗಳು ರೋಗ ನಿರೋಧಕ ಹೆಚ್ಚಿಸುತ್ತದೆ.
•ಅತಿ ತಂಪಾದ ಅಥವಾ ಫ್ರೀಜರ್ ನಿಂದ ನೇರವಾಗಿ ಆಹಾರ ಪದಾರ್ಥಗಳನ್ನು ಸೇವಿಸುವುದನ್ನು ನಿಲ್ಲಿಸಿ:ಫ್ರಿಡ್ಜ್‌ನಲ್ಲಿಟ್ಟ ಆಹಾರ ಅಥವಾ ಪಾನೀಯಗಳನ್ನು ಬಳಸುವುದರಿಂದ ಗಂಟಲುನೋವು, ಶೀತ ಈ ಬಗೆಯ ಸಮಸ್ಯೆ ಹೆಚ್ಚಾಗುವುದು.
•ಬೆಚ್ಚಗಿನ ಬಟ್ಟೆಗಳನ್ನು ಧರಿಸಿ: ಹೊರಗಡೆ ಓಡಾಡುವಾಗ ಬೆಚ್ಚನೆಯ ಉಡುಪುಗಳನ್ನು ಧರಿಸಿ, ಕಿವಿ ಮುಚ್ಚುವಂತೆ ಕ್ಯಾಪ್ ಹಾಕಿಕೊಳ್ಳಿ.
•ಅನಗತ್ಯವಾಗಿ ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದನ್ನು ನಿಲ್ಲಿಸಿ
•ಮನೆಯಿಂದ ಹೊರಬರುವಾಗ ಅಥವಾ ಸಾರ್ವಜನಿಕ ಜನನಿಬಿಡ ಸ್ಥಳಗಳಲ್ಲಿದ್ದಾಗ ಮಾಸ್ಕ್‌ಗಳನ್ನು ಬಳಿಸಿ
•ಶ್ವಾಸಕೋಶದ ಸಮಸ್ಯೆ ಇರುವವರು ನಿಮ್ಮ ವೈದ್ಯರ ಸಲಹೆಯನ್ನು ಪಡೆದು ನಿಮ್ಮ ಔಷಧಿಗಳನ್ನು ನಿಯಮಿತವಾಗಿ ಸೇವಿಸಿ, ಅಸ್ತಮ, ಶ್ವಾಸಕೋಶದ ಸಮಸ್ಯೆ ಇರುವವರು ಹೆಚ್ಚಿನ ಜಾಗ್ರತೆವಹಿಸಿ. ಔಷಧಗಳನ್ನು ನಿಯಮಿತವಾಗಿ ತೆಗೆದುಕೊಳ್ಳಿ. '
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications