Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ದಡಾರಗೆ 2 ಬಲಿ, ಮಕ್ಳಳ ಮೈ ಮೇಲೆ ಕೆಂಪು ಗುಳ್ಳೆಗಳು ಕಂಡು ಬಂದರೆ ಜಾಗ್ರತೆ
ಪೋಷಕರೇ ಮಕ್ಕಳಲ್ಲಿ ದಡಾರ ಕಾಯಿಲೆಯ ಬಗ್ಗೆ ತುಂಬಾನೇ ಜಾಗ್ರತೆವಹಿಸಿ. ಮಧ್ಯಪ್ರದೇಶದಲ್ಲಿ ಈಗಾಗಲೇ ದಡಾರ ಕಾಯಿಲೆಗೆ ಎರಡು ಮಕ್ಕಳು ಜೀವ ಕಳೆದುಕೊಂಡಿದ್ದಾರೆ. 17 ಮಕ್ಕಳ ಸ್ಥಿತಿ ಗಂಭೀರವಾಗಿದೆ. ಈ ದಡಾರವನ್ನು ಲಸಿಕೆ ಪಡೆಯುವ ಮೂಲಕ ಸುಲಭವಾಗಿ ತಡೆಗಟ್ಟಬಹುದು,
ಆದರೆ ಅನೇಕ ಮಕ್ಕಳು ಕೊರೊನಾ ಸಾಂಕ್ರಮಿಕ ಸಮಯದಲ್ಲಿ ಈ ಲಸಿಕೆಯನ್ನು ಪಡೆದಿಲ್ಲ, ಸರಿ ಸುಮಾರು 11 ಲಕ್ಷ ಮಕ್ಕಳು ದಡಾರ ಲಸಿಕೆ ತೆಗೆದುಕೊಳ್ಳುವುದನ್ನು ಮಿಸ್ ಮಾಡಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಈ ದಡಾರ ಕಾಯಿಲೆ ಹೆಚ್ಚಾಗಿ ಕಂಡು ಬಂದಿದೆ. ಈ ದಡಾರ ಕಾಯಿಲೆಯ ಲಕ್ಷಣಗಳೇನು? ಚಿಕಿತ್ಸೆಯೇನು ಎಂದು ನೋಡೋಣ ಬನ್ನಿ:

ದಡಾರ ಎಂದರೇನು?
ದಡಾರ ಎಂಬುವುದು ವೈರಲ್ ಸೋಂಕು ಆಗಿದೆ. ಇದು ಒಬ್ಬರಿಂದ ಮತ್ತೊಬ್ಬರಿಗೆ ಬೇಗನೆ ಹರಡುವುದು. ಸೋಂಕು ಇರುವಾಗ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು.
ದಡಾರ ಹೇಗೆ ಹರಡುವುದು?
- ಸೋಂಕು ಇರುವ ವ್ಯಕ್ತಿ ಕುಡಿದ ಪಾನೀಯ ಅಥವಾ ಆಹಾರವನ್ನು ಶೇರ್ ಮಾಡುವುದರಿಂದ
- ಸೋಂಕು ಇರುವ ವ್ಯಕ್ತಿಗೆ ಮುತ್ತು ಕೊಡುವುದರಿಂದ
- ಅವರಿಗೆ ಶೇಕಿಂಗ್ ಹ್ಯಾಂಡ್ ಮಾಡುವುದು ಅಪ್ಪಿಕೊಳ್ಳುವುದು ಮಾಡಿದರೆ ಸೋಂಕು ಹರಡುವುದು'
- ಗರ್ಭಿಣಿಯಿಂದ ಮಗುವಿಗೆ ಹರಡುವುದು.
ದಡಾರ ಲಕ್ಷಣಗಳೇನು?
ದಡಾರ ಮೊದಲಿಗೆ ಸಾಮಾನ್ಯ ಸೀತ, ಜ್ವರ, ಶೀತ, ಕೆಮ್ಮು, ಕಣ್ಣುಗಳು ಕೆಂಪಾಗುವುದು ಈ ಬಗೆಯ ಲಕ್ಷಣಗಳು ಕಂಡು ಬರುವುದು. ನಂತರ ಮೈ ಮೇಲೆ ಕೆಂಪು ಗುಳ್ಳೆಗಳು ಕಂಡು ಬರುವುದು, ಈ ಬಗೆಯ ಗುಳ್ಳೆಗಳು ಪ್ರಾರಂಭದ ಲಕ್ಷಣಗಳು ಕಂಡು ಬಂದ ಕೆಲವು ದಿನಗಳ ಬಳಿಕ ಕಂಡು ಬರುವುದು.
ದಡಾರ ಇತರ ಲಕ್ಷಣಗಳೇನು?
ತಲೆಸುತ್ತುವುದು
ಹಸಿವು ಇಲ್ಲದಿರುವುದು
ಸ್ನಾಯುಗಳಲ್ಲಿ ನೋವು'
ಗಂಟಲಿನಲ್ಲಿ ನೋವು
ದಡಾರ ಬಂದಾಗ ಯಾರಿಗೆ ಹೆಚ್ಚು ಅಪಾಯಕಾರಿ
ನವಜಾತ ಶಿಶುವಿಗೆ ಮತ್ತು ಚಿಕ್ಕ ಮಕ್ಕಳಿಗೆ
ಗರ್ಭಿಣಿಯರಿಗೆ
20 ವರ್ಷ ಕಡಿಮೆ ವಯಸ್ಸಿನವರಿಗೆ
ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ
ದಡಾರದ ಇತರ ತೊಂದರೆಗಳು
ಬೇಧಿ
ಕಿವಿ ನೋವು
ನ್ಯೂಮೋನಿಯಾ
ದಡಾರ ಹೇಗೆ ಪತ್ತೆ ಹಚ್ಚಬಹುದು?
ರಕ್ತ ಪರೀಕ್ಷೆ
ಮೂಗು ಹಾಗೂ ಗಂಟಲಿನಿಂದ ದ್ರವ ತೆಗೆದು ಪರೀಕ್ಷಿಸಲಾಗುವುದು
ಮೂತ್ರ ಪರೀಕ್ಷೆ ಮಾಡಿದಾಗ ತಿಳಿದು ಬರುತ್ತದೆ.
ಯಾವೆಲ್ಲಾ ಗುಳ್ಳೆಗಳನ್ನು ದಡಾರ ಎಂದು ತಪ್ಪಾಗಿ ಭಾವಿಸುವ ಸಾಧ್ಯತೆ ಇದೆ
ಚಿಕನ್‌ಪಾಕ್ಸ್
ಕೈ, ಕಾಲು, ಬಾಯಿ ರೋಗ
ರುಬೆಲ್ಲಾ
ಸ್ಕಾರ್ಲೆಟ್ ಜ್ವರ
ಚಿಕಿತ್ಸೆಯೇನು?
ಸದ್ಯಕ್ಕೆ ದಡಾರಗೆ ನಿರ್ಧಿಷ್ಟ ಚಿಕಿತ್ಸೆ ಎಂಬುವುದು ಇಲ್ಲ, ರೋಗ ಲಕ್ಷಣಗಳನ್ನು ನೋಡಿ ಚಿಕಿತ್ಸೆಯನ್ನು ನೀಡಲಾಗುವುದು.
ದಡಾರ ಬಂದಾಗ ಈ ರೀತಿ ಜಾಗ್ರತೆವಹಿಸಿ:
ವಿಶ್ರಾಂತಿ ತೆಗೆದುಕೊಳ್ಳಿ: ದಡಾರ ಬಂದಾಗ ತುಂಬಾನೇ ವಿಶ್ರಾಂತಿ ತೆಗೆದುಕೊಳ್ಳಬೇಕು, ವಿಶ್ರಾಂತಿ ತೆಗೆದುಕೊಳ್ಳುವುದರಿಂದ ಬೇಗನೆ ಚೇರಿಸಿಕೊಳ್ಳಬಹುದು.
ಸಾಕಷ್ಟು ನೀರು ಕುಡಿಯಿರಿ:
ಸಾಕಷ್ಟು ನೀರು ಕುಡಿಯಿರಿ, ಜ್ಯೂಸ್, ಎಲೆಕ್ಟ್ರೋಲೈಟ್ಸ್ ಹೀಗೆ ಇವುಗಳನ್ನು ಕುಡಿಯುತ್ತಾ ದೇಹದಲ್ಲಿ ನೀರಿನಂಶ ಕಾಪಾಡಬೇಕು.
ಜ್ವರ ಕಡಿಮೆಯಾಗಲು
ಜ್ವರ ಕಡಿಮೆಯಾಗಲು ಔಷಧಿಯನ್ನು ತೆಗೆದುಕೊಳ್ಳಿ. ಇಬುಪ್ರೋಫೆನ್ ಜ್ವರ ಕಡಿಮೆ ಮಾಡುತ್ತದೆ. ಆದರೆ ಮಕ್ಕಳಿಗೆ ಆಸ್ಪಿರಿನ್ ನೀಡಬಾರದು. ಮಕ್ಕಳಿಗೆ ದಡಾರ ಬಂದಾಗ ತುಂಬಾನೇ ಜಾಗ್ರತೆವಹಿಸಿ.
ವಿಟಮಿನ್ ಎ: ವಿಟಮಿನ್ ಎ ಆಹಾರ ಸೇವಿಸಿ, ವೈದ್ಯರು ಸೂಚಿಸಿದರೆ ವಿಟಮಿನ್ ಎ ಸಪ್ಲಿಮೆಂಟ್ ತೆಗೆದುಕೊಳ್ಳಿ.
ಪ್ರತ್ಯೇಕವಾಗಿರಿ: ದಡಾರ ಬಂದ ಮಕ್ಕಳನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡುವುದರಿಂದ ಮತ್ತೊಬ್ಬ ಮಗುವಿಗೆ ಹರಡುವುದನ್ನು ತಡೆಗಟ್ಟಬಹುದು.
ಈ ದಡಾರ ಬರುವುದನ್ನು ತಡೆಗಟ್ಟಬಹುದೇ?
ದಡಾರ ಬಂದ ಮೇಲೆ ಅದಕ್ಕೆ ನಿರ್ಧಿಷ್ಟ ಚಿಕಿತ್ಸೆಯಿಲ್ಲ, ಆದರೆ ದಡಾರ ಬರುವುದನ್ನು ತಡೆಗಟ್ಟಲು ಚಿಕಿತ್ಸೆ ಇವೆ. ರುಬೆಲ್ಲಾ(MMR) ಲಸಿಕೆಯನ್ನು ಮೊದಲ 12-15 ತಿಂಗಳ ಒಳಗಡೆ ಕೊಡಿಸಬೇಕು, ನಂತರ ಮಗುವಿಗೆ 4-6 ವರ್ಷಗಳ ನಡುವೆಗೊಳಿಸಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
