Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
ಡೆಂಗ್ಯೂ ಹೆಚ್ಚಳ: ಡೆಂಗ್ಯೂ ಅಪಾಯಕಾರಿ ಲಕ್ಷಣಗಳೇನು? ಡೆಂಗ್ಯೂ ಬಾರದಂತೆ ತಡೆಗಟ್ಟಲು ಏನು ಮಾಡಬೇಕು?
ಡೆಂಗ್ಯೂ ಕಾಯಿಲೆ ಎಲ್ಲಡೆ ಹೆಚ್ಚಾಗುತ್ತಿದೆ, ಈ ಡೆಂಗ್ಯೂ ಮಕ್ಕಳಿಗೆ, ಗರ್ಭಿಣಿಯರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಬಂದರೆ ತುಂಬಾನೇ ಅಪಾಯಕಾರಿ, ಆದ್ದರಿಂದ ಡೆಂಗ್ಯೂ ಕಾಯಿಲೆ ಬಗ್ಗೆ ಜಾಗ್ರತೆ.
ಮೇ-ಜೂನ್‌ನಲ್ಲಿ ಹೆಚ್ಚಾಗಿ ಕಂಡು ಬರುವ ಡೆಂಗ್ಯೂ ಸಮಸ್ಯೆ
ಡೆಂಗ್ಯೂ ಸೊಳ್ಳೆ ಕಡಿತದಿಂದ ಬರುವುದು. ಈಡಿಸ್ ಎಂಬ ಸೊಳ್ಳೆ ಕಚ್ಚಿದಾಗ ಈ ಡೆಂಗ್ಯೂ ಮನುಷ್ಯರಿಗೆ ಹರಡುತ್ತದೆ. ಈ ಮೇ-ಜೂನ್ ತಿಂಗಳು ಸೊಳ್ಳೆಗಳಿಗೆ ಮೊಟ್ಟೆ ಹಾಕಿ ಮರಿ ಮಾಡಲು ಸೂಕ್ತ ಸಮಯ. ಈ ಸೊಳ್ಳೆಗಳು ಹೆಚ್ಚಾದಾಗ ಡೆಂಗ್ಯೂ ಕಾಯಿಲೆ ಕೂಡ ಹೆಚ್ಚಾಗುವುದು.

ಡೆಂಗ್ಯೂ ಲಕ್ಷಣಗಳು
ಡೆಂಗ್ಯೂ ಸೋಂಕು ಇರುವ ಸೊಳ್ಳೆ ಕಚ್ಚಿದಾಗ ರೋಗದ ಲಕ್ಷಣಗಳು 3-14 ದಿನದೊಳಗೆ ಕಂಡು ಬರುವುದು.
ಡೆಂಗ್ಯೂ ಸೋಂಕು ತಗುಲಿದಾಗ ಜ್ವರ, ತಲೆನೋವು, ಮೈಕೈ ನೋವು, ವಾಂತಿ ಬೇಧಿ, ಮೈ ಮೇಲೆ ಗುಳ್ಳೆಗಳು ಏಳುವುದು, ಮೈಕೈ ನೋವು, ಸುಸ್ತು ಈ ಬಗೆಯ ಲಕ್ಷಣಗಳು ಕಂಡು ಬರುವುದು.
ಈ ಬಗೆಯ ಲಕ್ಷಣಗಳು ಕಂಡು ಬಂದರೆ ಡೆಂಗ್ಯೂ ಗಂಭೀರವಾಗಿದೆ ಎಂದು ಸೂಚಿಸುವ ಲಕ್ಷಣಗಳಾಗಿವೆ:
ತೀವ್ರ ಕಿಬ್ಬೊಟ್ಟೆ ನೋವು
ವಿಪರೀತ ವಾಂತಿ, ರಕ್ತ ಕಲೆ ಕೂಡ ಕಂಡು ಬರುವುದು
ತೀವ್ರ ಉಸಿರಾಟ
ವಸಡುಗಳು ಸಡಿಲವಾಗಿ ರಕ್ತಸ್ರಾವವಾಗುವುದು
ಮಲವಿಸರ್ಜನೆ ಮಾಡುವಾಗ ರಕ್ತಕಲೆ ಕಂಡು ಬರುವುದು
ತುಂಬಾನೇ ಬಾಯಾರಿಕೆಯಗುವುದು
ವಿಪರೀತ ಸುಸ್ತು
ಮೆದುಳಿನಲ್ಲಿ ಊತ
ಡೆಂಗ್ಯೂ ಕಾಯಿಲೆಗೆ ಪ್ರತ್ಯೇಕ ಚಿಕಿತ್ಸೆವಿದೆಯೇ?
ಡೆಂಗ್ಯೂ ಕಾಯಿಲೆ ಗುಣಪಡಿಸಲು ಪ್ರತ್ಯೇಕ ಚಿಕಿತ್ಸೆವಿಲ್ಲ, ರೋಗ ಲಕ್ಷಣಗಳನ್ನು ನೋಡಿ ಚಿಕಿತ್ಸೆ ನೀಡಲಾಗುವುದು. ಜ್ವರ ಬಂದು 5 ದಿನಗಳಾದರೂ ಜ್ವರ ಕಡಿಮೆಯಾಗದಿದ್ದರೆ ಡೆಂಗ್ಯೂ ಪರೀಕ್ಷೆ ಮಾಡಿಸಿ.
ಚಿಕಿತ್ಸೆ ಜೊತೆಗೆ ಈ ಬಗೆಯ ಆಹಾರಗಳು ಬೇಗನೆ ಚೇತರಿಸಿಕೊಳ್ಳಲು ಸಹಕಾರಿ:
ಡೆಂಗ್ಯೂ ಜ್ವರ ಬಂದಾಗ ನೀವು ಪಪ್ಪಾಯಿ ಗಿಡದ ಕುಡಿ ಎಲೆಯಿಂದ ರಸ ತೆಗೆದು ಅರ್ಧ ಚಮಚ ಸೇವಿಸಿದರೆ ಒಳ್ಳೆಯದು. ಇದರಿಂದ ಪ್ಲೇಟ್‌ಲೆಟ್ ಕಡಿಮೆಯಾಗುವುದನ್ನು ತಡೆಗಟ್ಟಬಹುದು. ಇದನ್ನು ನೀವು ವೈದ್ಯರ ಸಲಹೆ ಪಡೆದು ಸೇವಿಸಿ, ಅರ್ಧ ಚಮಚ ಪಪ್ಪಾಯಿ ಎಲೆ ರಸವನ್ನು 3 ಹೊತ್ತು ಸೇವಿಸಿ. ಹೆಚ್ಚು ಸೇವಿಸಬೇಡಿ, ಬೇಧಿಯಾಗುತ್ತದೆ.
ನೀರು ಹೆಚ್ಚಾಗಿ ಸೇವಿಸಬೇಕು
ಡೆಂಗ್ಯೂ ರೋಗಿಗಳು ನೀರನ್ನು ಹೆಚ್ಚು ಸೇವಿಸಬೇಕು, ಇಲ್ಲದಿದ್ದರೆ ನಿರ್ಜಲೀಕರಣ ಉಂಟಾಗಿ ಮತ್ತಷ್ಟು ಸುಸ್ತು ಹೆಚ್ಚಾಗುವುದು. ಕಿವಿಹಣ್ಣು, ವಿಟಮಿನ್ ಸಿ ಇರುವ ಹಣ್ಣುಗಳು, ಪಪ್ಪಾಯಿ ಈ ಬಗೆಯ ಆಹಾರ ಸೇವಿಸಿ.
ಗಂಜಿ ಸೇವಿಸಿ, ಕೆಂಪಕ್ಕಿಯಿಂದ ಮಾಡಿದ ಗಂಜಿಯಾದರೆ ಇನ್ನೂ ಒಳ್ಳೆಯದು.
ಡೆಂಗ್ಯೂ ಬಾರದಂತೆ ತಡೆಗಟ್ಟಬಹುದೇ?
ಡೆಂಗ್ಯೂ ಸೊಳ್ಳೆ ಕಡಿತದಿಂದ ಬರುವುದು, ಹಾಗಾಗಿ ಸೊಳ್ಳೆಗಳ ನಿರ್ಮೂಲನೆ ಮಾಡಿದರೆ ಡೆಂಗ್ಯೂ ಉಂಟಾಗುವುದನ್ನು ತಡೆಗಟ್ಟಬಹುದು.
ಸೊಳ್ಳೆ ಕಚ್ಚದಂತೆ ಸಂಪೂರ್ಣ ಮೈ ಮುಚ್ಚುವ ಬಟ್ಟೆಗಳನ್ನು ಧರಿಸಬೇಕು, ಮಕ್ಕಳಿಗೂ ಅಷ್ಟೇ ತುಂಬು ತೋಳಿನ ಬಟ್ಟೆ ಧರಿಸಿಕೊಡಿ
ಮಕ್ಕಳಿಗೆ ಸೊಳ್ಳೆ ಕಚ್ಚದಂತೆ ಸ್ಪ್ರೇ ಅಥವಾ ಕ್ರೀಮ್ ಬಳಸಿ
ಮನೆಯ ಕಿಟಕಿಗಳಿಗೆ ಸೊಳ್ಳೆ ಒಳಬರದಂತೆ ನೆಟ್ ಹಾಕಿಸಿ
ಸೊಳ್ಳೆ ಬತ್ತಿ ಹಚ್ಚಿಡಿ
ಮಕ್ಕಳನ್ನು ಸೊಳ್ಳೆ ಪರದೆ ಒಳಗಡೆ ಮಲಗಿಸಿ.
ಗರ್ಭಿಣಿಯರು ಕೂಡ ತುಂಬಾನೇ ಜಾಗ್ರತೆವಹಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications