Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪ್ಯಾರಾಸಿಟಮೋಲ್, ನೋವು ನಿವಾರಕ ಮಾತ್ರೆ ಸೇರಿ 52 ಮಾತ್ರೆಗಳು ಕ್ವಾಲಿಟಿ ಟೆಸ್ಟ್‌ನಲ್ಲಿ ಫೇಲ್!
ಪ್ಯಾರಾಸಿಟಮೋಲ್ ಯಾರು ತಾನೆ ಬಳಸಿರಲ್ಲ? ಚಿಕ್ಕ ಶೀತ, ತಲೆ ನೋವು, ಜ್ವರ ಅಂತ ಕಾಡಿದಾಗ ನಾವೆಲ್ಲರೂ ತೆಗೆದುಕೊಳ್ಳುವುದೇ ಪ್ಯಾರಾಸಿಟಮೋಲ್.
ಇದೀಗ ಬಂದ ವರದಿ ಪ್ರಕಾರ ಈ ಪ್ಯಾರಾಸಿಟಮೋಲ್ ಸೇರಿ ಅತಿ ಹೆಚ್ಚಾಗಿ ಬಳಸುತ್ತಿರುವ ಪ್ಯಾಂಟೊಪ್ರಜೋಲ್ ಹಾಗೂ ಕೆಲವು ಆ್ಯಂಟಿಬ್ಯಾಕ್ಟಿರಿಯಾಗಳು ಸ್ಟಾಂಡರ್ಡ್ ಕ್ವಾಲಿಟಿ (ನಿರ್ಧಿಷ್ಟ ಮಾನದಂಡದ ಗುಣಮಟ್ಟ) ಹೊಂದಿಲ್ಲ ಎಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಹೇಳಿದೆ.

ಈ ಔಷಧಗಳನ್ನು ಹಿಮಾಚಲ ಪ್ರದೇಶ, ಜೈಪುರ, ಹೈದರಾಬಾದ್, ವಡೋದರ ಈ ಪ್ರದೇಶದಲ್ಲಿ ಔಷಧ ಸ್ಯಾಂಪಲ್ ಕಲೆಕ್ಟ್ ಮಾಡಿ ಪರೀಕ್ಷೆ ಮಾಡಲಾಯ್ತು. ಇದರಲ್ಲಿ 52 ಔಷಧಗಳು ಫೇಲ್ ಆಗಿದ್ದೆವು.
ಮಾನಸಿಕ ಒತ್ತಡಕ್ಕೆನೀಡುವ ಔಷಧಿ , ನೀವು ನಿವಾರಕ Diclofenac, nti-hypertension drug Telmisartan, Ambroxol, ಉಸಿರಾಟದ ಔಷಧ Fluconazole, calcium tablets ಇವೆಲ್ಲವೂ ಸ್ಟಾಂಡರ್ಡ್ ಗುಣಮಟ್ಟ ಹೊಂದಿಲ್ಲ ಎಂದು ಹೇಳಲಾಗುವುದು.
ಪ್ಯಾರಾಸಿಟಮೋಲ್ ಕಂಪನಿಗೆ ಈ ಬಗ್ಗೆ ನೋಟೀಸ್ ನೀಡಲಾಗಿದೆ:
ಮೂಲಗಳ ಪ್ರಕಾರ ಔಷಧ ನಿಯಂತ್ರಣ ಸಂಸ್ಥೆ ಈ ಕುರಿತು ಪ್ಯಾರಾಸಿಟಮೋಲ್ ಉತ್ಪಾದಕ ಕಂಪನಿಗಳಿಗೆ ಈ ಬಗ್ಗೆ ನೋಟೀಸ್ ನೀಡಲಾಗಿದೆ.
Clonazepam ಮಾತ್ರೆಯನ್ನು ಮೂರ್ಛೆರೋಗಕ್ಕೆ ನೀಡಲಾಗುವುದು, ಅತಿಯಾದ ಮಾನಸಿಕ ಒತ್ತಡದಿಂದ ಬಳಲುತ್ತಿರುವವರೆಗೆ ಈ ಔಷಧ ನೀಡಲಾಗುವುದು. Diclofenac ಔಷಧವನ್ನು ನೋವು ನಿವಾರಕವಾಗಿ, Ambroxol ಉಸಿರಾಟದ ಸಮಸ್ಯೆಗೆ ನೀಡಲಾಗುವುದು, ಅಲ್ಲದೆ ಕೆಲ ಮಲ್ಟಿವಿಟಮಿನ್ ಸಪ್ಲಿಮೆಂಟ್‌ಗಳು, ಕ್ಯಾಲ್ಸಿಯಂ ಮಾತ್ರೆಗಳನ್ನು ತಯಾರಿಸುವ ಕಂಪನಿಗಳು ಕೂಡ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿದೆ. ಈ ಔಷಧಗಳನ್ನು ಹಿಮಾಚಲ ಪ್ರದೇಶದಲ್ಲಿ ತಯಾರಿಸಲಾಗುತ್ತಿದೆ. ಸುಮಾರು 52 ಔಷಧಗಳು ಗುಣಮಟ್ಟದ ಟೆಸ್ಟ್‌ನಲ್ಲಿ ಫೇಲ್ ಆಗಿದೆ.
ಪ್ಯಾರಾಸಿಟಮೋಲ್ , ನೋವು ನೋವು ನಿವಾರಕಗಳನ್ನು ತುಂಬಾನೇ ಸೇವಿಸಬೇಡಿ
ಕೆಲವರಿಗೆ ಚಿಕ್ಕ ಪುಟ್ಟ ಸಮಸ್ಯೆಗೆ ಈ ಔಷಧಗಳನ್ನು ತೆಗೆದುಕೊಳ್ಳುವ ಅಭ್ಯಾಸ ಇರುತ್ತದೆ, ಈ ರೀತಿ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ, ಚಿಕ್ಕ-ಪುಟ್ಟ ಮೈಕೈ ನೋವಿನ ಸಮಸ್ಯೆಗೆ, ಶೀತ ಅಂತೆಲ್ಲಾ ಔಷಧ ತೆಗೆದುಕೊಳ್ಳುವ ಅಭ್ಯಾಸ ಒಳ್ಳೆಯದಲ್ಲ. ಜ್ವರ ಬಂದಾಗ ವೈದ್ಯರೇ ಪ್ಯಾರಾಸಿಟಮೋಲ್ ಸೂಚಿಸುತ್ತಾರೆ, ಅವರು ಸೂಚಿಸಿದಷ್ಟು ಮೂರು ಅಥವಾ 5 ದಿನ ತೆಗೆದುಕೊಳ್ಳಿ ತುಂಬಾನೇ ಸೇವಿಸಬೇಡಿ. ಇದರಿಂದ ಅಡ್ಡಪರಿಣಾಮ ಉಂಟಾಗುವುದು.
ನೋವು ನಿವಾರಕ ಮಾತ್ರೆಗಳನ್ನು ಸ್ವಂತವಾಗಿ ತೆಗೆದುಕೊಳ್ಳಬೇಡಿ
ಮೈಕೈ ನೋವು ಅಂತ ನೀವೇ ಮಾತ್ರೆ ಸೇವಿಸಬೇಡಿ, ಚಿಕ್ಕ ಪುಟ್ಟ ಮೈಕೈ ನೋವಿಗೆ ತೈಲ ಹಚ್ಚಿಕೊಳ್ಳಿ ಮಾತ್ರೆ ಸೇವನೆ ಮಾಡದಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
