Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ನಮ್ಮ ದೇಶದ ಈ 3 ಗ್ರಾಮದ ಜನರಲ್ಲಿ ವಾರದೊಳಗೆ ಕೂದಲು ಸಂಪೂರ್ಣ ಉದುರುತ್ತಿದೆ, ಕಾರಣ ನಿಗೂಢ!
ಕೂದಲು ಉದುರುವುದು ಬಹುತೇಕರ ಸಮಸ್ಯೆಯಾಗಿದೆ, ಆದರೆ ಊರಿಗೆ ಊರೇ ಒಂದು ವಾರದೊಳಗೆ ಬಕ್ಕತಲೆಯವರಾಗಿ ಬದಲಾಗಿರುವ ವಿಚಿತ್ರ ಘಟನೆ ಮಹಾರಾಷ್ಟ್ರದ ಮೂರು ಹಳ್ಳಿಗಳಲ್ಲಿ ನಡೆದಿದೆ. ಕಳೆದ ಕೆಲ ದಿನಗಳಿಂದ ಆ ಮೂರು ಗ್ರಾಮದವರು ತುಂಬಾನೇ ಕೂದಲು ಉದುರವ ಸಮಸ್ಯೆ ಎದುರಾಗಿದ್ದು, ಈ ಸಮಸ್ಯೆ ಇಡೀ ಊರಿನವರಿಗೆ ಬಾಧಿಸಿರುವುದ ಅಲ್ಲಿಯ ಜನರ ಆತಂಕಕ್ಕೆ ಕಾರಣವಾಗಿದೆ.

ಕೂದಲು ಉದುರುವ ಸಮಸ್ಯೆವಿರುವವರೆಗೆ ವಾರದೊಳಗೆ ಬಕ್ಕತಲೆ ಉಂಟಾಗುವುದಿಲ್ಲ, ದಿನಾ ಸ್ವಲ್ಪ-ಸ್ವಲ್ಪ ಕೂದಲು ಉದುರಿ ಬಕ್ಕತಲೆಯವರಾಗುತ್ತಾರೆ. ಆದರೆ ಈ ಊರಿನಲ್ಲಿ ಮಹಿಳೆಯರು-ಪುರುಷರು, ಮಕ್ಕಳು ಎಲ್ಲರ ಕೂದಲು ಉದುರುತ್ತಿದೆ.
ಮಹಾರಾಷ್ಟ್ರದ ಬೋರ್‌ಗೋನ್, ಕಾಲ್‌ವಾಡ್, ಹಿಗ್ನಾ ಎಂಬ ಗ್ರಾಮಗಳಲ್ಲಿ ಈ ಸಮಸ್ಯೆ ಕಂಡು ಬಂದಿದೆ, ಯಾರಿಗಾದರು ಕೂದಲು ಉದುರಲು ಪ್ರಾರಂಭಿಸಿದರೆ ಆ ವ್ಯಕ್ತಿ ವಾರದೊಳಗೆ ತಲೆ ಬೋಳಾಗಿರುತ್ತಾರೆ. ಹೀಗಾಗಿ ಕೂದಲು ಉದುರುತ್ತಿದೆ ಎಂಬುವುದು ಈಗ ಆ ಮೂರು ಗ್ರಾಮದವರ ಅತಿದೊಡ್ಡ ಸಮಸ್ಯೆಯಾಗಿದೆ. ಈಗಾಗಲೇ 50 ಜನರು ವಾರದೊಳಗೆ ಬಕ್ಕತಲೆಯವರಾಗಿದ್ದಾರೆ.
ಏನು ಕಾರಣವಿರಬಹುದು ಎಂಬ ಸಂಶೋಧನೆ ನಡೆಯುತ್ತಿದೆ
ಆರೋಗ್ಯ ಇಲಾಖೆಯಿಂದ ಸಿಬ್ಬಂದಿಗಳು ಈ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಏನಾದರು ಕಲುಷಿತ ನೀರು ಸೇವನೆಯಿಂದ ಈ ರೀತಿಯಾಗಿರಬಹುದಾ ಎಂದ ಸಂಶಯಿಸಲಾಗಿದೆ. ಡಾಕ್ಟರ್ ಅವರ ಕೂದಲಿನ ಮಾದರಿ ಸಂಗ್ರಹಿಸಿ ಪರಿಶೀಲನೆ ಮಾಡುತ್ತಿದ್ದಾರೆ. ಅಲ್ಲದೆ ಆ ಊರಿನ ಗಾಳಿಯ ಗುಣಮಟ್ಟ, ನೀರಿನ ಗುಣಮಟ್ಟ ಕೂಡ ಪರಿಶೀಲನೆ ಮಾಡಲಾಗುತ್ತಿದೆ, ಈ ರೀತಿ ಆ ಮೂರು ಊರಿನ ಎಲ್ಲರಿಗೂ ಕೂದಲು ಉದುರುವ ಸಮಸ್ಯೆ ಕಂಡು ಬರಲು ಕಾರಣವೇನು ಎಂಬುವುದರ ಬಗ್ಗೆ ಸಂಶೋಧನೆ ನಡೆಸಲಾಗಿದೆ.
ಕೂದಲು ಉದುರುವ ಸಮಸ್ಯೆ ಬಿಟ್ಟು ಇತರ ಆರೋಗ್ಯ ಸಮಸ್ಯೆ ಆ ಊರಿನವರಲ್ಲಿ ಕಂಡು ಬಂದಿಲ್ಲ
ಕೆಲವೊಂದು ಆರೋಗ್ಯ ಸಮಸ್ಯೆ ಕೂಡ ಕೂದಲು ಉದುರುವುದಕ್ಕೆ ಕಾರಣವಾಗಿದೆ, ಆದರೆ ಅಲ್ಲಿಯ ಜನರಿಗೆ ಅಂಥ ಸಮಸ್ಯೆ ಕಂಡು ಬಂದಿಲ್ಲ, ಅವರು ಆರೋಗ್ಯವಾಗಿ ಓಡಾಡಿಕೊಂಡು ಇದ್ದಾರೆ, ಆದರೆ ಕೂದಲು ಮುಟ್ಟಿದರೆ ಸಾಕು ಉದುರುತ್ತಿದೆ. ತಲೆ ಬಾಚಿದರೆ ಕೂದಲಿನ ರಾಶಿ, ಕೂದಲು ಬುಡದಿಂದಲೇ ಕಿತ್ತು-ಕಿತ್ತು ಹೋಗುತ್ತಿದೆ.
ಕಲುಷಿತ ನೀರು ಕುಡಿದು ಈ ರೀತಿಯಾಗಿರಬಹುದು ಎಂದು ಊಹಿಸಲಾಗಿದೆ
ಕಲುಷಿತ ನೀರು ಈ ಕೂದಲು ಉದುರುವ ಸಮಸ್ಯೆಗೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ. ಕಲುಷಿತ ನೀರಿನಿಂದ ಕೂದಲು ಉದುರುತ್ತಿದೆ ಎಂದಾದರೆ ಮುಂದೆ ಗಂಭೀರ ಆರೋಗ್ಯ ಸಮಸ್ಯೆ ಕೂಡ ಬೀರಬಹುದು. ಈಗ ಪ್ರಾರಂಭದಲ್ಲಿ ಕೂದಲು ಉದುರುತ್ತಿರಬಹುದು, ಹಾಗಾಗಿ ಈ ಸಮಯದಲ್ಲಿ ತುಂಬಾನೇ ಜಾಗ್ರತೆವಹಿಸಿ, ಕೂದಲು ಉದುರುವುದಕ್ಕೆ ಪ್ರಮುಖ ಕಾರಣವೇನು? ಎಂದು ತಿಳಿದರೆ ಜನರ ಆರೋಗ್ಯ ರಕ್ಷಣೆಗೆ ಸಹಕಾರಿಯಾಗಿದೆ.
ಕಲುಷಿತ ನೀರು ಅಥವಾ ಕಲುಷಿತ ವಾತಾವರಣ ಕೂದಲಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ:
ಕಲುಷಿತ ನೀರು ಹಾಗೂ ಕಲುಷಿತ ಗಾಳಿ ನಮ್ಮ ಕೂದಲಿನ ಮೇಲೆ ಪರಿಣಾಮ ಬೀರಬಹುದು ಅಥವಾ ಯಾವುದಾದರು ಆರೋಗ್ಯ ಸಮಸ್ಯೆ ಕೂಡ ಕೂದಲಿನ ಮೇಲೆ ಪರಿಣಾಮ ಬೀರಬಹುದು. ಅಲ್ಲದೆ ಆಹಾರವು ಕೂಡ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications