Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಹೈಪೋಥೈರಾಯ್ಡ್ ಇದ್ದರೆ ಮೈ ತೂಕ ಕಡಿಮೆ ಮಾಡಲು ಈ ಸ್ಟ್ರಾಟಜಿ ಬೆಸ್ಟ್
ಹೈಪೋಥೈರಾಯ್ಡ್ ಸಮಸ್ಯೆ ಇರುವವರಿಗೆ ಮೈ ತೂಕ ತುಂಬಾನೇ ಹೆಚ್ಚಾಗುವುದು ಬಹುದೊಡ್ಡ ಸಮಸ್ಯೆಯಾಗಿದೆ. ಹೈಪೋಥೈರಾಯ್ಡ್ ಸಮಸ್ಯೆ ಥೈರಾಯ್ಡ್ ಗ್ರಂಥಿ ಥೈರಾಯ್ಡ್ ಹಾರ್ಮೋನ್‌ಗಳನ್ನು ಕಡಿಮೆ ಪ್ರಮಾಣದಲ್ಲಿ ಉತ್ಯಾದಿಸಿದಾಗ ಉಂಟಾಗುವುದು. ಹೈಪೋಥೈರಾಯ್ಡ್ ಸಮಸ್ಯೆ ಇರುವವರಿಗೆ ಮೈ ತೂಕ ತುಂಬಾನೇ ಹೆಚ್ಚಾಗುವುದು ಅಲ್ಲದೆ ಹೆಚ್ಚಾದ ಮೈ ತೂಕವನ್ನು ಕರಗಿಸಲು ತುಂಬಾನೇ ಕಷ್ಟವಾಗುವುದು. ಆದರೆ ಕರಗಿಸಲು ಸಾಧ್ಯನೇ ಇಲ್ಲ ಎಂದೇನು ಇಲ್ಲ ನೀವು ಕೆಲ ಸ್ಟ್ರಾಟಜಿ ಫಾಲೋ ಮಾಡಿದರೆ ಮೈ ತೂಕ ಕಡಿಮೆಯಾಗುವುದು. ಮೈ ತೂಕ ಕಡಿಮೆಯಾದರೆ ಥೈರಾಯ್ಡ್ ಹಾರ್ಮೋನ್ ಸಮತೋಲನದಲ್ಲಿಡಲು ಕೂಡ ಸಹಕಾರಿಯಾಗಿದೆ.

ಹೈಪೋಥೈರಾಯ್ಡ್ ಸಮಸ್ಯೆ ಇರುವವರು ಮೈ ತೂಕ ಕಡಿಮೆ ಮಾಡಲು ಈ ಟಿಪ್ಸ್ ಪಾಲಿಸುವುದು ಒಳ್ಳೆಯದು:
ಕಾರ್ಬ್ಸ್ ಹಾಗೂ ಸಕ್ಕರೆ ದೂರವಿಡಿ
ನೀವು ಮೊದಲು ನಿಮ್ಮ ಆಹಾರಕ್ರಮದಲ್ಲಿ ತುಂಬಾನೇ ಬದಲಾವಣೆ ತರಬೇಕು. ಅದರಲ್ಲೂ ಕಾರ್ಬೋಹೈಡ್ರೇಟ್ಸ್ ಇರುವ ಆಹಾರ ಸೇವನೆ ಕಡಿಮೆ ಮಾಡಬೇಕು. ಆದ್ದರಿಂದ ಗ್ಲೈಸೆಮಿಕ್ ಅಧಿಕವಿರುವ ಆಹಾರ ಸೇವನೆ ಕಡಿಮೆ ಮಾಡಬೇಕು. ಅಲ್ಲದೆ ಸಕ್ಕರೆಯನ್ನು ಬಳಸುವುದನ್ನು ಬಿಟ್ಟರೆ ಒಳ್ಳೆಯದು. ಅಲ್ಲದೆ ಸಿಹಿ ಪದಾರ್ಥಗಳು, ಸಾಫ್ಟ್ ಡ್ರಿಂಕ್ಸ್ ಈ ಬಗೆಯ ಆಹಾರ ಪದಾರ್ಥಗಳನ್ನು ದೂರವಿಡಿ.
ಈ ಬಗೆಯ ಆಹಾರವನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ:
ಮೆಗ್ನಿಷ್ಯಿಯಂ, ಬಿ ವಿಟಮಿನ್ಸ್, ಸತು, ಸೆಲೆನಿಯಂ, ಕಬ್ಬಿಣದಂಶ, ವಿಟಮಿನ್ ಸಿ, ತರಕಾರಿ, ಟೊಮೆಟೊ, ಮೀನು, ನಟ್ಸ್, ಹಣ್ಣುಗಳು, ತೆಂಗಿನೆಣ್ಣೆ, ಆಲೀವ್ ಎಣ್ಣೆ, ಲಿವರ್ ಈ ಬಗೆಯ ಆಹಾರವನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ. ಈ ಬಗೆಯ ಆಹಾರ T4 , T3 ಹಾರ್ಮೋನ್‌ಗಳನ್ನು ಸಮತೋಲನದಲ್ಲಿಡಲು ಸಹಕಾರಿಯಾಗಿದೆ.
ಸ್ವಲ್ಪ ಆಹಾರ ಸೇವಿಸಿ, ಆಗಾಗ ಸೇವಿಸಿ
ನೀವು ಮೂರು ಹೊತ್ತು ಆಹಾರ ಸೇವಿಸುವುದಕ್ಕಿಂತ ನಿಮ್ಮ ಆಹಾರವನ್ನು 6 ಭಾಗಗಳಾಗಿ ವಿಂಗಡಿಸಿ, ಸ್ವಲ್ಪ-ಸ್ವಲ್ಪ ತಿನ್ನಿ. ಹೀಗೆ ಮಾಡುವುದರಿಂದ ದೇಹಕ್ಕೆ ಅಗ್ಯತವಿರುವ ಪೋಷಕಾಂಶ ದೊರೆಯುವುದು, ಹಸಿವು ಉಂಟಾಗುವುದಿಲ್ಲ, ಆಹಾರವನ್ನು ಮಿತಿಯಲ್ಲಿ ತಿನ್ನುವುದರಿಂದ ಮೈ ತೂಕ ಹೆಚ್ಚಾಗುವುದನ್ನು ತಡೆಗಟ್ಟಬಹುದು.
ಫುಡ್ ಚಾರ್ಟ್ ಫಾಲೋ ಮಾಡಿ
ಯಾವ ದಿನ ಯಾವ ಆಹಾರ ಸೇವಿಸಬೇಕು, ಎಷ್ಟು ಪ್ರಮಾಣದಲ್ಲಿ ಸೆವಿಸಬೇಕು ಎಂಬ ಚಾರ್ಟ್ ಮಾಡಿ ಅದನ್ನು ಫಾಲೋ ಮಾಡುವುದರಿಂದ ನಿಮ್ಮ ಡಯಟ್ ಮೂಲಕ ಮೈ ತೂಕ ನಿಯಂತ್ರಿಸಲು ಸಹಕಾರಿಯಾಗಿದೆ.
ವ್ಯಾಯಾಮ ಮಾಡಿ
ವ್ಯಾಯಾಮ ಶರೀರಕ್ಕೆ ತುಂಬಾನೇ ಮುಖ್ಯ, ಆದ್ದರಿಂದ ಪ್ರತಿದಿನ ಅರ್ಧ ಗಂಟೆ ವ್ಯಾಯಾಮ ಮಾಡಿ. ನೀವು ವಾಕ್ ಮಾಡುವುದು, ಜಿಮ್‌ಗೆ ಹೋಗುವುದು, ಯೋಗ ಮಾಡುವುದು ಹೀಗೆ ನಿಮಗೆ
ಔಷಧವನ್ನು ಸರಿಯಾಗಿ ತೆಗೆದುಕೊಳ್ಳಿ
ವೈದ್ಯರು ನಿಮಗೆ ಎಷ್ಟು ಡೋಸ್ ತೆಗೆದುಕೊಳ್ಳಲು ಹೇಳಿದ್ದಾರೆ ಅಷ್ಟು ದಿನಾ ತೆಗೆದುಕೊಳ್ಳಿ, ಅವರ ಸಲಹೆ ಸೂಚನೆ ಪಾಲಿಸಿ, ನಿಯಮಿತವಾಗಿ ಚೆಕಪ್ ಮಾಡಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
