Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಅಲರ್ಜಿ ಸಮಸ್ಯೆಯಿದ್ದರೆ ರಕ್ತ ಶುದ್ಧೀಕರಿಸಲು ಈ ಯೋಗಾಸನಗಳು ಒಳ್ಳೆಯದು
ರಕ್ತದಲ್ಲಿ ಕಶ್ಮಲ ಹೆಚ್ಚಾದರೆ ಅಲರ್ಜಿ ಸಮಸ್ಯೆ ಉಂಟಾಗುತ್ತದೆ, ಅಲ್ಲದೆ ಇತರ ಆರೋಗ್ಯ ಸಮಸ್ಯೆಗಳು ಉಂಟಾಗುವುದು. ಮೈ ಮೇಲೆ ಕೆಂಪು-ಕೆಂಪು ದದ್ದುಗಳು ಬರಲಾರಂಭಿಸುವುದು. ನಮ್ಮ ದೇಹದ ರಕ್ತವನ್ನು ಶುದ್ಧೀಕರಿಸಲು ಕೆಲವೊಂದು ಯೋಗಾಸನಗಳು ತುಂಬಾನೇ ಸಹಕಾರಿ.
ರಕ್ತವನ್ನು ಶುದ್ಧೀಕರಿಸಿ ದೇಹವನ್ನು ಡಿಟಾಕ್ಸ್ ಮಾಡಲು ಈ ಯೋಗಾಸನಗಳನ್ನು ಅಭ್ಯಾಸ ಮಾಡಿ:

ಉತ್ಕಟಾಸನ
ಇದನ್ನು ಗರುಡಾಸನ ಎಂದು ಕೂಡ ಕರೆಯಲಾಗುವುದು. ನೀವು ಮೊದಲು ಲಂಬವಾಗಿ ನಿಂತುಕೊಳ್ಳಬೇಕು, ಅನಂತರ ಒಂದು ಕಾಲನ್ನು ಮತ್ತೊಂದು ಕಾಲಿನ ಮೇಲೆ ಸುತ್ತಿಕೊಳ್ಳಬೇಕು, ಕೈಗಳನ್ನೂ ಕೂಡ, ನಂತರ ನಮಸ್ಕಾರ ಮಾಡಬೇಕು, ಈ ರೀತಿ ಎರಡೂ ಕಾಲುಗಳನ್ನು ಬದಲಾಯಿಸಿ ಮಾಡಿ. ಈ ಆಸನ ಮಾಡುವಾಗ ಬೆನ್ನು ನೇರವಾಗಿರಲಿ, 2ನಿಮಿಷ ಇದೇ ಭಂಗಿಯಲ್ಲಿ ನಿಲ್ಲಿ, ಆಗ ಉಸಿರಾಟದ ಸಾಮಾನ್ಯ ಸ್ಥಿತಿಯಲ್ಲಿರಲಿ. ನಂತರ ನಿಧಾನಕ್ಕೆ ಉಸಿರು ತೆಗೆದು ದೀರ್ಘ ಉಸಿರು ಬಿಡುತ್ತಾ ಸಮಸ್ಥಿತಿಗೆ ಬರಬೇಕು.
ಗರುಡಾಸನದ ಪ್ರಯೋಜನಗಳು:
* ಈ ಆಸನದಲ್ಲಿ ಸ್ನಾಯುಗಳು ಬಲವಾಗುತ್ತದೆ
* ಸಂಧಿವಾತದ ನೋವು ಕಡಿಮೆಯಾಗುವುದು, ದೇಹವನ್ನು ಡಿಟಾಕ್ಸ್ ಮಾಡುತ್ತದೆ.
* ರಕ್ತಸಂಚಾರ ಉತ್ತಮವಾಗುವುದರಿಂದ ರಕ್ತವು ಶುದ್ಧವಾಗುವುದು.
ಸರ್ವಾಂಗಾಸನ
ಸರ್ವಾಂಗ ಎಂದರೆ ದೇಹದ ಎಲ್ಲಾ ಭಾಗಗಳು ಭುಜದ ಮೇಲಿರುತ್ತದೆ, ಈ ಆಸನ ಭಂಗಿಯಿಂದ ಶರೀರದ ಎಲ್ಲಾ ಅಂಗಗಳಿಗೆ ವ್ಯಾಯಾಮ ಸಿಗುವುದರ ಜೊತೆಗೆ ರಕ್ತ ಸಂಚಾರ ತುಂಬಾ ಚೆನ್ನಾಗಿ ನಡೆಯುತ್ತದೆ. ಈ ಆಸನ ಮಾಡುವುದರಿಂದ ಇಡೀ ದೇಹಕ್ಕೆ ಶಕ್ತಿ ದೊರೆಯುತ್ತದೆ, ದೇಹವನ್ನು ಡಿಟಾಕ್ಸ್ ಮಾಡುವುದರಿಂದ ರಕ್ತ ಸಂಚಾರ ಸರಾಗವಾಗು ನಡೆಯುವುದು, ರಕ್ತ ಶುದ್ಧವಾಗುವುದು.
ಸರ್ವಾಂಗಾಸನದಲ್ಲಿ ನಿರಾಲಂಬ ಸರ್ವಾಂಗಾಸನ, ಸಾಲಂಬಗಾಸನ, ಏಕಪಾಸ ಸರ್ವಾಂಗಸನ ಎಂಬ ಪ್ರಭೇದಗಳು ಇವೆ. ಈ ಆಸನದ ಅಭ್ಯಾಸವು ಶರೀರದ ಎಲ್ಲ ಅಂಗಗಳಿಗೂ ವ್ಯಾಯಾಮ ನೀಡುತ್ತದೆ. ಆದ್ದರಿಂದ ಸರ್ವಾಂಗಾಸನ ಎಂದು ಕರೆಯಲಾಗುವುದು.
ಮಾಡುವ ಕ್ರಮ :
1) ನೀವು ಮೊದಲು ಮ್ಯಾಟ್ ಮೇಲೆ ಅಂಗಾತನಾಗಿ, ಮಲಗಬೇಕು.
2) ಅನಂತರ ನಿಧಾನವಾಗಿ ಎರಡೂ ಕಾಲುಗಳನ್ನು ಏಕಕಾಲದಲ್ಲಿ ಮೇಲಕ್ಕೆ ಎತ್ತಬೇಕು.
3) ಲಂಬವಾಗಿದ್ದ ಕಾಲುಗಳನ್ನು ತಲೆಯ ಕಡೆಗೆ ಆದಷ್ಟೂ ಬಗ್ಗಿಸಬೇಕು.
4) ಸೊಂಟಕ್ಕೆ ಎರಡೂ ಕೈಗಳಿಂದ ಆಧಾರ ನೀಡಿ. ಈ ಸ್ಥಿತಿಯಲ್ಲಿ 1 ನಿಮಿಷ ಇರಿ. ಈ ಆಸನದಲ್ಲಿ ಕತ್ತು, ಹೆಗಲು ಮತ್ತು ಮೊಣಕೈವರೆಗಿನ ತೋಳುಗಳು ಮಾತ್ರ ಭೂಮಿಯ ಮೇಲಿರುತ್ತವೆ.
ಪ್ರಯೋಜನಗಳು
ಸರ್ವಾಂಗಾಸನದ ಅಭ್ಯಾಸದಿಂದ ವೀರ್ಯದೋಷ, ರಕ್ತದೋಷಗಳು ನಿವಾರಣೆಯಾಗುವವು. ಹಸಿವು ಹೆಚ್ಚುವುದು.
ಭಸ್ತ್ರಿಕಾ ಪ್ರಾಣಾಯಾಮ
ಎರಡು ಕೈಗಳನ್ನು ಭುಜದ ನೇರಕ್ಕೆ ಮೇಲಕ್ಕೆ ಚಾಚುತ್ತಾ ಮೂಗಿನ ಮೂಲಕ ಉಸಿರನ್ನು ತೆಗೆದುಕೊಳ್ಳಬೇಕು. ಊದು ಕುಲುಮೆಯ ಗಾಳಿ ಚೀಲದಂತೆ ಎದೆಯನ್ನು ಹಿಗ್ಗಿಸಬೇಕು. ನಂತರ ರಭಸವಾಗಿ ಮೂಗಿನ ಮೂಲಕವೇ ಉಸಿರು ಬಿಡುವಾಗ ಕೈಗಳನ್ನು ಎದೆಯ ಪಕ್ಕಕ್ಕೆ ಅರ್ಧಭಾಗ ಇಳಿಸಬೇಕು. ಇದೇ ಕ್ರಮವನ್ನು ಪ್ರಾರಂಭದಲ್ಲಿ 40 ರಿಂದ 50 ಬಾರಿ ಅಭ್ಯಾಸ ಮಾಡಬೇಕು.
ಈ ಪ್ರಾಣಾಯಾಮ ಅಭ್ಯಾಸದಿಂದ ಮೂಗಿನ ಹೊಳ್ಳೆಗಳು ಶುದ್ಧಿಗೊಳ್ಳುತ್ತವೆ. ನಾಭಿಯ ಅವಯವಗಳು ಉತ್ತೇಜನಗೊಳ್ಳುತ್ತವೆ. ಮೆದುಳಿನ ಭಾಗ ಮತ್ತು ನರಮಂಡಲಗಳನ್ನು ಚುರುಕುಗೊಳ್ಳುತ್ತವೆ. ತಮಸ್ಸು ಮತ್ತು ಜಡತ್ವವನ್ನು ನಿವಾರಣೆ ಮಾಡುವುದಲ್ಲದೆ ದೇಹ ಮತ್ತು ಮನಸ್ಸನ್ನು ಶುದ್ಧ ಮಾಡುತ್ತದೆ.
ಸೂಚನೆ: ಕಿವಿ, ಮೂಗು, ಕಣ್ಣಿನ ದೋಷ ಇರುವವರು, ಗರ್ಭಿಣಿಯರು ಈ ಭಸ್ತ್ರಿಕಾ ಪ್ರಾಣಾಯಾಮ ಮಾಡಬಾರದು. ಮಹಿಳೆಯರು ಮುಟ್ಟಿನ ಸಮಯದಲ್ಲಿ ಮಾಡಬಾರದು. ಅಧಿಕ ರಕ್ತದೊತ್ತಡ ಇರುವವರು ಮತ್ತು ಹೃದ್ರೋಗಿಗಳು ಕೂಡ ಇದು ಮಾಡುವಂತಿಲ್ಲ.
ನಿಮಗೆ ಅಲರ್ಜಿ ಸಮಸ್ಯೆಯಿದ್ದರೆ ಈ ಯೋಗಾ ಭಂಗಿಗಳನ್ನು ಅಭ್ಯಾಸ ಮಾಡಿ ನೋಡಿ, ಕಡಿಮೆಯಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications














