Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಜ್ಞಾಪಕ ಶಕ್ತಿ ಹೆಚ್ಚು ಮಾಡುವ 5 ಯೋಗಾಸನಗಳಿವು
ಜ್ಞಾಪಕ ಶಕ್ತಿ ಎಂಬುವುದು ಎಲ್ಲಾ ವಯಸ್ಸಿನವರಿಗೂ ಅವಶ್ಯಕ. ಜ್ಞಾಪಕ ಶಕ್ತಿಕಡಿಮೆಯಾದರೆ ಮರೆವಿನ ಸಮಸ್ಯೆ ಉಂಟಾಗುವುದು. ಮರೆವಿನ ಸಮಸ್ಯೆ ಉಂಟಾದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ತುಂಬಾನೇ ದೊಡ್ಡ ಸಮಸ್ಯೆ ಉಂಟಾಗುವುದು.

ಅದರಲ್ಲೂ ವಯಸ್ಸಾಗುತ್ತಿದ್ದಂತೆ ಮರೆವು ಸಮಸ್ಯೆ ಹೆಚ್ಚಿನವರಲ್ಲಿ ಕಂಡು ಬರುತ್ತದೆ. ಅಲ್ಜೈಮರ್ಸ್‌ನಂಥ ಸಮಸ್ಯೆ ಉಂಟಾಗುವುದು. ಮಕ್ಕಳಿಗೆ ಓದಿದ್ದು ನೆನಪಿನಲ್ಲಿದ್ದು ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಬೇಕು, ದೊಡ್ಡವರಿಗೆ ಮರೆವಿನ ಸಮಸ್ಯೆ ಉಂಟಾಗಬಾರದೆಂದರೆ ಈ 5 ಯೋಗಾಸನ ಪ್ರತಿನಿತ್ಯ ಅಭ್ಯಾಸ ಮಾಡಿ, ಮರೆವು ಎಂಬುವುದು ನಿಮ್ಮ ಸಮೀಪ ಬರಲು ಮರೆತು ಹೋಗುವುದು.

1. ವೃಕ್ಷಾಸನ
ಋಷಿ ಮುನಿಗಳು ಒಂಟಿಕಾಲಿನಲ್ಲಿ ನಿಂತು ತಪಸ್ಸು ಮಾಡುತ್ತಿದ್ದರು ಎಂದು ಪೌರಾಣಿಕ ಕತೆಯಲ್ಲಿ ಓದಿರುತ್ತೀರಿ. ಈ ವೃಕ್ಷಾಸನ ದೇಹವನ್ನು ಬ್ಯಾಲೆನ್ಸ್ ಮಾಡಲು ಸಹಾಯ ಮಾಡುವುದು ಜೊತೆಗೆ ಏಕಾಗ್ರತೆ ಹೆಚ್ಚಿಸುವುದು. ಮಕ್ಕಳು ಈ ಆಸನ ಪ್ರತಿನಿತ್ಯ ಅಭ್ಯಾಸ ಮಾಡುವುದರಿಂದ ಕಲಿಕೆಯಲ್ಲಿ ಮತ್ತಷ್ಟು ಪ್ರವೀಣರಾಗುತ್ತಾರೆ. ವೃಕ್ಷಾಸನ ಮಾಡುವಾಗ ನಿಮ್ಮ ಬೆನ್ನು ನೇರವಾಗಿರಲಿ.

2. ಪಶ್ಚಿಮೋತ್ತಾಸನ
ನೀವು ಮೊದಲು ದಂಡಾಸನ ಮಾಡಿ ನಂತರ ಪಶ್ಚಿಮೋತ್ತಾಸನ ಮಾಡಿ. ಉಸಿರನ್ನು ನಿಧಾನಕ್ಕೆ ತೆಗೆದು ನಿಧಾನಕ್ಕೆ ಬಿಡುತ್ತಾ ಮುಂದೆಕ್ಕೆ ಬಾಗಿ ನಿಮ್ಮ ಕಾಲಿನ ಬೆರಳನ್ನು ಮುಟ್ಟಿ. ಈ ರೀತಿ ಮಾಡುವುದರಿಂದ ನೆನಪಿನ ಶಕ್ತಿ ಹೆಚ್ಚುವುದು.

3. ಬಕಾಸನ
ಈ ಯೋಗಾಸನ ಮಾಡಲು ತುಂಬಾ ಪ್ರಾಕ್ಟೀಸ್ ಬೇಕು, ಹದ್ದಿನ ರೀತಿಯಲ್ಲಿ ದೇಹವನ್ನು ಮಾಡುವುದು. ಕೈಗಳು ಮಾತ್ರ ನೆಲದ ಮೇಲೆ ಒತ್ತಿ ಹಿಡಿದು ಇಡೀ ದೇಹವನ್ನು ಮೇಲಕ್ಕೆ ಎತ್ತಿ 30 ಸೆಕೆಂಡ್ ಇಲ್ಲಿ. ಈ ಆಸನ ಕೂಡ ನೆನಪಿನ ಶಕ್ತಿ ಹೆಚ್ಚಿಸುವುದು.

4. ಸರ್ವಾಂಗಾಸನ
ಸರ್ವಾಂಗಾಸನ ಮಾಡುವುದರಿಂದ ತುಂಬಾ ಪ್ರಯೋಜನಗಳಿವೆ, ಸರ್ವಾಂಗಾಸನ ಮಾಡಿದಾಗ ತಲೆಯಲ್ಲಿ ರಕ್ತ ಸಂಚಾರವಾಗುವುದು, ಇದರಿಂದ ಮೆದುಳು ಚುರುಕಾಗಿ ನೆನಪಿನ ಶಕ್ತಿ ಹೆಚ್ಚಾಗುವುದು.'

5. ಶಿರ್ಸಾಸನ
ಶಿರ್ಸಾಸನ ಮಾಡಲು ಕೂಡ ತುಂಬಾ ಅಭ್ಯಾಸ ಬೇಕು. ಆದ್ದರಿಂದ ಈ ಆಸನ ನೀವೇ ಸ್ವಂತ ಮಾಡಬೇಡಿ, ಪರಿಣಿತರ ಸಲಹೆ ಪಡೆದ ಬಳಿಕ ಮಾಡಿ. ಶಿರ್ಸಾಸನದಿಂದ ಕೂಡ ಜ್ಞಾಪಕ ಶಕ್ತಿ ಹೆಚ್ಚಾಗುವುದು.



Click it and Unblock the Notifications
