Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
World No Tobacco Day: ವಿಶ್ವ ತಂಬಾಕು ರಹಿತ ದಿನ: ಧೂಮಪಾನನಿಂದ ಹಾಳಾದ ಶ್ವಾಸಕೋಶ ಹೀಗೆ ಕ್ಲೆನ್ಸ್ ಮಾಡಿ
ವಿಶ್ವದಲ್ಲಿ ಅತ್ಯಂತ ತಂಬಾಕು ಬಳಸುವವರ ಸಂಖ್ಯೆಯಲ್ಲಿ ಚೀನಾ ಮೊದಲನೇ ಸ್ಥಾನದಲ್ಲಿದ್ದರೆ ಭಾರತದ ಎರಡನೇ ಸ್ಥಾನದಲ್ಲಿದೆ. ತಂಬಾಕಿನಿಂದ ಉಂಟಾಗುವ ಸಾವಿನಿಂದಾಗಿ ಭಾರತಕ್ಕೆ ಶೇ. 1ರಷ್ಟು ಜಿಡಿಪಿ ನಷ್ಟವನ್ನು ಅನುಭವಿಸುತ್ತಿದೆ.

ಭಾರತದಲ್ಲಿ ಶೇ. 29ರಷ್ಟು ಯುವ ಸಮುದಾಯ ತಂಬಾಕು ಸೇವಿಸುತ್ತಿದೆ, ಸಂಪಾದಿಸುವ ವಯಸ್ಸಿನಲ್ಲಿ ಹೆಚ್ಚಿನ ಜನರು ತಾವು ದುಡಿದ ಹಣವನ್ನ ತಂಬಾಕಿಗೆ ಹಾಕುತ್ತಿದ್ದಾರೆ. ತಂಬಾಕು ಸೇವನೆಯಿಂದ ಹಣ ಮಾತ್ರವಲ್ಲ ಆರೋಗ್ಯ ಕೂಡ ಕಳೆದುಕೊಳ್ಳುತ್ತಿದ್ದಾರೆ. ಕೆಲವರಿಗೆ ತಂಬಾಕು ಸೇವನೆಯಿಂದಾಗಿ ಕ್ಯಾನ್ಸರ್ ಉಂಟಾಗಿ ಸಾವನ್ನಪ್ಪುತ್ತಿದ್ದಾರೆ.
ತಂಬಾಕು ಎಷ್ಟು ಅಪಾಯಕಾರಿ, ಇದರಿಂದ ವ್ಯಕ್ತಿಯ ಆರ್ಥಿಕ ಸ್ಥಿತಿ ಹಾಗೂ ಆರೋಗ್ಯದ ಮೇಲೆ ಹೇಗೆಲ್ಲಾ ಕೆಟ್ಟ ಪರಿಣಾಮ ಬೀರುತ್ತದೆ ಎಂಬುವುದರ ಕುರಿತು ಜಾಗೃತಿ ಮೂಡಿಸಲು ಮೇ. 31ನ್ನು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುವುದು.

ತಂಬಾಕು ಸೇವನೆಯಿಂದಾಗಿ ಯಾವೆಲ್ಲಾ ಬಗೆಯ ಕ್ಯಾನ್ಸರ್ ಬರುತ್ತದೆ
* ಶ್ವಾಸಕೋಶದ ಕ್ಯಾನ್ಸರ್
* ಧ್ವನಿ ಪೆಟ್ಟಿಗೆಯಲ್ಲಿ ಕ್ಯಾನ್ಸರ್
* ಬಾಯಿ ಕ್ಯಾನ್ಸರ್
* ಮೂಗಿನ ಕ್ಯಾನ್ಸರ್
* ಸೈನಸ್
* ಅನ್ನನಾಳದ ಕ್ಯಾನ್ಸರ್
* ಗಂಟಲಿನ ಕ್ಯಾನಸರ್
* ಯೂರಿನರಿ ಬ್ಲಾಡರ್ ಕ್ಯಾನ್ಸರ್
*ಕಿಡ್ನಿ ಸಮಸ್ಯೆ
* ಲಿವರ್ ಸಮಸ್ಯೆ
* ಮೇದೋಜೀರಕ ಗ್ರಂಥಿಯಲ್ಲಿ ತೊಂದರೆ
* ಕರುಳಿನ ಕ್ಯಾನ್ಸರ್
* ಬ್ಲಡ್ ಕ್ಯಾನ್ಸರ್
ಹೀಗೆ ಅನೇಕ ಬಗೆಯ ಕ್ಯಾನ್ಸರ್ ಉಂಟಾಗುವುದು

ನಿಮಗಾಗಿ, ನಿಮ್ಮವರಿಗಾಗಿ ತಂಬಾಕು ಸೇವನೆ ಬಿಡಿ
ಮೊದ-ಮೊದಲು ಖುಷಿಗಾಗಿ, ತಮಾಷೆಗಾಗಿ ಆರಂಭಿಸಿದ್ದು ನಂತರ ಚಟವಾಗುವುದು. ನಂತರ ಅದು ತಪ್ಪೆಂದು ಗೊತ್ತಿದ್ದರೂ ಎಷ್ಟೋ ಜನರಿಗೆ ಬಿಡಲು ಸಾಧ್ಯವಾಗುವುದಿಲ್ಲ. ನೀವು ಬಿಡಬೇಕೆಂದು ಮನಸ್ಸು ಮಾಡಿದ್ದರೆ ಬಿಟ್ಟು ಬಿಡಿ, ಅದಕ್ಕಾಗಿ ಕೌನ್ಸಿಲಿಂಗ್ ಕೂಡ ಇದೆ ಅವೆಲ್ಲಾ ಈ ಚಟ ಬಿಡಲು ಸಹಕಾರಿಯಾಗಿದೆ. ಇದರಿಂದ ಇನ್ನು ಒಂದಿಷ್ಟು ವರ್ಷ ಆರೋಗ್ಯದಿಂದ ಬದುಕಲು ಸಾಧ್ಯವಾಗುವುದು.
ಏಕೆಂದರೆ ದೇಹದ ಒಟ್ಟು ಮೊತ್ತದ ಆರೋಗ್ಯಕ್ಕೆ ಶ್ವಾಸಕೋಶದ ಆರೋಗ್ಯ ತುಂಬಾನೇ ಮುಖ್ಯ. ಸಿಗರೇಟ್ ಸೇವನೆಯಿಂದಾಗಿ ಶ್ವಾಸಕೋಶದ ಆರೋಗ್ಯ ಹಾಳಾಗುವುದು. ಈ ಕೆಳಗಿನ ಟಿಪ್ಸ್ ಶ್ವಾಸಕೋಶವನ್ನು ಕ್ಲೆನ್ಸ್ ಅಂದರೆ ಅದರಲ್ಲಿರುವ ಕಶ್ಮಲವನ್ನು ಹೊರ ಹಾಕಲು ಸಹಕಾರಿಯಾಗಿದೆ ನೋಡಿ:

ಸ್ಟೀಮ್ ಥೆರಪಿ
ಸ್ಟೀಮ್ ಥೆರಪಿ ಶ್ವಾಸಕೋಶದ ಆರೋಗ್ಯವನ್ನು ಹೆಚ್ಚಿಸುತ್ತೆ. ಶ್ವಾಸಕೋಶದ ಸಮಸ್ಯೆ ಇರುವವರಿಗೆ ತಂಪಾದ ಅಥವಾ ಒಣ ಹಬೆಗೆ ಸಮಸ್ಯೆ ಹೆಚ್ಚುವುದು. ವಾತಾವರಣದಿಂದಾಗಿ ಶ್ವಾಸಕೋಶ ಡ್ರೈಯಾಗಿ ರಕ್ತ ಪೂರೈಕೆ ಹಾಗೂ ಆಮ್ಲ ಜನಕ ಪೂರೈಕೆಗೆ ಅಡಚಣೆ ಉಂಟಾಗಬಹುದು.
ನೀವು ಸ್ವೀಮ್ ಥೆರಮಿ ತೆಗೆದುಕೊಳ್ಳುವುದರಿಂದ ಶ್ವಾಸಕೋಶದ ಆರೋಗ್ಯಕ್ಕೆ ಒಳ್ಳೆಯದು.

2. ಕೆಮ್ಮು ನಿಯಂತ್ರಿಸುವುದು
ಕೆಮ್ಮು ನಿಯಂತ್ರಿಸುವುದು ಕೂಡ COPD ((chronic obstructive pulmonary disease) ಇರುವವರಿಗೆ ತುಂಬಾನೇ ಒಳ್ಳೆಯದು. ಈ ವ್ಯಾಯಾಮ ಶ್ವಾಸಕೋಶದಲ್ಲಿರುವ ಕಶ್ಮಲ ಹೊರ ಹಾಕಲು ಸಹಕಾರಿಯಾಗಿದೆ.
ಮಾಡುವುದು ಹೇಗೆ?
* ಒಂದು ಚೇರ್‌ನಲ್ಲಿ ಕೂತು ಭುಜವನ್ನು ಇಳಿ ಬಿಡಿ, ಪಾದಗಳು ನೆಲಕ್ಕೆ ಮುಟ್ಟುವಂತೆ ಇರಬೇಕು
* ಈಗ ಕೈಗಳಿಂದ ಹೊಟ್ಟೆಯನ್ನು ಹಿಡಿಯಿರಿ
* ನಿಧಾನಕ್ಕೆ ಉಸಿರನ್ನು ತೆಗೆದುಕೊಳ್ಳಿ
* ನಿಧಾನಕ್ಕೆ ಉಸಿರನ್ನು ಬಿಡುತ್ತಾ ಮುಂದೆಕ್ಕೆ ಬಾಗಿ, ನಿಮ್ಮ ಹೊಟ್ಟೆಯ ಮೇಲೆ ಒತ್ತಡ ಬೀಳುವಂತೆ ಇರಬೇಕು.
* ನಂತರ 2-3 ಬಾರಿ ಕೆಮ್ಮಿ
* ನಂತರ ನಿಧಾನಕ್ಕೆ ಉಸಿರನ್ನು ತೆಗೆದುಕೊಂಡು ಮೊದಲಿನ ಭಂಗಿಗೆ ಬನ್ನಿ.
* ಈ ರೀತಿ 2-3 ಬಾರಿ ಪ್ರತಿದಿನ ಮಾಡಿ.

3. ಶ್ವಾಸಕೋಶದಲ್ಲಿರುವ ಕಫವನ್ನು ತೆಗೆಯಿರಿ
1. ಬೆನ್ನಿನ ಮೇಲೆ ಮಲಗಿ
* ಹಾಸಿಗೆ ಅಥವಾ ಚಾಪೆ ಮೇಲೆ ಬೆನ್ನು ಕೆಳಗಾಗಿ ಮಲಗಿ.
* ಹಿಪ್ ಅಥವಾ ಸೊಂಟದ ಕೆಳಗಡೆ ದಿಂಬು ಇಡಿ.
* ಎದೆ ಸೊಂಟದ ಭಾಗದಿಂದ ಕೆಳಗಡೆ ಇರಬೇಕು, ಆ ಕಾರಣಕ್ಕೆ ದಿಂಬು ಇಡಿ
* ಈಗ ನಿದಾನಕ್ಕೆ ಉಸಿರನ್ನು ತೆಗೆದುಕೊಂಡು ನಂತರ ಬಾಯಿಯ ಮೂಲಕ ಉಸಿರನ್ನು ಬಿಡಿ. ಉಸಿರನ್ನು ಎರಡು ಬಾರಿ ಬಿಡಬೇಕು. ಇದನ್ನು 1:2 ಉಸಿರಾಟ ಅಥವಾ 2:1 ಎಂದು ಕರೆಯಲಾಗುವುದು ಅಂದರೆ ಒಮ್ಮೆ ಉಸಿರು ತೆಗೆದು ಎರಡು ಬಾರಿ ಬಿಡಬೇಕು.
* ಈ ರೀತಿ ಕೆಲವು ನಿಮಿಷ ಮಾಡಿ.
2. ಒಂದು ಬದಿಯಲ್ಲಿ ತಿರುಗಿ ಮಲಗಿ
* ಒಂದು ಬದಿಯಲ್ಲಿ ತಿರುಗಿ ಮಲಗಿ, ತಲೆ ಕೆಳಗಡೆ ದಿಂಬು ಅಥವಾ ಕೈ ಹಿಡಿ
* ಸೊಂಟದ ಭಾಗದಲ್ಲಿ ದಿಂಬು ಇಡಿ
* 1: 2 ಉಸಿರಾಟ ಮಾಡಿ
* ಈ ರೀತಿ ಕೆಲ ನಿಮಿಷ ಮಾಡಿ.
3. ಹೊಟ್ಟೆಯ ಮೇಲೆ ಮಲಗಿ
ನೆಲದ ಮೇಲೆ ದಿಂಬುಗಳನ್ನು ಜೋಡಿಸಿ
* ಈಗ ಹೊಟ್ಟೆಯ ಮೇಲೆ ಮಲಗಿ ಆದರೆ ನಿಮ್ಮ ಹಿಪ್ ಎದೆ ಭಾಗಕ್ಕಿಂತ ಎತ್ತರಲ್ಲಿ ಇರಬೇಕು, ಹಾಗಾಗಿ ದಿಂಬು ಇಡಿ.
* ಕೈಗಳನ್ನು ತಲೆಗೆ ಸಪೋರ್ಟ್ ಆಗಿ ಇಡಿ
* ಈಗ 1: 2 ಉಸಿರಾಟ ಅಭ್ಯಾಸ ಮಾಡಿ.

ವ್ಯಾಯಾಮ ಮಾಡಿ
ಪ್ರತಿನತ್ಯ ವ್ಯಾಯಾಮ ಮಾಡುವುದು ಕೂಡ ಒಟ್ಟು ಮೊತ್ತ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹೆಚ್ಚುವುದು. ಸ್ಟ್ರೋಕ್, ಹೃದಯ ಸಂಬಂಧಿ ಸಮಸ್ಯೆ ತಡೆಗಟ್ಟಬಹುದು. ವ್ಯಾಯಾಮ ಮಾಡುವುದರಿಂದ ದೇಹಕ್ಕೆ ಹೆಚ್ಚು ಆಮ್ಲಜನಕ ಪೂರೈಕೆಯಾಗುತ್ತದೆ. ಎಲ್ಲಾ ಮಸಲ್‌ಗಳು ಆಮ್ಲಜನಕವನ್ನು ಚೆನ್ನಾಗಿ ಬಳಸಿಕೊಂಡು ಆರೋಗ್ಯ ಹೆಚ್ಚಿಸುತ್ತೆ.

ಗ್ರೀನ್ ಟೀ
ಗ್ರೀನ್ ಟೀ ನಿಮ್ಮ ಶ್ವಾಸಕೋಶದ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿರುವ ಅಂಶ ಧೂಮಪಾನದಿಂದಾಗಿ ಶ್ವಾಸಕೋಶದ ಅಂಗಾಂಶ ಹಾನಿಯುಂಟಾಗುವುದನ್ನು ತಡೆಗಟ್ಟುತ್ತೆ.

ಶ್ವಾಸಕೋಶದ ಆರೋಗ್ಯಕ್ಕೆ ಈ ಆಹಾರಗಳು ಒಳ್ಳೆಯದು
* ಅರಿಶಿಣ
* ಹಸಿರು ಸೊಪ್ಪು
* ಚೆರ್ರಿ
* ಬ್ಲೂ ಬೆರ್ರಿ
* ಆಲೀವ್
* ವಾಲ್ನಟ್
* ಬೀನ್ಸ್
* ಧಾನ್ಯಗಳು



Click it and Unblock the Notifications











