Latest Updates
-
ಲಿವ್-ಇನ್ ಸಂಬಂಧ ಮುರಿದರೆ ಕ್ರಿಮಿನಲ್ ಕೇಸ್? ಸುಪ್ರೀಂ ಕೋರ್ಟ್ನಿಂದ ಬಂತು ಬಿಗ್ ಶಾಕ್! -
ಉರಿಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಹೀಟ್ ವೇವ್ ಎಚ್ಚರಿಕೆ: ಬಿಸಿಲಿನ ಬೇಗೆಯಿಂದ ಬಚಾವಾಗಲು ಈ ಪಾನೀಯಗಳೇ ಮದ್ದು! -
ಅನುಷ್ಕಾ ಶರ್ಮಾ ಐಪಿಎಲ್ ಲುಕ್: ಸಿಂಪಲ್ ಡ್ರೆಸ್ನಲ್ಲೇ ಮ್ಯಾಜಿಕ್ ಮಾಡಿದ್ದು ಹೇಗೆ? -
ಬಿಸಿಗಾಳಿ ಎಚ್ಚರಿಕೆ: ಏಪ್ರಿಲ್ ಬಿಸಿಲಿನಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಾಯಿಸುವುದು ಹೇಗೆ? -
ಪೊಲೀಸ್ ಕಿರುಕುಳದಿಂದ ಬೇಸತ್ತಿದ್ದೀರಾ? ಪ್ರೇಮಿಗಳಿಗೆ ರಕ್ಷಣೆ ನೀಡಲು ಹೈಕೋರ್ಟ್ ಕೊಟ್ಟಿದೆ ಬಿಗ್ ರಿಲೀಫ್! -
ಬಿಸಿಲ ಬೇಗೆಯಿಂದ ತತ್ತರಿಸಿದೆಯೇ? ನಿಮ್ಮ ಮನೆ ಮತ್ತು ಗಿಡಗಳನ್ನು ತಂಪಾಗಿರಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಸರಳ ಟಿಪ್ಸ್ ಪಾಲಿಸಿ: ಸುಡುವ ಬಿಸಿಲಿನಲ್ಲಿ ಆರೋಗ್ಯವಾಗಿರುವುದು ಹೇಗೆ? -
ಸುಡುವ ಬಿಸಿಲಿಗೆ ಸುಸ್ತಾದ್ರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ಕೂಲಿಂಗ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿಯ ಅಬ್ಬರ: ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸದಿದ್ದರೆ ಕಾದಿದೆ ದೊಡ್ಡ ಅಪಾಯ!
ತೂಕ ಇಳಿಕೆಗೆ ಗ್ರೀನ್ ಟೀ ಯಾವ ಟೈಮ್‌ನಲ್ಲಿ ಕುಡಿದರೆ ಒಳ್ಳೆಯದು?
ತೂಕ ಇಳಿಕೆಗೆ ಗ್ರೀನ್ ಟೀ ಕುಡಿಯೋದು ಬೆಸ್ಟ್; ಆದ್ರೆ ಯಾವ ಸಮಯದಲ್ಲಿ ಸೇವಿಸಬೇಕು ಗೊತ್ತಾ? ಇಲ್ಲವಾದರೆ ಅಪಾಯವೂ ಆಗಬಹುದು!

ಬೆಳಿಗ್ಗೆ ಎದ್ದ ತಕ್ಷಣ ಕೈಯಲ್ಲಿ ಒಂದು ನ್ಯೂಸ್ ಪೇಪರ್, ಹಾಗೇನೇ ಜೊತೆಗೆ ಬಿಸಿ ಬಿಸಿ ಚಹಾ ಇದ್ರೆ ಸ್ವರ್ಗಕ್ಕೆ ಮೂರೇ ಗೇಣು ಅಲ್ವಾ? ಇದು ನಮ್ಮ ದೇಶದಲ್ಲಿ ಹಲವರ ದಿನನಿತ್ಯದ ಚಟುವಟಿಕೆ. ಒಂದು ಗುಟುಕು ಬಿಸಿಬಿಸಿ ಚಹಾ ನಾಲಿಗೆಗೆ ತಾಕಿದರೆ ಸಾಕು ಆ ಬೆಳಗು ಎಷ್ಟು ಆಹ್ಲಾದಕರ ಎನಿಸುತ್ತೆ. ಅಷ್ಟೇ ಅಲ್ಲ ದೇಹದಲ್ಲಿ ಅದೇನೋ ಹೊಸತನ, ಹೊಸ ವೈಬ್ರೇಶನ್ ಹುಟ್ಟಿಕೊಳ್ಳುತ್ತೆ. ದೇಹದಲ್ಲಿರುವಂತಹ ಚಯಾಪಚಯ ಕ್ರಿಯೆಯನ್ನು ಹೆಚ್ಚು ಮಾಡಲು ದೇಹವನ್ನು ಇಡೀ ದಿನ ಸಕ್ರಿಯವಾಗಿರಿಸಿಕೊಳ್ಳಲು ಕಾಫಿಗಿಂತ ಚಹಾ ಹೆಚ್ಚು ಉತ್ತಮ ಎಂದು ಹಲವರು ಭಾವಿಸುತ್ತಾರೆ. ಗ್ರೀನ್ ಟೀ, ಬ್ಲಾಕ್ ಟೀ, ನೀಲಿ ಪಿ ಟಿ, ವೈಟ್ ಟಿ ಹೀಗೆ ವಿಶ್ಚಾದ್ಯಂತ ಜನರು ಇಷ್ಟಪಡುವಂತಹ ತರಾವರಿ ಟೀ ಲಭ್ಯವಿದೆ.
ಚಹಾ ಕುಡಿಯುವುದು ದೇಹದ ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ಚಹಾವನ್ನು ಯಾವ ಸಮಯದಲ್ಲಿ ಕುಡಿಯಬೇಕು, ಯಾವ ರೀತಿಯ ಚಹಾ ಕುಡಿಯಬೇಕು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ನೀವು ದಿನವೂ ಗ್ರೀನ್ ಟೀ ಕುಡಿಯಲು ಅಭ್ಯಾಸ ಮಾಡಿಕೊಂಡಿದ್ದರೆ ಈ ಕೆಲವು ಮುಖ್ಯವಾದ ವಿಚಾರಗಳನ್ನು ತಿಳಿದುಕೊಳ್ಳಿ.
ತೂಕ ಇಳಿಕೆಗೆ ಗ್ರೀನ್ ಟೀಯೇ ಬೆಸ್ಟ್!
ಆರೋಗ್ಯಕ್ಕೆ ಸಂಬಂಧಪಟ್ಟ ಹಾಗೆ ಚಹಾದ ವಿಷಯಕ್ಕೆ ಬಂದರೆ ಇತರ ಎಲ್ಲಾ ಚಹಾ ಗಳಿಗಿಂತ ಗ್ರೀನ್ ಟಿ ಸೇವನೆ ಬಹಳ ಒಳ್ಳೆಯದು. ಇದರಲ್ಲಿ ಉತ್ಕರ್ಷಣ ನಿರೋಧಕಗಳು ಹಾಗೂ ಉರಿಯುತದ ಗುಣಲಕ್ಷಣಗಳು ಇರುತ್ತವೆ. ಹಾಗಾಗಿ ನಮ್ಮ ದೈನಂದಿನ ಆಹಾರ ಕ್ರಮದಲ್ಲಿ ಗ್ರೀನ್ ಟೀ ಸೇರಿಸುವುದು ಒಳ್ಳೆಯದು. ಅತಿಯಾದರೆ ಅಮೃತವು ವಿಷ ಎನ್ನುವಂತೆ ಗ್ರೀನ್ ಟೀಯನ್ನು ಕೂಡ ಮಿತವಾಗಿ ಸೇವನೆ ಮಾಡಬೇಕು ಜೊತೆಗೆ ಸರಿಯಾದ ಸಮಯಕ್ಕೆ ಸೇವನೆ ಮಾಡಬೇಕು. ಇಲ್ಲವಾದರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ಹಸಿರು ಚಹಾ ಕುಡಿಯಲು ಯಾವ ಸಮಯ ಉತ್ತಮ ಗೊತ್ತಾ?
ನಿಮಗೆ ಒಂದು ಕಪ್ ಚಹಾ ಕುಡಿದರೆ ಕಿಕ್ ನೀಡಿದ ಹಾಗೆ ಆಗುತ್ತೆ ಎಂದು ಯಾವತ್ತಾದರೂ ಅನಿಸಿದೆಯಾ? ಹಾಗಾದ್ರೆ ಅದಕ್ಕೆ ಕಾರಣ ಚಹಾದಲ್ಲಿ ಇರುವಂತಹ ಕೆಫೀನ್ ಅಂಶ. ಗ್ರೀನ್ ಟೀಗೆ ಹೋಲಿಸಿದರೆ ಬ್ಲ್ಯಾಕ್ ಟೀಯಲ್ಲಿ ಕೆಫೀನ್ ಅಂಶ ಹೆಚ್ಚಾಗಿರುತ್ತದೆ. ಹಾಗಾಗಿ ಅತಿ ಹೆಚ್ಚು ಕೆಫೀನ್ ಇರುವ ಟೀಯನ್ನು ದಿನದ ಎಲ್ಲಾ ಸಮಯದಲ್ಲಿಯೂ ಸೇವಿಸಬಾರದು.
ಗ್ರೀನ್ ಟೀ ಅಥವಾ ಹಸಿರು ಚಹಾದಲ್ಲಿ ಇರುವ ಕೆಫೀನ್ ಅಂಶ ಅಷ್ಟು ಹೆಚ್ಚಿನ ಸೈಡ್ ಎಫೆಕ್ಟ್ ಹೊಂದಿಲ್ಲ. ಬುದ್ಧಿ, ಏಕಾಗ್ರತೆ ಹೆಚ್ಚಾಗಲು ಹಾಗೂ ನಮ್ಮನ್ನು ಎನರ್ಜಿಟಿಕ್ ಆಗಿ ಇಡಲು ಸಹಾಯ ಮಾಡುತ್ತೆ. ಆದಾಗ್ಯೂ ಕೆಫೀನ್ ಅಂಶ ಅಧಿಕವಾದರೆ ಕೆಲವು ತೊಂದರೆಗಳು ಆಗಬಹುದು ಆಹಾರವನ್ನು ಜೀರ್ಣಿಸಲು ಸಹಾಯ ಮಾಡುವಂತಹ ಹೈಡ್ರೋಕ್ಲೋರಿಕ್ ಆಮ್ಲದ ಉತ್ಪಾದನೆ ಇದರಿಂದ ಜಾಸ್ತಿ ಆಗಬಹುದು ಆಮ್ಲ ದೇಹದಲ್ಲಿ ಜಾಸ್ತಿ ಆದರೆ ಹೊಟ್ಟೆಯಲ್ಲಿ ತೀವ್ರ ಸಮಸ್ಯೆ ಕಾಣಿಸುತ್ತಿದೆ.
ಗ್ರೀನ್ ಟೀಯ ಅಡ್ಡ ಪರಿಣಾಮಗಳು;
ಗ್ರೀನ್ ಟೀ ಕೂಡ ಕುಡಿಯುವುದು ಅತಿಯಾದರೆ ಆರೋಗ್ಯದ ಮೇಲೆ ಕೆಲವು ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡಬಹುದು. ಅದರಲ್ಲೂ ಮುಖ್ಯವಾಗಿ ನೀವು ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಸೇವಿಸುವುದಾದರೆ ಈ ಕೆಲವು ಸಮಸ್ಯೆಗಳನ್ನು ಎದುರಿಸುವ ಸಂಭವ ಇರುತ್ತೆ. ಹುಳಿತೇಗು, ಹೊಟ್ಟೆಯಲ್ಲಿ ಅಜೀರ್ಣದ ಸಮಸ್ಯೆ, ತಲೆನೋವು, ಆತಂಕ, ರಕ್ತ ಹೀನತೆ, ಮಹಿಳೆಯರಲ್ಲಿ ಅತಿಯಾದ ರಕ್ತಸ್ರಾವ, ತಲೆನೋವು, ವಾಕರಿಕೆ, ಪಿತ್ತಜನನಾಂಗದ ಸಮಸ್ಯೆ, ಮೂಳೆಯ ಅನಾರೋಗ್ಯ ಮೊದಲಾದ ಸಮಸ್ಯೆಗಳು ಕೂಡ ಗ್ರೀನ್ ಟೀ ಸೇವನೆಯಿಂದ ಉಂಟಾಗಬಹುದು. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟಿ ಕುಡಿಯುವುದು ಒಳ್ಳೆಯ ಅಭ್ಯಾಸವಲ್ಲ ಎಂದು ಪೌಷ್ಟಿಕ ತಜ್ಞ ನಯಂಬಿಯಾರ್ ತೇಜಶ್ವಿ ಹೇಳುತ್ತಾರೆ.
ಗ್ರೀನ್ ಟೀ ಸೇವನೆಗೆ ಸೂಕ್ತವಾದ ಸಮಯ:
ತಜ್ಞರ ಪ್ರಕಾರ ಗ್ರೀನ್ ಟೀ ಅಥವಾ ಹಸಿರು ಚಹಾವನ್ನು ಯಾವ ಸಮಯದಲ್ಲಿ ಸೇವಿಸಬೇಕು ಅಂದ್ರೆ ಉಪಹಾರ ಅಥವಾ ಊಟವಾದ ನಂತರ ಇಲ್ಲವೇ ಸಂಜೆ ಹೊತ್ತು ತಿಂಡಿ ಜೊತೆ ಸೇವನೆ ಮಾಡಬಹುದು ಹಾಗಾದರೆ ತೂಕ ಇಳಿಸಿಕೊಳ್ಳಲು ಹಸಿರು ಚಹಾ ಸೇವನೆ ಸಹಾಯಕವಾಗುವುದಿಲ್ಲವೇ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದಕ್ಕೂ ಸೂಕ್ತವಾದ ಮಾರ್ಗಗಳಿವೆ. ಗ್ರೀನ್ ಚಹಾವನ್ನು ಗಿಡಮೂಲಿಕೆಗಳು, ಜೇನುತುಪ್ಪ ಅಥವಾ ನಿಂಬೆರಸ ಬೆರೆಸಿಕೊಂಡು ಕುಡಿದರೆ ಅದು ಆರೋಗ್ಯಕ್ಕೂ ಒಳ್ಳೆಯದು. ಈ ರೀತಿಯಾಗಿ ಒಂದು ಕಪ್ ಟೀಯನ್ನು ಬೆಳಿಗ್ಗೆ ತಿಂಡಿಯ ಜೊತೆ ಸೇವಿಸಿದರೆ ದೇಹದಲ್ಲಿ ಎನರ್ಜಿ ಕೂಡ ಹೆಚ್ಚಾಗುತ್ತೆ. ಇಷ್ಟಾಗಿಯೂ ನಿಮಗೆ ಯಾವುದಾದರೂ ಆರೋಗ್ಯ ಸಮಸ್ಯೆ ಇದ್ದರೆ ನಿಮಗೆ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸವಿದ್ದರೆ ಅದಕ್ಕೆ ಸೂಕ್ತ ಸಮಯ ಯಾವುದು ಎಂಬುದನ್ನ ನಿಮ್ಮ ಆಪ್ತ ವೈದ್ಯರ ಸಲಹೆ ಪಡೆದು ಸೇವಿಸುವುದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
