Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಟೀಂ ಇಂಡಿಯಾ ಕ್ರಿಕೆಟಿಗರ ಫಿಟ್ನೆಸ್ ತಿಳಿಯಲು ಡೆಕ್ಸಾ ಪರೀಕ್ಷೆ, ಏನಿದು? ಈ ಪರೀಕ್ಷೆ ಹೇಗೆ ಮಾಡಲಾಗುವುದು?
ಟೀಂ ಇಂಡಿಯಾ ತಂಡಕ್ಕೆ ಆಯ್ಕೆಯಾಗಲು ಡೆಕ್ಸಾ (DEXA) ಪರೀಕ್ಷೆ ಕಡ್ಡಾಯವೆಂದು ಬಿಸಿಸಿಐ ಹೇಳಿದ ಮೇಲೆ ಏನಿದು ಡೆಕ್ಸಾ ಪರೀಕ್ಷೆ, ಈ ಪರೀಕ್ಷೆ ಆಟಗಾರನ ಸಾಮರ್ಥ್ಯ ಅಳೆಯಲು ಹೇಗೆ ಸಹಕಾರಿ ಎಂಬ ಅಂಶಗಳನ್ನು ತಿಳಿಯಲು ಗೂಗಲ್ ಸರ್ಚ್ ಹೆಚ್ಚಾಗಿದೆ.

ಈ ಡೆಕ್ಸಾ ಪರೀಕ್ಷೆ ಎಂದರೇನು?ಇದರ ಪ್ರಯೋಜನಗಳೇನು ಎಂಬೆಲ್ಲಾ ಅಂಶಗಳನ್ನು ನೋಡೋಣ ಬನ್ನಿ?
ಡೆಕ್ಸಾ ಪರೀಕ್ಷೆ ಎಂದರೇನು?
ಆಟಗಾರನ ಮೂಳೆಯ ಖನಿಜ ಸಾಂದ್ರತೆ ಎಷ್ಟಿದೆ ಎಂದು ತಿಳಿಯಲು ಈ ಪರೀಕ್ಷೆ ಮಾಡಿಸಲಾಗುವುದು. ಸಾಮಾನ್ಯ ಜನರಿಗಿಂತ ಆಟಗಾರರ ಮೂಳೆಗಳಲ್ಲಿ ಖನಿಜ ಸಾಂದ್ರತೆ ಅಧಿಕವಿರುತ್ತದೆ. ಅದೇ ಆಟಗಾರ ಗಾಯಗೊಂಡಾಗ ಅಥವಾ ತುಂಬಾ ಸಮಯದಿಂದ ಅಭ್ಯಾಸ ಮಾಡದಿದ್ದರೆ ಖನಿಜ ಸಾಂದ್ರತೆ ಕಡಿಮೆಯಾಗುವುದು. ಈ ಮೂಲಕ ಆಟಗಾರರು ದೈಹಿಕವಾಗಿ ಎಷ್ಟು ಫಿಟ್ ಆಗಿದ್ದಾರೆ ಎಂಬುವುದು ಮುಖ್ಯವಾಗುತ್ತದೆ.
ಗಾಯಗೊಂಡ ಆಟಗಾರರು ಆಟಕ್ಕೆ ಮರಳುವ ಮುನ್ನ ಈ ಪರೀಕ್ಷೆ ಅಗ್ಯತವೆಂದ ಬಿಸಿಸಿಐ
ಗಾಯಗೊಂಡ ಆಟಗಾರರು ಮತ್ತೆ ಆಟಕ್ಕೆ ಮರಳುವ ಮುನ್ನ ಅವರ ದೇಹದ ದೈಹಿಕ ಸಾಮರ್ಥ್ಯ ತಿಳಿಯಲು ಈ ಡೆಕ್ಸಾ ಪರೀಕ್ಷೆ ಮಾಡಿಸುವುದು ಒಳ್ಳೆಯದು. ಈ ಪರೀಕ್ಷೆ ಮಾಡುವುದರಿಂದ ಆಟಗಾರರ ಮೂಳೆಯ ಬಲ, ಮೂಳೆಯಲ್ಲಿ ಖನಿಜ ಸಾಂದ್ರತೆ ಎಷ್ಟಿದೆ ಎಂಬೆಲ್ಲಾ ಮಾಹಿತಿ ಸಿಗುವುದು. ಮೂಳೆಯಲ್ಲಿ ಖನಿಜ ಸಾಂದ್ರತೆ ಚೆನ್ನಾಗಿದ್ದರೆ ಮಾತ್ರ ಚೆನ್ನಾಗಿ ಪರ್ಫಾಮ್ ಮಾಡಲು ಸಾಧ್ಯ.
ಈ ಪರೀಕ್ಷೆ ಮಾಡುವ ಮೂಲಕ ಆಟಗಾರ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆಯೇ ಎಂದು ತಿಳಿಯುವುದು, ಈ ಪರೀಕ್ಷೆಯಲ್ಲಿ ಮೂಳೆಯಲ್ಲಿ ಸಾಕಷ್ಟು ಖನಿಜಾಂಶ ಇಲ್ಲವೆಂದಾದರೆ ಆ ಆಟಗಾರರನಿಗೆ ಮತ್ತಷ್ಟು ವಿಶ್ರಾಂತಿ ಬೇಕಾಗಿದೆ ಎಂದು ಸೂಚಿಸುತ್ತದೆ.
ಡೆಕ್ಸಾ ಪರೀಕ್ಷೆ ಹೇಗೆ ಮಾಡಲಾಗುವುದು
ಸ್ಕ್ಯಾನಿಂಗ್ ಮಾಡುವ ಮೂಲಕ ಕಂಡು ಹಿಡಿಯಲಾಗುವುದು. ಸ್ಕ್ಯಾನಿಂಗ್‌ನಲ್ಲಿ ಅಧಿಕ ಶಕ್ತಿಯ ಹಾಗೂ ಕಡಿಮೆ ಶಕ್ತಿಯ ಎರಡು ಕಿರಣಗಳು ಮೂಳೆಯ ಮೂಲಕ ಹಾದು ಹೋಗುವುದು, ಈ ಮೂಲಕ ಮೂಳೆಗಳಲ್ಲಿ ಖನಿಜಾಂಶ ಎಷ್ಟಿದೆ ಎಂದು ತಿಳಿಯಲಾಗುವುದು.
* ಈ ಪರೀಕ್ಷೆ ಮಾಡುವಾಗ ವ್ಯಕ್ತಿ ಯಾವುದೇ ಡ್ರೆಸ್ ತೆಗೆಯಬೇಕಾಗಿಲ್ಲ
* ಯಾವುದೇ ಸಿದ್ಧತೆ ಅಂದರೆ ಹಸಿವಿನಿಂದ ಇರುವುದು, ಹೊಟ್ಟೆ ತುಂಬ ನೀರು ಕುಡಿಯುವುದು ಈ ರೀತಿಯ ಯಾವುದೇ ಸಿದ್ಧತೆ ಬೇಕಾಗಿಲ್ಲ.
* ಡ್ರೆಸ್‌ನಲ್ಲಿ ಮೆಟಲ್ ವಸ್ತುಗಳಿದ್ದರೆ ಅಂಥ ಡ್ರೆಸ್ ಧರಿಸುವಂತಿಲ್ಲ ಅಂದರೆ ಜಿಪ್, ಹುಕ್ಸ್ ಈ ಬಗೆಯ ಡ್ರೆಸ್‌ಗಳಿದ್ದರೆ ತೆಗೆಯಬೇಕು.
* ಈ ಪರೀಕ್ಷೆ ಮಾಡುವಾಗ ಯಾವುದೇ ನೋವು ಉಂಟಾಗುವುದಿಲ್ಲ.
* ಎಕ್ಸ್‌ರೇ ಟೇಬಲ್‌ನಲ್ಲಿ ಬೆನ್ನು ಮೇಲೆ ಮಲಗಿಸಿ ಈ ಎಕ್ಸ್‌ರೇ ಮಾಡಲಾಗುವುದು.
* ವ್ಯಕ್ತಿಗಳ ದೇಹದಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಮೂಳೆಗಳ ಖನಿಜಾಂಶದಲ್ಲಿ ವ್ಯತ್ಯಾಸ ಇರುತ್ತದೆ. ಇದರಲ್ಲಿ ದೇಹದ ಒಂದಕ್ಕಿಂತ ಹೆಚ್ಚಿನ ಭಾಗವನ್ನು ಸ್ಕ್ಯಾನ್ ಮಾಡಲಾಗುವುದು.
* ಈ ಸ್ಕ್ಯಾನ್ ಮಾಡಲು 10-20 ನಿಮಿಷ ಸಾಕಾಗುವುದು.
ಫಲಿತಾಂಶ
ಯುವಕರಲ್ಲಿ ಹಾಗೂ ವಯಸ್ಸಾದವರಲ್ಲಿ ಬೇರೆ-ಬೇರೆ ಫಲಿತಾಂಶ ತೋರಿಸುತ್ತದೆ.
* 1 SDಕ್ಕಿಂತ ಅಧಿಕವಿದ್ದರೆ ಸಹಜ
* 1 and -2.5 SD ನಡುವೆ ಇದ್ದರೆ ಮೂಳೆಗಳಲ್ಲಿ ಖನಿಜಾಂಶ ಸ್ವಲ್ಪ ಕಡಿಮೆಯಾಗಿದೆಯೆಂದರ್ಥ
* 2.5 SDಕ್ಕಿಂತ ಕಡಿಮೆಯಿದ್ದರೆ ಸಂಧಿವಾತದ ಲಕ್ಷಣವಾಗಿದೆ.
-2 ಇದ್ದರೆ Z ಸ್ಕೋರ್ ಎಂದು ಹೇಳಲಾಗುವುದು. ಮಕ್ಕಳಲ್ಲಿ ಈ ರೀತಿ ಕಂಡು ಬರುವುದು, ಅವರು ಬೆಳೆದು 30 ವರ್ಷ ದಾಟಿದಂತೆ ಖನಿಜಾಂಶ ಹೆಚ್ಚಾಗುವುದು.
ಈ ಡೆಕ್ಸಾ ಪರೀಕ್ಷೆ ಮಾಡಿಸಿ ಮುಂದೆ ಮೂಳೆ ಮುರಿತ ಉಂಟಾಗಲಿದೆಯೇ ಎಂದು ತಿಳಿಯಲು ಸಾಧ್ಯವಿಲ್ಲ. ಡೆಕ್ಸಾ ಪರೀಕ್ಷೆ ಮಾಡಿದ ಮೇಲೆ ನಿಮ್ಮ ವೈದ್ಯರು ನಿಮಗೆ ನಿಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ನಿಮಗೆ ಚಿಕಿತ್ಸೆ ನೀಡುತ್ತಾರೆ.
ಯಾರು ಈ ಪರೀಕ್ಷೆ ಮಾಡಿಸಬಾರದು?
ಗರ್ಭಿಣಿಯರು ಅಥವಾ ಗರ್ಭಧಾರಣೆಗೆ ಪ್ರಯತ್ನಿಸುತ್ತಿದ್ದರೆ ಡೆಕ್ಸಾ ಪರೀಕ್ಷೆ ಮಾಡಿಸಬಾರದು.
ಡೆಕ್ಸಾ ಪರೀಕ್ಷೆ ಪದೇ ಪದೇ ಮಾಡಿಸಬೇಕೆ?
ನಿಮ್ಮ ಮೂಳೆಯ ಆರೋಗ್ಯ ಸ್ಥಿತಿ ನೋಡಿ ವೈದ್ಯರು ನಿಮಗೆ ಮತ್ತೆ ಮಾಡಿಸಬೇಕೆ, ಬೇಡ್ವೆ ಎಂದು ನಿರ್ಧರಿಸುತ್ತಾರೆ.
ಸಂಧಿವಾತದ ಬಗ್ಗೆ ತಿಳಿಯಲು ಈ ಪರೀಕ್ಷೆ ಮಾಡಲಾಗುವುದೇ?
ಹೌದು ಸಂಧಿವಾತ ಪರೀಕ್ಷೆ ಇರುವವರಿಗೆ ಈ ಪರೀಕ್ಷೆ ಮಾಡಿಸಿ ಅದಕ್ಕೆ ತಕ್ಕ ಪರೀಕ್ಷೆ ನೀಡಲಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

