Latest Updates
-
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ!
ತುಂಬಾ ಹೊತ್ತು ಮಾಸ್ಕ್ ಧರಿಸಿದರೆ ಬಾಯಿ ದುರ್ವಾಸನೆ ಬೀರುವುದು, ತಡೆಗಟ್ಟುವುದು ಹೇಗೆ?
ಕೊರೊನಾ ಸಾಂಕ್ರಾಮಿಕ ರೋಗ ಬಂದಾಗಿನಿಂದ ಮಾಸ್ಕ್ ಎಂಬುವುದು ಅತೀ ಅವಶ್ಯಕ ವಸ್ತುಗಳಲ್ಲಿ ಒಂದಾಗಿದೆ. ಮನೆಯಿಂದ ಹೊರಗಡೆ ಕಾಲಿಡಬೇಕೆಂದರೆ ಮುಖದಲ್ಲಿ ಮಾಸ್ಕ್ ಇರಲೇಬೇಕು. ಕೊರೊನಾ ಸೋಂಕಿ ಹರಡುವುದನ್ನು ತಪ್ಪಿಸು ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು, ಆದರೆ ಶುಚಿತ್ವ ಕಾಪಾಡದಿದ್ದರೆ ಮಾಸ್ಕ್‌ನಿಂದಲೇ ಇನ್ನಿತರ ಕಾಯಿಲೆ ಬರಬಹುದು ಹುಷಾರ್!
ಯಾರು ತುಂಬಾ ಸಮಯ ಮಾಸ್ಕ್ ಧರಿಸುತ್ತಾರೋ ಅವರು ಮಾಸ್ಕ್ ಶುಚಿತ್ವ ಕಡೆ ತುಂಬಾನೇ ಗಮನ ನೀಡಬೇಕು. ಇಲ್ಲದಿದ್ದರೆ ಬಾಯಿಯ ಆರೋಗ್ಯ ಹಾಳಾಗುವುದು ಡಯಾಬಿಟಿಸ್ ಆಸ್ಪತ್ರೆಯ ಡಾ. ವಿನಿತಾ ರಾಮಚಂದ್ರನ್ ದಿ ಹಿಂದೂ ಪತ್ರಿಕೆಗೆ ತಿಳಿಸಿದ್ದಾರೆ.

ತುಂಬಾ ಸಮಯ ಮಾಸ್ಕ್ ಧರಿಸುವುದರಿಂದ ಏನಾಗುತ್ತದೆ?
ಆಸ್ಪತ್ರೆಯಲ್ಲಿ ಕೆಲಸ ಮಾಡುವವರು ಹೆಚ್ಚಾಗಿ ತುಂಬಾ ಹೊತ್ತು ಮಾಸ್ಕ್ ಬಳಸುತ್ತಾರೆ. ಅಲ್ಲದೆ ಡಬಲ್ ಮಾಸ್ಕ್ ಸಿಂಗಲ್ ಮಾಸ್ಕ್‌ಗಿಂತ ಹೆಚ್ಚು ಸುರಕ್ಷಿತವಾಗಿರುವುದರಿಂದ ಆಸ್ಪತ್ರೆಯಲ್ಲಿ ಕೆಲಸ ಮಾಡುವವರು, ತುಂಬಾ ಹೊತ್ತು ಹೊರಗಡೆ ಕೆಲಸ ಮಾಡುವವರು ಮಾಸ್ಕ್ ಧರಿಸಿಕೊಂಡೇ ಇರುತ್ತಾರೆ.
ಮಾಸ್ಕ್ ಧರಿಸಿದಾಗ ಜನರು ಬಾಯಲ್ಲಿ ಉಸಿರಾಡಲು ಪ್ರಾರಂಭಿಸುತ್ತಾರೆ. ಇದರಿಂದಾಗಿ ಬಾಯಿ ಬೇಗನೆ ಒಣಗುವುದು, ಅಲ್ಲದೆ ಮಾಸ್ಕ್ ಧರಿಸಿರುವ ಕಾರಣ ಜನರು ನೀರು ಕುಡಿಯುವುದನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ಬಾಯಿ ದುರ್ವಾಸನೆ ಬೀರುವುದು.

ಮಾಸ್ಕ್ ಧರಿಸುವುದರಿಂದ ಹೆಚ್ಚುವ ಬಾಯಿ ದುರ್ಗಂಧದ ಸಮಸ್ಯೆ
ತುಂಬಾ ಹೊತ್ತು ಬಾಯಿ ಮುಚ್ಚಿಕೊಂಡೇ ಇದ್ದರೆ, ಕೆಲವರು ತಮ್ಮ ಎಂಜಲು ಕೂಡ ನುಂಗಲು ಮರೆತು ಹೋದಾಗ ಬಾಯಿ ಒಣಗಿ ಬಾಯಿಯಿಂದ ದುರ್ವಾಸನೆ ಬೀರುವುದು. ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಕೆಲಸ ಮಾಡುವ ಆರೋಗ್ಯ ಕಾರ್ಯಕರ್ತರಲ್ಲಿ ಈ ಸಮಸ್ಯೆ ಹೆಚ್ಚಾಗಿದೆ.

ಮಾಸ್ಕ್‌ನಿಂದಾಗಿ ಹಲ್ಲಿನ ಶುಚಿತ್ವ ಕಡೆ ಗಮನ ಕಡಿಮೆಯಾಗುವುದು
ಹೊರಗಡೆ ಹೋಗುವಾಗ ಮಾಸ್ಕ್ ಧರಿಸಿಯೇ ಇರುವುದರಿಂದ ನಾವು ನಕ್ಕಾಗ ನಮ್ಮ ಹಲ್ಲುಗಳು ಯಾರಿಗೂ ಕಾಣುವುದಿಲ್ಲ, ಇದರಿಂದಾಗಿ ಹಲ್ಲುಗಳು ಹಳದಿಯಾದರೂ ಕೆಲವರು ಹಲ್ಲುಗಳ ಶುಚಿತ್ವ ಕಡೆ ಗಮನ ನೀಡುವುದಿಲ್ಲ. ಇದರಿಂದಾಗಿ ವಸಡು ಹಾಗೂ ಹಲ್ಲಿನ ಸಮಸ್ಯೆ ಕಂಡು ಬರುವುದು ಎಂದು Community and Preventive Dentistryನಲ್ಲಿ ಪ್ರಕಟವಾದ ಅಧ್ಯಯನ ವರದಿ ಹೇಳಿದೆ.

ಹಲ್ಲುಗಳ ಶುಚಿತ್ವ ಕಡೆ ಗಮನ ನೀಡಿ
* ಮಾಸ್ಕ್ ಶುಚಿತ್ವ ಕಡೆ ಗಮನ ನೀಡಿ
* ಹಲ್ಲುಗಳನ್ನು ಬೆಳಗ್ಗೆ ಮತ್ತು ರಾತ್ರಿ ಹೊತ್ತು ಬ್ರೆಷ್‌ನಿಂದ ತಿಕ್ಕಿ.
* ಇನ್ನು ಮಾಸ್ಕ್ ಹಾಕಿದಾಗ ಬಾಯಲ್ಲಿ ಉಸಿರಾಡುವ ಅಭ್ಯಾಸ ಬೆಳೆಸಬೇಡಿ, ಮೂಗಿನ ಮೂಲಕವೇ ಉಸಿರಾಡಿ.
* ಆಗಾಗ ನೀರು ಕುಡಿಯಿರಿ.
* ಮಾಸ್ಕ್ ಧರಿಸದಿದ್ದರು ಸುರಕ್ಷಿತ ಎನ್ನುವ ಕಡೆ, ಅಂದ್ರೆ ಜನರ ಗುಂಪು ಇಲ್ಲದ ಕಡೆ ಸ್ವಲ್ಪ ಹೊತ್ತು ಮಾಸ್ಕ್ ತೆಗೆದು ನಿಲ್ಲಿ, ಇದರಿಂದ ಮಾಸ್ಕ್‌ನಿಂದ ಸ್ವಲ್ಪ ಹೊತ್ತು ಫ್ರೀ ಆಗುವಿರಿ.
* ಮೊಡವೆ ಮತ್ತಿತರ ಸಮಸ್ಯೆ ತಡೆಗಟ್ಟಲು ಬಟ್ಟೆಯ ಮಾಸ್ಕ್ ಅನ್ನು ಪ್ರತಿ ನಿತ್ಯ ತೊಳೆಯಿರಿ ಹಾಗೂ ಸರಿಯಾಗಿ ಒಣಗಿದ ಶುಚಿಯಾದ ಮಾಸ್ಕ್ ಧರಿಸಿ.



Click it and Unblock the Notifications